ಮಗಳ ಸ್ವಾಭಿಮಾನಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಕ್ರೇಜಿಸ್ಟಾರ್​​…ಎಲ್ಲಾ ಹೆಣ್ಣುಮಕ್ಕಳೂ ಹೀಗೇ ಇದ್ದರೆ ಚೆಂದ..!

in ಮನರಂಜನೆ 37 views

ಕ್ರೇಜಿಸ್ಟಾರ್ ರವಿಚಂದ್ರನ್ ಕಳೆದ ವರ್ಷ ತಮ್ಮ ಮಗಳು ಗೀತಾಂಜಲಿ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದರು. ಮೇ 29 ರಂದು ಗೀತಾಂಜಲಿ ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇನ್ನು ಮೇ 30 ರಂದು ಕ್ರೇಜಿಸ್ಟಾರ್ ಹುಟ್ಟುಹಬ್ಬ. 59 ನೇ ವರ್ಷದ ಹುಟ್ಟುಹಬ್ಬದಂದು ಮಗಳು ಅಪ್ಪನಿಗೆ ಸರ್​​​​ಪ್ರೈಸ್ ನೀಡಿದ್ದಾರೆ.ಲಾಕ್​​ಡೌನ್​ ಇರುವುದರಿಂದ ನಾನು ಈ ಬಾರಿ ನಿಮ್ಮ ಬರ್ತಡೇಗೆ ಬರಲಾಗುವುದಿಲ್ಲ ಎಂದು ಗೀತಾಂಜಲಿ ಅಪ್ಪನಿಗೆ ತಿಳಿಸಿದ್ದರು. ಆದರೆ ಬರ್ತಡೇ ದಿನ ತವರು ಮನೆಗೆ ಬಂದು ಅಪ್ಪನಿಗೆ ಸರ್​​ಪ್ರೈಸ್ ನೀಡಿದ್ದಾರೆ ಗೀತಾಂಜಲಿ. ಅಪ್ಪನಿಗೆ ತಮ್ಮದೇ ದುಡಿಮೆಯ ಹಣದಲ್ಲಿ ಗಿಫ್ಟ್​ ಹಾಗೂ ಕೇಕ್ ತಂದಿದ್ದಾರೆ. ರವಿಚಂದ್ರನ್ ಕಟೌಟ್ ಇರುವ ಸುಂದರವಾದ ಕೇಕನ್ನು ಗೀತಾಂಜಲಿ ಹುಟ್ಟುಹಬ್ಬದಂದು ತಂದುನೀಡಿದ್ದಾರೆ.ಮಗಳನ್ನು ಬಹಳ ಪ್ರೀತಿಸುವ ರವಿಚಂದ್ರನ್ ಮಗಳ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಗೀತಾಂಜಲಿ ಸಣ್ಣ ಈವೆಂಟ್​ ಮ್ಯಾನೇಜ್​​ಮೆಂಟ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಆದರೆ ಕೆಲಸ ವಿಚಾರ ಬಂದಾಗ ಅಪ್ಪನ ಹೆಸರನ್ನು ಎಲ್ಲೂ ಬಳಸಿಕೊಳ್ಳುವುದಿಲ್ಲವಂತೆ.

Advertisement

Advertisement

ಒಮ್ಮೆ ರವಿಚಂದ್ರನ್ ತಮ್ಮ ಸ್ನೇಹಿತರೊಬ್ಬರ ಅದ್ಧೂರಿ ಈವೆಂಟ್​ ಕೊಡಿಸುವ ವಿಚಾರವಾಗಿ ಮಗಳ ಬಳಿ ಕೇಳಿದ್ದಾರೆ. ಆದರೆ ಗೀತಾಂಜಲಿ ಇದನ್ನು ನಿರಾಕರಿಸಿದ್ಧಾರೆ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ ಆದರೆ ನಿಮ್ಮ ಹೆಸರು ಬಳಸಿಕೊಂಡು ಕೆಲಸ ಪಡೆಯುವುದಿಲ್ಲ ಎಂದು ಹೇಳಿದ್ದರಂತೆ ಗೀತಾಂಜಲಿ. ಇದುವರೆಗೂ ಕೆಲಸದ ವಿಚಾರವಾಗಿ ಗೀತಾಂಜಲಿ ಅಪ್ಪನ ಹೆಸರನ್ನೂ ಎಲ್ಲೂ ಹೇಳಿಲ್ಲವಂತೆ.ಇನ್ನು ರವಿಚಂದ್ರನ್ ಗಂಡು ಮಕ್ಕಳಾದ ವಿಕ್ರಮ್ ರವಿಚಂದ್ರನ್ ಹಾಗೂ ಮನು ರವಿಚಂದ್ರನ್ ಅಪ್ಪನ ಎದುರು ಎಂದಿಗೂ ನಿಲ್ಲುವ ಧೈರ್ಯ ಮಾಡಿಲ್ಲವಂತೆ. ಆದರೆ ಮಗಳು ಗೀತಾಂಜಲಿ ಏನಾದರೂ ಕೇಳಿದರೆ ಸಾಕು ರವಿಚಂದ್ರನ್ ಯಾವುದಕ್ಕೂ ಇಲ್ಲ ಎನ್ನುತ್ತಿರಲಿಲ್ಲವಂತೆ. ಮಗಳು ಒಮ್ಮೆ ಅಪ್ಪಾ ಎಂದುಕೊಂಡು ನನ್ನ ಬಳಿ ಬಂದರೆ ಸಾಕು ನಾನು ಕರಗಿಹೋಗುತ್ತಿದ್ದೆ. ಮಗಳ ಇಷ್ಟಕ್ಕೆ ನಾನು ಯಾವತ್ತೂ ನೋ ಎಂದಿಲ್ಲ ಎನ್ನುತ್ತಾರೆ ಕ್ರೇಜಿಸ್ಟಾರ್. ಅಲ್ಲದೆ ಮಗಳ ಸ್ವಾಭಿಮಾನಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Advertisement

 

Advertisement

ತಂದೆ-ತಾಯಿ ಹೆಸರು ಹೇಳಿಕೊಂಡು ಅನಾವಶ್ಯಕ ಕೆಲಸಗಳನ್ನು ಮಾಡುವ ಎಷ್ಟೋ ಮಕ್ಕಳನ್ನು ನೋಡಿದ್ದೇವೆ. ಅದೇ ರೀತಿ ಪೋಷಕರು ಸ್ಥಿತಿವಂತರಾಗಿದ್ದರೂ ತಮ್ಮ ಕಾಲ ಮೇಲೆ ನಿಲ್ಲಲು ಇಷ್ಟಪಡುವ ಮಕ್ಕಳನ್ನೂ ನೋಡಿದ್ದೇವೆ. ಎಲ್ಲಾ ಮಕ್ಕಳೂ ಹೀಗೆ ಇದ್ದರೆ ನಿಜಕ್ಕೂ ಚೆಂದ.

Advertisement
Share this on...