ಈ ರಾಶಿಯವರಿಗೆ ಇಡೀ ವಾರದ ಶಕ್ತಿಯೆಲ್ಲ ಒಂದೇ ದಿನ ಬಂದ ಹಾಗೆ..

in ಜ್ಯೋತಿಷ್ಯ 125 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ  ಅಷ್ಟಮಿ ತಿಥಿ,  ಉತ್ತರ ಫಾಲ್ಗುಣಿ  ನಕ್ಷತ್ರ, ವಾರಿಯಾನ್ ಯೋಗ, ಭದ್ರಾಂಕರಣ  ಜೂನ್ 28  ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ಮೂರ್ಖರ ಜೊತೆ ವಾದ ಬೇಡ

Advertisement

ಜ್ಞಾನವಂತರು ಯಾರ ವಿಷಯಕ್ಕೆ ಹೋಗುವುದಿಲ್ಲ ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮಾಡಿಕೊಂಡು ಇರುತ್ತಾರೆ. ಆದರೆ ಅಲ್ಪಜ್ಞಾನಿಗಳು ಸುಮ್ಮನಿರುವುದಿಲ್ಲ  ಅಲ್ಲಿ ಒಂದು ಕೆಟ್ಟದ್ದನ್ನು,  ಹುಳುಕನ್ನು,  ಹುಡುಕುವುದೇ ಅವರ ಕೆಲಸ. ನಮ್ಮೆಲ್ಲರ ಸುತ್ತ ಮುತ್ತಲು ಮೂರ್ಖರು ಇದ್ದೇ ಇರುತ್ತಾರೆ, ಮೂರ್ಖರ ಮಾತಿಗೆ ಬೆಲೆ ಕೊಡುವ ಬದಲು ನಿರ್ಲಕ್ಷಿಸಿ ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ, ಮೂರ್ಖರ ಜೊತೆಯಲ್ಲಿ ವಾದ ಮಾಡುವುದು ಬೇಡ, ಅವರನ್ನು ಸುಮ್ಮನೆ ಅವರ ಪಾಡಿಗೆ  ಬಿಟ್ಟು ಹೊಗಿ, ನಿಮ್ಮ ಕರ್ತವ್ಯ ನಿಷ್ಠೆಯ ಮೇಲೆ ಬದ್ಧತೆಯಿಂದ ನಿಮ್ಮ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಪ್ರಯತ್ನ ಮಾಡಿ, ಮೂರ್ಖರ ಜತೆ ವಾದ ಮಾಡಿ ಪ್ರಯೋಜನವಿಲ್ಲ . ಅಲ್ಪಜ್ಞಾನಿಗಳ ಜೊತೆ ಗುದ್ದಾಡಿದರೆ ಅದು ಕೆಸರಿನಲ್ಲಿರುವ ಹಂದಿಯ ಜೊತೆ ಗುದ್ದಾಡಿದಂತೆ , ನಮಗೂ ಕೆಸರಾಗುತ್ತದೆ. ಜ್ಞಾನಿಗಳ ಜತೆ  ಸೋತರೂ  ಪರವಾಗಿಲ್ಲ ಅದು ಶ್ರೀಗಂಧದ ಜೊತೆ ಗುದ್ದಾಡಿದಂತೆ, ಇದೊಂದು ಪುಣ್ಯ ಭಾವ,  ನಿಮ್ಮ ಗುರಿಯ ಕಡೆಗೆ ಹೆಜ್ಜೆ ಇಡಿ,  ಮೂರ್ಖ ಶಿಖಾಮಣಿ ಮಾತಿಗೆ ಮಣಿಯ ಬೇಡಿ.

Advertisement

Advertisement

ಇಂದು ಮಾನವ ಭಾನುವಾರ ಯಾರಾದರೂ ಒಬ್ಬರು ಬಂದು ನಿಮ್ಮ ಮನಸ್ಸನ್ನು ಡಿಸ್ಟರ್ಬ್ ಮಾಡುತ್ತಾರೆ , ನೀವು ಚೆನ್ನಾಗಿರುವುದು ನೀವು ಸಾಧಿಸುತ್ತಿರುವುದು ಅವನಿಗೆ ಇಷ್ಟವಿರುವುದಿಲ್ಲ, ನಿಮ್ಮ ಮನೆಯಲ್ಲಿ ನೀವು ನೆಮ್ಮದಿಯಿಂದ ಇರುತ್ತೀರಿ ಅದನ್ನು ಸಹಿಸದೆ   ಹಾಳು ಮಾಡಲು ಮೂರ್ಖ ಶಿಖಾಮಣಿಗಳು ಬಂದು ಮನಸ್ಸನ್ನು ಹಾಳು ಮಾಡಲು ಯತ್ನಿಸುತ್ತಾರೆ ,  ಕೆಲವು ಸಮಯ ನಮ್ಮ ದೃಷ್ಟಿಕೋನವನ್ನೆ ಬದಲಾಯಿಸಿ ಅವರ ಜೊತೆ ಬಡಿದಾಡಿಕೊಂಡು ಇದ್ದು ಬಿಡುತ್ತೇವೆ, ಆ ತಪ್ಪನ್ನು ಮಾಡಬೇಡಿ ಅವನ ಮಾತುಗಳನ್ನು ನಿರ್ಲಕ್ಷಿಸಿ, ನಿರ್ಲಕ್ಷಿಸು ಪದದ ಅರ್ಥ ಅವನು ನನ್ನೊಂದಿಗೆ ವಾದ ಮಾಡಲು ಕೂಡ ಯೋಗ್ಯವಲ್ಲದ ವ್ಯಕ್ತಿ ಎಂಬುದೇ ಇದರ ಅರ್ಥ.

ಮೂರ್ಖರ ಜೊತೆ ನಿಂದನೆಗೆ ಹೋಗಬೇಡಿ,  ಜಗಳಕ್ಕೆ ಹೋಗಬೇಡಿ,  ವಾದಕ್ಕೆ ಹೋಗಬೇಡಿ,  ಹೋಗಿದ್ದೇ ಆದಲ್ಲಿ ಮನಸ್ಸು ವಿಚಲಿತಗೊಂಡು,  ನಿಮ್ಮ ಕನಸುಗಳ ಗುರಿ ಛಿದ್ರ ಛಿದ್ರವಾಗುತ್ತದೆ, ಮನಸ್ಸಿನ  ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಇದೆಲ್ಲವನ್ನು ಬಿಟ್ಟು ಆರೋಗ್ಯದ ಕಡೆಗೆ,  ಶುಚಿ ರುಚಿಯ ಕಡೆಗೆ ಗಮನ ಕೊಡಿ,  ಆದಷ್ಟು ಊಟದ ಜೊತೆ ಬಿಸಿ ನೀರಿನ ಸೇವನೆ ಮಾಡಿ,ಸರಿಯಾದ ಸಮಯಕ್ಕೆ ಊಟ ಮಾಡಿ ,  ಧ್ಯಾನ ಮಾಡಿ,  ವಾಕ್ ಮಾಡಿ  ಎಂದು  ಹೇಳಿದ್ದಾರೆ.

 

ನಿಮ್ಮ ರಾಶಿಗಳ ಫಲ ಹೀಗಿದೆ

ಮೇಷ ರಾಶಿ : ಚಂದ್ರ ಉತ್ತರಾ ನಕ್ಷತ್ರದಲ್ಲಿದ್ದು,  ಸೂರ್ಯನು ರಾಹು ಪ್ರಭಾವದಲ್ಲಿ ರುವುದರಿಂದ ಭಾನುವಾರ ಇಡೀ ವಾರದ ಶಕ್ತಿಯೆಲ್ಲ ಒಂದೇ ದಿನ ಬಂದ ಹಾಗೆ , ಎಲ್ಲವನ್ನೂ ಸಾಧಿಸುತ್ತೀರಿ ಒಳ್ಳೆಯ ಹೆಸರು, ಗತ್ತು, ತೂಕ,  ಎಲ್ಲವನ್ನು ಸಾಧಿಸಿ ಕೊಳ್ಳುತ್ತೀರಾ,  ಆದರೆ ಮಧೋನ್ಮತ್ತರಾಗುತ್ತೀರಾ ಜಾಗೃತೆ. ನನ್ನದೇ ಎಲ್ಲವೂ ನನಗೆ ಗೊತ್ತಿದೆ ಎಂಬ ಭಾವ ಇರುತ್ತದೆ,  ಬಲ ಒಂದಷ್ಟು ತಗ್ಗಿ ನಡೆಯಬೇಕು .

ವೃಷಭ ರಾಶಿ : ಚೆನ್ನಾಗಿದೆ,  ಸ್ವಲ್ಪ ಸೋಮವಾರದ ತರ ಭಾನುವಾರ ಗಡಿಬಿಡಿ ಇರುತ್ತದೆ, ಇಲ್ಲದ ವಿಚಾರಗಳಿಗೆ ತೊಳಲಾಟ ಮಾಡಿಕೊಳ್ಳುತ್ತೀರಿ , ಆ ವಿಚಾರಗಳನ್ನು ನಿರ್ಲಕ್ಷಿಸಿ .

ಮಿಥುನ ರಾಶಿ: ಪರವಾಗಿಲ್ಲ, ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ , ರಾಹು ಪ್ರಭಾವವಿರುವುದರಿಂದ ನಿಮಗೆ ಥ್ರೋಟ್ ಇನ್ಫೆಕ್ಷನ್,  ವಾಟರ್ ಇನ್ಫೆಕ್ಷನ್ , ಉಸಿರಾಟದ ತೊಂದರೆ ಇರುತ್ತದೆ, ಶನಿ ವಕ್ರ ವಿರುವುದರಿಂದ ವಯಸ್ಸಾದವರ  ಆರೋಗ್ಯದ ಬಗ್ಗೆ, ಬುಧ ವಕ್ರ ವಾಗಿರುವುದರಿಂದ ಚಿಕ್ಕ  ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಿ,  ಹದಿನಾರರಿಂದ ಇಪ್ಪತ್ತು ವಯಸ್ಸಿನವರೆಗಿನ ಮಕ್ಕಳ ಬಗ್ಗೆ ಜಾಗ್ರತೆ, ಮಧ್ಯ  ವಯಸ್ಕರರಿಗೆ ಪರವಾಗಿಲ್ಲ ಆದರೆ ಗುರು ವಕ್ರ ವಾಗಿರುವುದರಿಂದ ಅವರ  ಮೇಲು ಪ್ರಭಾವವಿರುತ್ತದೆ.

ಈ ವಿಧಾನವನ್ನು ಎಲ್ಲರೂ ಕೂಡ ಅನುಸರಿಸಬಹುದು.
ಒಂದು ಸ್ಪೂನ್ ಹರಳೆಣ್ಣೆ ಒಂದು ಸ್ಪೂನ್ ಕೊರಿ ಎಣ್ಣೆ ಒಂದು ಚಿಟಿಕೆ ಉಪ್ಪು ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ ಅದನ್ನು ಹತ್ತು ನಿಮಿಷ ಬಾಯಲ್ಲಿ ಇಟ್ಟುಕೊಂಡು ಮುಕ್ಕಳಿಸಿ, ಇದರಿಂದ ಜಠರದಲ್ಲಿರುವ ಎಲ್ಲ ದೋಷಗಳು ನಿವಾರಣೆಯಾಗುತ್ತದೆ , ಅಲ್ಲದೆ ವಾತ ಪಿತ್ತ ಕಫದಂಥ ಎಲ್ಲ ಸಮಸ್ಯೆಗಳು ಕೂಡ ದೂರಾಗುತ್ತವೆ,

ಕರ್ಕಾಟಕ ರಾಶಿ: ಚುರುಕಿನ ದಿನ , ಎಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುವ ಶಕ್ತಿ ಇರುವಂತಹ ದಿನ, ಅದ್ಭುತವಾದ ದಿನ.

ಸಿಂಹ ರಾಶಿ:ಏನಾದರೂ ಪ್ರಯೋಗಾತ್ಮಕವಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೆ ಇದು ಅದ್ಭುತವಾದಂತಹ ದಿನ , ಯಶಸ್ಸು ಕಟ್ಟಿಟ್ಟ ಬುತ್ತಿ .

ಕನ್ಯಾ ರಾಶಿ : ಏನೋ ಒಂದು ಗಲಿಬಿಲಿ,  ತಲೆಭಾರ,  ಸುತ್ತಾಟ,  ಗೊಂದಲದ ಭಾವ , ಆದರೆ ಎಲ್ಲವೂ ಸರಾಗವಾಗಿ ಸಾಗುತ್ತದೆ.

 

ಇಂದು ಅಷ್ಟಮಿ ಆಗಿರುವುದರಿಂದ ಎಲ್ಲರೂ ಮನೆಯ ಹೊಸ್ತಿಲ ಮುಂದೆ ದೀಪವನ್ನು ಹಚ್ಚಿ ಒಳ್ಳೆಯದಾಗುತ್ತದೆ .

ತುಲಾ ರಾಶಿ : ಚೆನ್ನಾಗಿದೆ ದಿನದ ಆರಂಭದಲ್ಲಿ ಸ್ವಲ್ಪ ಟೆನ್ಷನ್ ಇದ್ದರೂ ಮಧ್ಯಾಹ್ನದ ವೇಳೆಗೆ ಎಲ್ಲ ಸರಿ ಹೋಗುತ್ತದೆ ,

ವೃಶ್ಚಿಕ ರಾಶಿ : ಚೆನ್ನಾಗಿದೆ ಅಧಿಕಾರದ ದಿನ,  ಗತ್ತಿನ ದಿನ, ನೆಮ್ಮದಿಯ  ದಿನ, ಸೂರ್ಯ ರಾಹು ಸಾರದಲ್ಲಿ ಇತ್ತು ರಾಹು ಅಷ್ಟಮದಲ್ಲಿ ಇರುವುದರಿಂದ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುವ ಸಂಭವವಿರುತ್ತದೆ, ಸ್ವಲ್ಪ ಹೊರಗಡೆ ಹೋಗುವುದನ್ನು ಕಡಿಮೆ ಮಾಡಿ ಜಾಗೃತವಾಗಿರಿ,

ಧನಸ್ಸು ರಾಶಿ : ಚೆನ್ನಾಗಿದೆ,  ಭಾಗ್ಯ ಅಧಿಪತಿ ಸಪ್ತಮದಲ್ಲಿ ಆ ಭಾಗ್ಯ ಸ್ಥಾನದಲ್ಲಿ ಚಂದ್ರ ಸೂರ್ಯನ ಸಾರದಲ್ಲಿ ಇರುವುದರಿಂದ ಬಹುದೊಡ್ಡ ಯೋಜನೆ ರೂಪರೇಷೆಗಳನ್ನು ಮಾಡುತ್ತಿದ್ದರೆ ಮುಂದಕ್ಕೆ ಹೆಜ್ಜೆ ಹಿಡಿ,  ಸ್ವಲ್ಪ ನಿಧಾನವಾಗುತ್ತದೆ,  ಮನೆಯಲ್ಲಿ ಶಿವಪಂಚಾಕ್ಷರಿ ಸ್ತೋತ್ರವನ್ನು ಪಠಿಸಿ ಒಳ್ಳೆಯದಾಗುತ್ತದೆ

 

ಮಕರ ರಾಶಿ :  ಸೂರ್ಯನ ಸಾರದಲ್ಲಿ ಚಂದ್ರ ಇರುವುದರಿಂದ  ಗೊತ್ತಿರುವ ಹಿರಿಯರ ಜೊತೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ ,ಒಂದು ರೀತಿಯ ದರ್ಪದ ಜೀವನ ಅಂದುಕೊಂಡ ಊಟ,  ಬಟ್ಟೆ,  ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುತ್ತದೆ, ಹಬ್ಬ ಆದಂತಹ ದಿನ.

ಕುಂಭ ರಾಶಿ  : ಚಂದ್ರ ಸೂರ್ಯನ ಸಾರದಲ್ಲಿ ಇರುವುದರಿಂದ  ಒಂದು ರೀತಿಯ ತಳಮಳ  ಟೆನ್ಷನ್ ಇರುತ್ತದೆ , ಸುತ್ತಾಟ,  ಎಲ್ಲಾ ಜವಾಬ್ದಾರಿ ನಿಮ್ಮ ಮೇಲೆ ಇರುವಂತಹ ಪ್ರಭಾವವಿರುತ್ತದೆ , ನಿಭಾಯಿಸಿಕೊಂಡು ಹೋಗುವಂತಹ ಅದ್ಭುತವಾದ ದಿನ.

ಮೀನ ರಾಶಿ :  ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಥವಾ ಸ್ವಂತ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ವಿಶೇಷವಾದ ಫಲ ವೃದ್ಧಿ ಯನ್ನು ನೋಡುವಂತಹ ಅದ್ಭುತವಾದ ದಿನ.

Advertisement
Share this on...