ರಮ್ಯಾ ಕೃಷ್ಣ ಕಾರಿನಲ್ಲಿ ಸಿಕ್ಕ ಬಿಯರ್ ಬಾಟಲ್ ಗಳು ಎಷ್ಟು ಗೊತ್ತಾ? ದಂಗಾದ ಪೋಲಿಸರು !

in ಮನರಂಜನೆ 303 views

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಹೆಸರುವಾಸಿಯಾದವರು ನಟಿ ರಮ್ಯಾ ಕೃಷ್ಣ ಅವರು. ೪೦ ವರುಷ ದಾಟಿದ್ದರು ತಮ್ಮ ದೇಹಕಾಂತಿಯಿಂದ ಅಭಿಮಾನಿಗಳಿಗೆ ಹುಚ್ಚೆಬ್ಬಿಸುತ್ತಲೇ ಇದ್ದಾರೆ. ಆದರೆ ಚಿತ್ರರಸಿಕರು ಹೇಗೆಂದರೆ ಸಿನಿಮಾದಲ್ಲಿ ನಟಿಸಿದ ಪಾತ್ರದ ಆಧಾರದ ಮೇಲೆ ಆ ನಟಿಯನ್ನು ಜನರು ಪೂಜಿಸುತ್ತಾರೆ ಕೂಡ. ಹೀಗೆ ದಕ್ಷಿಣ ಭಾರತದ ಹೆಮ್ಮೆಯ ಸಿನಿಮಾ ಬಾಹುಬಲಿ ಚಿತ್ರದಲ್ಲಿ ಮಹಾರಾಣಿ ಶಿವಗಾಮಿ ಎಂಬ ಪಾತ್ರಕ್ಕೆ ರಮ್ಯಾ ಕೃಷ್ಣ ಜೀವ ತುಂಬಿದ್ದರು. ಆಕೆಯ ಅಭಿನಯ ಸಿನಿ ರಸಿಕರಿಗೆ ಬಹಳ ಇಷ್ಟವಾಗಿದ್ದು, ಅವರನ್ನು ದೇವಿಯಂತೆ ಪೂಜಿಸುತ್ತಿದ್ದರು. ಹೀಗೆ ಪೂಜೆ ಭಾವನೆ ಏರ್ಪಡಿಸಿಕೊಂಡಿದ್ದ ಈ ನಟಿ ಕಾರಿನಲ್ಲಿ ಇದೀಗ ಬರೋಬ್ಬರಿ ೯೭ ಲಿಕ್ಕರ್ ಹಾಗೂ ಬಿಯರ್ ಬಾಟಲ್ ದೊರಕಿದ್ದು, ಮುತ್ತು ಕಾಡು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ಕಾನತ್ತೂರು ಪೋಲಿಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

 

Advertisement

Advertisement

ದೇಶದಲ್ಲಿ ಮಹಾಮಾರಿ ಕರೋನಾ ಸೋಂಕಿನ ಅಟ್ಟಹಾಸ ಮುಗಿಲು ಮುಟ್ಟಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇನ್ನು ಮದ್ಯಪ್ರಿಯರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ, ಅಕ್ರಮವಾಗಿ ಮದ್ಯ ಸಾಗಾಟ ನಡೆಸುತ್ತಿದ್ದರು. ಈ ಕುರಿತು ಪೋಲಿಸರಿಗೆ ದೂರು ಕೂಡ ಬಂದು, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ಮಹಾಬಲಿಪುರಂನಿಂದ ನಟಿ ರಮ್ಯಾಕೃಷ್ಣ ಅವರು ತಮ್ಮ ಸಹೋದರಿ ವಿನಯ ಕೃಷ್ಣ ಅವರ ಜೊತೆಗೆ ಇನ್ನೋವಾ ಕಾರಿನಲ್ಲಿ ಚೆನ್ನೈ ಗೆ ತೆರಳುತ್ತಿದ್ದು, ಚೆಕ್ ಪೋಸ್ಟ್ ನಲ್ಲಿ ಕಾರನ್ನು ನಿಲ್ಲಿಸಿದ ಪೋಲಿಸರಿಗೆ ನಟಿ ರಮ್ಯಾ ಕೃಷ್ಣ ನೋಡಿ ಅಚ್ಚರಿ ಮತ್ತು ಸಂತೋಷವಾಗಿದೆ. ಯಾಕೆಂದರೆ ತಮ್ಮ ನೆಚ್ಚಿನ ನಟಿ ಕಾರಿನಲ್ಲಿ ಬಂದದ್ದು ನೋಡಿ ಅವರಿಗೆ ಒಂದು ಕ್ಷಣ ಏನು ಮಾಡಬೇಕೆಂದು ತೋರಲಿಲ್ಲ .

Advertisement

ನಂತರ ರಮ್ಯಾ ಅವರನ್ನು ಮಾತನಾಡಿಸಿ ಕೆಲಕಾಲ ಸಮಯ ಕಳೆದು, ಸೆಲ್ಫಿಗಳನ್ಮು ಕೂಡ ತೆಗೆದುಕೊಂಡು ನಂತರ ಕರ್ತವ್ಯ ನಿರ್ವಹಣೆಯ ಜವಾಬ್ದಾರಿಯಿಂದ ಕಾರನ್ನು ತಪಾಸಣೆ ಮಾಡಿದ್ದಾರೆ. ಹೀಗೆ ತಪಾಸಣೆ ಮಾಡುವಾಗ ಪೋಲಿಸರಿಗೆ ಶಾಕ್ ಆಗಿದ್ದು, ಕಾರಿನಲ್ಲಿ ಬರೋಬ್ಬರಿ 97 ಬಿಯರ್, ಲಿಕ್ಕರ್ ಬಾಟಲಿಗಳು ದೊರಕಿವೆ. ಅಚ್ಚರಿಗೊಂಡ ಅವರು ರಮ್ಯಾಕೃಷ್ಣರವರ ಕಾರಿನ ಡ್ರೈವರ್ ನನ್ನು ಬಂಧಿಸಿ, ಬಾಟಲಿಗಳನ್ನು ವಶಪಡಿಸಿಕೊಂಡರು. ಇದೀಗ ನಟಿ ರಮ್ಯಾ ಕೃಷ್ಣ ಅವರು ತಮ್ಮ ಡ್ರೈವರ್ ಗೆ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ದಾರೆ.

 

ರಮ್ಯಾ ಕೃಷ್ಣ ದಕ್ಷಿಣ ಭಾರತ ಚಿತ್ರರಂಗ ಕಂಡ ಹೆಮ್ಮೆಯ ನಟಿ. ತೆಲುಗು,ತಮಿಳು, ಕನ್ನಡ,ಮಲಯಾಳಂ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಮಾಂಗಲ್ಯಂ ತಂತು ನಾನೇನ, ರಾಜ ನರಸಿಂಹ, ಗಡಿಬಿಡಿ ಗಂಡ, ಜಾಗ್ವಾರ್, ರಕ್ತ ಕಣ್ಣೀರು, ಮಾಣಿಕ್ಯ, ಚಾಮುಂಡಿ, ಏಕಾಂಗಿ, ಆಂದ್ರ ಹೆಂಡತಿ, ಯಾರೇ ನೀ ಅಭಿಮಾನಿ, ಶ್ರೀ ಕಾಳಿಕಾಂಬ, ಸ್ವೀಟಿ ನನ್ನ ಜೋಡಿ ಮುಂತಾದ ಹತ್ತು ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ರಜನಿಕಾಂತ್ ಜೊತೆಗೆ ನಟಿಸಿದ ಪಡೆಯಪ್ಪ ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ಮಿಂಚಿದ್ದರು. ಬಾಹುಬಲಿಯಲ್ಲಿ ರಾಣಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.

Advertisement
Share this on...