ರಮ್ಯಕೃಷ್ಣನ್ 32 ವರ್ಷಗಳಿಂದ ಹಿಂದಿ ಸಿನಿಮಾಗಳಲ್ಲಿ ನಟಿಸಲಿಲ್ಲ..! ಅವರೇ ಕೊಟ್ಟ ಕಾರಣ ಇಲ್ಲಿದೆ ನೋಡಿ !

in ಕನ್ನಡ ಮಾಹಿತಿ/ಸಿನಿಮಾ 191 views

ಶಿವಗಾಮಿ, ಹೆಸರು ಕೇಳಿದೊಡನೆ ಅಗಲ ಕುಂಕುಮ, ದೊಡ್ಡ ಮೂಗು ನತ್ತು ಧರಿಸಿರುವ ಮಂದಹಾಸ, ಆಕ್ರೋಶ, ಮಮತೆಯ ಮುಖ ನೆನಪಿಗೆ ಬರುತ್ತದೆ. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ ರಮ್ಯಕೃಷ್ಣನ್ ಅವರ ಮುಖ. ಅಷ್ಟೇ ಅಲ್ಲ ಬಹುತೇಕ ಚಿತ್ರದಲ್ಲಿ ದೇವಿಯ ಪಾತ್ರದಲ್ಲಿ ರಮ್ಯಕೃಷ್ಣನ್ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದಾಗಲೆಲ್ಲಾ ನಿಜಕ್ಕೂ ನಾವು ದೇವತೆಯನ್ನೇ ನೋಡುತ್ತಿರುವೆವೇನೋ ಎಂದು ಎನ್ನಿಸುತ್ತದೆ. ಒಟ್ಟಿನಲ್ಲಿ ಎಲ್ಲಾ ಪಾತ್ರಗಳಿಗೂ ಅವರು ಹೊಂದುತ್ತಾರೆ ಎಂದರೆ ತಪ್ಪಾಗುವುದಿಲ್ಲ.ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ರಮ್ಯಕೃಷ್ಣನ್ ಇದುವರೆಗೂ ಸುಮಾರು 260 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಒಂದನ್ನು ಬಿಟ್ಟರೆ ಇಂದಿಗೂ ಅವರು ಉಳಿದ ನಾಲ್ಕೂ ಭಾಷೆಯ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಹಿಂದಿ ಕಡೆ ಮುಖ ಮಾಡಿ 32 ವರ್ಷಗಳಾಯ್ತು. 1988 ರಲ್ಲಿ ಬಿಡುಗಡೆಯಾದ ‘ದಯಾವಾನ್’ ಚಿತ್ರದ ನಂತರ ಅವರು ಬೇರೆ ಯಾವ ಹಿಂದಿ ಸಿನಿಮಾಗಳಿಗೂ ಸಹಿ ಮಾಡಲಿಲ್ಲ. ಬರೋಬ್ಬರಿ 32 ವರ್ಷಗಳಾಯ್ತು. ಅದಕ್ಕೂ ಮುನ್ನ ರಮ್ಯಕೃಷ್ಣ ಅವರು ತೇರಾ ಯಾರ್ ಹು ಮೇ, ಬಡೆ ಮಿಯಾ ಚೋಟೆ ಮಿಯಾ, ವಜೂದ್, ಶಪಥ್, ಲೋಹ, ಬನಾರಸಿ ಬಾಬು, ಚಾಹತ್, ಕ್ರಿಮಿನಲ್, ಪರಂಪರಾ, ಖಳ್​ನಾಯಕ್ ಚಿತ್ರಗಳಲ್ಲಿ ನಟಿಸಿದ್ದರು.

Advertisement

 

Advertisement

Advertisement

ಇನ್ನು 32 ವರ್ಷಗಳಿಂದ ಹಿಂದಿ ಚಿತ್ರದಲ್ಲಿ ಏಕೆ ನಟಿಸಲಿಲ್ಲ ಎಂದು ರಮ್ಯಕೃಷ್ಣನ್ ಅವರನ್ನು ಪತ್ರಕರ್ತರೊಬ್ಬರು ಕೇಳಿದಾಗ ರಮ್ಯಕೃಷ್ಣನ್ ಉತ್ತರಿಸಿದ್ದು ಹೀಗೆ, ನಾನು ಸುಮಾರು 11 ಹಿಂದಿ ಸಿನಿಮಾಗಳಲ್ಲಿ ನಟಿಸಿದೆ. ಆದರೆ ಆ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಹೇಳಿಕೊಳ್ಳುವಂತ ಪ್ರತಿಕ್ರಿಯೆ ದೊರೆಯಲಿಲ್ಲ. ನಂತರ ಕೂಡಾ ನನಗೆ ಅನೇಕ ಆಫರ್​​​​​ಗಳು ಬಂತು. ಆದರೆ ಆ ಕಥೆಗಳು ನನಗೆ ಇಷ್ಟವಾಗಲಿಲ್ಲ. ಮತ್ತೆ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಬೇಕು ಎನ್ನುವಂಥ ಯಾವುದೇ ಕಥೆಗಳು ದೊರೆಯಲಿಲ್ಲ. ಆದ್ದರಿಂದ ನಾನು 32 ವರ್ಷಗಳಿಂದ ಬಾಲಿವುಡ್​​​​ನಿಂದ ದೂರವಿದ್ದೇನೆ. ಆದರೆ ದಕ್ಷಿಣ ಭಾರತದಲ್ಲಿ ನನಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನನ್ನ ಸಿನಿಮಾಗಳನ್ನು ಮೆಚ್ಚಿ ನೋಡುತ್ತಾರೆ ಎಂದು ರಮ್ಯಕೃಷ್ಣನ್ ಹೇಳಿದ್ದಾರೆ.

Advertisement

ರಮ್ಯಕೃಷ್ಣನ್ ಈಗ ಎರಡು ತಮಿಳು, ತೆಲುಗು, ಒಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ‘ಫೈಟರ್’ ಚಿತ್ರದಲ್ಲಿ ಕೂಡಾ ರಮ್ಯಕೃಷ್ಣನ್ ನಟಿಸಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕ ಹಾಗೂ ಅನನ್ಯ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಲಾಕ್​​ಡೌನ್ ಸಂಪೂರ್ಣ ಸಡಿಲಿಕೆಯಾದ ನಂತರ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾ ಕೂಡಾ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆಯಲಿದೆ. ಮತ್ತೊಂದು ಬಾಹುಬಲಿ ಆಗಲಿದೆ ಎಂದು ರಮ್ಯಕೃಷ್ಣನ್ ಹಾಗೂ ‘ಫೈಟರ್’ ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ.

Advertisement
Share this on...