ಮುಂಬೈಯಲ್ಲಿ ಹೊಸ ಮನೆ ಖರೀದಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ

in ಮನರಂಜನೆ/ಸಿನಿಮಾ 914 views

ನಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣದಿಂದ ಉತ್ತರದವರೆಗೂ ಮಿಂಚುತ್ತಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಇದೀಗ ಬಾಲಿವುಡ್ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ರಶ್ಮಿಕಾ ಈಗ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.ಟಾಲಿವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿ ಯಶಸ್ಸು ಗಳಿಸುತ್ತಿದ್ದಂತೆ ರಶ್ಮಿಕಾ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಕನ್ನಡದಿಂದ ಟಾಲಿವುಡ್ ಗ ಹಾರಿದ್ದ ರಶ್ಮಿಕಾ ತೆಲುಗಿನಲ್ಲಿ ಯಶಸ್ಸು ಗಳಿಸುತ್ತಿದ್ದಂತೆ ಹೈದರಾಬಾದ್ ಗೆ ಶಿಫ್ಟ್ ಆಗಿದ್ದಲ್ಲದೇ, ಹೈದರಾಬಾದ್ ನಲ್ಲಿ ಮನೆ ಕೂಡ ಖರೀದಿಸಿದ್ದರು. ಹೊಸ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದ ರಶ್ಮಿಕಾ ಮಂದಣ್ಣ ಈಗ ಮುಂಬೈನಲ್ಲಿ ಮನೆ ಖರೀಸಿದ್ದಾರಂತೆ. ಹೌದು, ಪೂಜಾ ಹೆಗ್ಡೆ ಇತ್ತೀಚೆಗಷ್ಟೆ ಖರೀದಿಸಿರುವ ಆಸುಪಾಸಿನಲ್ಲೇ ರಶ್ಮಿಕಾ ಸಹ ಹೊಸ ಮನೆ ಖರೀದಿ ಮಾಡಿದ್ದಾರಂತೆ. ಇದೀಗ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ನಲ್ಲಿ ಸಿನಿಮಾದಲ್ಲಿ ಒಂದು ಅವಕಾಶ ಸಿಗುತ್ತಿದ್ದಂತೆ ರಶ್ಮಿಕಾ ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ ಎನ್ನುವ ಮಾತುಗಳುಕೇಳಿಬರುತ್ತಿದೆ.ಮೂಲಗಳ ಪ್ರಕಾರ ಹಿಂದಿ ಸಿನಿಮಾಗಾಗಿ ರಶ್ಮಿಕಾ ಮುಂಬೈ ಮತ್ತು ಹೈದರಾಬಾದ್ ನಡುವೆ ತುಂಬಾ ಓಡಾಡುತ್ತಿದ್ದರು. ಹಾಗಾಗಿ ಮುಂಬೈನಲ್ಲೇ ಮನೆ ಇದ್ದರೆ ಉತ್ತಮ ಎಂದು ನಿರ್ಧರಿಸಿ ಮುಂಬೈ ನಗರದಲ್ಲಿ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

Advertisement

Advertisement

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಸಾನ್ವಿ ಪಾತ್ರದ ಮೂಲಕ ಸ್ಯಾಂಡಲ್‍ವುಡ್ ದೊಡ್ಡ ಬ್ರೇಕ್ ಪಡೆದುಕೊಂಡರು. ಈ ಸಿನಿಮಾದ ನಂತರ ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದವು. ಹೌದು ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್‍ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ . ಇದೀಗ ಬಾಲಿವುಡ್‍ನಲ್ಲಿ ನಟಿಸುತ್ತಿದ್ದಾರೆ.ಹೊಸ ಸಿನಿಮಾಗಳ ಅವಕಾಶಗಳು ಅರಸಿ ಬರುತ್ತಿವೆ. ಈಗಾಗಲೇ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ ಈ ಕಿರಿಕ್ ಪಾರ್ಟಿ ಸಾನ್ವಿ.

Advertisement

ಬಾಲಿವುಡ್​ನಲ್ಲಿ ಎರಡು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಂತೆಯೇ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದಾರಂತೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಸದ್ಯ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ರಶ್ಮಿಕಾ ಹಿಂದಿಯ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ಮುಂದೆ ರಶ್ಮಿಕಾ ಬಾಲಿವುಡ್ ನಲ್ಲಿ ಬ್ಯುಸಿಯಾಗುವ ಸಾಧ್ಯತೆ ಇರುವ ಕಾರಣ ಮೊದಲೇ ಯೋಚಿಸಿ ಮನೆಖರೀದಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಮುಂಬೈನಲ್ಲಿ ರಶ್ಮಿಕಾ ಇಷ್ಟು ದಿನ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರಂತೆ. ಆದರೆ ಇನ್ಮುಂದೆ ತನ್ನದೆ ಮನೆಯಲ್ಲಿ ಇರಲಿದ್ದು, ಮುಂಬೈ ನಗರಕ್ಕೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಮನೆ ಖರೀದಿಯ ಬಗ್ಗೆ ರಶ್ಮಿಕಾ ಎಲ್ಲೂ ಬಹಿರಂಗ ಪಡಿಸಿಲ್ಲ.ಇತ್ತೀಚಿಗಷ್ಟೆ ರಶ್ಮಿಕಾ ಹೊಸ ಕಾರನ್ನು ಖರೀದಿಸಿದ್ದರು. ದುಬಾರಿ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದರು. ರಶ್ಮಿಕಾ ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ತೆಲುಗಿನ ಮತ್ತೊಂದು ಸಿನಿಮಾಗೂ ಸಹಿ ಮಾಡಿದ್ದಾರೆ. ಇನ್ನೂ ತಮಿಳಿನಲ್ಲಿ ಸುಲ್ತಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

Advertisement