ಈ 3 ರಾಶಿಯವರು ಶುಭ ಸುದ್ದಿಯನ್ನು ಕೇಳಲಿದ್ದೀರಿ, ಯಾವ ವಿಚಾರವಾಗಿ ಗೊತ್ತಾ?

in ಜ್ಯೋತಿಷ್ಯ 14 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಪಂಚಮಿ ತಿಥಿ, ಶ್ರವಣ ನಕ್ಷತ್ರ, ಐಂದ್ರ ಯೋಗ, ಭವಕರಣ, ಜೂನ್ 10 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಜೊತೆಗೆ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಅಯ್ಯಪ್ಪ ಆಸನದ ಮಹತ್ವವನ್ನು ತಿಳಿಸಿದ್ದಾರೆ. ಮೊದಲಿಗೆ ಆಸನದ ಪ್ರಯೋಜನಗಳನ್ನು ತಿಳಿದುಕೊಂಡು, ನಂತರ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
(ಅಮೃತ ಕಾಲ 5: 29 ರಿಂದ 7:11 ರವರೆಗೆ ಇರುತ್ತದೆ)

Advertisement

ಅಯ್ಯಪ್ಪ ಆಸನ
ಮಲಮೂತ್ರ ಸಮಸ್ಯೆ ಇದ್ದರೆ ಶೇ. 90 ರಷ್ಟು ಕಾಯಿಲೆಗಳು ಬರುತ್ತವೆ. ಉದಾಹರಣೆಗೆ ಕಿಡ್ನಿ ಸ್ಟೋನ್ ಇನ್ ಫೆಕ್ಷನ್, ಮಂಡಿನೋವು, ಸೊಂಟ ನೋವು, ಕುತ್ತಿಗೆ ನೋವು, ಗ್ಯಾಸ್ಟ್ರಿಕ್, ಹೃದಯಾಘಾತ ಸಮಸ್ಯೆ, ಲಿವರ್ ಸಮಸ್ಯೆ ಹೀಗೆ ಅನೇಕ ಕಾಯಿಲೆಗಳು ಬೆನ್ನುಹತ್ತುತ್ತವೆ. ಆದರೆ ಆಸನಗಳ ರಾಜ ಎನಿಸಿಕೊಂಡಿರುವ ಅಯ್ಯಪ್ಪ ಆಸನವು ಈ ಮೇಲಿನ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವುದಲ್ಲದೆ, ಹೊಟ್ಟೆ ಕರುಗುವಂತೆ ನೋಡಿಕೊಳ್ಳುತ್ತದೆ. ಕೆಟ್ಟ ಕೆಟ್ಟ ಗಾಳಿಯೆಲ್ಲಾ ಹೊರಬರುವಂತೆ ಮಾಡುತ್ತದೆ (ನೆನಪಿಡಿ, ನಮ್ಮ ದೇಹದಲ್ಲಿರುವ ಆ ಕೆಟ್ಟ ಗಾಳಿಯ ಪ್ರಭಾವವೇ ನಮ್ಮನ್ನು ಇಷ್ಟೆಲ್ಲಾ ಭಾಧೆಗೆ ತಳ್ಳುತ್ತಿರುವುದು).

Advertisement

 

Advertisement

Advertisement

ರಾಶಿಗಳ ಫಲಾಫಲ
ಮೇಷ: ರಾಜಕೀಯ, ಧರ್ಮ ಕಾರ್ಯ, ದೇವ ಕಾರ್ಯ, ದಾನ ಕಾರ್ಯ ಇದರಲ್ಲಿ ಯಾವುದಾದರೂ ಒಂದರಲ್ಲಿ ತುಂಬಾ ಒಳ್ಳೆಯ ಸುದ್ದಿ ಪಡೆಯುತ್ತಿರಿ. ನೀವು ಏನು ಧರ್ಮ ಮಾಡಿರುತ್ತೀರೋ ಆ ಧರ್ಮಕ್ಕೆ ತಕ್ಕಂತೆ ಫಲ ಪಡೆಯುತ್ತೀರಿ.
ವೃಷಭ: ಇಂದು ನಿಮಗೆ ಅನುಕೂಲಕರವಾದ ದಿನ. ಆದರೆ ಸ್ವಲ್ಪ ಧೈರ್ಯ ಕುಸಿದ ಹಾಗೆ ಅನಿಸುತ್ತದೆ. ಆದರೆ ಏನು ತೊಂದರೆ ಇಲ್ಲ. ಏನೇ ಕೆಲಸ ಮಾಡಿದರೂ ಏಕಾಗ್ರತೆಯಿಂದ ಮಾಡಬೇಕು. ಮನಸ್ಸಿನಲ್ಲಿ ಅಂದುಕೊಂಡದ್ದು ನೆರವೇರುತ್ತದೆ, ಫಲ ಸಿಗುತ್ತದೆ. ಮನಸ್ಸಿನಂತೆ ಮಹಾದೇವ, ಇಲ್ಲವೆಂದರೆ ದೆವ್ವ ನೆನಪಿಟ್ಟುಕೊಳ್ಳಿ.
ಮಿಥುನ: ಇಂದು ನಿಮಗೆ ಒಂದು ರೀತಿಯ ಆಂದೋಲನ. ದೂರದ ಕಡೆಯಿಂದ ಶುಭ ಸುದ್ದಿ, ಆದರೆ ಅದು ಒತ್ತಡವನ್ನು ತಂದುಕೊಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರಿ.
ಕರ್ಕಾಟಕ: ಹತ್ತಿರದವರು, ಗೊತ್ತಿರುವವರಿಂದ ಶುಭ ಸುದ್ದಿ ಪಡೆಯುತ್ತೀರಿ. ಆತ್ಮೀಯರು ಸಹಾಯ ಮಾಡುತ್ತಾರೆ.

 

ಸಿಂಹ: ಸ್ವಲ್ಪ ಆರೋಗ್ಯದ ಚಿಂತೆ. ಅತ್ತೆ ಅಥವಾ ತಾಯಿ ಜೊತೆ ಸಂಗಾತಿ ವಿಚಾರ ಅಥವಾ ಕುಟುಂಬದ ವಿಚಾರ, ಮಗುವಿನ ವಿಚಾರ ತಳಮಳ ತಂದು ಕೊಡಬಹುದು. ಆದ್ದರಿಂದ ಎಚ್ಚರಿಕೆ ಇರಲಿ.
ಕನ್ಯಾ: ಸ್ವಲ್ಪ ತಳಮಳ ಇರುತ್ತದೆ. ಅತಿ ಮುಖ್ಯವಾಗಿ ಆರೋಗ್ಯ ನೋಡಿಕೊಳ್ಳಿ. ಅರ್ಥೈಟಿಸ್ ಸಮಸ್ಯೆ ಇರುವವರು ಅಮೃತಬಳ್ಳಿ ಸೇವಿಸಿ. ಇದು ಅನೇಕ ಸಮಸ್ಯೆಗೆ ರಾಮಬಾಣವಾಗಿದೆ.
ತುಲಾ: ಉದ್ಯೋಗದ ವಿಚಾರದಲ್ಲಿ ಒಂದು ರೀತಿಯ ತಳಮಳ ಇರುತ್ತದೆ. ಸ್ವಲ್ಪ ಜಾಗ್ರತೆಯಿಂದ ಇರಿ.
ವೃಶ್ಚಿಕ: ಭಾಗ್ಯ ವೃತ್ತಿ ಪರವಾಗಿ, ಕುಟುಂಬ ಪರವಾಗಿ, ಮನೆಯ ಪರವಾಗಿ ಇರುತ್ತದೆ.
ಧನಸ್ಸು: ಕುಟುಂಬದವರಿಂದ ಅಲ್ಲ, ವೃತ್ತಿ ಪರವಾಗಿ ಒಂಚೂರು ಒತ್ತಡ, ಟೆನ್ಷನ್ ಇರುತ್ತದೆ. ಬಾಯಿ ಜಾರುಬಿಡುತ್ತಿರಾ. ಏನು ಮಾಡಿದರೂ ನನ್ನನ್ನು ಗಮನಿಸುತ್ತಿಲ್ಲ ಎಂಬ ಭಾವನೆ ಇರುತ್ತದೆ.

ಮಕರ: ಉದ್ಯೋಗ ನಿಮಿತ್ತ, ವ್ಯವಹಾರ ನಿಮಿತ್ತ ಯಾರೋ ಸಹಾಯ ಮಾಡಲು ಬರುತ್ತಾರೆ. ಸಹಾಯಕರಾಗಿ ನಿಲ್ಲುತ್ತಾರೆ. ಅಂತಹದೊಂದು ಅದ್ಭುತ ದಿನ ಇಂದು. ಹಾಲು, ಮೊಸರು, ಬೆಣ್ಣೆ, ತುಪ್ಪ, ಸೇವಿಸುವವರಿಗೆ ಹೆಚ್ಚು ನೆಗಡಿ ಆಗುತ್ತದೆ ಜಾಗ್ರತೆಯಲ್ಲಿರಿ.
ಕುಂಭ: ಶುಭ ಸುದ್ದಿಯಿದ್ದು, ಇದು ಕುಟುಂಬ, ವೃತ್ತಿ, ವ್ಯವಹಾರದ ಪರವಾಗಿದೆ. ಪ್ರಯಾಣದಲ್ಲೊಂದು ಒತ್ತಡ ಇರುತ್ತದೆ.
ಮೀನಾ: ಸಾಕಷ್ಟು ಸಂಭ್ರಮ ಇರುತ್ತದೆ. ಏನೋ ಒಂದು ಒಳ್ಳೆಯದನ್ನು ಮಾಡಿದ್ದಿರಿ ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ಕೆಟ್ಟದ್ದನ್ನು ಮಾಡಿದರೆ ಅದು ಹುಡುಕಿಕೊಂಡು ಬರುತ್ತದೆ.

Advertisement
Share this on...