ನಿಮಗೆ ಗೊತ್ತಾ?, ರಣವೀರ್ ಸಿಂಗ್ ಅಜ್ಜಿ ಸಹ ಬಾಲಿವುಡ್’ನ ಜನಪ್ರಿಯ ನಟಿ !

in ಮನರಂಜನೆ 46 views

ರಣವೀರ್ ಸಿಂಗ್ ಬಾಲಿವುಡ್ ಮಂದಿಯ ನೆಚ್ಚಿನ ನಟ. ಅವರು ತಮ್ಮ ನಟನಾ ಕೌಶಲ್ಯದ ಆಧಾರದ ಮೇಲೆಯೇ ಉದ್ಯಮದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಎನರ್ಜಿ ನೋಡಿದ ಅನೇಕರು ಅವರನ್ನು ಬಾಲಿವುಡ್’ನ ಪವರ್ ಹೌಸ್ ಎಂದೂ ಕರೆಯುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ವಿಷಯಗಳು ನಿಮಗೆ ತಿಳಿದಿವೆ, ಆದರೆ ಅವರ ಅಜ್ಜಿಯೂ ಪ್ರಸಿದ್ಧ ನಟಿ ಎಂದು ನಿಮಗೆ ತಿಳಿದಿದೆಯೇ. ಹೌದು, ರಣವೀರ್ ಸಿಂಗ್ ಅವರ ಅಜ್ಜಿ ಚಾಂದ್ಲರ್ ಬುರ್ಕೆ ಸಹ ಜನಪ್ರಿಯ ನಟಿ. ಅವರು ರಾಜ್ ಕಪೂರ್ ಜೊತೆ ನಟಿಸಿದ ‘ಬೂಟ್ ಪಾಲಿಷ್’ ಮೊದಲ ಚಿತ್ರ ಎನ್ನಲಾಗಿದೆ. ರಣವೀರ್ ಸಿಂಗ್ ಅವರ ಅಜ್ಜಿ ಚಾಂದ್ಲರ್ ಪಾಕಿಸ್ತಾನದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜಿಗೆ ಒಟ್ಟು 11 ಜನ ಒಡಹುಟ್ಟಿದವರಿದ್ದು, ಇವರು ಕಿರಿಯರು ಎಂದು ಹೇಳಲಾಗುತ್ತದೆ.

Advertisement

 

Advertisement

Advertisement

ರಣವೀರ್ ಸಿಂಗ್ ಯಶ್ ರಾಜ್ ಫಿಲ್ಮ್ಸ್ ನ ಬ್ಯಾಂಡ್ ಬಾಜ ಭಾರತ್ ಮೂಲಕ ಬಾಲಿವುಡ್’ಗೆ ನಟನಾಗಿ ಪಾದಾರ್ಪಣೆ ಮಾಡಿದರು. ಅನುಷ್ಕಾ ಶರ್ಮ ಜೊತೆ ನಟಿಸಿದ ಈ ಚಿತ್ರವು ಜನಪ್ರಿಯವಾಯಿತು ಮತ್ತು ಅವರ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯು ದೊರೆಯಿತು. ಇದಕ್ಕೂ ಮೊದಲು ರಣವೀರ್ ಜಾಹೀರಾತಿನಲ್ಲಿ ಕೆಲಸ ಮಾಡುತ್ತಿದ್ದರು. ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.ಖ್ಯಾತ ನಟಿ ದೀಪಿಕಾ ಪಡುಕೋಣೆಯನ್ನು ವಿವಾಹವಾಗಿರುವ ರಣವೀರ್ ಇದುವರೆಗೂ ಮನೀಶ್ ಶರ್ಮ ನಿರ್ದೇಶಿಸಿದ ಲೇಡಿಸ್ vs ರಿಕ್ಕಿ ಬಹ್ಲ್, ವಿಕ್ರಮಾದಿತ್ಯ ಮೊಟ್ವಾನೆ ನಿರ್ದೇಶಿಸಿದ ಲೂಟೆರ ಚಿತ್ರದಲ್ಲಿ ಕಳ್ಳನ ಪಾತ್ರದಲ್ಲಿ, ಸಂಜಯ್ ಲೀಲಾ ಭಂಸಾಲಿಯವರ ಗೋಲಿಯೊನ್ ಕಿ ರಾಸ್ಲೀಲಾ ರಾಮ್- ಲೀಲಾ ಎಂಬ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ. ಈ ಚಿತ್ರವು ವಿಲಿಯಂ ಷೇಕ್ಸ್ಪಿಯರ್ನ ರೋಮಿಯೋ ಜ್ಯೂಲಿಯಟ್ ಆಧಾರಿತವಾಗಿದೆ. ಇದರಲ್ಲಿ ಅವರು ರಣ್ವೀರ್ ಸಿಂಗ್ ರಾಮ್ ಎಂಬ ಗುಜರಾತಿ ಹುಡುಗನ ಪಾತ್ರವನ್ನು ಅಭಿನಯಿಸಿದ್ದರು.

Advertisement

 

ತದನಂತರ ಗುಂಡೇ, ಕಿಲ್ ದಿಲ್, ದಿಲ್ ಧಡಕನೆ ದೊ, ಬಾಜಿರಾವ್ ಮಸ್ತಾನಿ, ಬೇಫಿಕ್ರೇ, ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾಹಿದ್ ಕಪೂರ್ ಜೊತೆ ನಟಿಸಿದ್ದು, ಈ ಚಿತ್ರದಲ್ಲಿ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ರೋಹಿತ್ ಶೆಟ್ಟಿ ಚಿತ್ರಿಸಿದ ಸಿಂಬಾ ಚಿತ್ರದಲ್ಲಿ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ಗಲ್ಲಿ ಬಾಯ್ ಚಲನಚಿತ್ರದಲ್ಲಿ ಆಲಿಯಾ ಭಟ್ ಜೊತೆ ನಟಿಸಿದ್ದಾರೆ. ಪ್ರಸ್ತುತ ರಣ್ವೀರ್ 83 ಚಲನಚಿತ್ರದಲ್ಲಿ ಕ್ರಿಕೇಟಿಗರಾದ ಕಪಿಲ್ ದೇವ್ ರವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು 1983 ಕ್ರಿಕೆಟ್ ವಿಶ್ವಕಪ್ ಆಧಾರಿತ ಕ್ರೀಡಾ ಚಲನಚಿತ್ರವಾಗಿದೆ.

Advertisement
Share this on...