ಮತ್ತೊಂದು ತೆಲುಗು ಚಿತ್ರದಲ್ಲಿ ಕೊಡಗಿನ ಬೆಡಗಿ; ದಕ್ಷಿಣದ ಸ್ಟಾರ್ ನಟಿ ಆಗ್ತಿದ್ದಾರಾ ರಶ್ಮಿಕಾ..?

in ಮನರಂಜನೆ/ಸಿನಿಮಾ 122 views

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಲ್ಲಿ ಇದೀಗ ಸ್ಟಾರ್ ನಟಿ ಎಂದರೆ ತಪ್ಪಾಗಲ್ಲ. ಸ್ಯಾಂಡಲ್ ವುಡ್ ನ ಈ ನಟಿ ಇದೀಗ ತೆಲುಗು ಹಾಗೂ ತಮಿಳುನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ತೆಲುಗಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಈಗಗಾಲೇ ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್ ಚಿತ್ರದಲ್ಲಿ ಅಭಿನಯಿಸಿರುವ ರಶ್ಮಿಕಾ, ಸುಲ್ತಾನ್ ಶೂಟಿಂಗ್ ಪೂರ್ಣಗೊಳಿಸಿದ್ದಾರಂತೆ. ಇದೇ ವೇಳೆ ತೆಲುಗಿನ ಸ್ಟೈಲಿಶ್ ಹೀರೋ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಪುಷ್ಪ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೊರೊನಾದಿಂದಾಗಿ ಚಿತ್ರದ ಶೂಟಿಂಗ್ ವಿಳಂಬವಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆಯಂತೆ. ಇದೀಗ ರಶ್ಮಿಕಾ ಖಾತೆಗೆ ತೆಲುಗಿನ ಮತ್ತೊಂದು ಸಿನಿಮಾ ಸೇರುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಅಖಿಲ್ ಅಕ್ಕಿನೇನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನಲಾಗಿದೆ.

Advertisement

Advertisement

ಈಗಾಗಲೇ ಈ ಸಿನಿಮಾ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದೆಯಂತೆ. ಮಾತುಕತೆ ಅಂತಿಮವಾದರೆ ಅಖಿಲ್ ಅಕ್ಕಿನೇನಿ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುವುದು ಪಕ್ಕಾ ಆಗಲಿದೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಟಾಲಿವುಡ್ ನಲ್ಲಿ ಇದೀಗ ಸ್ಟಾರ್ ನಟಿ. ವಿಜಯ್ ದೇವರಕೊಂಡ ಅವರ ಗೀತಗೋವಿಂದಮ್, ಡಿಯರ್ ಕಾಮ್ರೆಡ್ ಮೂಲಕ ತೆಲುಗಿನಲ್ಲಿ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಇತ್ತೀಚೆಗೆ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು, ನಿತೀನ್ ಅಭಿನಯದ ಭೀಷ್ಮ ಸೇರಿದಂತೆ ಸಾಲು ಸಾಲು ತೆಲುಗು ಸಿನಿಮಾ ಮಾಡುತ್ತಿದ್ದಾರೆ.

Advertisement

ಇದೀಗ ಸುಲ್ತಾನ್ ಮೂಲಕ ಕಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ. ಅಲ್ಲಿಯೂ ಅದೃಷ್ಟ ಪರೀಕ್ಷೆ ನಡೆಸಿರುವ ರಶ್ಮಿಕಾ ದಕ್ಷಿಣದ ಸ್ಟಾರ್ ನಟಿಯಾಗುವುದರಲ್ಲಿ ಡೌಟಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಂದ ಹಾಗೇ ಕನ್ನಡದಲ್ಲಿ ರಶ್ಮಿಕಾ ಹಾಗೂ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.

Advertisement

Advertisement
Share this on...