ravikatpadi udupi

ಪುಟ್ಟ ಕಂದಮ್ಮಗಳ ಬದುಕಿಗೆ ದಾರಿ ದೀಪವಾದ ರವಿ ಕಟಪಾಡಿಯ ವಿಭಿನ್ನ ವೇಷ

in ಮನರಂಜನೆ 124 views

ಇವರು ಹುಟ್ಟು ಶ್ರೀಮಂತರಲ್ಲ. ಹಾಗಂತ ಕೈ ತುಂಬಾ ಸಂಬಳ ಸಿಗುವ ಕೆಲಸದಲ್ಲೂ ಇಲ್ಲ. ಆದರೆ ಇವರ ಹೃದಯ ಶ್ರೀಮಂತಿಕೆಯನ್ನು ಮೆಚ್ಚಲೇ ಬೇಕು. ಕಳೆದ ಸುಮಾರು ವರ್ಷಗಳಿಂದ ವಿಭಿನ್ನ ವೇಷದ ಮೂಲಕ ಕೃಷ್ಣಜನ್ಮಾಷ್ಟಮಿಯ ಸಂದರ್ಭ ಉಡುಪಿಯಲ್ಲಿ ಪರಿಸರದಲ್ಲಿ ಸದ್ದು ಮಾಡುತ್ತಿರುವವರು. ಇನ್ನು ವೇಷದಲ್ಲಿ ಬಂದ ಹಣವನ್ನು ಬಡ ಅನಾರೋಗ್ಯ ನೀಡುತ್ತಿರುವ ಇವರ ಹೃದಯ ಶ್ರೀಮಂತಿಕೆಯೇ ಸಾಕ್ಷಿ. ಇವರ ಹೆಸರು ರವಿ. ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿ ಗ್ರಾಮದ ಜೆ.ಎನ್ ನಗರದ ಯುವಕ.
ಕೂಲಿ ಕೆಲಸ ಮಾಡಿಕೊಂಡಿದ್ದ ಯುವಕ ತಮ್ಮ ಹೊಟ್ಟೆ ಪಾಡಿಗಾಗಿ ವಿದೇಶಕ್ಕೆ ತೆರಳಿದ್ದರು. ಆದರೆ ಈ ಬಾರಿಯು ವೇಷ ಹಾಕಲು ಮರಳಿ ತಮ್ಮ ಹುಟ್ಟೂರಿಗೆ ಬಂದಿದ್ದು ವಿಶೇಷ. ಕೃಷ್ಣಾಜನ್ಮಾಷ್ಟಮಿಯಂದು ವಿಭಿನ್ನ ವೇಷದಿಂದ ಸದಾ ಉಡುಪಿಯ ರಥ ಬೀದಿಯಲ್ಲಿ ಜನರನ್ನು ಆಕರ್ಷಿಸುತ್ತಾರೆ. ಈ ಬಾರಿಯು ವಿಭಿನ್ನ ವೇಷದಿಂದ ಅನಾರೋಗ್ಯ ಪೀಡಿತ ಮಕ್ಕಳಿಗೆ ಧನ ಸಹಾಯ ಮಾಡಿ ಹೃದಯ ವಿಶಾಲತೆಯನ್ನು ಮೆರೆದಿದ್ದಾರೆ. ವರ್ಷವಿಡಿ ಕಷ್ಟ ಪಟ್ಟು ದುಡಿದು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಆದರೆ ಈ ಎರಡು ದಿನಗಳ ಕಾಲ ವೇಷದಿಂದ ಬರುವ ಹಣ ಅನಾರೋಗ್ಯ ಪೀಡಿತ ಮಕ್ಕಳಿಗೆ ಮೀಸಲು.

Advertisement

Advertisement

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ನಾನಾ ವೇಷಗಳು ಓಡಾಡುತ್ತಿರುತ್ತದೆ. ಅದರಲ್ಲಿ ರವಿ ಕಟಪಾಡಿಯ ಕೂಡ ಒಬ್ಬರು. ಸುಮಾರು ಹತ್ತು ವರ್ಷದಿಂದ ಸಮಾಜ ಸೇವಯಲ್ಲಿ ತೊಡಗಿಕೊಂಡಿರುವ ಇವರನ್ನು ಬದಲಾಯಿಸಿದ್ದು ಪತ್ರಿಕೆಯಲ್ಲಿ ಪ್ರಕಟವಾದ ಸಣ್ಣ ವರದಿ. ರವಿ ಕಟಪಾಡಿ ಸುಮಾರು ಹತ್ತು ವರ್ಷಗಳ ಹಿಂದೆ ಮನರಂಜನೆಗಾಗಿ ವೇಷ ಹಾಕುತ್ತಾ, ಜನರನ್ನು ರಂಜಿಸುತ್ತಿದ್ದರು. ಆದರೆ ಅದೊಂದು ದಿನ ಪತ್ರಿಕೆ ಓದುತ್ತಿದ್ದರು. ಅದರಲ್ಲೊಂದು ವರದಿ ಇತ್ತು. ಬಡ ಕುಟುಂಬದ ಮಗು ಕಾಯಿಲೆಯಿಂದ ನರಳುತ್ತಿದ್ದ ವರದಿ ಅದು. ಈ ಯುವಕನ ಮನ ಕರಗಿತು. 2014 ರಲ್ಲಿ ಇವರ ಜೀವನ ಬದಲಾಯಿತು.

Advertisement

ತನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕೊಂಡರು. ಆಗ ಹೊಳೆದದ್ದು ಮನರಂಜನೆಗಾಗಿ ಹಾಕುತ್ತಿದ್ದ ಬಣ್ಣದ ವೇಷ. ಮಗುವಿಗಾಗಿ ವೇಷ ಹಾಕಲು ಹೊರಟ ಇವರಿಗೆ ಸ್ನೇಹಿತರು ಸಾಥ್ ಕೊಟ್ಟರು. ಆಗ ಅವರಿಗೆ ಜೊತೆಯಾದದ್ದು ಕಟಪಾಡಿ ಫ್ರೆಂಡ್ಸ್ ಸಂಘಟನೆ. ಆ 15 ಮಂದಿ ಬೀದಿ ಬೀದಿ ಅಲೆದಾಡಿದರು. ಆ ವರ್ಷ ಸಂಗ್ರಹವಾದ 1.04 ಲಕ್ಷ ರೂ ಮೊತ್ತವನ್ನು ಆ ಪುಟ್ಟ ಕಂದಮ್ಮ ಚಿಕಿತ್ಸೆಗಾಗಿ ಕೊಟ್ಟರು. ಆ ಮಗುವಿನ ಜೀವ ಉಳಿಯಿತು. ಆ ಮಗುವಿನ ನಗು ಈ ತರುಣನ ಕಣ್ಣಲ್ಲಿ ಉಳಿದೇ ಹೋಯಿತು.

Advertisement

ಹೀಗೆ ಶುರುವಾದ ಇವರ ಸಮಾಜ ಸೇವಗೆ ಸುಮಾರು ಹತ್ತುಗಳು ಆಗಿದೆ. ಯಾರೋ ಮಗು ಕಾಯಿಲೆಯಿಂದ ಬಳಲುತ್ತಿದ್ದರೆ ವೇಷ ಹಾಕುತ್ತಾರೆ. ಹಾಗಂತ ವೇಷ ಹಾಕುವುದು ಸುಲಭದ ಮಾತಲ್ಲ. ಆ ಎರಡು ದಿನಗಳು ಕಷ್ಟದ ದಿನಗಳು ರವಿ ವೇಷ ಹಾಕಿದ ಎರಡು ದಿನ ಮಲಗುವುದಿಲ್ಲ. ಕುಣಿದು ಕುಪ್ಪಳಿಸಿ ಜನರನ್ನು ಮನರಂಜನೆ ಮಾಡುತ್ತಾರೆ. ನಿದ್ದೆ ಮಾಡುವುದಿಲ್ಲ ಹಸಿವಾದಾಗ ನೀರು ಮತ್ತು ಜ್ಯೂಸೇ ಗತಿ. ಎಷ್ಟೇ ಕಷ್ಟವಾದರೂ ಬೇಸರಿಸುವುದಿಲ್ಲ. ಬದಲಾಗಿ ಪುಟ್ಟ ಕಂದಮ್ಮಗಳ ನಗುವಿಗಾಗಿ ಇವರ ಮನಸ್ಸು ಸಿದ್ಧವಾಗಿರುತ್ತದೆ. 2014 ರಲ್ಲಿ 1.04 ಲಕ್ಷ ರೂ 2015 ರಲ್ಲಿ 3.20 ಲಕ್ಷ ರೂ, 2016 ರಲ್ಲಿ 4.12 ಲಕ್ಷ ರೂ ಇಲ್ಲಿಯವರೆಗೆ ಸುಮಾರು 34 ಲಕ್ಷ ಕ್ಕೂ ಅಧಿಕ ಹಣವನ್ನು ಬಡ ಮಕ್ಕಳಿಗೆ ನೀಡಿ ಅವರ ಬದುಕನ್ನು ಹಸನುಗೊಳಿಸಿದ್ದಾರೆ. ಅವರಿಂದ ಸಹಾಯ ಪಡೆದ ಅದೆಷ್ಟೋ ಮಕ್ಕಳು ಆರೋಗ್ಯವಂತರಾಗಿ ಇವರನ್ನು ನಿತ್ಯ ನೆನೆಯುತ್ತಾರೆ.

ರವಿ ವೇಷಗಳದ್ದೇ ಒಂದು ಕತೆ. ಅವರು ಹಾಲಿವುಡ್ ಸಿನಿಮಾಗಳ ಚಿತ್ರ ಅಲೌಕಿಕ ಪಾತ್ರಗಳನ್ನು ತಮ್ಮ ವೇಷಕ್ಕೆ ಆಯ್ದುಕೊಳ್ಳುತ್ತಾರೆ. ‘ಲಿಬ್ರಿಯಾಂತ್’, ಅಮೇಝನ್ ಸ್ಪೈಢರ್ ಮ್ಯಾನ್ ಸಿನಿಮಾದ ‘ಲಿಝಾಡಮೆನ್’, ಮಮ್ಮಿ ರಿಟನ್ರ್ಸ ಸಿನಿಮಾದ ‘ಮಮ್ಮಿ’, ‘ಹ್ಯಾಂಪೈರ್’ ಹೀಗೆ ಅನೇಕ ಪಾತ್ರಗಳನ್ನು ವೇಷಕ್ಕಿಳಿಸಿದ್ದಾರೆ. ಅವುಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಮೇಕಪ್ ಮಾಡಲು ಊಟ ನಿದ್ದೆ ಇಲ್ಲದೇ ಸುಮಾರು 12 ಗಂಟೆಗಳು ತಗಲುತ್ತದೆ. ರಬ್ಬರ್, ಪೋಮ್, ಪೈಂಟ್ ಇತ್ಯಾದಿಗಳನ್ನು ಬಳಸಿಕೊಂಡ ವೇಷ ತೊಟ್ಟಾಗ ಬೆವರಿ ಮೈ ಕೈ ಉರಿಯುತ್ತದೆ. ವೇಷ ಕಜಜಳಚುವಾಗಲಂತೂ ಅಸಾಧ್ಯ ನೋವಾಗುತ್ತದೆ ಮೈ ಮುಖದ ಚರ್ಮ ಕಿತ್ತು ಹೋಗಿ ವಾರಗಟ್ಟಳೆ ಚಿಕಿತ್ಸೆ ಪೆಡಯಬೇಕಾಗುತ್ತದೆ. ಈ ಬಗ್ಗೆ ಕೇಳಿದರೆ ಆ ಪುಟ್ಟ ಕಂದಮ್ಮಗಳ ಮುಂದೆ ನನ್ನ ನೋವು ದೊಡ್ಡದಲ್ಲ ಎನ್ನುತ್ತಾರೆ ರವಿ. ಸುಮಾರು 15 ಜನರು ಸೇರಿ ಆರಂಭಗೊಂಡ ಈ ಅಭೀಯಾನವು ಇಂದು 100 ಕ್ಕೂ ಹೆಚ್ಚು ಗೆಳೆಯರು ಸೇರಿಕೊಂಡಿದ್ದಾರೆ. ಅವರೆಲ್ಲರ ಸಹಾಯದಿಂದ ರವಿಯವರ ಈ ಅಭಿಯಾನವು ಯಶಸ್ವಿಯಾಗುತ್ತಿದೆ.

ಸಾಯಿನಂದಾ ಚಿಟ್ಪಾಡಿ

Advertisement
Share this on...