ರಶ್ಮಿಕಾ ಚಿತ್ರರಂಗಕ್ಕೆ ಬರಲು ಕಾರಣ ಇವರಲ್ಲವಂತೆ…ಬೇರೆಯಂತೆ…ಯಾರದು ನೋಡಿ..?

in ಸಿನಿಮಾ 15 views

ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ, ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಆಯ್ಕೆಯಾದಾಗ ಮುಂದೊಂದು ದಿನ ನಾನು ಕನ್ನಡ ಚಿತ್ರರಂಗ ಹೊರತುಪಡಿಸಿ ತೆಲುಗು, ತಮಿಳು ಚಿತ್ರರಂಗದಲ್ಲಿ ಅವಕಾಶ ಗಳಿಸಿ ಹೆಸರು ಮಾಡುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ ಎನ್ನಿಸುತ್ತದೆ. ರಕ್ಷಿತ್ ಶೆಟ್ಟಿ ಜೊತೆ ಸಾನ್ವಿ ಪಾತ್ರದಲ್ಲಿ ನಟಿಸಿದ್ದ ರಶ್ಮಿಕಾ ಈಗ ಕನ್ನಡಕ್ಕಿಂತ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಈಗ ಆಕೆ ನಂಬರ್ ಒನ್​ ಸ್ಥಾನದಲ್ಲಿರುವ ನಟಿ.

Advertisement

 

Advertisement

Advertisement

ತಾನು ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಹೇಗೆ ಆಯ್ಕೆಯಾದೆ ಎಂಬ ವಿಚಾರವನ್ನು ರಶ್ಮಿಕಾ ಇತ್ತೀಚೆಗೆ ಹೇಳಿಕೊಂಡಿದ್ದರು. ಅವರು ಚಿತ್ರರಂಗಕ್ಕೆ ಬರಲು ಕಾರಣ ಒಂದು ಸೌಂದರ್ಯ ಸ್ಪರ್ಧೆಯಂತೆ. ಕಾಲೇಜು ದಿನಗಳಲ್ಲಿ ಮಾಡೆಲಿಂಗ್​​​​​​​​ ಮಾಡುತ್ತಿದ್ದ ರಶ್ಮಿಕಾ 2014 ರಲ್ಲಿ ‘ಫ್ರೆಷ್​ ಫೇಸ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ರಶ್ಮಿಕಾ ಅವರೇ ವಿಜೇತರಾಗಿದ್ದರು. ಈ ವೇಳೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ತೆಲುಗು ನಟ ರಾಣಾ ದಗ್ಗುಬಾಟಿ ರಶ್ಮಿಕಾ ಅವರಿಗೆ ಪ್ರಶಸ್ತಿ ನೀಡಿದ್ದರು.

Advertisement

 

ಈ ಹಳೆಯ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ ನಾನು ಚಿತ್ರರಂಗಕ್ಕೆ ಬರಲು ಈ ಸೌಂದರ್ಯ ಸ್ಪರ್ಧೆಯೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಈ ರೀತಿ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ರಶ್ಮಿಕಾ ಮಂದಣ್ಣ ಅವರನ್ನು ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್​​​​ವುಡ್​​​ಗೆ ಪರಿಚಯಿಸಿದ್ದರು. ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದರೂ ಒಂದು ವೇಳೆ ರಕ್ಷಿತ್ ಶೆಟ್ಟಿ, ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸದಿದ್ದಲ್ಲಿ ಇಂದು ಅವರು ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ ಎನ್ನುವುದು ಮಾತ್ರ ನಿಜ. ಆದರೆ ಬ್ರೇಕ್​ ಅಪ್​​​​​ ಆದ ನಂತರ ಒಮ್ಮೆಯೂ ರಶ್ಮಿಕಾ ರಕ್ಷಿತ್ ಅವರ ಹೆಸರನ್ನು ಎಲ್ಲಿಯೂ ಹೇಳಿಲ್ಲ.

 

‘ಕಿರಿಕ್ ಪಾರ್ಟಿ’ ನಂತರ ‘ಅಂಜನಿಪುತ್ರ’, ‘ಚಮಕ್’ ಚಿತ್ರದಲ್ಲಿ ನಟಿಸಿದರು. ‘ಚಲೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಅವರು ‘ಗೀತಗೋವಿಂದಂ’, ‘ದೇವ್​ದಾಸ್’, ‘ಡಿಯರ್ ಕಾಮ್ರೇಡ್’​, ‘ಸರಿಲೇರು ನೀಕೆವರು’ , ‘ಭೀಷ್ಮ’ ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಅವರು ಕನ್ನಡದ ‘ಪೊಗರು’, ತಮಿಳಿನ ‘ಸುಲ್ತಾನ್’, ಹಾಗೂ ಅಲ್ಲು ಅರ್ಜುನ್ ಜೊತೆ ತೆಲುಗಿನ ‘ಪುಷ್ಪ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕೊರೊನಾ ಲಾಕ್​​ಡೌನ್​ ಇರುವುದರಿಂದ ರಶ್ಮಿಕಾ ಕೊಡಗಿನ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.

Advertisement
Share this on...