ನಟನೆ ಅಷ್ಟಾಗಿ ಕೈ ಹಿಡಿಯದ ಸಮಯದಲ್ಲಿ ರವಿಶಂಕರ್ ರವರ ಬೆಂಬಲಕ್ಕೆ ನಿಂತಿದ್ಯಾರು ಗೊತ್ತಾ ?

in ಮನರಂಜನೆ/ಸಿನಿಮಾ 92 views

ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಬಹಳ ದೊಡ್ಡ ಸಾಧನೆ ಮಾಡಬೇಕೆಂದರೆ ದೃಢ ನಿರ್ಧಾರ ಛಲ, ಪ್ರತಿಭೆ ಇರಬೇಕು. ಇದರ ಜೊತೆಗೆ ಅಗಾಧ ಪರಿಶ್ರಮ ಹಾಗೂ ಸಹನೆ ಕೂಡ ತುಂಬಾ ಬೇಕು. ಹೌದು, ಒಂದು ಉತ್ತಮ ಅವಕಾಶಕ್ಕಾಗಿ ಚಿತ್ರರಂಗದಲ್ಲಿ 25 ವರ್ಷ ಕಾಯ್ದರು ಈ ನಟ. ಅವರು ಬೇರಾರೂ ಅಲ್ಲ ನಟ ಸಾಯಿಕುಮಾರ್ ಅವರ ಸಹೋದರ ಮಲ್ಟಿ ಟ್ಯಾಲೆಂಟೆಡ್ ನಟ ರವಿಶಂಕರ್.  ರವಿಶಂಕರ್ ಅವರು 1986 ರಲ್ಲೇ ತೆಲುಗು ಚಿತ್ರರಂಗದಲ್ಲಿ ಮುಖ್ಯ ನಟರಾಗಿ ಗುರುತಿಸಿಕೊಂಡಿದ್ದರು. ನಂತರ 1991 ರಲ್ಲಿ ‘ಹಳ್ಳಿ ಕೃಷ್ಣ ಡೆಲ್ಲಿ ರಾಧಾ’ ಸಿನಿಮಾ ಇವರ ಮೊದಲ ಕನ್ನಡ ಚಿತ್ರವಾಗಿತ್ತು. ನಟನೆಯ ಜೊತೆಗೆ ಡಬ್ಬಿಂಗ್ ನಲ್ಲೂ ಆಸಕ್ತಿ ವಹಿಸಿದ ರವಿಶಂಕರ್ ರವರಿಗೆ ನಟನೆ ಅಷ್ಟಾಗಿ ಕೈ ಹಿಡಿಯದ ಕಾರಣ ಕೆಲವು ವರ್ಷ ಕೇವಲ ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಾತ್ರ ಕೆಲಸ ಮಾಡಿದರು. ಸುಮಾರು 3 ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ ನಟ ರವಿಶಂಕರ್. 2009 ರಲ್ಲಿ ತೆರೆಕಂಡ ನಾಯಕಿ ಪ್ರಧಾನವಾದ ಸೂಪರ್-ಡೂಪರ್ ಹಿಟ್ ಆದ ‘ಅರುಂಧತಿ’ ಸಿನಿಮಾ ರವಿಶಂಕರ್ ರವರಿಗೆ ದೊಡ್ಡ ಬ್ರೇಕ್ ನೀಡಿತ್ತು.

Advertisement

Advertisement

ಆ ಚಿತ್ರದಲ್ಲಿನ ಒಂದು ಡೈಲಾಗ್ ನ ಡಬ್ಬಿಂಗ್ ನಿಂದಾಗಿ ಪ್ರೇಕ್ಷಕರ ಪ್ರಶಂಸೆ ಪಡೆದುಕೊಂಡರು ರವಿಶಂಕರ್. ಆದರೆ ತೆಲುಗು ಚಿತ್ರರಂಗ ಇವರನ್ನು ಅಷ್ಟೇನು ಗುರುತಿಸಲಿಲ್ಲ. ಆದರೆ ನಂತರ ಇವರಿಗೆ ಕೈಬೀಸಿ ಕರೆದದ್ದು ನಮ್ಮ ಕನ್ನಡ ಚಿತ್ರರಂಗ.  ಇವರ ಪ್ರತಿಭೆಯನ್ನು ಗುರುತಿಸಿದ ಕಿಚ್ಚ ಸುದೀಪ್ ರವರು ತಮ್ಮ ‘ಕೆಂಪೇಗೌಡ’ ಚಿತ್ರದಲ್ಲಿ ವಿಲನ್ ಪಾತ್ರ ನೀಡಿದರು. ಈ ಚಿತ್ರದಲ್ಲಿ ಆರ್ಮುಗಂ ಎಂಬ ವಿಲನ್ ಆಗಿ ನಟಿಸಿ ಸುದೀಪ್ ರವರ ಭರವಸೆ ಸುಳ್ಳಾಗಿಸದೆ ಪಾತ್ರಕ್ಕೆ ಜೀವ ತುಂಬಿ ಬೇಷ್ ಎನ್ನಿಸಿಕೊಂಡರು ನಟ ರವಿಶಂಕರ್. ಇವರು ಮೂಲತಃ ತೆಲುಗಿನವರಾದರು ಕನ್ನಡವನ್ನು ಹಾಗೂ ಕನ್ನಡಿಗರನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ. ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ್ದು ಕರ್ನಾಟಕ ಆದ್ದರಿಂದ ಎಂದೂ ನಾನು ಕನ್ನಡಿಗರಿಗೆ ಚಿರಋಣಿ ಎಂದು ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Advertisement

Advertisement

ಇನ್ನು ಇವರ ಅಭಿಮಾನಿಗಳು ಅಖಿಲ ಕರ್ನಾಟಕ ಸಕಲಕಲಾವಲ್ಲಭ ರವಿಶಂಕರ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿದ್ದಾರೆ. ಒಬ್ಬ ನಾಯಕ ನಟನಿಗೆ ಅಭಿಮಾನಿ ಸಂಘಗಳಿರುವುದು ಮಾಮೂಲಿಯಾದ ಸಂಗತಿ. ಆದರೆ ಒಬ್ಬ ಖಳನಟನಿಗೆ ಅಭಿಮಾನಿ ಬಳಗವಿರುವುದು ತುಂಬಾ ಅಪರೂಪ. ಇನ್ನೂ ರವಿಶಂಕರ್ ವರ ಮಗ ಅದ್ವೈ ಶಂಕರ್ ರವರನ್ನು ನಟನಾಗಿ ಮಾಡಲು ಹೊರಟಿದ್ದಾರೆ ರವಿಶಂಕರ್. ಈ ಚಿತ್ರಕ್ಕೆ ರವಿಶಂಕರ್ ಅವರು ನಿರ್ದೇಶಕರು ಎಂಬುದು ವಿಶೇಷವಾದ ಸಂಗತಿ.

– ಸುಷ್ಮಿತಾ

Advertisement
Share this on...