ಈ 3 ರಾಶಿಯವರಿಗೆ ಪ್ರಗತಿ, ಗೆಲುವು, ಸನ್ಮಾನ ಒಲಿದು ಬರುತ್ತದೆ …

in ಜ್ಯೋತಿಷ್ಯ 86 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಪೂರ್ವಭಾದ್ರ ನಕ್ಷತ್ರ, ಬಾಲವಕರಣ, ಜೂನ್ 13 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು 13 ನೇ ತಾರೀಖು ಜೊತೆಗೆ ಅಷ್ಟಮಿ ಬೇರೆ ಇರುವುದರಿಂದ ಬಹಳ ಜಾಗ್ರತೆಯಿಂದಿರಲು ಗುರೂಜಿಗಳು ತಿಳಿಸಿರುವುದರ ಜೊತೆಗೆ ಕರುಳು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಹಾಗೂ ರಾಶಿ ಫಲಾಫಲ ತಿಳಿಸಿದ್ದಾರೆ. ಮತ್ತೇಕೆ ತಡ, ನೋಡೋಣ ಬನ್ನಿ..
(ಅಮೃತ ಕಾಲ 12: 34 ನಿಮಿಷದಿಂದ 02: 21 ನಿಮಿಷದವರೆಗೆ ಇರುತ್ತದೆ)

Advertisement

ಮಲಬದ್ಧತೆ ಸಮಸ್ಯೆಗೆ ಪರಿಹಾರ
ಮಲ ದುರ್ವಾಸನೆ ಬೀರುತ್ತಿದೆ ಎಂದರೆ ಕರುಳಿಗೆ ಏನೋ ಹಾನಿ ಆಗಿದೆ ಎಂದರ್ಥ. ಏನೋ ಒಂದು ಸೋಂಕು ಆಗಿದೆ ಎಂದರ್ಥ. ಇಂತಹ ಗುಣಲಕ್ಷಣಗಳು ಕಾಣಿಸಿಕೊಂಡ ನಂತರ 15 ದಿನ ಕಿಚಡಿ ಸೇವಿಸಿ. ಪಾಲೀಶ್ ಮಾಡದ ಕೆಂಪಕ್ಕಿ ತೆಗೆದುಕೊಂಡು ಬಂದು ಅದರಲ್ಲಿ ಮುದ್ದೆ ತರಹ ಅನ್ನ ಮಾಡಿ, ಸೇವಿಸಿ. ನೆನಪಿಟ್ಟುಕೊಳ್ಳಿ, ಕುಕ್ಕರ್’ನಲ್ಲಿ ಮಾಡಿಟ್ಟುಕೊಂಡ ಅನ್ನ ತಿನ್ನಬಾರದು. ಪಾತ್ರೆಯಲ್ಲಿ ಅನ್ನ ಮಾಡಿ, ಗಂಜಿ ಜಾಸ್ತಿ ಆದರೆ ಚೆಲ್ಲಿ. ಕೆಂಪಕ್ಕಿ ಅನ್ನಕ್ಕೆ ಮಜ್ಜಿಗೆ ಹಾಕಿ ಕಿವುಚಿಯೂ ಸೇವಿಸಬಹುದು. ಖಾರ, ಮಾಂಸ ತಿನ್ನಬಾರದು. ತರಕಾರಿಗಳನ್ನು ಸೇವಿಸಿ. ನೀವು ಮಲಗಿದಾಗ ದೇಹದಿಂದ ಶಬ್ದ ಬರುತ್ತಿದೆ ಎಂದರೆ ನಿಮ್ಮ ಹದ ತಪ್ಪುತ್ತಿದೆ ಎಂದರ್ಥ. ದೇಹ ಬಿಳುಚಿಕೊಳ್ಳುತ್ತಿದೆ ಎಂದರೆ ಕೆಂಪು ರಕ್ತ ಕಡಿಮೆಯಾಗುತ್ತಿದೆ ಎಂದರ್ಥ. ಆದ್ದರಿಂದ ಮಲಬದ್ಧತೆ, ಅತಿಸಾರಕ್ಕೆ ಮಜ್ಜಿಗೆ ಅನ್ನ, ಕಿಚಡಿ ಬೆಸ್ಟ್. ತಣ್ಣೀರು ಕುಡಿಯುವುದರಿಂದಲೇ ಹೆಚ್ಚು ಬ್ಯಾಕ್ಟೀರಿಯಾಗಳು ದೇಹದ ಒಳಗೆ ಹೋಗುತ್ತಿರುವುದು. ಮುಖ್ಯವಾದ ವಿಷಯವೆಂದರೆ ಅನ್ನ ಮಾಡಿ 90 ನಿಮಿಷದ ಮೇಲೆ ತಿನ್ನಲೇಬಾರದು. ಅದಕ್ಕಿಂತ ವಿಷ ಇನ್ನೊಂದಿಲ್ಲ. ಸ್ವಲ್ಪ ಬದಲಾಗಿ, ಆಗ ಆರೋಗ್ಯವಂತರಾಗಿರುತ್ತೀರಿ. ಶತಾವರಿ ಬೇರು ತಿನ್ನಿ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆ ಶತಾವರಿ ಬೇರು ಶಂಕರಾಮೃತದಲ್ಲಿದೆ ಎನ್ನುವುದನ್ನು ಮರೆಯಬೇಡಿ.

Advertisement

 

Advertisement


ನಿಮ್ಮ ರಾಶಿ ಫಲಾಫಲಗಳು ಹೀಗಿವೆ …
ಮೇಷ: ಇಂದು ದಿನ ಚೆನ್ನಾಗಿದೆ, ತೊಂದರೆಯಿಲ್ಲ. ಕಷ್ಟಪಟ್ಟು ಇನ್ನೊಬ್ಬರಿಗೆ ಕೊಡುವಂತಹ ಫಲ ನಿಮ್ಮದು. ಅಂದರೆ ನಾವು ದುಡಿದು ಇನ್ನೊಬ್ಬರಿಗೆ ಕೊಡುವುದು.
ವೃಷಭ: ಬುದ್ಧಿವಂತಿಕೆಯಿಂದ ಸಂಪಾದನೆ ಮಾಡುತ್ತೀರಿ.
ಮಿಥುನ: ಅನಾರೋಗ್ಯ ಸಮಸ್ಯೆಗಳಿದ್ದರೆ ಇಂದು ಉಲ್ಬಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಅದಕ್ಕೆ ದಾರಿಯೂ ಇದೆ. ಅನಾಥಾಶ್ರಮದ ಪುಟ್ಟ ಮಕ್ಕಳಿಗೆ ಸಿಹಿ ಊಟ ಹಾಕಿಸಿ. ಒಳ್ಳೆಯದಾಗುತ್ತದೆ.
ಕರ್ಕಾಟಕ: ಮನೆ, ಮಕ್ಕಳು, ಅನಾರೋಗ್ಯದ ಸಮಸ್ಯೆ, ಕಮಿಟ್’ಮೆಂಟ್ ನಿಂದ ತೊಳಲಾಡುತ್ತಿರಿ. ಆದ್ದರಿಂದ ಮನೆಯಲ್ಲೇ ಗಣಪತಿಗೆ ಅಷ್ಟೋತ್ತರ ಹೇಳಿಕೊಂಡು ತೀರ್ಥ ಸೇವಿಸಿ. ಆ ಧೈರ್ಯದಿಂದ ಮುನ್ನುಗ್ಗುವ ಧೈರ್ಯ ಬರುತ್ತದೆ. ಏನು ಬೇಜಾರಾಗಬೇಡಿ. ಚಂದನ ಅಥವಾ ರಕ್ತದಂದನದ ತಿಲಕ ಹಚ್ಚಿಕೊಳ್ಳಿ. ಇನ್ನಷ್ಟು ತೀಕ್ಷ್ಣವಾಗಿರುತ್ತೀರಿ.
ಸಿಂಹ: ನ್ಯಾಯ ಬದ್ಧ, ಧರ್ಮ ಬದ್ಧ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಇಂದು ಅದ್ಭುತವಾದ ದಿನ. ತೊಂದರೆಯಿಲ್ಲ.

Advertisement

 

ಕನ್ಯಾ: ತುಂಬಾ ನ್ಯಾಯ ನಡೆಯುವುದಿಲ್ಲ ಅನ್ನೋದು ನಿಮಗೆ ಗೊತ್ತು. ಇವತ್ತು ನಿಮ್ಮ ಬುದ್ಧಿವಂತಿಕೆಯಿಂದ ಯಶಸ್ಸು ಸಿಗುತ್ತದೆ.
ತುಲಾ: ಅತಿ ಒಳ್ಳೆಯತನ ಒಳ್ಳೆಯದಲ್ಲ. ಕೊಡುವುದನ್ನು ಕೊಟ್ಟುಬಿಡ್ತೀರಾ. ಆ ನಂತರ ಒಂದು ತರಹದ ಭಾಧೆ, ಎಳೆದಾಟ ಅನ್ನುತ್ತೀರಾ. ಆದ್ದರಿಂದ ಕೊಟ್ಟಾದ ಮೇಲೆ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ತಲೆಬಗ್ಗಿಸಿ ಮುಂದೆ ಹೆಜ್ಜೆ ಹಾಕಿ.ಎಲ್ಲಾ ಒಳ್ಳೆಯದಾಗುತ್ತದೆ.
ವೃಶ್ಚಿಕ: ಉಲ್ಲಾಸಕರವಾದ ದಿನ. ಕುಟುಂಬ, ಮಾತುಕಥೆ, ಸುತ್ತಾಟ, ಭೋಜನ ಎಲ್ಲವೂ ನಿಮ್ಮ ಪಾಲಿಗೆ ಒದಗಿ ಬರುತ್ತದೆ.
ಧನಸ್ಸು: ಬೇರೆಯವರ ಮೂಲಕ ಹೋದರೂ ಗೆಲುವು ನಿಮ್ಮ ಸನಿಹಕ್ಕೆ ಬರುತ್ತದೆ.

ಮಕರ: ಕುಟುಂಬಸ್ಥರು, ಹತ್ತಿರದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಕುಟುಂಬದಲ್ಲಿ ಶುಭ ಸುದ್ದಿಯೊಂದು ಉಂಟು.
ಕುಂಭ: ಗೌರವಕ್ಕೆ ತಕ್ಕದಾದ ಸನ್ಮಾನ ನಿಮಗೆ ಸಿಗುತ್ತದೆ.
ಮೀನಾ: ಖರ್ಚಿಗೆ ತಕ್ಕಂತೆ ಸಂಪಾದನೆ. ಸಂಪಾದನೆ ತಕ್ಕ ಹಾಗೆ ಖರ್ಚು. ಎಲ್ಲೋ ಒಂದು ಕಡೆ ವೈರಾಗ್ಯವಿದ್ದರೂ ಆಕಸ್ಮಿಕ ಗುರು ದರ್ಶನ, ದೈವ ದರ್ಶನ ದೊರೆಯುವ ದಿನವಿದು.

Advertisement
Share this on...