ಗ್ರಹಣದ ನಂತರ ಏನು ಮಾಡಬೇಕು ? ಯಾವೆಲ್ಲಾ ರಾಶಿಯರಿಗೆ ಶುಭ ?

in ಜ್ಯೋತಿಷ್ಯ 32 views

ಪ್ರಿಯ ಓದುಗರೇ, ಪೆನಂಬ್ರಲ್ ಚಂದ್ರ ಗ್ರಹಣ ಜೂನ್ 5 ರಂದು ರಾತ್ರಿ 11: 15 ಕ್ಕೆ ಪ್ರಾರಂಭವಾಗಿ, ನಂತರ 12:54 ಕ್ಕೆ ಗರಿಷ್ಠ ಮಟ್ಟವನ್ನು ತಲುಪಿ  2:34 ಕ್ಕೆ ಇದು ಕೊನೆಗೊಂಡಿದ್ದು, ಸುಮಾರು 3 ಗಂಟೆ 18 ನಿಮಿಷಗಳ ಕಾಲ ಗ್ರಹಣವಿತ್ತು.ಈ ಲೇಖನದಲ್ಲಿ ಶ್ರೀ. ರವಿಶಂಕರ್ ಗುರೂಜಿ ಅವರು ಗ್ರಹಣ ಸಂಭವಿಸಿದಾಗ ಏನು ಮಾಡಬೇಕು?,ಗ್ರಹಣದ ನಂತರ ಏನು ಮಾಡಬೇಕು?  ಯಾರಿಗೆ ಲಾಭ ? ಯಾರಿಗೆ ನಷ್ಟ? ಯಾವ ರಾಶಿಯವರಿಗೆ ಗ್ರಹಣದಿಂದ ಒಳ್ಳೆಯದಾಗಲಿದೆ, ಕೆಟ್ಟದಾಗಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಿದ್ದಾರೆ ಮುಂದೆ ಓದಿ.

Advertisement

 

Advertisement

Advertisement

ಗ್ರಹಣದ ನಂತರ ಏನು ಮಾಡಬೇಕು?
ಗ್ರಹಣ ಸಂಭವಿಸುವ ಒಂದು ತಿಂಗಳು ಮೊದಲೇ ಅದರ ಪ್ರಭಾವವನ್ನು ಅದು ಸೂಚಿಸಿರುತ್ತದೆ. ಈಗ ನಾವು ಗ್ರಹಣ ಸಂಭವಿಸಿದ ನಂತರ ಏನು ಮಾಡಬೇಕೆಂದು ತಿಳಿಯೋಣ. ಬೆಳಗ್ಗೆ ಎದ್ದ ತಕ್ಷಣ ನೀರಿಗೆ ಗರಿಕೆ ಹಾಕಿ ಸ್ನಾನ ಮಾಡಿ. ಗರಿಕೆ ಇಲ್ಲವೆಂದರೆ ಗೋಮೂತ್ರ ವಿಭೂತಿ, ಅರಿಶಿನ ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿಗೆ ಹಾಕಿ ಹಾಕಿ ಸ್ನಾನ ಮಾಡಿ. ಎಲ್ಲಾ ವಿಗ್ರಹಗಳನ್ನು ಗರಿಕೆ ನೀರಿನಲ್ಲಿ ಶುಚಿ ಮಾಡಿ. ಮನೆಯ ತುಂಬೆಲ್ಲಾ ಗೋ ಮೂತ್ರ ಹಾಕಿ ಪ್ರೋಕ್ಷಣೆ ಮಾಡಿ. ಗೋ ಮೂತ್ರ ಇಲ್ಲದಿದ್ದರೆ ಮನೆಯಲ್ಲಿರುವ ದೇವರ ತೀರ್ಥವನ್ನು ಪ್ರೋಕ್ಷಣೆ ಮಾಡಿ. ತೀರ್ಥವೂ ಇಲ್ಲವೆಂದರೆ ತುಳಸಿ ನೀರಿನಲ್ಲಿ ಪ್ರೋಕ್ಷಣೆ ಮಾಡಿ. ವೈಜ್ಞಾನಿಕವಾಗಿ ತುಳಸಿ ನೀರಿನಲ್ಲಿ ಪ್ರೋಕ್ಷಣೆ ಮಾಡುವುದರಿಂದ ವೈರಸ್ ಗಳು ನಾಶವಾಗುತ್ತವೆ. ದೇವಿಯ ಅರಿಶಿನ, ಕಲ್ಲುಪ್ಪನ್ನು ಮಿಶ್ರಣ ಮಾಡಿ ಮನೆಯ ಸುತ್ತ ಮುತ್ತ ಪ್ರೋಕ್ಷಣೆ ಮಾಡಿ. ಗ್ರಹಣದ ಛಾಯೆ ಇರುವಾಗ ಹೀಗೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ. ಆ ನಂತರ ಮನೆ ದೇವರಿಗೊಂದು ದೀಪ ಹಚ್ಚಿ.

Advertisement

 

ಅಷ್ಟದಿಗ್ಬಂಧನ ಮಾಡಿ
ಬಹುತೇಕರಿಗೆ ತಿಳಿದಿಲ್ಲ. ಶನಿವಾರ ಮಾಡುವ ಕೆಲಸ ನಿಧಾನವಾದರೂ, ಆ ದಿನ ಯಶಸ್ಸು ಲಭಿಸುತ್ತದೆ. ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿದ ನಂತರ, ಚಿಕ್ಕ ಬೂದು ಕುಂಬಳ ಕಾಯಿಯಿಂದ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯಿರಿ. ಕೊನೆಯಲ್ಲಿ ಒಂದು ಅಷ್ಟದಿಗ್ಬಂಧನ ಮಾಡಿ. ಅಷ್ಟದಿಗ್ಬಂಧನ ಮಾಹಿತಿಗಾಗಿ ಶ್ರೀ ರವಿಶಂಕರ್ ಗುರೂಜಿ ಅವರನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ಅಷ್ಟದಿಗ್ಬಂಧನ ಮಾಡುವಾಗ ಹಾಲ್’ನಲ್ಲಿ ನಾಲ್ಕು ಕೋಣೆಗಳಲ್ಲಿ ಕಟ್ಟಿ. ಇದನ್ನು ಕಟ್ಟಿದ ಮೇಲೆ ಒಂದು ನಿಯಮಿದೆ. ಒಂದು ಹಿಡಿ ಊಟವನ್ನು ಹಸುವಿನಂತಹ ಪ್ರಾಣಿಗೆ ಹಾಕಿ. ನಂತರ ಆಹಾರ ಸೇವಿಸಿ. ಇದರಿಂದ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ.

ಯಾವ ರಾಶಿಗೆ ಏನು ಲಾಭ? ಏನು ಮಾಡಬೇಕು?
ಮೇಷ: ಗ್ರಹಣ ಸಂಭವಿಸುತ್ತಿರುವುದರಿಂದ ಈ ಬಾರಿ ಮೇಷ ರಾಶಿಯವರು ತಾಯಿ ಸೇವೆ ಮಾಡಿ, 5 ಜನ ಮುತ್ತೈದೆಯರಿಗೆ ಹೂವು ಅಥವಾ ಹಣ್ಣು ಕೊಟ್ಟು ಆಶೀರ್ವಾದ ಪಡೆಯಿರಿ.
ವೃಷಭ: ಈ ರಾಶಿಯವರಿಗೆ ಕೊಡುವುದು ತೆಗೆದುಕೊಳ್ಳುವ ವ್ಯವಹಾರ ಹೆಚ್ಚಿರುತ್ತದೆ. ನೀವು 3 ಕೆಜಿ ಅಕ್ಕಿ, 1 ಕೆಜಿ ರವೆ, 1 ಕೆಜಿ ಬೆಲ್ಲ, 1 ಕೆಜಿ ಬೇಳೆ, ತುಪ್ಪ ಸೇರಿಸಿ ಯಾರಿಗಾದರೂ ಬಡವರಿಗೆ ದಾನ ಮಾಡಿ.
ಮಿಥುನ: ನಿಮಗೆ ಗ್ರಹಣದಿಂದ ಒಳ್ಳೆಯದಾಗುತ್ತದೆ. ಕೆಲಸದಲ್ಲಿ ಲಾಭ, ಬಡ್ತಿ ಸಿಗುವ ಸಾಧ್ಯತೆಯು ಇದೆ. ಆದರೆ ಯೂರಿನರಿ ಇನ್ ಫೆಕ್ಷನ್, ಪೈಲ್ಸ್ ಇದ್ದರೆ ಉಲ್ಬಣ್ಣಗೊಳ್ಳುತ್ತದೆ. ಆದ್ದರಿಂದ ನೇರಳೆಹಣ್ಣಿನ ಜ್ಯೂಸ್ ಕುಡಿಯಿರಿ. ಇದು ಪೈಲ್ಸ್ ಇದ್ದವರಿಗೆ ಒಳ್ಳೆಯದು ಅಥವಾ ಒಂದು ಮುಷ್ಠಿ ಗಾತ್ರದ ತುಪ್ಪದ ಅನ್ನ ಸೇವಿಸಿ.
ಕರ್ಕಟಕ: ಮಕ್ಕಳಿಂದ, ಹಿರಿಯರಿಂದ ಏನಾದರೂ ಸಮಸ್ಯೆ ಇರುವವರು ತುಪ್ಪದ ದೀಪ ಹಚ್ಚಿ. ಧುತ್ತನೆ ನಿರ್ಧಾರ ತೆಗೆದುಕೊಳ್ಳಬೇಡಿ. ಬೂದು ಬಣ್ಣದ ಗೋವಿಗೆ ಬಾಳೆ ಹಣ್ಣು ತಿನ್ನಿಸಿ.
ಸಿಂಹ : ಸಿಂಹ ರಾಶಿಯವರಿಗೆ ಈ ಗ್ರಹಣ ಹೆಚ್ಚು ಖರ್ಚು ಮಾಡಿಸುತ್ತದೆ. ಮನೆಯಲ್ಲಿ ಯಾರಾದರೂ ಧೀರ್ಘ ಕಾಯಿಲೆಯಿಂದ ಬಳಲುತ್ತಿದ್ದರೆ ಆಪತ್ತು ಇರುತ್ತದೆ. ಆದ್ದರಿಂದ ಚಿಕ್ಕ ಮಡಿಕೆ ಕೊಳ್ಳಿ. ಕೆಂಡ ಮಾಡಿ, ಧೂಪ ಹಾಕಿ. ಸಂಜೆ ಮನೆಗೆಲ್ಲಾ ಧೂಪ ತೋರಿಸಿ.

 

ಕನ್ಯಾ: ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಲಕ್ಷ್ಮೀ ಪೂಜೆ ಮಾಡಿ, ಆರಿಂಚು ದೀಪ ಹಚ್ಚಿ.
ತುಲಾ: ತಂದೆಯ ತಾಯಿ, ಅಮ್ಮನ ಅಮ್ಮ ಇದ್ದರೆ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಗಣಪತಿ ದೇವಸ್ಥಾನದ ಅರ್ಚಕರಿಗೆ ತುಂಬಾ ವಯಸ್ಸಾದವರಿಗೆ ತಾಂಬೂಲ ದಾನ ಮಾಡಿ. ತುಂಬಾ ಒಳ್ಳೆಯದು.
ವೃಶ್ಚಿಕ: ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ ಇದೆ. ಮಿಕ್ಕಂತೆ ತೊಂದರೆ ಇಲ್ಲ. ಹೊಟ್ಟೆನೋವು, ಪೈಲ್ಸ್, ಮೈಗ್ರೇನ್ ಸಮಸ್ಯೆ ಇರುವವರು ಹೆಚ್ಚು ತುಪ್ಪ ಸೇವಿಸಿ.
ಧನಸ್ಸು: ತುಂಬಾ ಒಳ್ಳೆಯವರಿಗೆ ಕೆಲಸಗಳು ರಿವರ್ಸ್ ಆಗುವುದು ಉಂಟು. ಆದ್ದರಿಂದ ಈ ರಾಶಿಯವರು ರಸ್ತೆಯಲ್ಲಿ ತರಕಾರಿ, ಹೂ ಮಾರುವವರಿಗೆ, ಹೂವು-ಹಣ್ಣು ಕೊಟ್ಟು ಆಶೀರ್ವಾದ ತೆಗೆದುಕೊಳ್ಳಿ.
ಮಕರ: ನಿಮಗೆ ಸದ್ಯದಲ್ಲೇ ಒಳ್ಳೆಯ ಶುಭ ಸುದ್ದಿ ಕೇಳಿಬರುತ್ತದೆ.
ಕುಂಭ: ಗ್ರಹಣ ನಿಮ್ಮ ಜೀವನದಲ್ಲಿ ಅದೃಷ್ಟ, ಆಯಸ್ಸು, ಯಶಸ್ಸು, ಪದವಿ ತಂದುಕೊಡುತ್ತದೆ. ಒಂದು ವಾರದಲ್ಲಿ ಶುಭ ಸುದ್ದಿ ಬರುತ್ತದೆ.
ಮೀನಾ:ತಂದೆ ತಾಯಿಯ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ನಿಮ್ಮದು ಲೆಕ್ಕಚಾರದ ಜೀವನ. ವೈರಾಗ್ಯಕ್ಕೂ ಹೋಗುವುದಿಲ್ಲ. ಆದಷ್ಟು ಗ್ರಹಣದ ನಂತರ ತುಳಸಿಯ ಮುಂದೆ ದೀಪ ಹಚ್ಚಿ. ಅಮ್ಮನಿಗೆ ಒಂದು ವಸ್ತ್ರವೋ, ಸೀರೆ, ಕಾಲ್ಗೆಜ್ಜೆಯೋ ಕೊಡಿ ಅಥವಾ ಅಮ್ಮನ ಸಮನಾದವರಿಗೆ ಏನಾದರೂ ಕೊಡಿ.

Advertisement
Share this on...