ಬಾಲ್ಯದ ಫೋಟೋದಂತೆ ಕುಳಿತು ಪೋಸ್ ನೀಡಿ ನೀವೂ ಹಾಗೆ ಫೋಟೋ ತೆಗೆಸಿಕೊಳ್ಳಿ ಎಂದ ಕನ್ನಡದ ಈ ಖ್ಯಾತ ನಟ ಯಾರು…?

in ಮನರಂಜನೆ/ಸಿನಿಮಾ 82 views

ನಾವು ಎಷ್ಟೋ ಬಾರಿ ಬಾಲ್ಯ ಮತ್ತೆ ಬರಬಾರದೆ ಎಂದುಕೊಂಡಿರುವುದುಂಟು. ಈಗಿನ ಒತ್ತಡ, ಕಷ್ಟಗಳು, ಜೀವನದ ಜಂಜಾಟವನ್ನು ನೆನೆದರೆ ಬಾಲ್ಯವೇ ಎಷ್ಟೊ ಚೆಂದ ಎಂದುಕೊಳ್ಳುವುದು ಸಹಜ. ಏನೂ ಅರಿಯದ ವಯಸ್ಸು ಅದು. ಆಟವಾಡುತ್ತಾ, ಕಣ್ಣ ತುಂಬ ನಿದ್ರೆ ಮಾಡುತ್ತಾ ಎಲ್ಲರ ಪ್ರೀತಿ ಪಡೆಯುತ್ತಾ ಇದ್ದ ಆ ಬಾಲ್ಯ ಮತ್ತೆ ಬರುವುದು ಅಸಾಧ್ಯ ಎಂದು ತಿಳಿದಿದ್ದರೂ ಬಾಲ್ಯ ಮತ್ತೆ ಬರಬಾರದೆ ಎಂದು ಪ್ರತಿಯೊಬ್ಬರೂ ಅಂದುಕೊಳ್ಳುವುದುಂಟು. ಬೆಳೆದು ದೊಡ್ಡವರಾದಾಗ ಹಳೆಯ ಫೋಟೋಗಳನ್ನು ನೋಡುತ್ತಿದ್ದರಂತೂ ಆ ದಿನಗಳಿಗೆ ವಾಪಸ್ ಹೋಗುತ್ತೇವೆ. ಮತ್ತೆ ಆ ಹ್ಯಾಂಗೋವರ್​ನಿಂದ ಹೊರ ಬರುವುದು ಬಹಳ ಕಷ್ಟ. ನಾವು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಫೋಟೋಗಳನ್ನು ನೋಡುತ್ತಿರುತ್ತೇವೆ. ಕೆಲವರು ತಾವು ಬಾಲ್ಯದಲ್ಲಿದ್ದಾಗ ತೆಗೆಸಿಕೊಂಡ ಫೋಟೋವನ್ನು ರೀಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಾರೆ. ಅದೇ ಸ್ಥಳ, ಅದೇ ಬಣ್ಣದ ಬಟ್ಟೆ, ಅದೇ ರೀತಿಯ ಪೋಸ್ ನೀಡುತ್ತಾ ಕ್ಲಿಕ್ಕಿಸಿರುವ ಸಾಕಷ್ಟು ಫೋಟೋಗಳನ್ನು ನೋಡಿರುತ್ತೇವೆ. ಕನ್ನಡದ ಖ್ಯಾತ ನಟರೊಬ್ಬರು ಕೂಡಾ ಇದೀಗ ತಮ್ಮ ಬಾಲ್ಯದ ಫೋಟೋವನ್ನು ರೀಕ್ರಿಯೇಟ್ ಮಾಡಲು ಪ್ರಯತ್ನಿಸಿದ್ದಾರೆ.

Advertisement

Advertisement

ಅವರು ಬೇರ್ಯಾರೂ ಅಲ್ಲ. ಡಾ. ವಿಠ್ಠಲ್ ರಾವ್..ವೆರಿ ಫೇಮಸ್ ಇನ್ ಸರ್ಜರಿ ಅ್ಯಂಡ್ ಬರ್ಜರಿ. ಈ ಡೈಲಾಗ್ ಕೇಳುತ್ತಿದ್ದಂತೆ ನಿಮಗೆ ಅವರು ಖ್ಯಾತ ಹಾಸ್ಯನಟ ರವಿಶಂಕರ್ ಗೌಡ ಎಂದು ಗೊತ್ತಾಗಿರುತ್ತದೆ. ರವಿಶಂಕರ್ ಗೌಡ ಮೂರು ದಿನಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ವರ್ಷದ ಮಗುವಾಗಿದ್ದಾಗ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆ ಮತ್ತೆ ಅದೇ ರೀತಿ ಕೂತು, ‘ನೀವೂ ಕೂಡಾ ಇಂತಹ ಫೋಟೋ ಹಾಕಿ ಪ್ಲೀಸ್​. ಆಗ ಪಾರ್ಲೆ ಜಿ..ಈಗ ತರ್ಲೆ ಜಿ’ ಎಂದು ಬರೆದುಕೊಂಡಿದ್ದಾರೆ.

Advertisement

ರವಿಶಂಕರ್ ಗೌಡ ಮೂಲತ: ಮಂಡ್ಯದವರು. ನಿಂಗಪ್ಪ, ಭಾಗ್ಯಮ್ಮ ದಂಪತಿಯ ಪುತ್ರ ರವಿಶಂಕರ್. ಬಾಲ್ಯದಲ್ಲಿ ನಾಟಕ, ಸಿನಿಮಾದಲ್ಲಿ ಆಸಕ್ತಿ ಇದ್ದ ರವಿಶಂಕರ್ ರಂಗಭೂಮಿ ಸೇರಿದರು. ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ರವಿಶಂಕರ್​​​ 2000 ರಲ್ಲಿ ಈಟಿವಿಯಲ್ಲಿ ಪ್ರಸಾರವಾದ ‘ಸಿಲ್ಲಿ ಲಲ್ಲ’ ಧಾರಾವಾಹಿ ಮೂಲಕ ಬೆಳಕಿಗೆ ಬಂದರು. ಈ ಧಾರಾವಾಹಿಯ ಡಾ. ವಿಠ್ಠಲ್ ರಾವ್ ಪಾತ್ರ ಹಾಗೂ ಅವರ ಡೈಲಾಗ್​​​ಗಳಂತೂ ಪ್ರೇಕ್ಷಕರನ್ನು ಸಖತ್ ನಕ್ಕು ನಲಿಸಿತ್ತು. ಈ ಧಾರಾವಾಹಿ ನೋಡಲು ಕಿರುತೆರೆ ಪ್ರಿಯರು ಕಾಯುತ್ತಿದ್ದರು. ಅಷ್ಟರ ಮಟ್ಟಿಗೆ ರವಿಶಂಕರ್ ಪ್ರೇಕ್ಷಕರನ್ನು ಸೆಳೆದಿದ್ದರು. ನಂತರ ಬೆಳ್ಳಿ ತೆರೆಯಲ್ಲಿ ಕೂಡಾ ಅವರಿಗೆ ಅವಕಾಶ ಒಲಿದು ಬಂತು. ‘ಪಯಣ’ ಚಿತ್ರದ ಮೂಲಕ ಸಿನಿಕರಿಯರ್ ಆರಂಭಿಸಿದ ರವಿಶಂಕರ್​ ನಂತರ ಮತ್ತೆ ಮುಂಗಾರು, ಜೋಗಯ್ಯ, ಸ್ನೇಹಿತರು, ದೇವರಾಣೆ, ಕ್ರೇಜಿಸ್ಟಾರ್, ಜೈಲಲಿತ, ಜಾನ್ ಜಾನಿ ಜನಾರ್ಧನ್, ಸುಂದರಾಂಗ ಜಾಣ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು.

Advertisement

ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಪುತ್ರಿ ಸಂಗೀತ ಕೈ ಹಿಡಿದ ರವಿಶಂಕರ್​​ಗೆ ಸೂರ್ಯ ತೇಜಸ್ವಿ, ಶೌರ್ಯ ಯಶಸ್ವಿ ಎಂಬ ಇಬ್ಬರು ಮಕ್ಕಳಿದ್ದಾರೆ. ರವಿಶಂಕರ್ ನಟ ಮಾತ್ರವಲ್ಲ ಒಳ್ಳೆ ಗಾಯಕ ಕೂಡಾ. ಸದ್ಯಕ್ಕೆ ರವಿಶಂಕರ್ ಅಭಿನಯದ ‘ಯುವರತ್ನ’ ಚಿತ್ರ ಬಿಡುಗಡೆಯಾಗಬೇಕಿದೆ. ಅಂದ ಹಾಗೆ ರವಿಶಂಕರ್ ಹೇಳಿರುವಂತೆ ನಿಮ್ಮ ಬಾಲ್ಯದ ಫೋಟೋವನ್ನು ರೀಕ್ರಿಯೇಟ್ ಮಾಡುವುದನ್ನು ಮರೆಯಬೇಡಿ.

 

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...