ಬಾಹುಬಲಿ ಖ್ಯಾತಿಯ ಈ ಸ್ಟಾರ್ ನಟನಿಗೆ ಇರುವ ಅಂಗವೈಕಲ್ಯ ಕೇಳಿದರೆ ನೀವು ನಂಬಲು ಸಾಧ್ಯವಿಲ್ಲ…!

in ಮನರಂಜನೆ 90 views

ಕೆಲವೊಂದು ವೈಯಕ್ತಿಕ ವಿಷಯವನ್ನು ಹೇಳಲು ಗುಂಡಿಗೆ ಬೇಕು. ಅದರಲ್ಲೂ ತಮಗಿರುವ ಮೈನಸ್ ಹಾಗೂ ವೀಕ್ನೆಸ್ ಬಗ್ಗೆ ಬೇರೊಬ್ಬರ ಮುಂದೆ ಹೇಳಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಾಮನ್ ಮ್ಯಾನ್ ಗಳಾದ ನಾವೇ ನಮ್ಮ ವೀಕ್ನೆಸ್ ಗಳನ್ನ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿವಿ. ಕಾರಣ ಎಲ್ಲಿ ಎಲ್ಲರೂ ನಮ್ಮನ್ನ ಕೀಳಾಗಿ ನೋಡುತ್ತಾರೋ ಎಂಬ ಹಿಂಜರಿಕೆ. ಹೀಗಿರುವಾಗ ಚಿತ್ರರಂಗದ ಒಬ್ಬ ಸ್ಟಾರ್ ನಟ ತಮ್ಮಗಿರುವ ಅಂಗವೈಕಲ್ಯದ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಮುಚ್ಚು ಮರೆಯಿಲ್ಲದೆ ಎಲ್ಲರ ಮುಂದೆ ಒಂದು ಶೋನಲ್ಲಿ ಹೇಳಿದ್ದರು. ಇಲ್ಲಿ ನಾವು ಮೆಚ್ಚಬೇಕಾದದ್ದು ಅವರ ನಿಷ್ಕಲ್ಮಶವಾದ ಮನಸನ್ನು. ಹಾಗಾದರೆ ಯಾರು ಆ ನಟ? ಅವರ ವೀಕ್ನೆಸ್ ಏನು? ಅವರ ಅಂಗವೈಕಲ್ಯವಾದರು ಏನು?

Advertisement

 

Advertisement


ತೆಲುಗಿನ ಖ್ಯಾತ ನಟ ವಿಕ್ಟರಿ ವೆಂಕಟೇಶ್ ರವರ ಅಣ್ಣನ ಮಗ ರಾಣಾ ದಗ್ಗುಬಾಟಿ. ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದಲ್ಲಿ ರಾಜ ಬಲ್ಲಾಳ ದೇವನಾಗಿ ಪ್ರೇಕ್ಷಕರಿಂದ ಶಿಳ್ಳೆ ಓಡಿಸಿಕೊಂಡು ಬೇಷ್ ಎನಿಸಿಕೊಂಡ ನಟ ರಾಣಾ ದಗ್ಗುಬಾಟಿ. ತೆಲುಗಿನ ‘ಲೀಡರ್’ ಚಿತ್ರದ ಮೂಲಕ ರಾಣಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತೆಲುಗು, ತಮಿಳು, ಹಿಂದಿ ಸೇರಿದಂತೆ ನಾಯಕ ನಟನಾಗಿ, ಖಳನಾಯಕ ನಟನಾಗಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅರೆ ನೋಡಲು ಸುಂದರವಾಗಿರುವ ಹ್ಯಾಂಡ್ಸಂ ಆಗಿರುವ ಇಷ್ಟೊಂದು ಸಿನಿಮಾಗಳಲ್ಲಿ ನಟಿಸಿರುವ ಈ ನಟನಿಗೆ ಅದ್ಯಾವ ಅಂಗವೈಕಲ್ಯ ಇದೆ ಎಂಬುದು ನಿಮ್ಮ ಊಹೆ ಆಗಿರಬಹುದು. ಹೌದು ನೀವ್ಯಾರು ಊಹಿಸಲಾಗದಂತಹ ಒಂದು ಮುಖ್ಯವಾದ ಅಂಗವೈಕಲ್ಯವಿದೆ ಈ ನಟನಿಗೆ.

Advertisement

 

Advertisement


ರಾಣಾ ದಗ್ಗುಬಾಟಿಯಾರವರಿಗೆ ಒಂದು ಕಣ್ಣು ಸಂಪೂರ್ಣವಾಗಿ ಕಾಣಿಸುವುದಿಲ್ಲ. ಈ ಬಗ್ಗೆ ಅವರೇ ತೆಲುಗು ಖಾಸಗಿ ವಾಹಿನಿಯ ಮೂಲಕ ಹೇಳಿಕೊಂಡಿದ್ದರು. ಸಾರ್ವಜನಿಕರು ತಮಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಾದ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನಗೆ ಬಲಗಣ್ಣು ಸಂಪೂರ್ಣವಾಗಿ ಕಾಣುವುದಿಲ್ಲ. ಅಲ್ಲದೇ ನನ್ನ ಎಡಗಣ್ಣು ಸಹ ಮರಣ ಹೊಂದಿದ ವ್ಯಕ್ತಿ ನನಗೆ ದಾನವಾಗಿ ನೀಡಿದ್ದು ಎಂದು ಹೇಳಿದರು. ನನ್ನ ಎಡಗಣ್ಣು ಮುಚ್ಚಿದರೆ ನನಗೆ ಏನು ಕಾಣುವುದಿಲ್ಲ ಎಂದು ಸಹ ತಿಳಿಸಿದ್ದರು. ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ವ್ಯಕ್ತಿಯೊಬ್ಬರ ನೇತ್ರ ದಾನದಿಂದ ನಾನು ಈ ಪ್ರಪಂಚ ನೋಡುತ್ತಿದ್ದೀನಿ ದೇವರು ಧೈರ್ಯವಿದ್ದವರಿಗೆ ಮಾತ್ರವೇ ಕಷ್ಟ ಕೊಡುತ್ತಾನೆ ಎಂದು ಭಾವನಾತ್ಮಕವಾಗಿ ಮಾತನಾಡಿ ಶೋ ನಲ್ಲಿ ಪಾಲ್ಗೊಂಡಿದ್ದ ಎಲ್ಲರ ಕಣ್ಣಿನಲ್ಲಿ ನೀರು ತರಿಸಿದ್ದರು.

 

ಯಾರು ತಮ್ಮಗಿರುವ ಅಂಗವೈಕಲ್ಯದ ಬಗ್ಗೆ ಚಿಂತಿಸದೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದು ಆತ್ಮಸ್ಥೈರ್ಯ ತುಂಬಿದರು. ನಟ ರಾಣಾರವರು ತಮ್ಮಗಿರುವ ನ್ಯೂನ್ಯತೆಯನ್ನು ಯಾವ ಚಿತ್ರದಲ್ಲಿಯೂ ತೋರಿಸಿಲ್ಲ ಎಂಬುದು ಅವರು ನಿಜವಾದ ಪ್ರತಿಭೆಯನ್ನು ತೋರಿಸುತ್ತದೆ.

– ಸುಷ್ಮಿತಾ

Advertisement
Share this on...