ಬಾನಂಗಳದಲ್ಲಿ ಜರುಗಲಿದೆ ಅಪರೂಪದ ಬ್ಲೂ ಮೂನ್ ವಿಸ್ಮಯ…!

in ಕನ್ನಡ ಮಾಹಿತಿ 125 views

ಬಾನಂಗಳದಲ್ಲಿ ಅಪರೂಪದ ವಿದ್ಯಮಾನವೊಂದು ಈ ತಿಂಗಳಾಂತ್ಯದಲ್ಲಿ ಜರುಗಲಿದ್ದು, ಬ್ಲೂ ಮೂನ್ ಎಂಬ ಖಗೋಳ ವಿಸ್ಮಯಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಈ ಬ್ಲೂ ಮೂನ್ ನನ್ನು ಹಂಟರ್ ಮೂನ್ ಎಂದು ಕೂಡ ಕರೆಯುತ್ತಾರೆ. ಹೌದು. ಅಕ್ಟೋಬರ್ 31ರಂದು ಸಂಭವಿಸಲಿರುವ ಹುಣ್ಣಿಮೆಯನ್ನು ಬ್ಲೂ ಮೂನ್ ಅಥವಾ ನೀಲಿ ಚಂದ್ರ ವಿದ್ಯಮಾನ ಎಂದು ಕರೆಯಲಾಗುತ್ತಿದೆ. ಈ ಬಾರಿಯ ಹುಣ್ಣಿಮೆಯನ್ನು ಯಾಕೆ ಬ್ಲೂ ಮೂನ್ ಅಥವಾ ನೀಲಿ ಚಂದ್ರ ಹುಣ್ಣಿಮೆ ಎಂದು ಕರೆಯಲಾಗುತ್ತೆ..? ಏನಿ ನೀಲಿ ಚಂದ್ರನ ರಹಸ್ಯ ಇದಕ್ಕೆ ಹಂಟರ್ ಮೂನ್ ಎನ್ನಲು ಕಾರಣವೇನು? ಎಂಬ ಕುತೂಹಲಕಾರಿ ಸಂಗತಿ ಬಗ್ಗೆ ಇಲ್ಲಿದೆ ಮಾಹಿತಿ. ನೀಲಿ ಚಂದ್ರ, ಬ್ಲೂ ಮೂನ್ ಪ್ರಕೃತಿ ವಿಸ್ಮಯಗಳಲ್ಲಿ ಒಂದು. ಈ ಅಕ್ಟೋಬರ್ ತಿಂಗಳಿನಲ್ಲಿ ಈಗಾಗಲೇ ಒಂದು ಹುಣ್ಣಿಮೆ ಮುಗಿದಿದೆ. ಅ.1ರಂದು 2ನೇ ಹುಣ್ಣಿಮೆ. ಒಂದು ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ ಖಗೋಳ ಶಾಸ್ತ್ರದಲ್ಲಿ ಎರಡನೇ ಹುಣ್ಣಿಮೆಗೆ ನೀಲಿ ಚಂದ್ರ ಅಥವಾ ಬ್ಲೂ ಮೂನ್ ಎಂದು ಕರೆಯುತ್ತಾರೆ. ಖಗೋಳ ಶಾಸ್ತ್ರದ ಪ್ರಕಾರ ಒಂದು ಚಂದ್ರಮಾನ ತಿಂಗಳು ಎಂದರೆ 29.531 ದಿನ ಅಂದರೆ 29 ದಿನ 12 ತಾಸು 44 ನಿಮಿಷ 38 ಸೆಕೆಂಡುಗಳು. ಅ.31ರಂದು ಜರುಗಲಿರುವ ಬ್ಲೂ ಮೂನ್ ನನ್ನು ನಾವೆಲ್ಲರೂ ನೋಡಲೇಬೇಕು.

Advertisement

Advertisement

ಮತ್ತೆ ಬ್ಲೂ ಮೂನ್ ವಿಸ್ಮಯವನ್ನು ನಾವು ನೋಡಬೇಕೆಂದರೆ ಮೂರು ವರ್ಷ ಕಾಯಬೇಕು. ಅಂದರೆ 2023ರ ಅಕ್ಟೋಬರ್ 31ರವರೆಗೆ ಕಾಯಬೇಕು. ಅಂದು ಕೂಡ ಖಗೋಳದಲ್ಲಿ ಬ್ಲೂ ಮೂನ್ ಕಾಣಲಿದೆ. ಅಂದಹಾಗೇ ಈ ಬ್ಲೂ ಮೂನ್ ನನ್ನು ಹಂಟರ್ ಮೂನ್ ಎಂದು ಕೂಡ ಕರೆಯುತ್ತಾರೆ ಎಂದು ಈಗಾಗಲೇ ತಿಳಿಸಲಾಗಿದೆ. ಹಂಟರ್ ಮೂನ್ ಎಂದು ಕರೆಯಲು ಕಾರಣ ಚಳಿಗಾಲದಲ್ಲಿ ಬೇಟೆಯಾಡಲು ಹೋಗುವ ಬೇಟೆಗಾರರಿಗೆ ಈ ಹುಣ್ಣಿಮೆ ಪೂರ್ಣ ಪ್ರಮಾಣದ ಬೆಳಕನ್ನು ಚೆಲ್ಲುತ್ತದೆ. ಈ ಕಾರಣಕ್ಕಾಗಿ ಹಂಟರ್ ಮೂನ್ ಎನ್ನುತ್ತಾರೆ ಎನ್ನಲಾಗಿದೆ. ಇನ್ನು ನೀಲಿ ಚಂದ್ರ ಎಂದರೆ ಹುಣ್ಣಿಮೆಯ ಚಂದ್ರ ನೀಲಿಯಾಗಿ ಕಾಣುತ್ತಾನೆ ಎಂದಲ್ಲ, ಇದೊಂದು ಖಗೋಳ ವಿಸ್ಮಯವಷ್ಟೇ. ಅಂದಹಾಗೇ ಈ ನೀಲಿ ಚಂದ್ರ ವಿದ್ಯಮಾನಕ್ಕೆ ಪಂಚಾಂಗದಲ್ಲಿ ಯಾವುದೇ ಉಲ್ಲೇಖವಿಲ್ಲ ಎನ್ನಲಾಗಿದೆ.

Advertisement
Advertisement

Advertisement
Share this on...