ಈ ಬಾರಿಯಾದರೂ ರಶ್ಮಿಕಾ ಕನಸು ನನಸಾಗಲಿದೆಯಾ ?

in ಮನರಂಜನೆ/ಸಿನಿಮಾ 131 views

ನಟಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಾ, ತಮ್ಮ ವೃತ್ತಿಜೀವನದಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ಬಲ್ಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ತಮಿಳಿನ ದಳಪತಿ ವಿಜಯ್ ನಟನೆಯ 65ನೇ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಹೌದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಎ.ಆರ್.ಮುರುಗದಾಸ್ ಅವರು ಪ್ರಸ್ತುತ ರಶ್ಮಿಕಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ.  ಈ ಹಿಂದೆಯೂ ರಶ್ಮಿಕಾ ಅವರು ವಿಜಯ್ ಅವರ 64 ನೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆ ನಂತರ ರಶ್ಮಿಕಾಗೆ ವಿಜಯ್ ಅವರೊಂದಿಗೆ ನಟಿಸಲು ಇಷ್ಟವಿದ್ದರೂ, ಆಕೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಬಂತು. ಆದ್ದರಿಂದ ಈ ಬಾರಿಯಾದರೂ ರಶ್ಮಿಕಾ ಕನಸು ನನಸಾಗಲಿ ಎಂದು ಹಾರೈಸೋಣ.  ಈಗಾಗಲೇ ಟಾಲಿವುಡ್’ನಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ನಟಿಸಿರುವ ರಶ್ಮಿಕಾ, ಎನ್ಟಿಆರ್ ತ್ರಿವಿಕ್ರಮ್ ಚಿತ್ರದಲ್ಲಿಯೂ ನಾಯಕಿ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ಪ್ರಸ್ತುತ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

 

Advertisement

Advertisement

ಈ ಚಿತ್ರವು ಶೇಷಾಚಲಂ ಕಾಡಿನಲ್ಲಿ ಶ್ರೀಗಂಧ ಕಳ್ಳಸಾಗಣೆ ಆಧಾರಿತವಾಗಿದೆ ಎಂದು ಹೇಳಲಾಗುತ್ತಿದ್ದು, ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ರಶ್ಮಿಕಾ ಪಾತ್ರ ಈ ಚಿತ್ರದಲ್ಲಿ ದೊಡ್ಡ ತಿರುವನ್ನು ನೀಡಲಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಸುಕುಮಾರ್ ರಶ್ಮಿಕಾಗೆ ಹಳ್ಳಿ ಹುಡುಗಿಯ ಪಾತ್ರವನ್ನು ನೀಡಿದ್ದಾರೆ.  ‘ಪುಷ್ಪಾ’ ಚಿತ್ರದ ಪಾತ್ರಕ್ಕೆ ತನ್ನ ಧ್ವನಿಯನ್ನೇ ನೀಡಬೇಕೆಂದು ರಶ್ಮಿಕಾ ನಿರ್ಧರಿಸಿರುವುದರಿಂದ, ಚಿತ್ತೂರು ಭಾಷೆಯನ್ನು ನಿರರ್ಗಳವಾಗಿ ಕಲಿಯಲು ಈ ಲಾಕ್ ಡೌನ್ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ರಶ್ಮಿಕಾಳನ್ನು ಹಳ್ಳಿ ಹುಡುಗಿಯ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕುತೂಹಲ ಹೊಂದಿದ್ದಾರೆ.

Advertisement

 

ಏಕೆಂದರೆ ಅವರ ವೃತ್ತಿಜೀವನದ ಉದ್ದಕ್ಕೂ ಅವರು ಸಿಟಿ ಹುಡುಗಿಯ ಪಾತ್ರಗಳನ್ನು ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರವು ತನ್ನ ಹೆಂಡತಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುವ ಟ್ರಕ್ ಚಾಲಕನ ಜೀವನದ ಬಗ್ಗೆ ಹೇಳುತ್ತದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

Advertisement
Share this on...