ಮೊಬೈಲ್ ಕೈಗೆ ಸಿಕ್ಕಿ ಮಕ್ಳ ಕೆಟ್ಟೊಅಂದ ಕೆಜಿಎಫ್ ಸಂಗೀತ ನಿರ್ದೇಶಕ…! ವೈರಲ್ ಆದ ವೀಡಿಯೋ..!

in ಸಿನಿಮಾ 16 views

ಲಾಕ್ ಡೌನ್ ದಿನಗಳನ್ನ ಎಲ್ಲಾ ನಟ-ನಟಿಯರು ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದು ಕೆಲವರು ತಮ್ಮ ಹವ್ಯಾಸಗಳತ್ತ ತಿರುಗಿದ್ದಾರೆ. ಇನ್ನು ಕೆಲವರು ಮನರಂಜನೆ, ಸಾಮಾಜಿಕ ಕಾರ್ಯ, ಸಹಾಯದ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಡುವಿದ್ದಾಗೆಲ್ಲಾ ಕಮ್ಮಾರಿಕೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದ ಸಂಗೀತ ನಿರ್ದೇಶಕ ರವಿ ಬಸ್ರುರ್. ಅವರು ಇಂದು ಮೊಬೈಲ್ ದುರ್ಬಳಕೆಯ ಅವಂತಾರಗಳ ಕುರಿತು ಗಮನ ಸೆಳೆದಿದ್ದಾರೆ.

Advertisement

 

Advertisement

Advertisement

 

Advertisement

ಯುವಕರಿಗೆ ಮೊಬೈಲ್ ಕುರಿತು ಜಾಗೃತಿ ಮೂಡಿಸುವಲ್ಲಿ ರವಿ ಬಸ್ರೂರ್ ಸಂಗೀತದ ಮೂಲಕ ಮೋಡಿ ಮಾಡಿದ್ದಾರೆ. ವಿಭಿನ್ನ ಹಾಡು ರಚಿಸುವ ಮೂಲಕ ಮೊಬೈಲ್ ಬಂದ ಮೇಲೆ ಆಗಿರುವ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ. ಹಾಡು ಯುವಕರನ್ನ ಸೆಳೆಯುತ್ತಿದೆ. ಈ ಹಾಡನ್ನ ಅವರ ಯುಟ್ಯೂಬ್ ಚಾನಲ್ ನಲ್ಲಿ ರವಿ ಬಸ್ರೂರ್ ಮ್ಯೂಸಿಕ್ ಚಾನೆಲ್ ನಲ್ಲಿ ಹಾಕಿಕೊಂಡಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಡು ಕುಂದಾಪುರ ಭಾಷೆಯಲ್ಲಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಮೊಬೈಲ್ ಕೈಗೆ ಸಿಕ್ಕಿ ಮಕ್ಳ ಕೆಟ್ಟೊ, ಹೇಳಿದ್ ಕೇಳ್ದ್ ದಿಲ್ಲ ಉಂಬುದೇ ಬಿಟ್ಟೊ ರಸ್ತೆಗೆ ತಲೆಯೆತ್ತಿ ತಿರುಗುವುದೇ ಬಿಟ್ಟೊ ಎಂಬ ಸಾಲುಗಳ ಮೂಲಕ ಹಾಡು ಪ್ರಾರಂಭವಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

ಲಾಕ್ ಡೌನ್ ಅವಧಿಯಲ್ಲಿ ರವಿ ಬಸ್ರೂರ್ ತಮ್ಮ ಹುಟ್ಟೂರು ಕುಂದಾಪುರಕ್ಕೆ ತೆರಳಿ ಕುಲಕಸುಬು ಕಮ್ಮಾರಿಕೆಯ ಕೆಲಸ ಮಾಡುತ್ತಿರುವ ವಿಡಿಯೋ ಇತ್ತೀಚಿಗೆ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದರು. ತಂದೆಗೆ ಸಹಾಯ ಮಾಡಲು ಕಮ್ಮಾರಿಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಲಾಕ್ ಡೌನ್ ಅವಧಿಯಲ್ಲಿ ಹಾಡೊಂದನ್ನ ರಚಿಸಿ ಸಂಯೋಜಿಸಿ ಬಿಡುಗಡೆ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ನಂತರ ರವಿ ಬಸ್ರೂರ್ ಅವರಿಗೆ ಹೆಚ್ಚು ಆಫರ್ ಗಳು ಬರುತ್ತಿದ್ದು ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಮಡ್ಡಿ ಸಿನಿಮಾಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಕ್ ಡೌನ್ ಹಿನ್ನೆಲೆ ತಮ್ಮ ಹುಟ್ಟೂರು ಕುಂದಾಪುರದಲ್ಲಿ ಕಾಲಕಳೆಯುತ್ತಿದ್ದಾರೆ. ಇವರ ಮಧ್ಯೆಯೆ ಈ ಹಾಡನ್ನ ರಚಿಸಿದ್ದಾರೆ. ಹೀಗಾಗಿ ಲಾಕ್ ಡೌನ್ ಸಮಯವನ್ನ ರವಿ ಬಸ್ರೂರ್ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

– ಸುಷ್ಮಿತಾ

Advertisement
Share this on...