ಲಾಕ್ ಡೌನ್ ಹೋತ್ತಲ್ಲಿ ‘ಕನ್ನಡತಿ’ಗೆ ಕೆಲಸ ಬೇಕಂತೆ..!

in ಮನರಂಜನೆ 199 views

ಪುಟ್ಟಗೌರಿ ಮದುವೆ ನಂತರ ಕನ್ನಡತಿ ಧಾರವಾಹಿಯ ಮೂಲಕ ಮನೆಮಾತಾಗಿರುವ ರಂಜಿನಿ ರಾಘವನ್ ಏನು ಮಾಡುತ್ತಿದ್ದಾರೆ ಅಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು ಎಲ್ಲಾ ವಾಹಿನಿಗಳು ಸಂಚಿಕೆಗಳನ್ನ ಮರುಪ್ರಸಾರ ಮಾಡುತ್ತಿವೆ. ಹೀಗಿರುವಾಗ ರಂಜಿನಿಯವರ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ. ಅದೇನಪ್ಪ ಅಂದರೆ ಪುಟ್ಟಗೌರಿಗೆ ಕೆಲಸ ಬೇಕಂತೆ. ಯಾಕೆ ಅಂತೀರಾ..?

Advertisement

 

Advertisement

Advertisement

 

Advertisement

ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಸಖತ್ ಬಿಜಿ಼ಯಾಗಿರುವ ನಟಿ ರಂಜಿನಿ ರಾಘವನ್ ಇದೀಗ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು ಆಗಾಗ ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟ್ ಭಾರಿ ಸದ್ದು ಮಾಡುತ್ತಿದೆ. ಇದ್ದಕ್ಕಿದ್ದಂತೆ ಕೆಲಸ ಕೇಳಿಕೊಂಡು ಪೋಸ್ಟ್ ಮಾಡಿದ್ದಾರೆ.

 

 

ಈ ಹಿಂದೆ ಪದವಿ ಮುಗಿಯುತ್ತಿದ್ದಂತೆ ರಂಜಿನಿ ರಾಘವನ್ ಅವರು ತಮ್ಮ ಪದವಿ ಪ್ರಮಾಣ ಪತ್ರವನ್ನ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರಂತೆ. ಇದೀಗ ಅದನ್ನು ಫೇಸ್ಬುಕ್ ನೆನಪಿಸಿದೆ. ಮೂರು ವರ್ಷದ ಹಿಂದಿನ ಪೋಸ್ಟ್ ಅನ್ನ ಫೇಸ್ ಬುಕ್ ನೆನಪಿಸಿತು. ನಾನು ಕನ್ವಾಕೇಶನ್ ಪಡೆದು ಮೂರು ವರ್ಷಗಳು ಆಯಿತು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

 

 

View this post on Instagram

 

ಹೆಮ್ಮೆಯ “ಕನ್ನಡತಿ” ❤️? 27th Jan @7:30pm.. #colorskannada ? @vastrasanskara_by_ajitsreeravi

A post shared by Ranjani Raghavan official (@ranjani.raghavan) on

 

ಅಲ್ಲದೆ ಕನ್ನಡದಲ್ಲಿ ಯಾವುದಾದರೂ ಕೆಲಸ ಖಾಲಿ ಇದ್ಯಾ ಅಂತ ಕೇಳಿದ್ದಾರೆ. ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ನಟನೆಯಲ್ಲಿ ಗುರುತಿಸಿಕೊಂಡ ರಂಜಿನಿ ರಾಘವನ್ ಅವರಿಗೆ ಸಿನಿಮಾಗಳಲ್ಲಿಯೂ ಅವಕಾಶ ಬರಲಾರಂಭಿಸಿದವು. ಈಗಾಗಲೇ ‘ರಾಜಹಂಸ’ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಟಕ್ಕರ್ ಕೊಡಲು ಸಿದ್ಧವಾಗುತ್ತಿದ್ದಾರೆ. ಕನ್ನಡತಿ ಧಾರವಾಹಿ ತುಂಬಾ ವಿಭಿನ್ನವಾಗಿ ಮೂಡಿ ಬಂದಿದ್ದು ಇದರಲ್ಲಿ ಕನ್ನಡ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಈ ಧಾರವಾಹಿ ಸದ್ದು ಮಾಡುತ್ತಿದೆ.

 

 

View this post on Instagram

 

Quarantine day 28 ? how’s the experience guys?

A post shared by Ranjani Raghavan official (@ranjani.raghavan) on

 

ಧಾರಾವಾಹಿಗಳೊಟ್ಟಿಗೆ ಸಿನಿಮಾಗಳತ್ತಲ್ಲೂ ರಂಜಿನಿ ಚಿತ್ತ ಹರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಳಿಯ ಮನೋಜ್ ಕುಮಾರ್ ಅಭಿನಯದ ‘ಟಕ್ಕರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಧಾರಾವಾಹಿ ಎರಡರಲ್ಲೂ ಬಿಜಿ಼ಯಾಗಿರುವಾಗಲೇ ಕರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಜಾರಿಯಾಯಿತ್ತು. ಹೀಗಾಗಿ ಎರಡರ ಚಿತ್ರೀಕರಣ ಸ್ಥಗಿತಗೊಂಡಿದೆ. ಸದ್ಯ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.

– ಸುಷ್ಮಿತಾ

Advertisement
Share this on...