ಲಾರಿ ಚಾಲಕನ ವೇಷದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ನಮ್ಮ ಸಿಂಗಂ…!

in News 78 views

ರಾಜ್ಯದಲ್ಲಿ ಕೋರೊನಾ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ವಾಹನಗಳು ಓಡಾಡದೇ ಇರುವ ಕ್ರಮವಿರುವಾಗ ಬರೀ ಸರಕು ಲಾರಿಗಳನ್ನು ಬಿಡುವ ಆದೇಶ ಇರುವ ನಿಟ್ಟಿನಲ್ಲಿ ಪರ್ಮಿಟ್ ಇಲ್ಲದ ಗಾಡಿಗಳನ್ನ ಟೆಂಪ್ರವರಿ ಪರ್ಮಿಟ್ ಕೊಡುವ ಮೂಲಕ 500 ರಿಂದ 1000 ರೂ. ಗಳನ್ನ ವಸೂಲಿ ಮಾಡುತ್ತಿದ್ದರು. ಈ ಒಂದು ಭ್ರಷ್ಟ ಕೃತ್ಯಕ್ಕೆ ಕಡಿವಾಣ ಹಾಕಲು ಲಾರಿ ಚಾಲಕನ ವೇಷದಲ್ಲಿ ಕರ್ನಾಟಕದ ಸಿಂಗಂ ಎನಿಸಿಕೊಂಡಿರುವ ಎಸ್.ಪಿ ರವಿ ಡಿ.ಚೆನ್ನಣ್ಣವರ್ ಆರ್ಟಿಓ ಅಧಿಕಾರಿಗಳನ್ನ ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದಾರೆ.

Advertisement

 

Advertisement

Advertisement

 

Advertisement

ಹೌದು, ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದ್ದು ಹೋಂ ಗಾರ್ಡ್ ವಿವೇಕ್ ಆರ್ಟಿಓ ಬ್ರೇಕ್ ಇನ್ಸ್ಪೆಕ್ಟರ್ ಗಳಾದ ಕರಿಯಪ್ಪ ಮತ್ತು ಜಯಣ್ಣ ರವರನ್ನ ಬಂಧಿಸಲಾಗಿದೆ. ಇದರಿಂದ 12350 ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಅಷ್ಟೇ ಅಲ್ಲದೆ ಬ್ರೇಕ್ ಇನ್ಸ್ಪೆಕ್ಟರ್ ಗಳನ್ನ ಸೇವೆಯಿಂದ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

 

ಇನ್ನೂ ರವಿ ಡಿ. ಚೆನ್ನಣ್ಣವರ್ ಅವರು ಬೆಂಗಳೂರು ಗ್ರಾಮಾಂತರ ಎಸ್.ಪಿ ಆಗುವುದಕ್ಕಿಂತ ಮುಂಚೆ ಹಲವು ಜಿಲ್ಲೆಗಳಲ್ಲಿ ತಮ್ಮ ಕರ್ತವ್ಯವನ್ನ ಮಾಡಿದ್ದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇನ್ನೂ ಮತ್ತೊಮ್ಮೆ ಭ್ರಷ್ಟ ಅಧಿಕಾರಿಗಳ ಬೇಟೆಯನ್ನು ಕರ್ನಾಟಕದ ಸಿಂಗಂ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ನಿಜಕ್ಕೂ ರವಿ ಡಿ. ಚೆನ್ನಣ್ಣವರ್ ಅವರ ಈವೊಂದು ಕಾರ್ಯಕ್ಷಮತೆ ಮೆಚ್ಚುವಂತಹದು.

– ಸುಷ್ಮಿತಾ

Advertisement
Share this on...