ತನ್ನ ಹಾಗೂ ತಾಯಿಯ ವೈವಾಹಿಕ ಜೀವನದ ಬಗ್ಗೆ ಕಹಿ ಘಟನೆ ಬಿಚ್ಚಿಟ್ಟ ರ‍್ಯಾಪಿಡ್ ರಶ್ಮಿ !

in ಮನರಂಜನೆ 96 views

ರ‍್ಯಾಪಿಡ್, ಎಂಬ ಹೆಸರಿಗೆ ತಕ್ಕಂತೆ ಪಟ ಪಟ ಎಂದು ಅರಳು ಹುರಿದಂತೆ ಮಾತನಾಡುವ ರೆಡಿಯೋ ಜಾಕಿ ರಶ್ಮಿ ಅಲಿಯಾಸ್ ರ‍್ಯಾಪಿಡ್ ರಶ್ಮಿ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಉದಯ ಟಿವಿ ಮೂಲಕ ಕರಿಯರ್ ಆರಂಭಿಸಿದ ರಶ್ಮಿ ಈಗ ಬಿಗ್​ ಎಫ್​​​ಎಂನಲ್ಲಿ ಆರ್​​ಜೆ ಆಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

Advertisement

 

Advertisement

Advertisement

ಇನ್ನು ಮೆಚ್ಚಿನ ಸೆಲಬ್ರಿಟಿ ಎಂದರೆ ಅಭಿಮಾನಿಗಳಿಗೆ ಸಾಮಾನ್ಯವಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಹಳ ಆಸಕ್ತಿ ಇರುತ್ತದೆ. ಬಹಳಷ್ಟು ಸೆಲಬ್ರಿಟಿಗಳು ತಾವು ಮದುವೆಯಾಗಿದ್ದರೂ ಆ ವಿಚಾರವನ್ನು ಗುಟ್ಟಾಗೇ ಇರಿಸುತ್ತಾರೆ. ಅದೇ ರೀತಿ ರಶ್ಮಿ ಮದುವೆಯಾಗಿದ್ದಾರಾ, ಇಲ್ಲವಾ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕೂಡಾ ಬಹಳ ಕ್ಯೂರಿಯಾಸಿಟಿ ಇತ್ತು. ಬಿಗ್​​​​ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ರಶ್ಮಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಕೆಲವು ದಿನಗಳ ಹಿಂದೆ ತಮಗೆ ಡೇವಿಸ್ ಎಂಬುವವರೊಂದಿಗೆ ಮದುವೆಯಾಗಿದೆ ಎಂಬ ವಿಚಾರವನ್ನು ರಶ್ಮಿ ಹೇಳಿದ್ದರು ಆದರೆ ಇದು ಅವರಿಗೆ ಎರಡನೇ ಮದುವೆ. ಬಿಗ್​ಬಾಸ್ ನೋಡದ ವೀಕ್ಷಕರಿಗೆ ಈ ವಿಚಾರ ತಿಳಿದಿಲ್ಲ.

Advertisement

 

2007 ರಲ್ಲಿ ರಶ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಅವರ ದಾಂಪತ್ಯ ಚೆನ್ನಾಗಿದ್ದದ್ದು ಕೇವಲ 2 ವರ್ಷಗಳು ಅಷ್ಟೇ. ಆ ಮಾನಸಿಕ ಹಿಂಸೆಯಿಂದ ಹೊರಬರಲು ರಶ್ಮಿ ಡೈವೋರ್ಸ್ ಪಡೆಯಲು ನಿರ್ಧರಿಸಿದರು. ವಿಚ್ಛೇದನ ಪಡೆದು ಹೊರಬಂದರು. ಬೇಸರದ ಸಂಗತಿ ಎಂದರೆ ರಶ್ಮಿ ಅವರ ತಾಯಿಗೆ ಕೂಡಾ ಡೈವೋರ್ಸ್ ಆಗಿದ್ದು ತನ್ನಂತೆಯೇ ಮಗಳ ಜೀವನ ಕೂಡಾ ಆಯ್ತು ಎಂಬುದರ ಬಗ್ಗೆ ಅವರಿಗೆ ಬಹಳ ನೋವಿತ್ತು. ಆದರೆ ನನಗೆ ಡೈವೋರ್ಸ್ ಪಡೆದುಕೊಳ್ಳುವುದು ಬಿಟ್ಟು ಬೇರೆ ದಾರಿ ಇರಲಿಲ್ಲವಾದ್ದರಿಂದ ಕಾನೂನಿನ ಪ್ರಕಾರ ಎಲ್ಲವನ್ನೂ ಮುಗಿಸಿ ಮೊದಲ ಮದುವೆಯಿಂದ ಹೊರಬಂದೆ. ಆಗ ತಾನೇ ನನಗೆ ಆರ್​​ಜೆ ಕೆಲಸ ಸಿಕ್ಕಿದ್ದರಿಂದ ಈ ವಿಚಾರವನ್ನು ಯಾರಿಗೂ ತಿಳಿಸದೆ ಮುಚ್ಚಿಟ್ಟೆ.

ಈ ಕಹಿ ಘಟನೆ ನಡೆದ ಕೆಲವು ದಿನಗಳ ನಂತರ ನನಗೆ ಡೇವೀಸ್ ಪರಿಚಯವಾದರು. ನಮ್ಮ ಸ್ನೇಹ ಪ್ರೀತಿಗೆ ತಿರುಗಿತು. ಒಬ್ಬರನೊಬ್ಬರು ಪ್ರೀತಿಸಿದೆವು, ಮದುವೆ ಆಗಲು ನಿರ್ಧರಿಸಿದೆವು. ನನಗೆ ಇದು ಎರಡನೇ ಮದುವೆ ಆದ್ದರಿಂದ ಡೇವಿಸ್ ಮನೆಯವರು ನನ್ನನ್ನು ಒಪ್ಪಲಿಲ್ಲ. ಆದರೆ ಡೇವಿಸ್ ಇದ್ಯಾವುದನ್ನೂ ಲೆಕ್ಕಿಸದೆ ನನ್ನನ್ನು ಮದುವೆಯಾದರು. ಈಗ ನಾನು ಸಂತೋಷವಾಗಿದ್ದೇನೆ, ನನ್ನ ತಾಯಿ ಕೂಡಾ ಸಂತೋಷವಾಗಿದ್ದಾರೆ ಎಂದು ರಶ್ಮಿ ಬಿಗ್​ಬಾಸ್ ವೇಳೆ ಹೇಳಿಕೊಂಡಿದ್ದರು.

 

ರಶ್ಮಿ ವಿಚಾರ ತಿಳಿದ ಅಭಿಮಾನಿಗಳು ಡೇವಿಸ್ ಅವರೊಂದಿಗೆ ರಶ್ಮಿ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ್ದಾರೆ.

Advertisement
Share this on...