ಹೊಸ ಕೆಲಸವನ್ನು ಪ್ರಾರಂಭಿಸಿದ ರಶ್ಮಿಕಾ ! ಚಿತ್ರರಂಗ ಬಿಡುತ್ತಾರಾ?

in ಮನರಂಜನೆ/ಸಿನಿಮಾ 167 views

ಹಾಲುಗೆನ್ನೆ ಅಂತಹ ಮುಖ, ಸುಂದರವಾದ ನಯನಕ್ಕೊಂದು ಕನ್ನಡಕ, ಮುತ್ತುದುರುವಂತಹ ನಗು, ಬಳುಕುವ ಸೊಂಟ, ಕರುನಾಡ ಪಡ್ಡೆ ಹುಡುಗರ ಬಾಯಲ್ಲಿ ಬರುತ್ತಿದ್ದಿದ್ದು ಒಂದೇ ಹೆಸರು ಸಾನ್ವಿ. ಹೌದು, ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕ್ ಕ್ರಶ್ ಎನಿಸಿಕೊಂಡವರು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಆ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಎಲ್ಲಾ ಹೈಕ್ಲು ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಎಂಬ ಹಾಡಿನಲ್ಲಿ ಈ ಕಿರಿಕ್ ರಾಣಿಯನ್ನು ನೋಡಿ ಮಾರಿ ಹೋಗಿದ್ದರು, ಅಲ್ಲದೇ ಸಾನ್ವಿ ಎಂಬ ಹೆಸರು ಎಲ್ಲರ ಮನಸ್ಸಿನ  ಪ್ರತಿ ಪುಟದಲ್ಲೂ ಆ ಹೆಸರೇ ತುಂಬಿತ್ತು. ಕೇವಲ ಒಂದೇ ಸಿನಿಮಾದಲ್ಲಿ ಕನ್ನಡದ ಬಹು ಬೇಡಿಕೆಯ ನಟಿಯಾಗಿ, ದೊಡ್ಡ ಮಟ್ಟದ ಹೆಸರನ್ನು ಪಡೆದುಕೊಂಡಿದ್ದರು ರಶ್ಮಿಕಾ ಮಂದಣ್ಣ. ನಂತರ ಈ ಕಿರಿಕ್ ರಾಣಿಗೆ ತೆಲುಗು ಮತ್ತು ತಮಿಳು ಸಿನಿಮಾದಲ್ಲೂ ನಟಿಸುವ ಅವಕಾಶ ದೊರೆಯುತ್ತದೆ. ನೋಡು ನೋಡುತ್ತಲೇ ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ, ಟಾಪ್ ನಟರ ಜೊತೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡು, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರ ಲಿಸ್ಟ್ ನಲ್ಲಿ ಸೇರಿಕೊಳ್ಳುತ್ತಾರೆ.  ಆದರೆ ರಕ್ಷಿತ್ ಜೊತೆ ಸಂಬಂಧ ಮುರಿದುಕೊಂಡ ಮೇಲೆ, ಕರ್ನಾಟಕದಲ್ಲಿ ಅವರ ಬಗ್ಗೆ ಅಸಮಾಧಾನಗಳು ವ್ಯಕ್ತವಾಗುತ್ತದೆ. ಅಲ್ಲದೇ ನೆಟ್ಟಿಗರ ಕಣ್ಣಿಗೆ ತುತ್ತಾಗುತ್ತಾರೆ.

Advertisement

Advertisement

ಇನ್ನು ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಬೇಸತ್ತ ರಕ್ಷಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆಗಳನ್ನು ವೀಕ್ಷಿಸಿದ ರಕ್ಷಿತ್ ಸುಮಾರು ಒಂದು ವರ್ಷ ಇಂಟರ್ ನೆಟ್ ಜಗತ್ತಿನಿಂದ ದೂರ ಉಳಿದುಬಿಟ್ಟರು. ಸದ್ಯ ಎಲ್ಲಾ ನೆಗೆಟಿವ್  ವಿಚಾರದಿಂದ ದೂರ ಉಳಿದಿರುವ ರಶ್ಮಿಕಾ, ತೆಲುಗು  ಹಾಗೂ ಕನ್ನಡದ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲೂ  ಸಾಲು ಸಾಲು ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಜೊತೆಗೆ ಇದೀಗ ತೆಲುಗಿನ ಸೂಪರ್ ಸ್ಟಾರ್ ಗಳ ಜೊತೆಯೂ ಅಭಿನಯಿಸುತ್ತಿದ್ದು, ಗೀತಾ ಗೋವಿಂದಂ ನಂತರ ಮಹೇಶ್ ಬಾಬು ಜೊತೆಗಿನ ಸರಿಲೇರು ನಿಕ್ಕೆವರು ಸಿನಿಮಾ ಹಿಟ್ ಆಗಿದ್ದು ರಶ್ಮಿಕಾ ತೆಲುಗಿನಲ್ಲಿ ಭದ್ರವಾಗಿ ನೆಲೆಯೂರಲು ಅನುಕೂಲವಾಯಿತು. ಇದೀಗ ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಸಿನಿಮಾದಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದು ಸ್ಟಾರ್ ನಟಿ  ಆಗಿ ಮಿಂಚುತ್ತಿದ್ದಾರೆ.

Advertisement

Advertisement

ಮಹಾಮಾರಿ  ಕೊರೊನಾ ಸೋಂಕು  ಇಡೀ ದೇಶವನ್ನೇ ಹರಡಿಕೊಂಡಿರುವ ಕಾರಣದಿಂದಾಗಿ,  ಸದ್ಯ ಚಿತ್ರರಂಗದ ಎಲ್ಲಾ ಕೆಲಸಗಳು ನಿಂತು ಹೋಗಿದೆ. ಚಿತ್ರೀಕರಣಗಳು ನಡೆಯುತ್ತಿಲ್ಲ. ಆದ ಕಾರಣ ರಶ್ಮಿಕಾ ತಮ್ಮ ಹುಟ್ಟೂರು ವಿರಾಜಪೇಟೆಯಲ್ಲಿ ಪೋಷಕರ ಜೊತೆ ನೆಲೆಯೂರಿದ್ದಾರೆ. ಇದೆಲ್ಲದರ ನಡುವೆ ಇದೀಗ ಹೊಸ ಸುದ್ದಿಯೊಂದು  ಹೊರಬಿದ್ದಿದ್ದು, ರಶ್ಮಿಕಾ ಹೊಸ ವೃತ್ತಿಯೊಂದನ್ನು ಆರಂಭಿಸಿದ್ದಾರೆ.  ಇನ್ನು ಮುಂದೆ ತಮ್ಮ ತಂದೆಯ ಉದ್ಯಮವನ್ನು‌ ನೋಡಿಕೊಳ್ಳಲಿದ್ದಾರಂತೆ  ಈ ಕಿರಿಕ್ ರಾಣಿ. ಈ ವಿಚಾರವನ್ನು ಸ್ವತಃ   ಅವರೇ ತಿಳಿಸಿದ್ದು, ವಿಶ್ವ ತಂದೆಯಂದಿರ ದಿನದಂದು ಪೋಸ್ಟ್ ಮಾಡಿದ್ದಾರೆ.  ಅಪ್ಪನ ಬಗ್ಗೆ ಒಂದಷ್ಟು ಸಾಲುಗಳನ್ನು  ಬರೆದು ಜೊತೆಗೆ ಇನ್ನು ಮುಂದೆ ಅಪ್ಪನ ಉದ್ಯಮವನ್ನು ನಾನು ಸಹ ನೋಡಿಕೊಳ್ತೇನೆ ಎಂದು ತಿಳಿಸಿದ್ದಾರೆ.

ರಶ್ಮಿಕಾ ಅವರ ತಂದೆ ದೊಡ್ಡ ಉದ್ಯಮಿಯಾಗಿದ್ದು, ಕನ್ವೆನ್ಷನ್ ಹಾಲ್,  ಕಾಫಿ ಎಸ್ಟೇಟ್,  ಸೇರಿದಂತೆ ಬಹಳಷ್ಟು ಉದ್ಯಮಗಳಿವೆ. ಕೆಲ ತಿಂಗಳ ಹಿಂದಷ್ಟೇ ಐ ಟಿ ದಾಳಿ ನಡೆದದ್ದೂ ಸಹ ರಶ್ಮಿಕಾ ಅವರ ಆದಾಯದ ವಿಚಾರವಾಗಿಯಲ್ಲ‌. ಬದಲಿಗೆ ರಶ್ಮಿಕಾ ತಂದೆ ಉದ್ಯಮದ ವಿಚಾರವಾಗಿ. ಇದೀಗ ಅಪ್ಪನ ಬ್ಯುಸಿನೆಸ್ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ರಶ್ಮಿಕಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Advertisement
Share this on...