ಶುಭ ಶುಕ್ರವಾರ ಲಕ್ಷ್ಮೀ ಪೂಜೆ ಮಾಡಿ…

in ಜ್ಯೋತಿಷ್ಯ 371 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ,  ಶುಕ್ಲ ಪಕ್ಷದ ಪಂಚಮಿ ತಿಥಿ, ಮಖಾ ನಕ್ಷತ್ರ,  ಸಿದ್ಧಿ ಯೋಗ, ಬಾಲವ ಕರಣ, ಜೂನ್ 26   ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಬೆಳಗ್ಗೆ 9 ಗಂಟೆ,   8 ನಿಮಿಷದಿಂದ,  10 ಗಂಟೆ,  39 ನಿಮಿಷದವರೆಗೂ ಇದೆ.

Advertisement

Advertisement

ಶುಭ ಶುಕ್ರವಾರ ಲಕ್ಷ್ಮೀ ಪೂಜೆ ಮಾಡಿ:

Advertisement

ಇಂದು  ಆಷಾಢದ ಶುಭ ಶುಕ್ರವಾರ ಲಕ್ಷ್ಮೀ ಪೂಜೆಯನ್ನು ಮಾಡುವಾಗ ಗೋಮೂತ್ರವನ್ನು ಬಳಸುವುದು ಬಹಳ ಮುಖ್ಯ. ಹಸುವಿನ ಕೊಂಬಿನಿಂದ ಹಿಡಿದು ಗೋಮಯದ ವರೆಗೂ ಕೂಡ ನಮಗೆ ಉಪಯೋಗಕ್ಕೆ ಬರುತ್ತದೆ, ಜೀವನಪರ್ಯಂತ ತಾಯಿಯಂತೆ ನಮಗೆ  ಹಾಲನ್ನು ನೀಡುವ ಹಸುವನ್ನು  ಚೆನ್ನಾಗಿ ನೋಡಿಕೊಳ್ಳಬೇಕು, ಅದನ್ನು ಒಡೆಯುವುದು,  ಹಿಂಸಿಸುವುದು,  ಮಾಡಬಾರದು ಇದರಿಂದ ತುಂಬಾ ಪಾಪ ಸುತ್ತಿಕೊಳ್ಳುತ್ತದೆ, ಇಂದು ಕಪಿಲ ವರ್ಣದ  ಅಥವಾ  ಕಾಫಿ ಬಣ್ಣದ ಹಸುವೇನಾದರೂ ಸಿಕ್ಕರೆ ಅದಕ್ಕೆ  ಪೂಜೆ ಮಾಡುವುದರಿಂದ  ಬಹಳಷ್ಟು ಫಲವನ್ನು ನೀಡುತ್ತದೆ, ನಿಮಗೆ ಆಯಿತು ಎಂದರೆ ಇಂದು 1  ಕೆಜಿ ಕಡಲೆಕಾಳನ್ನು ನೆನೆಸಿಟ್ಟುಕೊಳ್ಳಿ, 1 ಕೆಜಿ ಬೆಲ್ಲ,  1 ಕೆಜಿ ಅವಲಕ್ಕಿ,  1 ಕೆಜಿ ಹಣ್ಣು ಎಲ್ಲವನ್ನೂ ಕಟ್ ಮಾಡಿ ಇಟ್ಟುಕೊಳ್ಳಿ  ಪೂಜೆಯ ನಂತರ ಇದೆಲ್ಲವನ್ನೂ ಮಿಕ್ಸ್ ಮಾಡಿ ಹಸುವಿಗೆ ತಿನ್ನಿಸಿ , ಆಷಾಢ ಶುಭ ಶುಕ್ರವಾರದಂದು ಮಾಡುವ ಗೋ ಪೂಜೆ ಸರ್ವ ಸಂಪದ್ಭರಿತವಾದ ಫಲವನ್ನು ತಂದುಕೊಡುತ್ತದೆ.

Advertisement

 

ಇಂದಲ್ಲ ನಾಳೆ ನಾವು ಮಾಡುವ ಧರ್ಮ ನಮ್ಮ ಕೈಯನ್ನು ಹಿಡಿದೇ ಹಿಡಿಯುತ್ತದೆ, ಇಂದು ಗೋಮಯದಿಂದ ಮನೆಯ ಮುಂದೆ ಸಾರಿಸಿ ಒಂದು ಪುಟ್ಟ ರಂಗೋಲಿ ಇಡಿ , ತುಳಸಿ ಗಿಡದ ಮುಂದೆ ದೀಪ ಹಚ್ಚಿದರೆ ಲಕ್ಷ್ಮಿ ತುಂಬಾ ಸಂಪ್ರೀತಿಗೊಳ್ಳುತ್ತಾಳೆ. ಲಕ್ಷ್ಮಿಗೆ ವಿಷ್ಣು ಎಂದರೆ ತುಂಬಾ ಪ್ರೀತಿ ಯಾರು ವಿಷ್ಣುವನ್ನು ನೆನೆಯುತ್ತಾರೊ ಅಲ್ಲಿಗೆ ಲಕ್ಷ್ಮಿ ದೇವಿ ತುಂಬಾ ಖುಷಿಯಿಂದ ಇಷ್ಟಪಟ್ಟು ಬಂದು ನೆಲೆಸುತ್ತಾಳೆ , ಯಾರು ಯಜಮಾನರನ್ನು  ಪ್ರೀತಿಸುತ್ತಾರೊ,  ಗೌರವದಿಂದ,  ನೋವು ಕೊಡದೆ ನಡೆದುಕೊಳ್ಳುತ್ತಾರೊ,  ಅಲ್ಲಿ ಲಕ್ಷ್ಮಿ ಸದಾ ಸಂಪನ್ನೆ ,  ಅಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ , ಗೋಮಯಕ್ಕೆ ಗರಿಕೆಯನ್ನಿಟ್ಟು ಪೂಜೆ ಮಾಡಿ,  ಎರಡು ಇಂಚಿನ  ದೀಪವಾದರು ಸರಿ,   ತುಪ್ಪದ ದೀಪವನ್ನು ಹಚ್ಚಿ , ಇಂದು ಆದಷ್ಟು ಚಾಪೆ ಮೇಲೆಯೇ ಸಪರೇಟ್ ಆಗಿ ಮಲಗಿ,  ಬ್ರಹ್ಮಚರ್ಯವನ್ನು ಪಾಲಿಸಿ , ಇಂದು ಸಂಧ್ಯಾ ಕಾಲದಲ್ಲಿ ಸುಮಂಗಲೆಯರಿಗೆ ತುಪ್ಪದಿಂದ ಮಾಡಿದ ಹೋಳಿಗೆ ಅಥವಾ  ತುಪ್ಪದಿಂದ ಮಾಡಿದ ನೈವೇದ್ಯವನ್ನು ಕೊಟ್ಟು,  ಅರಿಶಿನ ಕುಂಕುಮವನ್ನು ಕೊಡುವುದರಿಂದ ಮತ್ತು ಅವರ ಮನೆಗೆ ಹೋಗಿ ಅರಿಶಿನ ಕುಂಕುಮವನ್ನು ತೆಗೆದುಕೊಂಡು ಅಕ್ಷತೆ ಹಾಕಿಸಿಕೊಳ್ಳುವುದರಿಂದ ನಿಮ್ಮ ಮಾಂಗಲ್ಯ ವೃದ್ಧಿಯಾಗುತ್ತದೆ, ನಿಮ್ಮ ಯಜಮಾನರ ಆಯಸ್ಸು ವೃದ್ಧಿ,  ಅಂತಸ್ತು ವೃದ್ಧಿ,  ಗೌರವ ವೃದ್ಧಿ ಆಗುತ್ತದೆ. ಎಂಥಾ ಕೆಟ್ಟ ಗಂಡ ದುಷ್ಟ ಗಂಡನಾದರು  ಪೂಜೆಯ ಫಲದಿಂದ ಎಲ್ಲ ಸರಿ ಹೋಗುತ್ತದೆ.

 


ನಿಮ್ಮ ರಾಶಿಗಳ ಫಲಹೀಗಿದೆ.

ಮೇಷ ರಾಶಿ : ಚಂದ್ರ ಕೇತು ನಕ್ಷತ್ರದಲ್ಲಿದ್ದಾನೆ, ತಂದೆ ತಾಯಿ ಹಿರಿಯರ ಆರೋಗ್ಯದ ಕಡೆ ಸ್ವಲ್ಪ ಎಚ್ಚರಿಕೆ ವಹಿಸಿ,  ನಿಮ್ಮ ಮನಸ್ಸು ಕೂಡ ಸ್ವಲ್ಪ ಹುಳಿಯೆ ,  ಆದ್ದರಿಂದ ಹಣೆಗೆ ಚಂದನ ಅಥವಾ ತಿಲಕವನ್ನು ಹಚ್ಚಿಕೊಂಡು ಹೋಗಿ ತಿಳಿಯಾಗುತ್ತದೆ, ಸಮಾಧಾನ ಆಗುತ್ತದೆ ಆತಂಕ ದೂರವಾಗುತ್ತದೆ

ವೃಷಭ ರಾಶಿ: ವಿದ್ಯಾರ್ಥಿಗಳಿಗೆ ಸ್ವಲ್ಪ ಎಳೆದಾಟ,  ಗುರುವು ಆಗಿರುವುದರಿಂದ ನೆನಪಿನ ಶಕ್ತಿ , ಎಕ್ಸಾಮ್ ನಲ್ಲಿ ಸ್ವಲ್ಪ ಕನ್ಫ್ಯೂಷನ್ ಗಳಾಗುತ್ತದೆ , ಸುಮಾರು ಒಂದೂವರೆ ವರ್ಷಗಳ ಕಾಲ ವಿದ್ಯಾರ್ಥಿಗಳ ಬದುಕು ಕನ್ ಫ್ಯೂಸ್ ನಲ್ಲಿ ಇರುತ್ತದೆ, ಗುರು ಪಾರಾಯಣ,  ದತ್ತ ಪಾರಾಯಣವನ್ನು ಮಕ್ಕಳಿಗೆ ಮಾಡಿಸಿ. ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗುವುದರಿಂದ ಅವರಿಗೆ ಬ್ರಹ್ಮ ಶಂಕರವನ್ನು ತಿನ್ನಿಸಿ,  ಇಲ್ಲದೇ ಇದ್ದಲ್ಲಿ ಒಂದು ಒಣ ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದನ್ನು ಬೆಳಗ್ಗೆ ಕಚ್ಚಿ ತಿನ್ನಲು ಕೊಡಿ ಇದು ಮಕ್ಕಳಿಗೆ ಶಕ್ತಿ ವರ್ಧಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ರಹ್ಮಶಂಕರ ಪಡೆಯಲು 08045549465 / 0804559466 ಗೆ ಕರೆ ಮಾಡಿ

ಮಿಥುನ ರಾಶಿ : ಒಡಹುಟ್ಟಿದವರ ವಿಚಾರದಲ್ಲಿ ಭಿನ್ನಾಭಿಪ್ರಾಯ,  ಹತ್ತಿರದಿಂದ ಅಥವಾ ಆತ್ಮೀಯರಿಂದ ಮನಸ್ಸಿಗೆ ಕ್ಷೋಭೆ ಉಂಟಾಗುತ್ತದೆ,  ಗಣಪತಿಯ ಆರಾಧನೆಯನ್ನು ಮಾಡಿ,  ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡದೇ ಇದ್ದರೂ ದೀಪವನ್ನು ಹಚ್ಚಿರುತ್ತಾರೆ ಆ ದೀಪವನ್ನು ನೋಡಿ ಹೋಗಿ ಸಾಕು,  ದೀಪ ದರ್ಶನ ಮಾಡಿದರೆ ಒಂದು ಕೋಟಿ ಶಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

 

ಕರ್ಕಾಟಕ ರಾಶಿ: ಏನೋ ಮನೋ ಭೀತಿ ಆತಂಕ , ಉದ್ಯೋಗ ಕುಟುಂಬ ಮಕ್ಕಳು ವಿಚಾರದಲ್ಲಿ ತಳಮಳವಾಗುವ ಪ್ರಭಾವವಿರುತ್ತದೆ  ಎಚ್ಚರಿಕೆ,  ಒಂದು ಬೊಗಸೆಯಷ್ಟು ಕಡಲೇ ಕಾಳನ್ನು ನೆನೆಸಿ ಅದನ್ನು ಹಸುವಿಗೆ ತಿನ್ನಿಸಿ ಒಳ್ಳೆಯದಾಗುತ್ತದೆ.

ಸಿಂಹ ರಾಶಿ: ನೀವು ಸುಮ್ಮನಿರಲಾರಿರಿ  ಬೇರೆಯವರಿಗೂ ಸುಮ್ಮನಿರಲು ಬಿಡುವುದಿಲ್ಲ ನೀವು  ಸುಮ್ಮನಿದ್ದರೂ ಬೇರೆಯವರು ಬಿಡುವುದಿಲ್ಲ ಆತಂಕವಿರುತ್ತದೆ  ಶಿವ ದೇವಸ್ಥಾನದ ವೃದ್ಧ ಅರ್ಚಕ ರೊಬ್ಬರಿಗೆ ತಾಂಬೂಲ ಅಂದರೆ  ಬಾಳೆಹಣ್ಣು,  ಎಲೆ,  ಅಡಿಕೆ,  ಹದಿನಾರು ರೂಪಾಯಿಗಳನ್ನಿಟ್ಟು ಕೊಟ್ಟು ಆಶೀರ್ವಾದ ಪಡೆದುಕೊಳ್ಳಿ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ : ಸ್ವಲ್ಪ ವೈರಾಗ್ಯ ಭಾವ ಏನಿದ್ದರೆ ಏನು ಪ್ರಯೋಜನ ಎಂಬ ಭಾವ , ಇಲ್ಲದಿದ್ದಾಗ ಕೊರಗುವ ಬದಲು ಇದ್ದಾಗ ಅನುಭವಿಸಿ ,

 

ತುಲಾ ರಾಶಿ: ಧರ್ಮ ಬದ್ಧ ಸಂಪಾದನೆಯಲ್ಲಿ ಪ್ರಗತಿ , ಧರ್ಮದಿಂದ ಪ್ರಗತಿಯಾಗುತ್ತದೆ ಧೈರ್ಯವಾಗಿ ಮುಂದೆ ಹೆಜ್ಜೆ ಇಡಿ .

ವೃಶ್ಚಿಕ ರಾಶಿ : ವೃತ್ತಿಗೆ ಸಂಬಂಧಪಟ್ಟಂತೆ ಸ್ವಲ್ಪ ಹುಳಿ ಅನಿಸುತ್ತದೆ ಆದರೂ ವೃದ್ಧಿಯಾಗುತ್ತದೆ , ಗಾಬರಿಯಾಗಬೇಡಿ .

ಧನಸ್ಸು ರಾಶಿ :  ಇರುವ ಭಾಗ್ಯಕ್ಕೆ ಕುತ್ತು, ಅದೃಷ್ಟ ತುಂಬಾ ಕಾಲ ಇರುವುದಿಲ್ಲ,  ಅದರಿಂದಲೇ ಜೀವನ ನಡೆಯುವುದಿಲ್ಲ, ಅದೃಷ್ಟವನ್ನೇ ನೆಚ್ಚಿಕೊಂಡು ಇರಬಾರದು,  ಪೆಟ್ಟು ಉಂಟು ಎಚ್ಚರಿಕೆ, ಅದೃಷ್ಟದಿಂದ ಕಟ್ಟಿದಂತಹ ಕೋಟೆ ಬೇಗ ಉರುಳಿ ಹೋಗುತ್ತದೆ, ಕಷ್ಟಪಟ್ಟು ಕಟ್ಟಿದಂತೆ ಕೋಟೆ ಅಚಲವಾಗಿ ನಿಂತುಕೊಳ್ಳುತ್ತದೆ, ಯೋಗ ತುಂಬಾ ದಿನ ನಡೆಯುವುದಿಲ್ಲ ಯೋಗ್ಯತೆ ಒಂದೇ ನಡೆಯುವುದು, ಯೋಗ್ಯತೆಯಿಂದ ಮುಂದೆ ಹೆಜ್ಜೆ ಹಾಕಿ ಫಲ ವೃದ್ಧಿಯಾಗುತ್ತದೆ

ಮಕರ ರಾಶಿ : ಅನ್ ಎಕ್ಸ್ಪೆಕ್ಟೆಡ್ ಗುಡ್ ನ್ಯೂಸ್ ಮತ್ತು ಬ್ಯಾಡ್   ನ್ಯೂಸ್  ಬರುತ್ತವೆ , ತುಂಬಾ ಒತ್ತಡವಿರುತ್ತದೆ. ಒತ್ತಡ ಅನಾರೋಗ್ಯದ ಛಾಯೆ , ಟೆಸ್ಟ್  ಅಲರ್ಜಿ ,ಥ್ರೋಟ್ ಇನ್ಫೆಕ್ಷನ್ ,  ವಾಟರ್ ಇನ್ಫೆಕ್ಷನ್  ಇದ್ದರೆ ಒಂದು ಪಾತ್ರೆಗೆ ನೀರು ಹಾಕಿ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ,  ಎರಡು ಮಾವಿನ ಎಲೆ , ಸ್ವಲ್ಪ ಬಿಲ್ವಪತ್ರೆ ಎಲೆಗಳನ್ನು ಹಾಕಿ ಕುದಿಸಿ ಅದರ ಹಬೆಯನ್ನು ತೆಗೆದುಕೊಳ್ಳಿ ಇದರಿಂದ ಅಲರ್ಜಿ ನಿವಾರಣೆಯಾಗುತ್ತದೆ, ಮಕರ ಮತ್ತು  ಕುಂಭ ರಾಶಿಗೆ ಈ ಸಮಸ್ಯೆಗಳು ಸಾಮಾನ್ಯವಾಗಿ ಕಾಣುತ್ತವೆ. ವಾತಾವರಣದಲ್ಲಿ ಬದಲಾವಣೆಯಾದರೆ ಮಕರ ಮತ್ತು ಕುಂಭ ರಾಶಿಗೆ ಬೇಗ ಪ್ರಭಾವ ಬೀರುತ್ತದೆ, ಅಷ್ಟಮದಲ್ಲಿ ಕೇತು ನಕ್ಷತ್ರ ವಿರುವುದರಿಂದ ಎದೆ ಉರಿ,  ಒತ್ತಡ ಬರುತ್ತದೆ ಹೊಟ್ಟೆಯ ಉಬ್ಬರ ಕೂಡ ಕಂಡು ಬರುತ್ತದೆ , ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ  ನಿಮಿಷಗಳಷ್ಟು ಕಾಲ ಬಿಟ್ಟು ನಂತರ ಕುಡಿಯಿರಿ ದಿನಕ್ಕೆ ಮೂರು ಗ್ಲಾಸ್ ನೀರನ್ನು ಕುಡಿದರೆ ಹೊಟ್ಟೆಯ ಉಬ್ಬರ ಕಡಿಮೆಯಾಗುತ್ತದೆ .

ಕುಂಭ ರಾಶಿ : ದೈವ ಭಾವ ಧರ್ಮ ಭಾವ ಅವನೇ ಕೊಟ್ಟಿದ್ದು ಒಳ್ಳೆಯದು ಆಗುತ್ತದೆ , ಕೆಟ್ಟದ್ದು ಆಗುತ್ತದೆ,  ಒಳ್ಳೆಯವರು ಜೊತೆಯಲ್ಲಿರುತ್ತಾರೆ,  ಕೆಟ್ಟವರು ಜೊತೆಯಲ್ಲಿರುತ್ತಾರೆ,  ಯಾವುದೂ ಶಾಶ್ವತವಲ್ಲ, ಒಳ್ಳೆಯದಾಗುತ್ತದೆ .

ಮೀನ ರಾಶಿ : ಸರ್ಪ್ರೈಸ್ ಗುಡ್ ನ್ಯೂಸ್ ಬರುತ್ತದೆ , ವೃತ್ತಿಗೆ ಸಂಬಂಧಪಟ್ಟಂತೆ,  ಕುಟುಂಬಕ್ಕೆ ಸಂಬಂಧಪಟ್ಟಂತೆ ಚೆನ್ನಾಗಿದೆ , ತಾಯಿಗೆ ಹೊಟ್ಟೆ ನೋವು ಮಂಡಿ ನೋವು ಮುಂತಾದ ಯಾವುದಾದರೂ ಸಮಸ್ಯೆಗಳಿದ್ದರೆ ಸ್ವಲ್ಪ ಎಚ್ಚರಿಕೆ ಮಿಕ್ಕೆಲ್ಲ ಏನೂ ಇಲ್ಲ ಒಳ್ಳೆಯ ಒಳ್ಳೆಯದಾಗುತ್ತದೆ.
All Rights Reserved Namma Kannada.

Advertisement
Share this on...