ಈ ಎರಡು ರಾಶಿಯವರು ಇಂದು ದುರ್ಗೆಯ ಪೂಜೆ ಮಾಡಿದರೆ ಒಳಿತು…

in ಜ್ಯೋತಿಷ್ಯ 55 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಸಪ್ತಮಿ ತಿಥಿ, ಶತಭಿಷ ನಕ್ಷತ್ರ, ವಿಷ್ಕುಂಭ ಯೋಗ, ಜೂನ್ 12 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಜೊತೆಗೆ ಮಕ್ಕಳು ಆರೋಗ್ಯವಾಗಿರಲು ಏನನ್ನು ಸೇವಿಸಬೇಕು ಎಂಬ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡಿದ್ದಾರೆ.  (ಅಮೃತ ಕಾಲ 10: 56 ನಿಮಿಷದಿಂದ 12:41 ನಿಮಿಷದವರೆಗೆ ಇರುತ್ತದೆ)
ಬ್ರಾಹ್ಮಿ ಚೂರ್ಣ ಸೇವಿಸಿ
ಮಕ್ಕಳಿಗೆ ಪ್ರತಿನಿತ್ಯ ಊಟದಲ್ಲಿ ಒಂದು ಸ್ಪೂನ್ ಆದರೂ ತುಪ್ಪ, ಮೊಸರು ಸೇವಿಸಲು ಕೊಡಿ. ಅಂಗಡಿಯ ಮೊಟ್ಟೆ ಕೃತಕ. ಆದ್ದರಿಂದ ಅದನ್ನು ತಿನ್ನಿಸುವ ಅಭ್ಯಾಸವಿಟ್ಟುಕೊಂಡಿರುವವರು ಇಂದೇ ನಿಲ್ಲಿಸಿ. ಬದಲಿಗೆ ನಾಟಿ ಕೋಳಿಯ ಮೊಟ್ಟೆ ಕೊಡಿ. ಅದಕ್ಕೆ ಈಗಿನ ಮಕ್ಕಳಿಗೆ ಎಷ್ಟೇ ಮೊಟ್ಟೆ ಸೇವಿಸಿದರೂ ಶಕ್ತಿ ಬರುವುದಿಲ್ಲ. ಆದರೆ ಚಿಂತಿಸಬೇಡಿ, ಅವರಿಗೆ ಶಕ್ತಿ ತುಂಬಿಸುವುದಕ್ಕೆ ಬ್ರಹ್ಮಶಂಕರ ಇದ್ದು, ಇದರಲ್ಲಿ ಬ್ರಾಹ್ಮಿ ಇದೆ. ತಲೆ ತಲೆಮಾರುಗಳಿಂದಲೂ ನಮ್ಮ ಹಿರಿಯರು ಈ ಬ್ರಾಹ್ಮಿ ಚೂರ್ಣ ತಿನ್ನಿಸುತ್ತಿದ್ದರು. ನಿಮಗೆ ಇದನ್ನು ಕೊಳ್ಳುವ ಶಕ್ತಿ ಇಲ್ಲವಾದಲ್ಲಿ ಶುದ್ಧ ಹಸುವಿನ ಹಾಲು ಕೊಡಿ.

Advertisement

 

Advertisement

Advertisement

ನಿಮ್ಮ ರಾಶಿ ಫಲಾಫಲಗಳು ಹೀಗಿವೆ …
ಮೇಷ: ದುರಾಲೋಚನೆ, ದೋಚಿಕೊಳ್ಳುವ ಬುದ್ಧಿ ಬರುತ್ತದೆ. ಆದರೆ ಎಚ್ಚರಿಕೆ ಇರಲಿ. ಇಂತಹುದರ ಕಡೆ ಗಮನ ಕೊಡುವುದನ್ನು ಬಿಟ್ಟು ಒಳ್ಳೆಯದನ್ನು ಮಾಡಲು ಆಲೋಚಿಸಿ. ದಿನಕ್ಕೆ ಒಂದು ಒಳ್ಳೆಯದನ್ನು ಮಾಡಿದರೂ ತಿಂಗಳಿಗೆ 30 ಆಗುತ್ತದೆ. ಆದ್ದರಿಂದ ಒಳ್ಳೆ ಆಲೋಚನೆ, ಒಳ್ಳೆ ದಾರಿಯಲ್ಲಿ ಹೋಗಿ.
ವೃಷಭ: ಕಬಳಿಸುವುದಕ್ಕೆ ನೋಡುತ್ತೀರಿ. ನಂದು, ನಾನು ಎನ್ನುವ ಪ್ರಭಾವ ಇರುತ್ತದೆ. ಸಂಗಾತಿ ವಿಚಾರದಲ್ಲಿ ಜಗಳ ಆಗಬಹುದು. ಅದು ವಿಚ್ಛೇದನದ ಹಂತಕ್ಕೂ ಹೋಗುತ್ತದೆ. ಅನುಮಾನದ ಬುದ್ಧಿಯೂ ಇರುತ್ತದೆ.
ಮಿಥುನ: ಇಂದು ರಾಜಕೀಯ, ಸಿಬಿಐ, ಸಿಐಡಿ, ಕೆಮಿಕಲ್, ಅಮದು, ರಫ್ತು, ತಾಂತ್ರಿಕ ವೃತ್ತಿ ಒಟ್ಟಿನಲ್ಲಿ ಬುದ್ಧಿ ಉಪಯೋಗಿಸಿ ಕೆಲಸ ಮಾಡುವ ಕೆಲಸದಲ್ಲಿ ಪ್ರಗತಿ ಕಾಣಬಹುದು.
ಕರ್ಕಾಟಕ: ಏನೋ ಒಂದು ರೀತಿಯಲ್ಲಿ ಭಯ ಇರುತ್ತದೆ. ಆದ್ದರಿಂದ ಓಂ ದುಂ ದುರ್ಗಾಯೇ ನಮಃ ಜಪವನ್ನು 170 ಬಾರಿ ಪಠಿಸಿ. ಆತಂಕ, ಭೀತಿ ದೂರ ಹೋಗುತ್ತದೆ. ಮನೆಯಲ್ಲಿ ಚಿಕ್ಕ ದೇವಿ ವಿಗ್ರಹವಿದ್ದರೆ ಅರಿಶಿನದ ಅಭಿಷೇಕ ಮಾಡಿ, ಅರಿಶಿನಕ್ಕೆ ಸ್ವಲ್ಪ ತೀರ್ಥ ಹಾಕಿ, ತಿಲಕ ಹಚ್ಚಿ ಒಳ್ಳೆಯದಾಗುತ್ತದೆ.

Advertisement

 


ಸಿಂಹ: ಕೊಡುವ-ತೆಗೆದುಕೊಳ್ಳುವ ವ್ಯವಹಾರದಲ್ಲಿ ಜಾಗ್ರತೆಯಿರಲಿ. ಅಡ್ಡದಾರಿ, ಅಡ್ಡಚಿಂತೆ ಬರುತ್ತದೆ. ಆದ್ದರಿಂದ ನಿಮ್ಮ ಬಳಿ ದುಡ್ಡಿದ್ದರೆ ಅಲ್ಲಿ ಇಲ್ಲಿ ಹೂಡದೆ ಪೋಸ್ಟ್ ಆಫೀಸ್’ನಲ್ಲಿ ಡೆಪಾಸಿಟ್ ಅಥವಾ ಭೂಮಿ ಕೊಳ್ಳಲು ಖರ್ಚು ಮಾಡಿ. ಅಡ್ಡ ದಾರಿ, ಅಡ್ಡ ಸಂಪಾದನೆ ಬೇಡ.
ಕನ್ಯಾ: ಸ್ವಲ್ಪ ಅಹಂಕಾರ, ವಿಪರೀತ ಕೋಪ, ಸುತ್ತುವುದು, ಮಾಡುವುದು ಪ್ರಭಾವ ಇರುತ್ತದೆ. ಆದರೂ ಇಂದು ದಿನ ಚೆನ್ನಾಗಿದೆ. ಪ್ರಯತ್ನದಲ್ಲಿ ವಿಜಯ ಸಿಗುತ್ತದೆ.
ತುಲಾ: ಒಂದು ರೀತಿ ತಳಮಳ, ಒಂದು ರೀತಿ ಗೆಲುವು ಇರುತ್ತದೆ. ಪ್ರಗತಿ ಕಾಣಬಹುದು. ಆದರೂ ಇವತ್ತಿಗೆ ಏನು ಸಿಕ್ಕಿದೆ ಅದರಲ್ಲಿ ತೃಪ್ತಿಪಡಿ. ತೀರಾ ಜಡ್ಜ್ ಮೆಂಟ್, ವೈರಾಗ್ಯ, ಎಕ್ಸ್ ಪೆರಿಮೆಂಟ್’ಗೆ ಹೋಗಬೇಡಿ.
ವೃಶ್ಚಿಕ: ರಾಹುವಿನ ಪ್ರಭಾವ ಇರುವುದರಿಂದ ತಾಯಿ ತಂದೆ, ಮನೆಯ ಹಿರಿಯರ ಆರೋಗ್ಯದ ಕಡೆ ಗಮನವಿಡಿ.

ಧನಸ್ಸು: ತುಂಬಾ ಬಲ, ತುಂಬಾ ಶಕ್ತಿ ತುಂಬಾ ದಿನ ನಡೆಯುವುದಿಲ್ಲ. ನಿಮಗೆ ಮೀರಿದ್ದನ್ನು ತಯಾರಿಸುತ್ತದೆ ಪ್ರಕೃತಿ. ಆದ್ದರಿಂದ ಎಚ್ಚರದಿಂದಿರಿ.
ಮಕರ: ಸ್ವಲ್ಪ ಕುಟುಂಬ ವಿಚಾರದಲ್ಲಿ ಎಳೆದಾಟವಾದರೂ, ಉದ್ಯೋಗದಲ್ಲಿ ಪರಿಶ್ರಮದಿಂದ ಯಶಸ್ಸು ಪಡೆಯುವಿರಿ.
ಕುಂಭ: ಯೂರಿನರಿ, ವಾಟರ್ ಇನ್ ಫೆಕ್ಷನ್ ಆಗುವ ಸಂಭವವಿದೆ. ಹಸ್ತಾಮಮೃತ ಉಪಯೋಗಿಸಿ. ಹುಷಾರು, ಜಾಗ್ರತೆಯಿಂದಿರಿ.
ಮೀನಾ: ಓಡಾಡದ ಒತ್ತಡ, ಏನೋ ಒಂದು ಭೀತಿ ಇರುತ್ತದೆ. ಆದ್ದರಿಂದ ದುರ್ಗಾ ಪೂಜೆ ಮಾಡಿ. ಹಸುವಿಗೆ ಎರಡು ಬಾಳೆಹಣ್ಣು ತಿನ್ನಿಸಿ. ಒಳ್ಳೆಯದಾಗುತ್ತದೆ.

Advertisement
Share this on...