ಈ ರಾಶಿಯವರಿಗೆ ಮಾತ್ರವಲ್ಲ, ನಾನಾ ಸಮಸ್ಯೆಗಳಿಗೂ ಸಂಜೀವಿನಿ ‘ತುಳಸಿ’ !

in ಜ್ಯೋತಿಷ್ಯ 69 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಶುಕ್ಲ ಪಕ್ಷದ ಷಷ್ಠಿ ತಿಥಿ, ಧನಿಷ್ಠ ನಕ್ಷತ್ರ, ವೈಧೃತಿ ಯೋಗ, ರಜಕರಣ, ಜೂನ್ 11 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಇರುವುದಿಲ್ಲ, ಆದ್ದರಿಂದ ಅಶುಭ ವಾರ್ತೆಗಳನ್ನು ಕೇಳುವ ಸಾಧ್ಯತೆ ಹೆಚ್ಚಿರುತ್ತದೆ. ಪದೇ ಪದೇ ಅಪಘಾತ, ಗಾಯ ಆಗುತ್ತಿದ್ದರೆ ಇಂದು ಜಾಗ್ರತೆಯಿಂದ ಇರಿ. ಕಾಯಿಲೆ ಬೀಳುವವರಿಗೆ ಒತ್ತಡ ಜಾಸ್ತಿ ಇರುತ್ತದೆ. ಮಾನಸಿಕ ಸಮಸ್ಯೆ ಇರುವವರಿಗೆ, ಉಷ್ಣ ಪ್ರಭಾವದಿಂದ ಬಳಲುತ್ತಿರುವವರು ಅಂದರೆ ಪೈಲ್ಸ್, ಪಿಸ್ತೂಲ, ಡಯಾಲಿಸಿಸ್ ಸಮಸ್ಯೆ ಇರುವವರಿಗೆ ಇಂದು ಅವು ಉಲ್ಬಣವಾಗಬಹುದು. ಗಲಾಟೆ, ಗೋಜು, ಗೊಂದಲ ಆಗುವ ಪ್ರಭಾವ ಕಾಣಿಸುತ್ತಿರುವುದರಿಂದ ರಕ್ಷಣಾ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇಂದು ಎಚ್ಚರದಿಂದ ಇರಬೇಕು.

Advertisement

Advertisement

ಸಾವಿರಾರು ವೈರಸ್’ಗಳನ್ನು ತಡೆಯುತ್ತದೆ ತುಳಸಿ. ನಿಮ್ಮ ಮನೆ ಮುಂದೆ ತುಳಸಿ ಗಿಡ ಒಂದಿದ್ದರೆ, ಅದು ಸಾವಿರಾರು ವೈರಸ್’ಗಳನ್ನು ತಡೆದು ನಿಲ್ಲಿಸುತ್ತದೆ. ಆ ಶಕ್ತಿ ತುಳಸಿ ಗಿಡಕ್ಕಿದೆ. ತಲೆಯಲ್ಲಿ ಹೇನು ಇರುವವರು ಸಹ ಒಂದು ಬೊಗಸೆ ತುಳಸಿಯನ್ನು ಅರೆದು, ಆ ರಸವನ್ನು ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಒಂದಿಷ್ಟು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚಿ. ಆ ನಂತರ ಅರ್ಧ ಗಂಟೆ, ಮುಕ್ಕಾಲು ಗಂಟೆ ಬಿಟ್ಟು ಸ್ನಾನ ಮಾಡಿದರೆ ಒಳ್ಳೆಯದು. ಆ ತುಳಸಿ ಎಲೆಯ ರಸ ಹೇನುಗಳನ್ನು ಸಾಯಿಸುತ್ತದೆ. ಹೀಗೆ 30 ದಿನ ಮಾಡಿ ಸಾಕು.

Advertisement

 

Advertisement

 

‘ಹಿತ್ತಲ ಗಿಡ ಮದ್ದಲ್ಲ’ ಎನ್ನುವ ಹಾಗೆ ನಮ್ಮ ಜೊತೆಯಲ್ಲಿರುವ ವ್ಯಕ್ತಿಗೆ ಬಿಟ್ಟು ಇನ್ಯಾರಿಗೊ ಧನ್ಯವಾದಗಳನ್ನು ಹೇಳುತ್ತೇವೆ. ನಮ್ಮವರ ಬಗ್ಗೆ ಗೊತ್ತಿರದೆ, ಇನ್ಯಾರದೊ ಜೊತೆ ವ್ಯವಹಾರ ಮಾಡುತ್ತೇವೆ. ನಮ್ಮ ಅಪ್ಪ-ಅಮ್ಮನಿಗೆ ಬಿಟ್ಟು ಇನ್ಯಾರಿಗೊ ಧನ್ಯವಾದಗಳನ್ನು ಹೇಳುತ್ತೇವೆ. ಆದ್ದರಿಂದ ಅಪ್ಪ ಎನ್ನುವ ಹಿತ್ತಲ ಗಿಡವನ್ನು ನೀವು ಬದುಕಿರುವಾಗಲೇ ಸಂಕ್ಷಿಸಿ, ಅವರಿಗೆ ಒಳ್ಳೆಯದನ್ನು ಮಾಡಿ. ಧೈರ್ಯ ಕುಸಿದಾಗ ಅಪ್ಪ, ಹಸಿವು ಇದ್ದಾಗ ಅಮ್ಮ, ಸುಖ ಹಂಚಿಕೊಳ್ಳುವುದಕ್ಕೆ ಸಂಗಾತಿ, ವಿಶ್ವಾಸ, ದುಃಖ ಎನ್ನುವ ಕಡೆ ಸ್ನೇಹಿತ ಇರಬೇಕು ಎಂಬ ಮಾತಿದೆ. ಕೊನೆಗೆ ಬದುಕು ಸಾಕು ಎನಿಸಿದಾಗ ಸ್ಮಶಾನದ ನೆನಪು ನಮಗಿರಬೇಕಂತೆ. ಜೀವನದಲ್ಲಿ ಎಲ್ಲವೂ ಎಲ್ಲರಿಗೂ ಸಿಗುವುದಿಲ್ಲ. ಆದ್ದರಿಂದ ಹಿತ್ತಲ ಗಿಡ ಮದ್ದಲ್ಲ ನೆನಪಿಟ್ಟುಕೊಳ್ಳಿ ಎಂಬ ಮಾತನ್ನು ರವಿಶಂಕರ್ ಗುರೂಜಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ನಿಮ್ಮ ರಾಶಿ ಫಲಾಫಲಗಳು ಹೀಗಿವೆ …
ಮೇಷ: ಇಂದು ಅಧಿಕಾರಯುತ ದಿನ. ಧೈರ್ಯವಾಗಿ ಮುನ್ನುಗ್ಗಿ. ಕನ್ ಸ್ಟ್ರಕ್ಷನ್, ಟೆಕ್ನಿಕಲ್, ರಿಯಲ್ ಎಸ್ಟೇಟ್, ಪ್ರಾಪರ್ಟಿ ಡೆವಲಪ್ಮೆಂಟ್ ಈ ಕ್ಷೇತ್ರದಲ್ಲಿ ಇರುವವರಿಗೆ ಶುಭ ಸುದ್ದಿ. ರಕ್ಷಣ ಇಲಾಖೆಯಲ್ಲಿ ಇರುವವರಿಗೆ ಭರ್ಜರಿ ಬೇಟೆ. ತಲೆನೋವು ತಪ್ಪಿದ್ದಲ್ಲ. ಎಲ್ಲಿಯಾದರೂ ಏನಾದರೊಂದು ಸುದ್ದಿ ಹರಡುವುದು ಇರುತ್ತದೆ. ಆದ್ದರಿಂದ ಎಚ್ಚರಿಕೆ.
ವೃಷಭ: ಗಂಡ-ಹೆಂಡತಿ, ಅಣ್ಣ-ತಮ್ಮ,ಅಕ್ಕ-ತಂಗಿ, ಬಂಧು-ಬಳಗ, ಸ್ನೇಹಿತರ ಜೊತೆ ಕಿರಿಕಿರಿ ಉಂಟಾಗುವ ಸಾಧ್ಯತೆಯಿರುತ್ತದೆ. ಜಾಗ್ರತೆಯಿಂದ ಇರಿ.
ಮಿಥುನ: ಇಂದು ನಿಮಗೆ ವಿಶೇಷವಾದಂತಹ ದಿನ. ವಿಪರೀತ ಮೊಂಡು, ತಲೆ ಗಟ್ಟಿ ಇದೆ ಎಂದು ಬಂಡೆಗೆ ಜಜ್ಜಿಕೊಳ್ಳುವ ಸ್ವಭಾವ. ಜಾಗ್ರತೆ. ತುಂಬಾ ಆತುರ ಇರುವವರು ಉದ್ದಾರ ಆಗಿರುವಂತದ್ದು ಇತಿಹಾಸದಲ್ಲಿ ಇಲ್ಲ. ಗಂಡಿಗೆ ಆತುರ, ಹೆಣ್ಣಿಗೆ ಕೋಪ ಇರಬಾರದು ಎಂಬ ಮಾತೇ ಇದೆ.
ಕರ್ಕಾಟಕ: ಸ್ವಲ್ಪ ಅಜೀರ್ಣ ಬಾಧೆ, ಎದೆಯುರಿ, ತಲೆಭಾರ, ತೊಳಲಾಟ ಇಂತಹ ಸಮಸ್ಯೆಗಳು ಇರುತ್ತವೆ. ಒಂದು ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ. ಇದನ್ನು ನೀರು ಚೆನ್ನಾಗಿ ಕುದ್ದ ಮೇಲೆ ಹಾಕಿ. ಈ ತುಳಸಿ ಹಬೆ ತೆಗೆದುಕೊಳ್ಳಿ. ತುಂಬಾ ಅಜೀರ್ಣ, ಹೊಟ್ಟೆ ಉಬ್ಬರ ಆಗುತ್ತಿದ್ದರೆ ತುಳಸಿ ರಸವನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ತಲಾ ಒಂದು ಚಮಚ ತೆಗೆದುಕೊಳ್ಳಿ. ಈ ರಸಕ್ಕೆ ಕಾಡು ಜೀರಿಗೆ ತಂದು ಕುಟ್ಟಿ ಹಾಕಿ, 12 ದಿನ ಸೇವಿಸಿ. ನಿಮ್ಮ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ.

 

ಸಿಂಹ: ಇಂದು ನಿಮಗೆ ಗತ್ತಿನ ದಿನ, ಅಧಿಕಾರದ ದಿನ, ಯುದ್ಧದ ದಿನ. ಆದ್ದರಿಂದ ಜಾಗ್ರತೆ. ಅದಕ್ಕೆ ಯಾರ ಮೇಲೂ ಯುದ್ಧಕ್ಕೆ ಹೋಗಬೇಡಿ.
ಕನ್ಯಾ: ಸಣ್ಣ ಪೆಟ್ಟು, ಗಾಯ, ಕೋಪ, ಸಿಟ್ಟು, ಆತುರ, ದುಡುಕಿನ ಸ್ವಭಾವ ಇಂದು ಇರುತ್ತದೆ. ಆದ್ದರಿಂದ ನಿಧಾನದಿಂದ ನಡೆದುಕೊಳ್ಳಿ. ವಿಷ್ಣು ಸಹಸ್ರ ನಾಮ ಜಪ ಮಾಡಿ.
ತುಲಾ: ವಾಹನ, ರಭಸ, ಪೆಟ್ಟು, ಗಾಯ, ಇನ್ ಫೆಕ್ಷನ್ ಈ ರೀತಿ ಸಮಸ್ಯೆ ಇರುವವರಿಗೆ ಉಲ್ಪಣದ ಛಾಯೆ. ಯಾರ ಮೇಲಾದರೂ ಜಗಳ, ಸಣ್ಣ ಪೆಟ್ಟು, ವಾಹನದಿಂದ ಅಥವಾ ಬೆಂಕಿಯಿಂದ ಪೆಟ್ಟು ಉಂಟು. ಜಾಗೃತವಾಗಿರಿ. ಸ್ಕಂದ ಕವಚ ಕೇಳಿ. ನಿರೋಧಕ ಶಕ್ತಿಗೆ ಸ್ವಲ್ಪ ಶಂಕಾರಮೃತ ಸೇವಿಸಿ.
ವೃಶ್ಚಿಕ: ರಿಯಲ್ ಎಸ್ಟೇಟ್, ಕನ್ ಸ್ಟ್ರಕ್ಷನ್, ರಿಟೇಲ್, ದವಸ ಧಾನ್ಯ, ಕಿರಾಣಿ ಅಂಗಡಿ, ಮಂಡಿ ಇಟ್ಟುಕೊಂಡಿರುವವರಿಗೆ ಈ ದಿನ ಚೆನ್ನಾಗಿದೆ. ರೈತರಿಗೆ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಿಮಗೆಲ್ಲಾ ಗೊತ್ತಿದೆ.


ಧನಸ್ಸು: ಇವತ್ತು ಧೈರ್ಯದಿಂದ ಮುನ್ನುಗ್ಗಿ, ಎಲ್ಲವನ್ನೂ ಗೆಲ್ಲುವಿರಿ.
ಮಕರ: ಸ್ವಲ್ಪ ಜಗಳ, ಸ್ವಲ್ಪ ಕೋಪ, ಸ್ವಲ್ಪ ಸಿಡುಕು, ಸ್ವಲ್ಪ ಆತುರ ಇರುತ್ತದೆ. ಆದ್ದರಿಂದ ಸಮಾಧಾನದಿಂದ ಇರಿ. ನಿಮಗೆ ಸಾಧ್ಯವಾದರೆ ಒಂದು ಕೆಜಿ ಎಳ್ಳೆಣ್ಣೆ, ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಬೆಲ್ಲ, 2 ಕೆಜಿ ಅಕ್ಕಿ ಹತ್ತಿರದಲ್ಲಿ ಯಾರಾದರೂ ಬಡವರು ಇದ್ದರೆ ದಾನ ಮಾಡಿ.
ಕುಂಭ: ಈ ದಿನ ಬಹಳ ಚೆನ್ನಾಗಿದೆ. ಧೈರ್ಯದಿಂದ ಮುನ್ನುಗ್ಗಿ.ಆದರೆ ವಿಪರೀತ ಮೊಂಡು, ನಾ ಹಿಡಿದಿದ್ದೇ, ಸರಿ, ನಾ ನಡೆದದ್ದೇ ಸರಿ, ನಾನು ಮಾಡಿದ್ದೇ ಸರಿ ಎನ್ನುವ ಭಾವ ಇರುತ್ತದೆ. ಆದರೆ ಅದನ್ನು ಪಕ್ಕಕ್ಕೆ ಇಡಿ.
ಮೀನಾ: ದಿನ ಚೆನ್ನಾಗಿದೆ. ಸ್ವಲ್ಪ ದುಡುಕು ನಿರ್ಧಾರಗಳಿಂದ ಉದ್ಯೋಗ, ಕೌಟುಂಬಿಕ ವಿಚಾರದಲ್ಲಿ ಸ್ವಲ್ಪ ಎಳೆದಾಟ ತಂದುಕೊಳ್ಳುವಿರಿ. ಜಾಗ್ರತೆಯಿಂದ ಇರಿ.
All Rights Reserved Namma Kannada.

Advertisement
Share this on...