ರಶ್ಮಿಕಾ ಆ ಚಿತ್ರ ರಿಜೆಕ್ಟ್ ಮಾಡಲು ಕಾರಣ ಇಲ್ಲಿದೆ ನೋಡಿ !

in ಮನರಂಜನೆ/ಸಿನಿಮಾ 101 views

‘ಚಲೋ’ದಲ್ಲಿ ನಾಗ ಶೌರ್ಯ ಜೋಡಿಯಾಗಿ ತೆಲಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ, ಬಹಳ ಬೇಗ ಯಶಸ್ಸಿನ ಏಣಿಗಳನ್ನು ಏರಿದರು. ಇತ್ತೀಚೆಗೆ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸುವ ಮೂಲಕ ರಶ್ಮಿಕಾ ಅನೇಕರನ್ನು ದಿಗ್ಭ್ರಮೆಗೊಳಿಸಿದರು. ಆ ನಂತರ ಭೀಷ್ಮಾ ಚಿತ್ರ ಯಶಸ್ಸನ್ನು ಗಳಿಸಿದ ನಂತರ, ಇದೀಗ ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನಟಿಸುತ್ತಿದ್ದಾರೆ.  ಆದರೆ ಇದೀಗ ಬಂದ ಲೇಟೆಸ್ಟ್ ಸುದ್ದಿ ಏನೆಂದರೆ, ನಾನಿಯ ಮುಂಬರುವ ಚಿತ್ರ ‘ಶ್ಯಾಮ್ ಸಿಂಘ ರಾಯ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ರಶ್ಮಿಕಾ ಅವರನ್ನು ಸಂಪರ್ಕಿಸಲಾಗಿದೆ. ಅಷ್ಟೇ ಅಲ್ಲ, ರಶ್ಮಿಕಾ ಅವರಿಗೆ ಸಾಕಷ್ಟು ಸಂಭಾವನೆ ಕೊಡಲು ನಿರ್ಧರಿಸಿದರೂ ಈ ಪ್ರಸ್ತಾಪವನ್ನು ಅವರು ನಯವಾಗಿ ತಿರಸ್ಕರಿಸಿದ್ದಾರೆ. ಯಾಕೆಂದರೆ ಈ ಚಿತ್ರದಲ್ಲಿ ಮೂರು ಜನ ನಾಯಕಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದರು.

Advertisement

Advertisement

ಇದರಲ್ಲಿ ರಶ್ಮಿಕಾಗೆ ಅತ್ಯುತ್ತಮ ಪಾತ್ರವನ್ನು ಸಹ ಕೊಡಲಾಗಿತ್ತು. ಆದರೆ ರಶ್ಮಿಕಾ ಚಿತ್ರದಲ್ಲಿ ಮೊದಲನೇ ನಾಯಕಿಯಲ್ಲ ಎಂದು ತಿಳಿದುಬಂದ ಕಾರಣ ಆ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ವದಂತಿಗಳ ಪ್ರಕಾರ ಹೆಚ್ಚು ನಟಿಯರು ಇರುವ ಚಿತ್ರಗಳಲ್ಲಿ ನಟಿಸದಿರಲು ರಶ್ಮಿಕಾ ನಿರ್ಧರಿಸಿದ್ದಾರೆ. ಎರಡು ದಿನಗಳ ಹಿಂದೆ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಸಾಯಿ ಪಲ್ಲವಿ ಅವರ ಅಭಿನಯ, ನೃತ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿರುವುದರಿಂದ, ಅವರು ಈ ಚಿತ್ರದಲ್ಲಿ ಹೈಲೆಟ್ ಆಗಬಹುದು ಎಂಬ ಕಾರಣಕ್ಕೆ ರಶ್ಮಿಕಾ ನಾನಿ ಮತ್ತು ರಾಹುಲ್ ಅವರ ಶ್ಯಾಮ್ ಸಿಂಘ ರಾಯ್ ಚಿತ್ರದಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ.

Advertisement

Advertisement

ಹಾಗಾಗಿ ತಯಾರಕರು ಇತರ ಎರಡು ಪ್ರಮುಖ ಪಾತ್ರಗಳಿಗಾಗಿ ನಟಿಯರನ್ನು ಹುಡುಕುತ್ತಿದ್ದಾರೆ. ಇನ್ನು ವಿ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ನಾನಿ, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಶೀಘ್ರದಲ್ಲೇ ಶ್ಯಾಮ್ ಸಿಂಘ ರಾಯ್ ಸೆಟ್ ಸೇರಲಿದ್ದಾರೆ. ಪ್ರಸ್ತುತ ಈ ಚಿತ್ರ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ.

Advertisement
Share this on...