ಮಹೇಶ್ ಬಾಬುಗೆ ಉಡುಗೊರೆ ಕಳುಹಿಸಿದ ರಶ್ಮಿಕಾ, ಗಿಫ್ಟ್ ನೋಡಿ ನಮ್ರತಾ ಹೇಳಿದ್ದೇನು ಗೊತ್ತಾ?

in ಮನರಂಜನೆ/ಸಿನಿಮಾ 114 views

ಸ್ಯಾಂಡಲ್’ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಟ ಮಹೇಶ್ ಬಾಬು ಕುಟುಂಬಕ್ಕೆ ವಿಶೇಷ ಉಡುಗೊರೆ ಕಳುಹಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು, ರಶ್ಮಿಕಾ ಆವಕಾಡೊ, ಮಾವಿನ ಉಪ್ಪಿನಕಾಯಿ ಮತ್ತು ಸಾವಯವವಾಗಿ ಬೆಳೆದ ಇತರ ಆಹಾರಗಳು ಸೇರಿದಂತೆ ರುಚಿಕರವಾದ ತಿನಿಸುಗಳು ತುಂಬಿದ ಬುಟ್ಟಿಯನ್ನು ಕಳುಹಿಸಿದ್ದಾರೆ. ಉಡುಗೊರೆ ಜೊತೆಗೆ ರಶ್ಮಿಕಾ ಕೈಯಿಂದ ಬರೆದ ಟಿಪ್ಪಣಿಯನ್ನೂ ಸೂಪರ್ ಸ್ಟಾರ್ ದಂಪತಿಗಳಿಗೆ ಕಳುಹಿಸಿದ್ದಾರೆ. ರಶ್ಮಿಕಾ ಅವರ ಈ ಉಡುಗೊರೆ ನೋಡಿ ಮಹೇಶ್ ಬಾಬು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಹೇಶ್ ಬಾಬು ಅವರ ಪತ್ನಿ ಮತ್ತು ಮಾಜಿ ನಟಿ ನಮ್ರತಾ ಶಿರೋಡ್ಕರ್ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಸದ್ಯ ರಶ್ಮಿಕಾ ತನ್ನ ಕುಟುಂಬದವರೊಂದಿಗೆ ಕೂರ್ಗ್ನಲ್ಲಿ ತಂಗಿದ್ದು, ಅಲ್ಲಿಂದಲೇ ಇಷ್ಟು ಸುಂದರವಾದ ಉಡುಗೊರೆಯನ್ನು ಕಳುಹಿಸಿದ್ದಕ್ಕಾಗಿ ನಮ್ರತಾ ರಶ್ಮಿಕಾಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement

Advertisement

ಅಷ್ಟೇ ಅಲ್ಲ, ಕೋವಿಡ್ ಕಾಲದಲ್ಲಿ ಮಹೇಶ್ ಬಾಬು ಪಡೆದ ಮೊದಲ ಉಡುಗೊರೆ ಇದಾಗಿದೆ ಎಂದು ನಮ್ರತಾ ತಿಳಿಸಿದ್ದಾರೆ. ಈ ಮಳೆಗಾಲದಲ್ಲಿ ನಮ್ಮ ಕುಟುಂಬಕ್ಕೆ ಸುಂದರವಾದ ಉಡುಗೊರೆ ಸಿಕ್ಕಿದೆ ಎಂದ ಹೇಳಿರುವ ನಮ್ರತಾ, ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿ “ರುಚಿಕರವಾದ ತಿನಿಸುಗಳನ್ನು ಕಳುಹಿಸಿರುವುದಕ್ಕೆ ಧನ್ಯವಾದಗಳು ರಶ್ಮಿಕಾ ! ಕೋವಿಡ್ ಕಾಲದಲ್ಲಿ ನಮಗೆ ಸಿಕ್ಕ ಮೊದಲ ಗಿಫ್ಟ್ ಹ್ಯಾಂಪರ್ , ಸ್ಟೇ ಹೋಂ, ಸ್ಟೇ ಸೇಫ್” ಎಂದು ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮಹೇಶ್ ಬಾಬು ಜೊತೆ ರಶ್ಮಿಕಾ ಅಭಿನಯಿಸಿದ “ಸರಿಲೇರು ನೀಕೆವ್ವರು” ಚಿತ್ರ ಸೂಪರ್ ಹಿಟ್ ಆಯಿತು. ಇದಾದ ನಂತರ ರಶ್ಮಿಕಾಗೆ ದೊಡ್ಡ ಬ್ರೇಕ್ ಸಿಕ್ಕಿದೆ. ರಶ್ಮಿಕಾ ಟಾಲಿವುಡ್ನಲ್ಲಿ ಒಳ್ಳೆಯ ಭರವಸೆಯನ್ನು ಮೂಡಿಸುತ್ತಿದ್ದು, ತೆಲುಗಿನ ಎಲ್ಲ ದೊಡ್ಡ ತಾರೆಯರೊಂದಿಗೆ ನಟಿಸುವ ನಿರೀಕ್ಷೆಯಲ್ಲಿದ್ದಾರೆ.

Advertisement

 

Advertisement
View this post on Instagram

 

Thankyou for all the delicious goodies rashmika !! all the way from Coorg ???#monsoonseason ?#mangopickle ?our first gift hamper in covid times ?happy monsoons !! #stayhomestaysafe

A post shared by Namrata Shirodkar (@namratashirodkar) on

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆದಾಗಿನಿಂದಲೂ ರಶ್ಮಿಕಾ ಬಹಳ ಸಮಯದ ನಂತರ ಮನೆಯಲ್ಲಿ ಆರಾಮಾಗಿ ಕಾಲಕಳೆಯುತ್ತಿದ್ದಾರೆ. ರಶ್ಮಿಕಾ ಕಳೆದ ಕೆಲವು ವರ್ಷಗಳಿಂದ ಕೂರ್ಗ್’ನಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ, ಕೆಲವು ತಿಂಗಳುಗಳಿಂದ ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಸಂತೋಷದಿಂದ ಇದ್ದಾರೆ. ಈ ಸಮಯವನ್ನು ರಶ್ಮಿಕಾ ಸಿನಿಮಾಗಳನ್ನು ಮತ್ತು ಶೋಗಳನ್ನು ನೋಡಲು ಬಳಸಿಕೊಳ್ಳುತ್ತಿದ್ದು, ಕೆಲವು ವಿಷಯಗಳನ್ನು ತಿಳಿದುಕೊಳ್ಳಲು ಸಹ ಬಳಸಿಕೊಂಡಿದ್ದಾರೆ.

Advertisement
Share this on...