ಕ್ರೇಜಿ ಸ್ಟಾರ್ ಗೆ ಕಿಚ್ಚ ಯಾವ ರೀತಿ ಶುಭಾಶಯ ತಿಳಿಸಿದ್ದಾರೆ ಗೊತ್ತಾ ?

in ಮನರಂಜನೆ 18 views

ಕನ್ನಡ ನಾಡಿನ ಪ್ರೇಮಲೋಕದ ದೊರೆ ಎಂದರೆ ಅದು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್.. ಈ ಕನಸುಗಾರನ ಕನಸಿನಲ್ಲಿ ಮೂಡಿ ಬಂದ ಕಥೆಗಳೆಷ್ಟೋ ಮತ್ತು ಸಾಹಿತ್ಯ ರೂಪದಲ್ಲಿ ಬಂದ ಪ್ರೀತಿಯ ಮಂತ್ರಗಳೂ ಎಷ್ಟೋ..! ಕನ್ನಡ ಚಿತ್ರರಂಗದಲ್ಲಿ ಹಣವನ್ನು ಖರ್ಚು ಮಾಡುವುದನ್ನು ಹೇಳಿಕೊಟ್ಟವರು ಅವರೇ. ಹಾಕಿದ ಬಂಡವಾಳವನ್ನು ದೋಚುವುದನ್ನು ತಿಳಿಸಿ ಕೊಟ್ಟವರು ಅವರೇ.. ಅದು 1987, ಡಾ.ರಾಜ್,ವಿಷ್ಣು,ಅಂಬಿ ಅಂತಹ ದಿಗ್ಗಜರು ಚಿತ್ರರಂಗವನ್ನು ಆಳುತ್ತಿದ್ದ ಕಾಲ.. ಇವರ ನಡುವೆಯೂ ಕನ್ನಡ ನಾಡಿನಲ್ಲಿ ಅಷ್ಟು ಪರಿಚಯವಿಲ್ಲದಿದ್ದರು, ತಮ್ಮ ಸಿನಿಮಾ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಬೇರೂರಿ ಯಶಸ್ಸು ಕಾಣುತ್ತೀನಿ ಎಂದು ಧೈರ್ಯ ಮಾಡಿದವರು ಇದೇ ರವಿಚಂದ್ರನ್. ಕರ್ನಾಟಕದಲ್ಲಿ ವಿ. ರವಿಚಂದ್ರನ್ ಅವರನ್ನು ಪ್ರೇಮಲೋಕದ ದೊರೆ ಎಂದೇ ಕರೆಯಲಾಗುತ್ತದೆ. ಅವರ ಸಿನಿಮಾದಲ್ಲಿ ಪ್ರೀತಿ, ಪ್ರೇಮಗಳೇ ಹೆಚ್ಚು ತುಂಬಿರುತ್ತವೆ. ಅಂತೆಯೇ ಇವರ ಸಿನಿಮಾದ ಮೂಲಕ ಅನೇಕ ನಾಯಕಿಯರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Advertisement

 

Advertisement

Advertisement

ಇಂದು ಪ್ರೇಮ ಲೋಕದ ದೊರೆಗೆ ಜನ್ಮದಿನದ ಸಂಭ್ರಮ. ಅನೇಕ ನಾಯಕ ನಾಯಕಿಯರು ಮತ್ತು ಗಣ್ಯರು ರವಿಚಂದ್ರನ್ ಅವರಿಗೆ ಶುಭಾಶಯದ ಪೂರ ಹರಿಸುತ್ತಿದ್ದಾರೆ.ಹಾಗೆಯೇ ಕ್ರೇಜಿ ಸ್ಟಾರ್ ಅವರ ಮಗ ಅಂತಾನೇ ಕರೆಸಿಕೊಳ್ಳುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಕೂಡ ವಿಶೇಷವಾಗಿ ಶುಭಾಶಯ ತಿಳಿಸಿದ್ದು, ತಮ್ಮ ಹಾಗೂ ರವಿಚಂದ್ರನ್ ಅವರ ಅನುಭಂದವನ್ನು ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

 

ಪ್ರೇಮಲೋಕದ ದೊರೆ ರವಿ ಮಾಮ ಅವರ ಮೇಲೆ ಅಪಾರ ಗೌರವ ಮತ್ತು ಪ್ರೀತಿ ಇರಿಸಿರುವ ನಟರಲ್ಲಿ ಸುದೀಪ್ ಅವರು ಕೂಡ ಒಬ್ಬರು. ರವಿಚಂದ್ರನ್ ಅವರ ಹೇಳುವ ಮಾತಿಗೆ ಸುದೀಪ್ ಎಂದಿಗೂ ಇಲ್ಲ ಎನ್ನುವುದಿಲ್ಲ.ಈ ಪ್ರೀತಿಯೂ ಬೆಳ್ಳಿ ತೆರೆಯ ಮೇಲೂ ಕೂಡ ಕಾಣುತ್ತದೆ..ಮಾಣಿಕ್ಯ’ ಚಿತ್ರದಲ್ಲಿ ತಂದೆ-ಮಗನ ಪ್ರೀತಿಯ ಸನ್ನಿವೇಶಗಳು ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿದ್ದವು. ಇಬ್ಬರೂ ನೈಜ ತಂದೆ ಮಕ್ಕಳೇನೋ ಎನ್ನುವಷ್ಟು ಅವರ ಅಭಿನಯವಿತ್ತು.. ಅಂದಿನಿಂದ ಇಬ್ಬರ ಬಾಂದವ್ಯ ಇನ್ನೂ ಗಟ್ಟಿಯಾಗಿತ್ತು.

 

View this post on Instagram

 

#HappyReturnsCrazyStar. Much more power to you anna. wishing you the very best always. ??

A post shared by KicchaSudeepa (@kichchasudeepa) on

ರವಿಚಂದ್ರನ್ ಅವರ ಜನ್ಮದಿನದಂದು ಸುದೀಪ್, ತಮ್ಮದೇ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ‘ಒಂದೇ ಬಗೆಯ ವೃತ್ತಿ ಕ್ಷೇತ್ರದಲ್ಲಿ ಇರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಸುದೀಪ್, ರವಿಚಂದ್ರನ್ ಅವರೊಂದಿಗೆ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಹೆಮ್ಮೆಯನ್ನು ಹಂಚಿಕೊಂಡಿದ್ದಾರೆ.ಇನ್‌ಸ್ಟಾಗ್ರಾಂನ ಖಾತೆಯಲ್ಲಿ ಸುದೀಪ್, ‘ಮಾಣಿಕ್ಯ’ ಚಿತ್ರದ ಹಿಟ್ ಹಾಡು ‘ಜೀವಾ ಜೀವಾ ಕಣೋ’ ಹಾಡಿನ ದೃಶ್ಯ ಹಂಚಿಕೊಂಡಿದ್ದಾರೆ. ಚಿತ್ರದ ಭಾವುಕ ಸನ್ನಿವೇಶಗಳಲ್ಲಿ ಒಂದಾದ ಈ ಹಾಡುವ ಅವರ ನಡುವಿನ ಆತ್ಮೀಯತೆಯನ್ನು ಧ್ವನಿಸುವಂತಿದೆ. ‘ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಅಣ್ಣಾ’ ಎಂದು ಸುದೀಪ್ ಶುಭಾಶಯ ಕೋರಿದ್ದಾರೆ.

Advertisement
Share this on...