ಈ ರಾಶಿಯವರು ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವಾಗ ಜಾಗ್ರತೆಯಿಂದಿರಿ…

in ಜ್ಯೋತಿಷ್ಯ 73 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ದಶಮಿ ತಿಥಿ, ರೇವತಿ ನಕ್ಷತ್ರ, ಸೌಭಾಗ್ಯ ಯೋಗ, ವನಿಜಕರಣ, ಜೂನ್ 15 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ರಾತ್ರಿ ಬಂದಿರುವುದರಿಂದ ಈ ಬಗ್ಗೆ ಉಲ್ಲೇಖ ಮಾಡಿಲ್ಲ. ಆದರೆ ರಾಶಿಗಳ ಫಲಾಫಲ ಹೇಳುವ ಮುನ್ನ ಕೊಬ್ಬರಿ ಎಣ್ಣೆಯ ಕೆಲವು ಪ್ರಯೋಜನಗಳನ್ನು ಗುರೂಜಿ ನೀಡಿದ್ದಾರೆ.
ಕೊಬ್ಬರಿ ಎಣ್ಣೆಯ ಅತ್ಯದ್ಭುತ ಪ್ರಯೋಜನಗಳು
ಕೊಬ್ಬರಿ ಎಣ್ಣೆಯಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಇದ್ದು, ಇದರ ಸೇವನೆಯಿಂದ ಕಣ್ಣು ಚುರುಕಾಗುತ್ತದೆ, ದೇಹದ ತೂಕ ಕಡಿಮೆಯಾಗುತ್ತದೆ, ಹಸಿವನ್ನು ನಿಯಂತ್ರಿಸುತ್ತದೆ. ಕೊಲೊನ್ ಕ್ಯಾನ್ಸರ್ ನಿಯಂತ್ರಣದಲ್ಲಿಡುತ್ತದೆ. ಬಹತೇಕರಿಗೆ ಗೊತ್ತಿಲ್ಲ. ನಿತ್ಯ ಬೆಳಗ್ಗೆ ವಿಶೇಷವಾಗಿ ಡಯಾಬಿಟಿಸ್ ಸಮಸ್ಯೆ ಇರುವವರು, ಥೈರಾಯ್ಡ್ ಸಮಸ್ಯೆ ಇರುವವರು, ಮಲಬದ್ಧತೆ ಸಮಸ್ಯೆ ಇರುವವರು, ಮೈಭಾರ, ಹೊಟ್ಟೆ ಭಾರ, ದೇಹ ದುರ್ಬಲ ಎನಿಸಿದರೆ, ಜೀರ್ಣಾಂಗ ಶಕ್ತಿಯಲ್ಲಿ ಸಮಸ್ಯೆಯಿದೆ ಎನಿಸಿದರೆ ಒಂದೆರೆಡು ಸ್ಪೂನ್ ಗಾಣದಿಂದ ತೆಗೆದಿರುವ ಶುದ್ಧ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಮುಕ್ಕಳಿಸಬೇಕು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೊಬ್ಬರಿ ಎಣ್ಣೆ ಬಳಸಬೇಡಿ. ಗುರೂಜಿ ಅವರನ್ನು ಸಂಪರ್ಕಿಸಿದರೆ ಈ ಎಣ್ಣೆಯ ಬಗ್ಗೆ ಮಾಹಿತಿ ನೀಡುತ್ತಾರೆ.

Advertisement

Advertisement

 

Advertisement

2 ಸ್ಪೂನ್ ಎಳ್ಳೆಣ್ಣೆ ಮತ್ತು 2 ಸ್ಪೂನ್ ಕೊಬ್ಬರಿ ಎಣ್ಣೆ ಬಾಯಲ್ಲಿ ಹಾಕಿ ಬೆಳಗ್ಗೆ ಎದ್ದು ತಕ್ಷಣ 5 ನಿಮಿಷ ಮುಕ್ಕಳಿಸಿ. ಹೀಗೆ 120-180 ದಿನ ಮಾಡಿ. ಶ್ರೀ ಕೃಷ್ಣದೇವರಾಯರು ಸಹ 3 ಕೆಜಿ ಎಳ್ಳೆಣ್ಣೆಯನ್ನು ದಿನನಿತ್ಯ ಸೇವಿಸುತ್ತಿದ್ದರಂತೆ. ಆದರೆ ವಯಸ್ಸಾದ ಮೇಲೆ ಕೊಬ್ಬರಿ ಎಣ್ಣೆ ಸೇವನೆ ಕಡಿಮೆ ಮಾಡಿಕೊಳ್ಳಬೇಕು ಅನ್ನುತ್ತಾರೆ. ಆದರೆ ಇದು ಎಷ್ಟು ಸತ್ಯ ಗೊತ್ತಿಲ್ಲ. ಹಿಮ್ಮಡಿ ಒಡೆಯುತ್ತಿದ್ದರೆ ಕೊಬ್ಬರಿ ಎಣ್ಣೆಯನ್ನು ಒಂದು ತೆಳು ಬಟ್ಟೆಯಲ್ಲಿ ತೇವ ಮಾಡಿ ಸಾಕ್ಸ್ ರೀತಿಯಲ್ಲಿ ಧರಿಸಿ. ಇನ್ನು ತಲೆಗೆ ಎಣ್ಣೆ ಹಚ್ಚುವ ವಿಧಾನ ಕೂಡ ಬೇರೆ ರೀತಿ ಇರುತ್ತದೆ. ಹತ್ತು ನಿಮಿಷ ಕೂದಲನ್ನು ಚೆನ್ನಾಗಿ ಬಾಚಿ. ಬಾಚಿದ ತಕ್ಷಣ ಎಣ್ಣೆ ಹಾಕಬೇಡಿ, ಎಣ್ಣೆ ಹಾಕಿದ ಮೇಲೆ ಬಾಚಬೇಡಿ. ರಾತ್ರಿ ಕಾಟನ್ ಅನ್ನು ಕೊಬ್ಬರಿ ಎಣ್ಣೆಯಲ್ಲಿ ಅದ್ದಿ ನಿಧಾನವಾಗಿ ಕೂದಲಿಗೆ ಹಚ್ಚಿ ಅಥವಾ ಪ್ರೆಸ್ ಮಾಡಿ.

Advertisement

ಶಂಕರಾಮೃತ ವನ್ನು ಆನ್ ಲೈನ್ ಮೂಲಕವೂ ಪಡೆಯಬಹುದು. ಆರ್ಡರ್ ಮಾಡಲು ಇಲ್ಲಿ ಕ್ಲಿಕ್ ಮಾಡಿ  http://eshop.nammakannada.net/

 

ನಿಮ್ಮ ರಾಶಿಗಳ ಫಲಾಫಲ ಹೇಗಿದೆ?
ಮೇಷ: ಕೆಲಸ ಮಾಡುವಾಗ ಸ್ವಲ್ಪ ಅಳುಕು, ಗಲಿಬಿಲಿ, ಏನೋ ಮಾಡುವುದಕ್ಕೆ ಹೋಗಿ ಏನೋ ಮಾಡುತ್ತೀರಿ. ಇವತ್ತು ಸ್ವಲ್ಪ ಕೆಲಸದಲ್ಲಿ ನಿಧಾನವಿರಲಿ. ಪ್ರಾಣಾಯಾಮ ಅಭ್ಯಾಸ ಮಾಡಿಕೊಳ್ಳಿ. ಪ್ರಾಣಾಯಾಮ ಅಭ್ಯಾಸ ಬರುವುದಿಲ್ಲ ಎಂದರೆ ಎದ್ದ ತಕ್ಷಣ ದೀಪ ಹಚ್ಚಿಟ್ಟು, 10 ನಿಮಿಷ ಕುಳಿತುಕೊಳ್ಳಿ.180 ಎಣಿಸಿಕೊಂಡು ಆ ದೀಪವನ್ನೇ ನೋಡುತ್ತಿರಿ. ಅಲ್ಲೇ ಗಣಪತಿ ಇದ್ದರೆ ಸಣ್ಣದಾಗಿ ಅಭಿಷೇಕ ಮಾಡಿ. ನಂತರ ಆ ಗಂಧವನ್ನು ಇಟ್ಟುಕೊಂಡು ಹೊರಗಡೆ ಹೊರಡಿ. ಖಂಡಿತ ಗಲಿಬಿಲಿ ದೂರವಾಗುವುದಿಲ್ಲ.
ವೃಷಭ: ಚೆನ್ನಾಗಿದೆ, ಹಣಕಾಸಿನ ವ್ಯವಹಾರ, ಅಂದುಕೊಂಡ ಕೆಲಸ ಸುಗಮವಾಗಿ ನಡೆಯುತ್ತದೆ. ದೊಡ್ಡ ಪ್ರಮಾಣದಲ್ಲಿ ಹಣ ಹೂಡಬೇಡಿ. ಯಾರಿಗೂ ದುಡ್ಡು ಕೊಡುವುದಕ್ಕೆ ಹೋಗಬೇಡಿ.
ಮಿಥುನ: ಇಂದು ದಿನ ಚೆನ್ನಾಗಿದೆ. ನಿಮ್ಮ ಬುದ್ಧಿವಂತಿಕೆ, ಆಲೋಚನೆ ಬೇರೆಯವರಿಗೆ ಸಹಾಯಾಗುವಂತಹ ಅದ್ಭುತವಾದ ದಿನ.

 

ಕರ್ಕಾಟಕ: ನಂಬಬೇಡಿ, ದುಡುಕಬೇಡಿ, ಎಲ್ಲೋ ಒಂದು ಕಡೆ ಮುಖ್ಯವಾದ ಡಾಕ್ಯುಮೆಂಟ್ಸ್ ಕಳೆದುಕೊಳ್ಳುವುದು, ಇಟ್ಟಿರೋದು, ಒದ್ದಾಟ, ತೊಳಲಾಟ. ಆದ್ದರಿಂದ ಆತಂಕಕ್ಕೆ ಒಳಗಾಗಬೇಡಿ.
ಸಿಂಹ: ಮಾತು ಕೊಟ್ಟು ಸಿಕ್ಕಿ ಹಾಕಿಕೊಂಡು ಬೀಳುತ್ತೀರಿ ಜಾಗ್ರತೆ. ಮಾತು ಕೊಡುವುದು ಬೇಡ, ತೆಗೆದುಕೊಳ್ಳುವುದು ಬೇಡ. ಯಾರಾದರೂ ಲೋನ್ ತೆಗೆದುಕೊಳ್ಳಿ ಎಂದರೆ ದಯವಿಟ್ಟು ತೆಗೆದುಕೊಳ್ಳಬೇಡಿ. ನಂ1 ಮೋಸಗಾರರು ಅಂದ್ರೆ ಬ್ಯಾಂಕುಗಳೇ. ಆದ್ದರಿಂದ ಯಾರಾದರೂ ಸಹ ದಯವಿಟ್ಟು ಬ್ಯಾಂಕ್’ನಲ್ಲಿ ಲೋನ್ ತೆಗೆದುಕೊಳ್ಳಬೆಡಿ. 10 ಬಾರಿ ಯೋಚಿಸಿ.
ಕನ್ಯಾ: ಇಂದು ದಿನ ಚೆನ್ನಾಗಿದೆ. ನಿಮ್ಮ ಬುದ್ಧಿ ಶಕ್ತಿ, ಜ್ಞಾನ ಶಕ್ತಿಂದ ಏನೂ ಕೆಲಸ ಮಾಡುತ್ತೀರಿ ಆ ಶಕ್ತಿಯ ಫಲ ನಿಮ್ಮದಾಗುತ್ತದೆ. ಸ್ವಲ್ಪ ಮಾತು ದುಡುಕಿರುತ್ತದೆ. ಜಾಗ್ರತೆಯಿಂದಿರಿ.

 

ತುಲಾ: ಚಾರ್ಟೆಡ್ ಅಕೌಂಟ್, ಬ್ಯಾಂಕ್, ಫೈನಾನ್ಷಿಯಲ್, ಕನ್ಸಲ್ಟೆಂಟ್, ಇನ್ ಸ್ಟಿಟ್ಯೂಶನಲ್ ಕನ್ಸಲ್ಟೆಂಟ್, ಟೀಚಿಂಗ್, ಅಡ್ವೈಸರ್ ಈ ತರಹದ ವಿಭಾಗದಲ್ಲಿ ಇರುವವರಿಗೆ ಪರಿಶ್ರಮದ ದಿನವಾದರೂ, ಪರಿಶ್ರಮಕ್ಕೆ ತಕ್ಕಷ್ಟು, ಬೊಗಸೆಯಷ್ಟು ಆದರೂ ಫಲವನ್ನು ನೋಡುವಿರಿ.
ವೃಶ್ಚಿಕ: ಏನೇನೋ ತಲೆಕೆಡಿಸಿಕೊಂಡು ಕುಳಿತುಕೊಳ್ಳುವಿರಿ. ಲೆಕ್ಕಚಾರ. ಲಾಭ ಇರುವ ಕಡೆ ನೋಡುತ್ತಿರಿ. ಬುಧನ ಪ್ರಭಾವದಿಂದ ಹೀಗೆ ಇರುತ್ತವೆ. ತೀರಾ ತಲೆಕೆಡಿಸಿಕೊಳ್ಳಬೇಡಿ.
ಧನಸ್ಸು: ಖರ್ಚಿನ ವಿಚಾರದಲ್ಲಿ ಬಳಲಿಬಿಡುತ್ತೀರಾ. ಸ್ವಲ್ಪ ದಿನ ನಿಮಗೆ ಹಾಗೆಯೇ. ಧಿಡೀರ್ ಉದ್ಯೋಗ, ಸ್ಥಾನ ಬದಲಾವಣೆ ಇದೆಲ್ಲವನ್ನೂ ನೋಡುತ್ತಿದ್ದೀರಿ. ಎಲ್ಲೋ ನಿಮಗೆ ಸಿಗಬೇಕಾದ ಗುರುತು ಸಿಗುತ್ತಿಲ್ಲ. ಇಂದು ವಿಷ್ಣು ಸಹಸ್ರ ನಾಮಾರ್ಚನೆ ಕೇಳಿ.


ಮಕರ: ದಿನ ಚೆನ್ನಾಗಿದೆ. ಧಿಡೀರ್ ಯಾವುದೋ ಒಂದು ದುಡ್ಡು, ವ್ಯವಹಾರದಲ್ಲೊಂದು ಕಮಿಷನ್ ಸಿಗುತ್ತದೆ. ಏನೋ ಒಂದು ರೀತಿ ಇಂದು ದುಡ್ಡು ಮಾಡಿಕೊಳ್ಳುವ ದಿನವಿದು.
ಕುಂಭ: ಮಾತು ಕೊಟ್ಟು ಸಿಲುಕಿಕೊಳ್ಳುತ್ತೀರಿ. ಯಾರನ್ನೋ ನಂಬಿ ಪೆಟ್ಟು ತಿನ್ನುತ್ತೀರಿ. ಹಣಕಾಸು ವಿಚಾರದಲ್ಲಿ ಜಾಗ್ರತೆ.
ಮೀನಾ: ತುಂಬಾ ವಿಶೇಷವಾಗಿರುವ ದಿನ. ನಿರೀಕ್ಷೆ ಮಾಡಡೆ ಲಾಭ ನಿಮಗೆ ಬರುತ್ತದೆ. ಖರ್ಚು ಇರುತ್ತದೆ.

Advertisement
Share this on...