ಇದೀಗ ಮತ್ತೊಮ್ಮೆ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ನಟಿ ರಮ್ಯಾ ಕೃಷ್ಣ !

in ಸಿನಿಮಾ 56 views

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳಿಗೆ ಮತ್ತೊಂದು ಹೆಸರೇ ರಮ್ಯಾ ಕೃಷ್ಣ. ವಯಸ್ಸು ೪೯ ಹಾಗಿದ್ದರೂ ಕೂಡ ನವ ನಟಿಯರು ನಾಚಿಸುವಷ್ಟು ಮೋಹಕವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಇದೀಗ ರಮ್ಯಾ ಕೃಷ್ಣ ಅವರು ಮತ್ತೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Advertisement

 

Advertisement

Advertisement

 

Advertisement

ಹೌದು ಎರಡು ವರ್ಷಗಳ ಹಿಂದೆ ತೆರೆಕಂಡು ಸೂಪರ್ ಡೂಪರ್ ಹಿಟ್ ಆಗಿದ್ದಂತಹ ಅಂಧಾಧುನ್ ಚಿತ್ರದ ತೆಲುಗು ರೀಮೇಕ್ನಲ್ಲಿ ರಮ್ಯಾ ಕೃಷ್ಣ ಅವರ ಟಬು ನಿರ್ವಹಿಸಿದ್ದ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಅಂಧಾಧುನ್ ಚಿತ್ರವು ೨೦‍೧೮ ರಲ್ಲಿ ತೆರೆಕಂಡಿದ್ದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆಯುಷ್ಮಾನ್ ಖುರಾನ್ ಮತ್ತು ರಾಧಿಕಾ ಆಪ್ಟೆ ಅಭಿನಯಿಸಿದ್ದರು. ಅಲ್ಲದೆ ನಟಿ ಟಬು ಅವರು ಸಕತ್ ಹಾಟ್ ಆಗಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಈ ಪಾತ್ರವನ್ನು ರಮ್ಯಾ ಕೃಷ್ಣ ಅವರು ತೆಲುಗಿನಲ್ಲಿ ನಿರ್ವಹಿಸುತ್ತಿದ್ದು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ರಮ್ಯಾ ಕೃಷ್ಣ ಈ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕುತೂಹಲ ಕೆರಳಿಸಿದೆ.

 

 

 

ಇನ್ನು ಶ್ರೀರಾಮ್ ರಾಘವನ್ ಅವರು ನಿರ್ದೇಶಿಸಿದ್ದ ಅಂಧಾದುನ್ ಚಿತ್ರದ ತೆಲುಗು ರೀಮೇಕ್ನಲ್ಲಿ ರಮ್ಯಾ ಕೃಷ್ಣ ಅವರೇ ನಟಿಸಬೇಕು, ಬೋಲ್ಡ್ ಪಾತ್ರಕ್ಕೆ ಅವರೇ ಸರಿಯಾದ ಪಾತ್ರಧಾರಿ ಎಂಬುದು ನಿರ್ದೇಶಕರ ಅಭಿಲಾಷೆಯಾಗಿತ್ತು. ಅವರ ಅಭಿಲಾಷೆಯಂತೆ ಈಗಾಗಲೇ ರಮ್ಯಾ ಕೃಷ್ಣ ಅವರ ಜೊತೆ ಮಾತುಕತೆ ನಡೆಸಿ ಅವರ ಅಡ್ಡಿಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಇನ್ನು ತೆಲುಗಿನ ರೀಮೇಕ್ ಚಿತ್ರಕ್ಕೆ ಯಾವುದೇ ರೀತಿಯ ಹೆಸರನ್ನು ಚಿತ್ರ ತಂಡ ಫೈನಲ್ ಮಾಡಿಲ್ಲ. ವೆಂಕಟಾದ್ರಿ ಎಕ್ಸ್ ಪ್ರೆಸ್, ಎಕ್ಸ್ ಪ್ರೆಸ್ ರಾಜಾ ,ಕೃಷ್ಣಾರ್ಜುನ ಯುದ್ಧ ಎಂಬ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಮೆರ್ಲಪಾಕ ಗಾಂಧಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಆಯುಷ್ಮಾನ್ ಖುರಾನ ಪಾತ್ರದಲ್ಲಿ ನಿತಿನ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಚಿತ್ರಕ್ಕೆ ಅವರೇ ಬಂಡವಾಳವನ್ನು ಕೊಡುತ್ತಿರುವುದು ವಿಶೇಷ.

 

 

ಇನ್ನು ಅಂಧಾಧುನ್ ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಪುರುಷನ ಜೊತೆಗಿನ ಸಂಬಂಧ ಹೊಂದಿರುವ ಮಧ್ಯ ವಯಸ್ಸಿನ ಮಹಿಳೆಯ ಪಾತ್ರದಲ್ಲಿ ಟಬೂ ಕಾಣಿಸಿಕೊಂಡಿದ್ದರು.ತೆಲುಗಿನಲ್ಲಿ ಈ ಪಾತ್ರವನ್ನು ರಮ್ಯಾಕ್ರಿಷ್ಣ ಅವರೇ ಮಾಡಬೇಕು ಎಂದು ಚಿತ್ರತಂಡ ತೀರ್ಮಾನಿಸಿದೆ. ಇನ್ನು ಈ ಮೊದಲೇ ಇಂತಹದ್ದೇ ಪಾತ್ರವನ್ನು ಕನ್ನಡದಲ್ಲಿ ಬಾಬಾರೋ ರಸಿಕ ಎಂಬ ಚಿತ್ರದಲ್ಲಿ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದರು

Advertisement
Share this on...