ರವಿಚಂದ್ರನ್ ರವರು ತಮ್ಮ ಹೆಂಡತಿಯನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆದು ಕೊಂಡು ಬರಲ್ಲ ಯಾಕೆ ಗೊತ್ತಾ?

in ಮನರಂಜನೆ 466 views

ಕನ್ನಡದಲ್ಲಿ ಕೋಟಿ ಕೋಟಿ ಬಂಡವಾಳವನ್ನು ಹಾಕಿ ಸಿನಿಮಾ ನಿರ್ಮಾಣ ಮಾಡುವುದನ್ನು ತೋರಿಸಿಕೊಟ್ಟವರು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕನ್ನಡದ ಒಬ್ಬ ಅದ್ಭುತ ನಿರ್ದೇಶಕರು . ರವಿಚಂದ್ರನ್ ಅವರು ದಶಕಗಳ ಹಿಂದೆಯೇ ಕನ್ನಡ ಚಲನಚಿತ್ರಗಳನ್ನು ದಕ್ಷಿಣ ಭಾರತದ ಚಿತ್ರರಂಗವಲ್ಲದೆ ಬಾಲಿವುಡ್ ಚಿತ್ರರಂಗ ಕೂಡ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದರು. ಲವ್ ಸ್ಟೋರಿಗಳನ್ನು ಹೀಗೂ ಕೂಡ ಮಾಡಬಹುದು ಎಂಬುದನ್ನು ರವಿಚಂದ್ರನ್ ತೋರಿಸಿಕೊಟ್ಟರು. ರವಿಚಂದ್ರನ್ ತಮ್ಮ ಸಿನಿಜರ್ನಿಯಲ್ಲಿ ಸೋಲು ಗೆಲುವು ಎರಡನ್ನೂ ಕೂಡ ನೋಡಿದ್ದಾರೆ.ರವಿಚಂದ್ರನ್ ಅವರು 1986 ರಲ್ಲಿ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್  ಡೇ ದಿನದಂದು ಸುಮತಿ ಎಂಬುವರನ್ನು ವಿವಾಹವಾದರು. ಈ ದಂಪತಿಗೆ ಮನೋರಂಜನ್,ವಿಕ್ರಂ , ಗೀತಾಂಜಲಿ, ಎಂಬ ಮೂವರು ಮಕ್ಕಳು. ನಾವೆಲ್ಲರೂ ನೋಡಿರುವಂತೆ ರವಿಚಂದ್ರನ್ ಅವರು ತಮ್ಮ ಹೆಂಡತಿಯನ್ನು ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಮತ್ತು ಟಿವಿ ಚಾನೆಲ್ ಗಳಿಗೆ  ಕರೆದುಕೊಂಡು ಬರುವುದಿಲ್ಲ.

Advertisement

Advertisement

ಯಾವಾಗಲೂ ರವಿಚಂದ್ರನ್ ಅವರು ಸಿನಿಮಾ ಶೂಟಿಂಗ್, ರಿಯಾಲಿಟಿ ಶೋ ಮುಂತಾದ ಕಾರ್ಯಕ್ರಮಗಳಿಂದಾಗಿ ಮನೆಯಿಂದ ಹೊರಗೆ ಹೆಚ್ಚು ಕಾಲ ಇರುತ್ತಾರೆ. ಯಾವುದೇ ಖಾಸಗಿ ಸಮಾರಂಭಗಳಿಗೆ ಟಿವಿ ಚಾನೆಲ್ ಗಳಿಗೆ ನಿಮ್ಮ ಹೆಂಡತಿಯನ್ನು ಕರೆದುಕೊಂಡು ಬರುವುದಿಲ್ಲ ಏಕೆ ಎಂಬುದಕ್ಕೆ ರವಿಚಂದ್ರನ್ ಅವರು ಈ ರೀತಿಯಾಗಿ ಉತ್ತರಿಸುತ್ತಾರೆ . ನಾನು ಹೊರಗಡೆ ಬಂದಾಗ ಸಾಮಾನ್ಯವಾಗಿ  ಅಭಿಮಾನಿಗಳು ನನ್ನನ್ನು  ಸುತ್ತುವರಿಯುತ್ತಾರೆ. ಆಗ ಸಾಕಷ್ಟು ಗದ್ದಲ ಶುರುವಾಗುತ್ತದೆ. ಆಗ ನಾನು ನನ್ನ ಹೆಂಡತಿಯ ಕಡೆಗೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ ಅಲ್ಲದೇ ಅವರಿಗೂ ಕೂಡ ಸದ್ದುಗದ್ದಲಗಳು ಎಂದರೆ  ಇಷ್ಟವಾಗುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು  ಹೇಳಿಕೊಳ್ಳುತ್ತಾರೆ .

Advertisement
Advertisement

Advertisement
Share this on...