ರಶ್ಮಿಕಾ ಕೇಳಿದ ಈ ಪ್ರಶ್ನೆಗೆ ನಿಮ್ಮ ಪ್ರತಿಕ್ರಿಯೆ ಏನು ?

in ಮನರಂಜನೆ 82 views

ದೇಶದಲ್ಲಿ ಲಾಕ್ ಡೌನ್ ಆದಾಗಿನಿಂದ ಸೆಲೆಬ್ರಿಟಿಗಳು ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಅವರು ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು, ಇದೀಗ ಅಭಿಮಾನಿಗಳಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

Advertisement

 

Advertisement


“ನನ್ನ ಹೆಸರು ರಶ್ಮಿಕಾ ಅಲ್ಲದಿದ್ದರೆ ನನಗೆ ಯಾವ ಹೆಸರು ಹೆಚ್ಚು ಸೂಕ್ತವಾಗುತ್ತಿತ್ತು” ಎಂದು ಟ್ವಿಟ್ಟರ್’ನಲ್ಲಿ ರಶ್ಮಿಕಾ ಕೇಳಿದರು. ಈ ಪ್ರಶ್ನೆಗೆ ಆಕೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ‘ಲಿಲ್ಲಿ’ (‘ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಪಾತ್ರ) ಹೆಸರು ಸರಿಹೊಂದುತ್ತದೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ‘ಮೋನಿ’, ‘ಸಾನ್ವಿ’ ಮತ್ತು ‘ಪಿಂಕಿ’ ಯಂತಹ ಹೆಸರುಗಳನ್ನು ಸೂಚಿಸಿದರು. ಕೆಲವರಂತೂ ‘ರಶ್ಮಿಕಾ ವಿಜಯ್ ದೇವರಕೊಂಡ’ ಎಂದು ಸಲಹೆ ನೀಡಿದರೆ, ನಿಮಗೆ ರಶ್ಮಿಕಾ ಹೆಸರೇ ಸೂಕ್ತವಾದ ಹೆಸರು ಎಂದು ಹಲವರು ಹೇಳಿದರು.

Advertisement

 

Advertisement


ರಶ್ಮಿಕಾ ಮಂದಣ್ಣ ನಿಧಾನವಾಗಿ ಟಾಪ್ ಒನ್ ಸ್ಥಾನ ಪಡೆಯಲು ಎಲ್ಲಾ ರೀತಿಯಲ್ಲೂ ಶ್ರಮವಹಿಸುತ್ತಿದ್ದಾರೆ. ಈಗಾಗಲೇ ಟಾಲಿವುಡ್’ನಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ನಟಿಸಿರುವ ರಶ್ಮಿಕಾ, ಪ್ರಸ್ತುತ ಅಲ್ಲು ಅರ್ಜುನ್ ಜೊತೆ ‘ಪುಷ್ಪಾ’ ಚಿತ್ರದಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಎನ್ಟಿಆರ್ ತ್ರಿವಿಕ್ರಮ್ ಚಿತ್ರದಲ್ಲಿಯೂ ಆಕೆ ನಾಯಕಿ ಎಂದು ಮೂಲಗಳು ತಿಳಿಸಿವೆ.

 


ಏತನ್ಮಧ್ಯೆ, ‘ಪುಷ್ಪಾ’ ಚಿತ್ರೀಕರಣ ಪ್ರಾರಂಭವಾದರೂ, ಏಕಾಏಕಿ ಕೊರೊನಾ ಎದುರಾದ ಕಾರಣ ಚಿತ್ರಕ್ಕೆ ಅಡಚಣೆಯಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ರಶ್ಮಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಚಿತ್ತೂರಿನ ಹಿನ್ನೆಲೆ ಹೊಂದಿರುವ ಕಾರಣ ಕಲಾವಿದರೆಲ್ಲರೂ ಇಲ್ಲಿನ ಆಡುಭಾಷೆಯನ್ನು ಕಲಿಯಲು ಶ್ರಮಿಸುತ್ತಿದ್ದಾರೆ. ‘ಪುಷ್ಪಾ’ ಚಿತ್ರದ ಪಾತ್ರಕ್ಕೆ ತನ್ನ ಧ್ವನಿಯನ್ನೇ ನೀಡಬೇಕೆಂದು ರಶ್ಮಿಕಾ ನಿರ್ಧರಿಸಿರುವುದರಿಂದ, ಚಿತ್ತೂರು ಭಾಷೆಯನ್ನು ನಿರರ್ಗಳವಾಗಿ ಕಲಿಯಲು ಈ ಲಾಕ್ ಡೌನ್ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

 

ಈ ನಡುವೆ ನಿರ್ದೇಶಕ ಸುಕುಮಾರ್ ಅವರು ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ಅವರ ಹಳ್ಳಿಯ ಹುಡುಗಿಯ ಪಾತ್ರವನ್ನು ನೋಡಿಕೊಳ್ಳಬೇಕೆಂದು ರಶ್ಮಿಕಾಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ ರಶ್ಮಿಕಾ ಇದೀಗ ಆ ಚಿತ್ರವನ್ನು ನೋಡುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದು, ಅವರ ಪತ್ನಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ.

Advertisement
Share this on...