ಬಾಹುಬಲಿ ಶಿವಗಾಮಿ ನಟಿ ರಮ್ಯಾಕೃಷ್ಣ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

in ಮನರಂಜನೆ/ಸಿನಿಮಾ 244 views

ನಟಿ ರಮ್ಯಾಕೃಷ್ಣ ಚೆನ್ನೈನಲ್ಲಿ ಸೆಪ್ಟೆಂಬರ್ 15, 1970 ರಲ್ಲಿ ಜನಿಸಿದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗ್ಲ್ಯಾಮರಸ್ ನಟಿಯರಲ್ಲಿ ನಟಿ ರಮ್ಯಾಕೃಷ್ಣ ಕೂಡ ಒಬ್ಬರು. ಭರತನಾಟ್ಯ ಹಾಗೂ ಕುಚಿಪುಡಿ ನೃತ್ಯವನ್ನು ಬಾಲ್ಯದಿಂದಲೇ ಕಲಿತರು. 1984 ರಲ್ಲಿ ರಮ್ಯಾಕೃಷ್ಣ ಕೇವಲ ಹದಿನಾಲ್ಕು ವರ್ಷಕ್ಕೆ ವೆಲ್ಲೈ ಮನಸ್ಸು ಎಂಬ ತಮಿಳು ಚಿತ್ರದಲ್ಲಿ ನಟಿಸಿದರು. ರಮ್ಯಾಕೃಷ್ಣರವರು 1986 ರಲ್ಲಿ ಭಲೆಮಿಥಲು ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಕಾಲಿಡುತ್ತಾರೆ. ನಂತರ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಬೆಳೆದರು.  ತೆಲುಗು ಚಿತ್ರರಂಗದ ಮೇನ್ ಪಿಲ್ಲರ್ ನಟ ಎನ್.ಟಿ. ರಾಮರಾವ್, ಚಿರಂಜೀವಿ, ನಾಗಾರ್ಜುನ ವೆಂಕಟೇಶ್, ರಾಜಶೇಖರ್ ಹೀಗೆ ತೆಲುಗಿನ ಎಲ್ಲಾ ಸ್ಟಾರ್ ನಟರ ಜೊತೆ ನಟಿ ರಮ್ಯಾಕೃಷ್ಣ ನಟಿಸಿದ್ದಾರೆ. ತಮಿಳಿನಲ್ಲಿ ರಜನಿಕಾಂತ್ ಸೇರಿದಂತೆ ಹಲವು ನಟರ ಜೊತೆ ನಟಿ ರಮ್ಯಾಕೃಷ್ಣ ನಟಿಸಿದ್ದಾರೆ. 1997 ರಲ್ಲಿ ತೆರೆಕಂಡ ನಾಗಾರ್ಜುನ ನಟನೆಯ ಅಣ್ಣಮಯ್ಯ ಚಿತ್ರ ಇವರಿಗೆ ತುಂಬಾ ಹೆಸರು ತಂದುಕೊಟ್ಟಿತ್ತು.

Advertisement


ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಜೊತೆ ಕೃಷ್ಣ-ರುಕ್ಮಿಣಿ ಹಾಗೂ ರವಿಚಂದ್ರನ್ ರವರ ಜೊತೆ ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಏಕಾಂಗಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಯಾರೇ ನೀ ಅಭಿಮಾನಿ ಹಾಗೂ ಉಪೇಂದ್ರರವರ ರಕ್ತಕಣ್ಣೀರು ಚಿತ್ರದಲ್ಲಿ ನಟಿ ರಮ್ಯಾಕೃಷ್ಣ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ರವರ ಅಂಜನಿಪುತ್ರ ಚಿತ್ರ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿಯೂ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 18ಕ್ಕೂ ಹೆಚ್ಚು ಚಿತ್ರಗಳಲ್ಲಿ ತೆಲುಗು-ತಮಿಳು ಸೇರಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ರಮ್ಯಾಕೃಷ್ಣ ನಟಿಸಿದ್ದಾರೆ.

Advertisement


ಇವರು ನಟಿಸಿರುವ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ನಂದಿ ಪ್ರಶಸ್ತಿ ಸೇರಿದಂತೆ ಫಿಲಂ ಫೇರ್ ಪ್ರಶಸ್ತಿ ,ಚಲನಚಿತ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತೆಲುಗಿನ ಹೆಸರಾಂತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇವರಿಗೆ ಚಿತ್ರರಂಗದಲ್ಲಿ ಬಹುದೊಡ್ಡ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಇನ್ನು ಇವರು ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣವಂಶಿ ಅವರನ್ನು ಮದುವೆಯಾಗಿದ್ದಾರೆ. ಇವರಿಗೆ ರುತ್ವಿಕ್ ವಂಶಿ ಎಂಬ ಒಬ್ಬ ಮಗನಿದ್ದಾನೆ. ನಟಿ ರಮ್ಯಾಕೃಷ್ಣರವರು ಈಗಲೂ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Advertisement

– ಸುಷ್ಮಿತಾ

Advertisement

Advertisement
Share this on...