ಯಾರೇ ನೀನು ಚೆಲುವೆ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದ ನಟ ಯಾರು ಗೊತ್ತಾ ?

in ಕನ್ನಡ ಮಾಹಿತಿ/ಸಿನಿಮಾ 378 views

ಪ್ರೇಮಲೋಕದ ದೊರೆ ವಿ.ರವಿಚಂದ್ರನ್ ಅವರು ಅಭಿನಯಿಸಿದ್ದ ಯಾರೆ ನೀನು ಚೆಲುವೆ ಸಿನಿಮಾ ಸ್ಯಾಂಡಲ್ ವುಡ್ ನ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದು. ಇದೊಂದು ರೀಮೇಕ್ ಸಿನಿಮಾ ಆಗಿದ್ದರೂ ಕೂಡ ಕನ್ನಡಕ್ಕೆ ಅತ್ಯುತ್ತಮವಾಗಿ ಮಾಡಿದ್ದರು ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರು. ಸಿನಿಮಾಕ್ಕೆ ತನ್ನದೇ ಆದ ಸ್ವಂತಿಕೆ ಬರುವಂತೆ ಹಂಸಲೇಖ ಅವರು ಹಾಡುಗಳನ್ನು ಮಾಡಿದ್ದರು.ಇನ್ನು ವಿ ರವಿಚಂದ್ರನ್ ಅವರಿಗೆ ಸಿನಿಮಾ ಜೀವನದಲ್ಲಿ ಈ ಸಿನಿಮಾ ಒಂದು ಅದ್ಭುತ ತಿರುವು ಅಂತಾನೇ ಹೇಳಬಹುದು. ಸೋಲುಗಳನ್ನು ಕಂಡು ನಿರಾಸೆಯಲ್ಲಿದ್ದ ರವಿಚಂದ್ರನ್‌ ಅವರಿಗೆ ಈ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತು.

Advertisement

Advertisement

ಒಂದು ಬಾರೀ ಯಾರೇ ನೀನು ಚೆಲುವೆ ಸಿನಿಮಾ ನೋಡಿದರೆ ಮತ್ತೆ-ಮತ್ತೆ ನೋಡಬೇಕು ಎನಿಸುತ್ತಿತ್ತು. ಆ ರೀತಿಯಾದ ಅಭಿನಯ ಹಾಗು ಪಾತ್ರಕ್ಕೆ ಜೀವ ತುಂಬಿದ್ದವರು ರವಿಚಂದ್ರನ್. ಅದರೆ ಇವರು ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ಬೇರೊಬ್ಬ ನಾಯಕನೊಂದಿಗೆ ಚಿತ್ರೀಕರಣ ಸಹ ಪ್ರಾರಂಭವಾಗಿಬಿಟ್ಟಿದ್ದು, ತದನಂತರ ರವಿಚಂದ್ರನ್‌ ಅವರ ಕೈಗೆ ಆಕಸ್ಮಿಕವಾಗಿ ಈ ಸಿನಿಮಾ ಬಂದೊದಗಿತು. ನಂಬಲು ಕಷ್ಟಸಾಧ್ಯ ಎನಿಸಿದರು ಇದು ಸತ್ಯ.ಯಾರೆ ನೀನು ಚೆಲುವೆ ಸಿನಿಮಾದ ನಾಯಕನಾಗಿ ಮೊದಲು ಅಭಿನಯಿಸುತ್ತಿದ್ದಿದ್ದು, ರವಿಚಂದ್ರನ್ ಅವರ ಸಹೋದರ ಬಾಲಾಜಿ ಅಲಿಯಾಸ್ ಈಶ್ವರ್ ಅವರು. ಬಾಲಾಜಿ ನಾಯಕರಾಗಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ ಬಾಲಾಜಿ ಅದೃಷ್ಟ ಕೈಕೊಟ್ಟು ಸಿನಿಮಾ ನಿಂತುಹೋಯಿತು.

Advertisement

Advertisement

ತಮಿಳಿನ ಸೂಪರ್ ಹಿಟ್ ಸಿನಿಮಾವಾದ ‘ಕಾದಲ್ ಕೋಟ್ಟೈ’ ಸಿನಿಮಾವನ್ನು ಕನ್ನಡದಲ್ಲಿ ಮಾಡಬೇಕೆಂದು ನಿರ್ಮಾಪಕ ಕೆಸಿಎನ್ ಅವರು ಪ್ರಾರಂಭಿಸಿದ್ದರು. ಇನ್ನು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಿದ್ದು ಮೋಹನ್ ಬಾಬು ಅವರು. ಆಗಿನ್ನು ಬಾಲಾಜಿ ಹೊಸ ನಟ. ಅವರ ಜೊತೆಗೆ ಸಿಮ್ರನ್ ಎಂಬ ಹೊಸ ನಟಿಯನ್ನು ಹಾಕಿಕೊಂಡು ಸಿನಿಮಾದ ಚಿತ್ರೀಕರಣವನ್ನು ಒಂದು ವಾರ ಮಾಡಿದ್ದರು. ಜೊತೆಹೆ ಸಿನಿಮಾದ ಕೆಲವೊಂದು ಸ್ಟಿಲ್ಸ್‌ ಕೂಡ ತೆಗೆಯಲಾಗಿತ್ತು. ಆದರೆ ಬಾಲಾಜಿ ಅವರ ದುರಾದೃಷ್ಟ ಸಿನಿಮಾ ಅಚಾನಕ್ಕಾಗಿ ನಿಂತುಹೋಯಿತು.ನಂತರ ಸಿನಿಮಾವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೈಗೆತ್ತಿಕೊಂಡರು. ಆದರೆ ಪಾತ್ರವರ್ಗ ಸೇರಿ ಎಲ್ಲದರಲ್ಲೂ ಬದಲಾವಣೆ ಮಾಡಿದ ಅವರು, ಬಾಲಾಜಿ ಸ್ಥಾನಕ್ಕೆ ರವಿಚಂದ್ರನ್ ಅವರನ್ನು ತಂದರು. ನಿರ್ದೇಶಕರನ್ನು ಬದಲಾಯಿಸಿ ರಾಜೇಂದ್ರ ಬಾಬು ಅವರಿಗೆ ಹೊಣೆ ನೀಡಿದರು. ನಾಯಕಿಯನ್ನಾಗಿ ಹೊಸ ಮುಖ ಸಂಗೀತ ಅನ್ನು ಪರಿಚಯಿಸಿದರು.

Advertisement
Share this on...