ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಷ್​​​​​…ಫಸ್ಟ್​​​​​ಲುಕ್ ಟೀಸರ್ ನೋಡಿ, ವಾವ್​​​​​​​ ಎಂದ ಫ್ಯಾನ್ಸ್​​​​​​​​​​​​​​​​

in ಸಿನಿಮಾ 49 views

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣಗೆ ಕಳೆದ ಬಾರಿಗಿಂತ ಈ ವರ್ಷ ಮತ್ತಷ್ಟು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ವರ್ಷ ವರ್ಷವೂ ರಶ್ಮಿಕಾ ಮಂದಣ್ಣ ಮತ್ತಷ್ಟು ಎತ್ತರಕ್ಕೆ ಏರುತ್ತಲೇ ಇದ್ದಾರೆ. ಪ್ರತಿ ಬಾರಿಯೂ ಅವರ ಹುಟ್ಟುಹಬ್ಬ ಒಂದಲ್ಲಾ ಒಂದು ರೀತಿ ವಿಶೇಷವಾಗಿರುತ್ತದೆ. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕೆಲವು ದಿನಗಳ ನಂತರ ತಮಿಳು ಹಾಗೂ ಕಳೆದ ವರ್ಷ ಬಾಲಿವುಡ್​​​​​ ಚಿತ್ರರಂಗಕ್ಕೆ ಕೂಡಾ ಪಾದಾರ್ಪಣೆ ಮಾಡಿದರು. ಈ ವರ್ಷ ಹುಟ್ಟುಹಬ್ಬದ ವಿಶೇಷ ಎಂದರೆ ಈ ಕೊಡಗು ಹುಡುಗಿಯನ್ನು ಮಲಯಾಳಂ ಚಿತ್ರರಂಗ ಕೂಡಾ ಕೈ ಬೀಸಿ ಕರೆದಿದೆ. ಮಾಲಿವುಡ್​​ ಖ್ಯಾತ ನಟ ಮುಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ಜೊತೆ ರಶ್ಮಿಕಾ ಅಭಿನಯಿಸುತ್ತಿದ್ದಾರೆ.

Advertisement

Advertisement

ರಶ್ಮಿಕಾ ಮಂದಣ್ಣ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಬರ್ತ್​ಡೇ ವಿಶೇಷವಾಗಿ ಹೆಸರಿಡದ ಈ ಸಿನಿಮಾದ ರಶ್ಮಿಕಾ ಫಸ್ಟ್​​​ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಯುದ್ಧದಲ್ಲಿ ಅರಳಿದ ಪ್ರೇಮ’ ಎಂಬ ಟ್ಯಾಗ್​​​ಲೈನ್ ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಶ್ಮೀರ ಹುಡುಗಿ ಆಫ್ರೀನ್​​​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಜಾಬ್ ಧರಿಸಿ ಕೈಯ್ಯಲ್ಲಿ ರೈಫಲ್ ಹಿಡಿದಿರುವ ರಶ್ಮಿಕಾ, ಹೊತ್ತಿ ಉರಿಯುತ್ತಿರುವ ವಾಹನವೊಂದರ ಮುಂಭಾಗ ಆಕ್ರೋಶದಿಂದ ನಡೆದುಬರುತ್ತಿದ್ದಾರೆ. ಚಿತ್ರತಂಡ ಈ ವಿಡಿಯೋದಲ್ಲಿ ರಶ್ಮಿಕಾಗೆ ಹ್ಯಾಪಿ ಬರ್ತ್​ಡೇ ಆಫ್ರೀನ್ ಎಂದು ಶುಭ ಕೋರಿದೆ. ಸ್ವಪ್ನ ಸಿನಿಮಾ ಬ್ಯಾನರ್ ಅಡಿ ಹನುರಾಘವಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಮಲಯಾಳಂ, ತೆಲುಗು ಹಾಗೂ ತಮಿಳು ಸೇರಿ ಮೂರೂ ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದೆ.

Advertisement

Advertisement

ಇದನ್ನು ಹೊರತುಪಡಿಸಿ ರಶ್ಮಿಕಾ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಜೊತೆ ನಾಯಕಿಯಾಗಿ ನಟಸಲು ಒಪ್ಪಿಕೊಂಡಿದ್ದಾರೆ. ಇದು ವಿಜಯ್ ಅಭಿನಯದ 66ನೇ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಕೂಡಾ ಹೆಸರಿಟ್ಟಿಲ್ಲ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್​ ಚಿತ್ರ ನಿರ್ಮಾಣ ಸಂಸ್ಥೆ ರಶ್ಮಿಕಾ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುಭ ಕೋರುವ ಮೂಲಕ ತಮ್ಮ ಚಿತ್ರತಂಡಕ್ಕೆ ಸ್ವಾಗತ ಕೋರಿದೆ. ದಿಲ್ ರಾಜು ಹಾಗೂ ಶಿರಿಶ್​​​ ನಿರ್ಮಾಣದ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ.

ಇನ್ನು ಕನ್ನಡದಲ್ಲಿ ಪೊಗರು ನಂತರ ರಶ್ಮಿಕಾ ಹೊಸ ಸಿನಿಮಾಗೆ ಆಯ್ಕೆಯಾಗಿಲ್ಲ. ತೆಲುಗಿನಲ್ಲಿ ಪುಷ್ಪ ಸಿನಿಮಾ ರಶ್ಮಿಕಾಗೆ ದೊಡ್ಡ ಇಮೇಜ್ ತಂದುಕೊಟ್ಟಿತ್ತು. ಇದಾದ ನಂತರ ರಿಲೀಸ್ ಆದ ಆಡವಾಳ್ಳು ಮೀಕು ಜೋಹರ್ಲು ಹೇಳಿಕೊಳ್ಳುವಂತ ಸದ್ದು ಮಾಡಲಿಲ್ಲ. ಹಿಂದಿಯಲ್ಲಿ ಮಿಷನ್ ಮಜ್ನು ಬಿಡುಗಡೆಗೆ ತಯಾರಾಗಿದ್ದು, ಅಮಿತಾಬ್ ಜೊತೆ ನಟಿಸುತ್ತಿರುವ ಗುಡ್ ಬೈ ಚಿತ್ರೀರಕಣದ ಹಂತದಲ್ಲಿದೆ. ಕಳೆದ ವಾರ ರಣಬೀರ್ ಕಪೂರ್ ಜೊತೆ ರಶ್ಮಿಕಾ ಹೊಸ ಬಾಲಿವುಡ್ ಸಿನಿಮಾ ಅನೌನ್ಸ್ ಆಗಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ರಶ್ಮಿಕಾ ಪಂಚಭಾಷಾ ನಟಿ ಎನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ರಶ್ಮಿಕಾ ಮತ್ತಷ್ಟು ಬೆಳೆಯಲಿ, ಇನ್ನೂ ಹೆಚ್ಚಿನ ಅವಕಾಶಗಳು ಅವರಿಗೆ ದೊರೆಯಲಿ ಎಂದು ಹಾರೈಸೋಣ.
-ರಕ್ಷಿತ ಕೆ.ಆರ್​​.ಎಸ್

Advertisement
Share this on...