ಇತ್ತೀಚೆಗೆ ರಶ್ಮಿಕಾ ಅವರನ್ನು ಇಂಪ್ರೆಸ್ ಮಾಡಿದ್ದು ಯಾರು ಗೊತ್ತಾ ?

in ಮನರಂಜನೆ/ಸಿನಿಮಾ 29 views

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆದಾಗಿನಿಂದಲೂ ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಹಳ ಸಮಯದ ನಂತರ ಮನೆಯಲ್ಲಿ ಆರಾಮಾಗಿ ಕಾಲಕಳೆಯುತ್ತಿದ್ದಾರೆ. ರಶ್ಮಿಕಾ ಕಳೆದ ಕೆಲವು ವರ್ಷಗಳಿಂದ ಕೂರ್ಗ್ನಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ, ಕೆಲವು ತಿಂಗಳುಗಳಿಂದ ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಸಂತೋಷದಿಂದ ಇದ್ದಾರೆ.  ಈ ಸಮಯವನ್ನು ರಶ್ಮಿಕಾ ಸಿನಿಮಾಗಳನ್ನು ಮತ್ತು ಶೋಗಳನ್ನು ನೋಡಲು ಬಳಸಿಕೊಳ್ಳುತ್ತಿದ್ದು, ಕೆಲವು ವಿಷಯಗಳನ್ನು ತಿಳಿದುಕೊಳ್ಳಲು ಸಹ ಬಳಸಿಕೊಂಡಿದ್ದಾರೆ. ಇದೀಗ ತಮ್ಮ ಸೋಶಿಯಲ್ ಮೀಡಿಯಾ ಪುಟದಲ್ಲಿ ಪೆಂಗ್ವಿನ್ ಚಿತ್ರತಂಡವನ್ನು, ವಿಶೇಷವಾಗಿ ಕೀರ್ತಿ ಸುರೇಶ್ ಅವರನ್ನು ಶ್ಲಾಘಿಸಿರುವ ರಶ್ಮಿಕಾ, ಕೀರ್ತಿ ಸುರೇಶ್ ಅವರ ಅಭಿನಯವು ನನ್ನನ್ನು ತುಂಬಾ ಆಕರ್ಷಿಸಿತು ಎಂದು ತಿಳಿಸಿದ್ದಾರೆ. ಹೌದು, ರಶ್ಮಿಕಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ “ನಾನು ಕಳೆದ ರಾತ್ರಿ ಪೆಂಗ್ವಿನ್ ನೋಡುತ್ತಿದ್ದೆ. ಅದರಲ್ಲಿ ಕೀರ್ತಿ ಅಭಿನಯವು ಅದ್ಭುತವಾಗಿತ್ತು. ಈ ಚಿತ್ರ ಎಲ್ಲಾ ತಾಯಂದಿರಿಗೆ ಸಂಬಂಧಿಸಿದೆ ಎಂಬುದು ನನ್ನ ಅನಿಸಿಕೆ.

Advertisement

 

Advertisement

Advertisement

ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ಕಲಾವಿದರಿಗೂ ಅಭಿನಂದನೆಗಳು. ಆಲ್ ದಿ ವೆರಿ ಬೆಸ್ಟ್” ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಕೈಯ್ಯಲ್ಲಿ ಸದ್ಯ ಹಲವಾರು ಚಿತ್ರಗಳಿವೆ. ಪ್ರಸ್ತುತ ಧ್ರುವ ಸರ್ಜಾ ಜೊತೆಗೆ ಕನ್ನಡದಲ್ಲಿ ‘ಪೊಗರು’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ನಟ ಕಾರ್ತಿ ಅವರೊಂದಿಗೆ ತಮಿಳು ಚಿತ್ರದಲ್ಲಿ ನಟಿಸಲು ರಶ್ಮಿಕಾ ಕಾಯುತ್ತಿದ್ದು, ಏತನ್ಮಧ್ಯೆ, ತಮಿಳಿನ ಮಾಸ್ ಹಿಟ್ ತುಪ್ಪಕ್ಕಿಯ ಮುಂದುವರಿದ ಭಾಗಕ್ಕೆ ರಶ್ಮಿಕಾ ನಾಯಕಿ ಎಂಬ ವದಂತಿಗಳಿವೆ. ಹೀಗೆ ಹಲವಾರು ಚಲನಚಿತ್ರಗಳು ರಶ್ಮಿಕಾ ಕೈಯ್ಯಲ್ಲಿ ಇರುವುದರಿಂದ ರಶ್ಮಿಕಾ ಶೀಘ್ರದಲ್ಲೇ ತನ್ನ ಸೆಟ್ಗಳಿಗೆ ಹಿಂತಿರುಗುವ ಮೊದಲು ಈ ಸಮಯವನ್ನು ಮನೆಯವರ ಜೊತೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

Advertisement

 


ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನಟಿಸುತ್ತಿರುವ ರಶ್ಮಿಕಾ ಇತ್ತೀಚೆಗೆ ನಾನಿಯ ಮುಂಬರುವ ಚಿತ್ರ ‘ಶ್ಯಾಮ್ ಸಿಂಘ ರಾಯ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಳ್ಳಲಿಲ್ಲವಂತೆ. ಯಾಕೆಂದರೆ ಈ ಚಿತ್ರದಲ್ಲಿ ಮೂರು ಜನ ನಾಯಕಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದರು. ಇದರಲ್ಲಿ ರಶ್ಮಿಕಾಗೆ ಅತ್ಯುತ್ತಮ ಪಾತ್ರವನ್ನು ಸಹ ಕೊಡಲಾಗಿತ್ತು. ಆದರೆ ರಶ್ಮಿಕಾ ಚಿತ್ರದಲ್ಲಿ ಮೊದಲನೇ ನಾಯಕಿಯಲ್ಲ ಎಂದು ತಿಳಿದುಬಂದ ಕಾರಣ ಆ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

Advertisement
Share this on...