ಈ ರಾಶಿಯವರು ಅನಿರೀಕ್ಷಿತವಾಗಿ ಶುಭ ಸಮಾಚಾರ ಕೇಳುವಿರಿ…

in ಜ್ಯೋತಿಷ್ಯ 75 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ನವಮಿ ತಿಥಿ, ಉತ್ತರಭಾದ್ರ ನಕ್ಷತ್ರ, ಆಯುಷ್ಮಾನ್ ಯೋಗ, ತೈತಿಲಕರಣ, ಜೂನ್ 14 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 6:59 ನಿಮಿಷದಿಂದ 8:46 ನಿಮಿಷಗಳ ಕಾಲ ಇರುತ್ತದೆ. ಅಮೃತಕಾಲ ಸಂಜೆ ಬಂದಿದೆ ಎಂದು ಆದಷ್ಟುಅಪಾಯಕರ ಕೆಲಸಗಳನ್ನು ಈ ಸಮಯದಲ್ಲಿ ಮಾಡುವುದು ಬೇಡ.
ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು…
ಗರಿಕೆ ತೆಗೆದುಕೊಂಡು ಬಂದು ಯಾವಾಗಲೂ ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಈ ಅಭ್ಯಾಸ ಬಹಳ ಒಳ್ಳೆಯದು. ಹಾಗೆಯೇ ಕರಿ ಜೀರಿಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಬೇಕಾದರೆ ನೀವು ಎರಡು ಸ್ಪೂನ್ ಕರಿ ಜೀರಿಗೆಗೆ, ಒಂದು ಸ್ಪೂನ್ ಓಂ ಕಾಳು, ಮೂರು ಸ್ಪೂನ್ ಮೆಂತ್ಯವನ್ನು ಬಿಸಿ ನೀರಿನಲ್ಲಿ ಹಾಕಿ. ಉಗುರು ಬೆಚ್ಚಗೆ ಆದ ಮೇಲೆ ಆ ನೀರನ್ನು ಕುಡಿಯಿರಿ. ಇನ್ನು ತುಂಬಾ ದುರ್ಬಲ, ಶಕ್ತಿಯಿಲ್ಲ ಎನ್ನುವವರು ಉದ್ದಿನ ಕಾಳು ತೆಗೆದುಕೊಳ್ಳಿ. ಚೆನ್ನಾಗಿ ತೊಳೆದು, ಮೊಳಕೆ ಕಟ್ಟಿ, ಇದಕ್ಕೆ ಸ್ವಲ್ಪ ನಿಂಬೆರಸ, ಸ್ವಲ್ಪ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ 48 ದಿನಗಳ ಕಾಲ ಬೆಳಗ್ಗೆ ಮಧ್ಯಾಹ್ನ ಸಂಜೆ ಸೇವಿಸಿ. ಕೇವಲ ಮೂರು ಸ್ಪೂನ್ ಸೇವಿಸಿದರೂ ನಿಮ್ಮ ಮಕ್ಕಳಿಗೆ ಹೆಚ್ಚು ಪೌಷ್ಠಿಕಾಂಶ ಸಿಗುತ್ತದೆ. ಹಸಿವನ್ನು ನೀಗಿಸುತ್ತದೆ. ದೇಹಕ್ಕೆ ಶಕ್ತಿ ತುಂಬಿಸಿಕೊಡುತ್ತದೆ.

Advertisement

 

Advertisement


ನಿಮ್ಮ ರಾಶಿ ಫಲಾಫಲಗಳು ಹೀಗಿವೆ …
ಮೇಷ: ಇಂದು ಬೇವು-ಬೆಲ್ಲ ಎರಡೂ ಇರುವಂತಹ ದಿನ. ಒಂದು ರೀತಿಯಲ್ಲಿ ಸೋಮವಾರದ ಟೆನ್ಷನ್ ತೆಗೆದುಕೊಳ್ಳುವುದು ಬೇಡ. ಗಾಬರಿಯಾಗಬೇಡಿ, ಮನೆಯವರಿಗೆ, ಕುಟುಂಬಕ್ಕೋಸ್ಕರ ಸ್ವಲ್ಪ ಖರ್ಚು ವೆಚ್ಚವಾಗುವ ದಿನ. ಅಮ್ಮನ ಆರೋಗ್ಯದ ಕಡೆ ಗಮನಕೊಡಿ. ಸ್ವಲ್ಪ ಹುಳಿ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಇದ್ದರೆ ನಿಯಂತ್ರಣದಲ್ಲಿಡಿ.
ವೃಷಭ: ದೇಹ ವಿಪರೀತ ಬಿಸಿಯಾಗಬಹುದು. ಉಷ್ಣದ ಪ್ರಭಾವ ಇರುತ್ತದೆ. ಎಚ್ಚರಿಕೆಯಿಂದಿರಿ. ಆರೋಗ್ಯದ ಮೇಲೆ ಗಮನವಿರಲಿ. ದುಡುಕಬೇಡಿ. ಇಂದು ನಿಮಗೆ ಲಾಭದಾಯಕ, ಖುಷಿದಾಯಕ, ಸಂತೃಪ್ತಿದಾಯಕ ಭಾನುವಾರ.
ಮಿಥುನ: ಸ್ವಲ್ಪ ತಳಮಳವಿರುತ್ತದೆ. ಅನಿರೀಕ್ಷಿತವಾಗಿ ಶುಭ ಸುದ್ದಿ ಬರುತ್ತದೆ. ಆತ್ಮೀಯರನ್ನು ಭೇಟಿಯಾಗುವ ಸುಯೋಗ ನಿಮ್ಮಲ್ಲಿದೆ.

Advertisement

 

Advertisement

ಕರ್ಕಾಟಕ: ನೀವು ನಿಧಾನವಾಗಿದ್ದಷ್ಟು ಒಳ್ಳೆಯದು. ಜಾಗ್ರತೆ, ತೊಂದರೆಯಿಲ್ಲ. ಪುಷ್ಕಳ ಊಟ ಸೇವಿಸುವ ಭಾಗ್ಯ ಸಿಗುತ್ತದೆ. ತೂಕ ಹೆಚ್ಚಾಗುತ್ತಿದ್ದೀರಿ ಆದ್ದರಿಂದ ಸ್ವಲ್ಪ ವಾಕಿಂಗ್ ಮಾಡಿ.

ಸಿಂಹ: ರಾತ್ರಿ ಮಲಗೋದು ತಡ, ಬೆಳಗ್ಗೆ ಎಳೋದು ತಡ. ಎಲ್ಲಾ ತಡ ಅನ್ನುವಂತಹ ಭಾವ. ತೊಂದರೆ ಏನಿಲ್ಲ, ಧೃಢತ್ವ, ಧೈರ್ಯತ್ವ, ಉತ್ಸಾಹ ಇವೆಲ್ಲವೂ ಇರುವಂತಹ ದಿನ.
ಕನ್ಯಾ: ಮಕ್ಕಳು, ಭವಿಷ್ಯ, ವಯಸ್ಸಾದ ಮೇಲೆ ನಿವೃತ್ತಿ ದುಡ್ಡು ಎಷ್ಟು ಬರುತ್ತೆ ಅನ್ನುವ ಚಿಂತೆ. ಆ ದುಡ್ಡು ಬಂದಾಗ, ನಾವು ಅದನ್ನು ಅನುಭವಿಸಿದಾಗ ನೋಡೋಣ. ಅಲ್ಲಿ ತನಕ ಈ ಚಿಂತೆ ಬೇಡ.
ತುಲಾ: ತೊಂದರೆಯಿಲ್ಲ, ಅಂದುಕೊಂಡ ಕಾರ್ಯಗಳನ್ನು ನಿಶ್ಚಿತೆಯಿಂದ ಮಾಡಿ ಮುಗಿಸುವಂತಹ ದಿನ. ತಂದೆ-ತಾಯಿ, ಹಿರಿಯರ ಜೊತೆ ಸ್ವಲ್ಪ ಚಿಕ್ಕ ಪುಟ್ಟವಿವಾದ ಆಗಬಹುದು. ಹಿರಿಯರು ಹಿರಿಯರೇ. ಅವರು ಇರೋದೇ ನಮ್ಮನ್ನು ಪೋಷಿಸಲಿಕ್ಕೆ, ಮಾರ್ಗದಶರ್ನ ಮಾಡಲಿಕ್ಕೆ, ಆದ್ದರಿಂದ ಹಿರಿಯರು ಹೇಳಿದ್ದನ್ನು ತೀರಾ ತಲೆಗೆ ಹಾಕಿಕೊಳ್ಳಬೇಡಿ.

 

ವೃಶ್ಚಿಕ: ಸೋಮಾರಿಗಳು ಗ್ಯಾರಂಟಿ ತಡವಾಗಿ ಏಳುತ್ತೀರಿ. ಗಡಿಬಿಡಿ ಇರುತ್ತದೆ. ಸೋಮವಾರ ಎನ್ನುವಷ್ಟು ಬ್ಯೂಸಿಯಿಂದ ಇರುತ್ತೀರಿ.ಸಂಭ್ರಮದ ಛಾಯೆ, ಉತ್ಸಾಹದ ಚಿಲುಮೆ ಇರುತ್ತದೆ.

ಧನಸ್ಸು: ದಿನ ಚೆನ್ನಾಗಿದೆ, ಸ್ವಲ್ಪ ಮಂಡಿ ನೋವು, ಕಾಲು ನೋವು, ಆರ್ಥಟೀಸ್ ಸಮಸ್ಯೆ ಇದ್ದರೆ ಮಣಿಕಂಠ ಆಸನ ಮಾಡಿ. ಇದು ನೂರೆಂಟು ಕಾಯಿಲೆಗಳಿಗೆ ರಾಮಬಾಣ. ವಾರಕ್ಕೊಮ್ಮೆ ಸ್ವಲ್ಪ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿ. ಬೇಗ ಕಥ, ಶೀತದಿಂದ ಗುಣಮುಖರಾಗುವಿರಿ. ಮಿಕ್ಕಂತೆ ಏನು ಇಲ್ಲ, ಸಂತೋಷದ ದಿನ.
ಮಕರ: ಅದ್ಭುತ ದಿನ, ಚೆನ್ನಾಗಿದೆ. ಖರ್ಚು ಜಾಸ್ತಿ.ಅದರಿಂದ ಟೆನ್ಷನ್ ಆಗ್ತೀರಿ. ಖರ್ಚು ಬರಲಿ ಬಿಡಿ, ಹೆಚ್ಚು ಚಿಂತೆ ಮಾಡುವ ಅವಶ್ಯಕತೆಯಿಲ್ಲ.

ಕುಂಭ: ಸ್ವಲ್ಪ ನಿಧಾನ. ಸ್ವಲ್ಪ ಟೆನ್ಷನ್. ನಿಧಾನಪಡುವುದಕ್ಕೆ ಆತುರ, ಆತುರಪಡುವುದಕ್ಕೆ ನಿಧಾನ ಮಾಡ್ತೀರಾ. ಅಧಿಕಾರ ವರ್ಗದವರು ಶುಭ ಸುದ್ದಿಯನ್ನು ಕೇಳುತ್ತೀರಿ. ಪದವಿ, ಪ್ರತಿಷ್ಠೆ ಸಿಗುವ ದಿನ. ಎತ್ತರದ ಸ್ಥಾನದಲ್ಲಿ ಇರುವವರಿಗೆ ಅಭಿವೃದ್ಧಿಯ ಸಂಕೇತ.

ಮೀನಾ: ನೀವು ಇವತ್ತು ಗ್ಯಾರಂಟಿ 12 ಗಂಟೆಗೆ ತಿಂಡಿ ತಿನ್ನೋದು. ಹೊಟ್ಟೆ ಕೆಟ್ಟರೆ ಇಡೀ ದೇಹ ಕೆಡುತ್ತೆ. ಆದ್ದರಿಂದ ಜಾಗರೂಕರಾಗಿರಿ. ಸಮಯಕ್ಕೆ ಸರಿಯಾಗಿ ಭೋಜನ, ಉಪಹಾರ ಸೇವಿಸಿ. ಪೂರಿ, ಎಣ್ಣೆ, ಕಾರ ಪದಾರ್ಥಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

Advertisement
Share this on...