ರಣವೀರ್ ಬಳಿ ಯಾವೆಲ್ಲಾ ಕಾರುಗಳಿವೆ, ಐಷಾರಾಮಿ ಅಪಾರ್ಟ್ಮೆಂಟ್ ಹೇಗಿದೆ ಗೊತ್ತಾ?

in ಮನರಂಜನೆ 16 views

ಅನೇಕ ಹಿಂದಿ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ರಣವೀರ್ ಸಿಂಗ್ ಇಂದು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ರಣವೀರ್ ಅಭಿನಯವನ್ನು ಬಹಳಷ್ಟು ಪ್ರೇಕ್ಷಕರು ಸಹ ಇಷ್ಟಪಟ್ಟಿದ್ದಾರೆ. ರಣವೀರ್ ಸಿಂಗ್ ಮೊಟ್ಟ ಮೊದಲ ಬಾರಿಗೆ ಅನುಷ್ಕಾ ಶರ್ಮಾ ಜೊತೆ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ಕಾಣಿಸಿಕೊಂಡರು. ಮನೇಶ್ ಶರ್ಮಾ ನಿರ್ದೇಶನದ ಈ ಚಿತ್ರವು ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರಣವೀರ್ ಸಿಂಗ್ ರಾತ್ರೋ ರಾತ್ರಿ ಸ್ಟಾರ್ ಆದರು. ಅಷ್ಟೇ ಅಲ್ಲ ಉತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಪಡೆದರು. 2013 ರಲ್ಲಿ ರಣವೀರ್ ‘ಲೂಟೆರಾ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದರು. ನಂತರ ಅವರು ಗೋಲಿಯಾನ್ ಕಿ ರಾಸ್ ಲೀಲಾ ರಾಮ್-ಲೀಲಾ ಮತ್ತು ದೀಪಿಕಾ ಪಡುಕೋಣೆ ಎದುರು ಬಾಜಿರಾವ್ ಮಸ್ತಾನಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪದ್ಮಾವತ್’ನಲ್ಲಿ ಸಹ ರಣವೀರ್ ಪಾತ್ರವೂ ಅತ್ಯುತ್ತಮವಾಗಿತ್ತು.
ರಣವೀರ್ ಸಿಂಗ್ ಒಟ್ಟು ಆಸ್ತಿ ಎಷ್ಟು?  ರಣವೀರ್ ಸಿಂಗ್ ಅವರ ಒಟ್ಟು ಆಸ್ತಿ ಸುಮಾರು 28 ಮಿಲಿಯನ್ ಡಾಲರ್. ಅಂದರೆ ಸುಮಾರು 36 ಕೋಟಿ ರೂಪಾಯಿಗಳು.

Advertisement

 

Advertisement

Advertisement

ರಣವೀರ್ ಸಿಂಗ್ ಪ್ರತಿ ಚಿತ್ರಕ್ಕೆ ಸುಮಾರು 15 ರಿಂದ 16 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಐಷಾರಾಮಿ ಜೀವನಶೈಲಿಗಾಗಿ ರಣವೀರ್ ತನ್ನ ಹಣವನ್ನು ಸಹ ಮುಕ್ತವಾಗಿ ಖರ್ಚು ಮಾಡುತ್ತಾರೆ. ಮುಂಬೈನ ಪ್ರಭಾದೇವಿಯಲ್ಲಿರುವ ಬ್ಯೂಮೊಂಡೆ ಟವರ್ಸ್ನಲ್ಲಿ ರಣವೀರ್ ಸಿಂಗ್ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದು, ಅದನ್ನು ಅವರು 15 ಕೋಟಿಗೆ ಖರೀದಿಸಿದ್ದಾರೆ. ಕನ್ನಡತಿ ದೀಪಿಕಾ ಪಡುಕೋಣೆ ಅವರನ್ನು ಮದುವೆಯಾಗುವ ಮೊದಲು ಗುರಗಾಂವ್’ನಲ್ಲಿ 10 ಕೋಟಿ ರೂ. ಗೋವಾದಲ್ಲಿ 9 ಕೋಟಿ ಮೌಲ್ಯದ ವೆಕೇಶನ್ ಹೌಸ್ ಅನ್ನು ಸಹ ಹೊಂದಿದ್ದಾರೆ.

Advertisement

 


ರಣವೀರ್ ಸಿಂಗ್ ಕಾರುಗಳು
ರಣವೀರ್ ಸಿಂಗ್ ಅವರು 3.29 ಕೋಟಿ ರೂ ಮೌಲ್ಯದ ಆಸ್ಟನ್ ಮಾರ್ಟಿನ್ ರಾಪಿಡ್, 1.56 ಕೋಟಿ ರೂ ಮೌಲ್ಯದ ಮರ್ಸಿಡಿಸ್ ಬೆಂಜ್ ಜಿಎಲ್ಎಸ್, 1.07 ಕೋಟಿ ರೂ. ಮೌಲ್ಯದ ಜಾಗ್ವಾರ್ ಎಕ್ಸ್ಜೆಎಲ್ 1.04 ಕೋಟಿ ರೂ. ಮೌಲ್ಯದ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಮತ್ತು 70 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಇ ಕ್ಲಾಸ್ ಕಾರುಗಳನ್ನು ಹೊಂದಿದ್ದಾರೆ.

Advertisement
Share this on...