ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರದಿಂದಿರಿ….

in ಜ್ಯೋತಿಷ್ಯ 83 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ, ಶೋಭನ ಯೋಗ, ಭವಕರಣ, ಜೂನ್ 16 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯ ರಾತ್ರಿ ಬಂದಿರುವುದರಿಂದ ಅದರ ಬಗ್ಗೆ ಗುರೂಜಿ ಅವರು ಉಲ್ಲೇಖ ಮಾಡಿಲ್ಲ. ಇವತ್ತು ಪರಿಪೂರ್ಣವಾಗಿ ಸಿದ್ಧಿ ಯೋಗ ದಿನ. ಏನಾದರೂ ಒಳ್ಳೆಯದನ್ನು ಆರಂಭ ಮಾಡಲಿಕ್ಕೆ, ಹೊಸದನ್ನು ಕಲಿಯಲಿಕ್ಕೆ ಅದ್ಭುತವಾದ ದಿನ.

Advertisement

 

Advertisement


ನಿಮ್ಮ ರಾಶಿಗಳ ಫಲಾಫಲ ಹೀಗಿದೆ
ಮೇಷ: ಇಂದು ದಿನ ಚೆನ್ನಾಗಿದೆ, ಸ್ವಲ್ಪ ವೈರಾಗ್ಯ ಭಾವವಿರುವುದರಿಂದ ಅದನ್ನು ಕೊಡೋಣ, ಇದನ್ನು ಮಾಡೋಣ ಅನಿಸುತ್ತದೆ. ಆಕಸ್ಮಿಕ ದೈವ ದರ್ಶನ, ಗುರುವಿನ ಆಶೀರ್ವಾದ ಪಡೆಯುತ್ತೀರಿ. ವಿಚಲಿತರಾಗಬೇಡಿ. ನಿಮಗೇನು ಸಿಗಬೇಕೋ ಅದು ಮೊದಲೇ ನಿರ್ಧರಿತವಾಗಿದೆ.
ವೃಷಭ: ಮಾಡುವ ಕೆಲಸದಲ್ಲಿ ಆ ಒಂದು ಫಲ ಸಿಗುತ್ತಿಲ್ಲ ಎಂದು ಕೊರಗುತ್ತೀರಿ. ವೈರಾಗ್ಯ ಭಾವಕ್ಕೆ ದೂಡಿಕೊಳ್ಳುತ್ತೀರಿ. ನಿಮ್ಮ ಕೆಲಸ ನೀವು ಮಾಡುತ್ತಾ ಹೋಗಿ. ಯಾವುದೇ ಕೆಲಸವನ್ನು ನಿಮಗೋಸ್ಕರ ಮಾಡಿ, ಇನ್ನೊಬ್ಬರನ್ನ ಮೆಚ್ಚಸಲಿಕ್ಕೆ ಮಾಡಬೇಡಿ.
ಮಿಥುನ: ಇಂದು ದಿನ ಚೆನ್ನಾಗಿದೆ. ಒಡಹುಟ್ಟಿದವರ ಜೊತೆ ಅಥವಾ ಹತ್ತಿರದವರ ಜೊತೆ ಸಣ್ಣ ವಾದ ವಿವಾದಗಳಾಗುತ್ತವೆ. ವೈರಲ್ ಇನ್ ಫೆಕ್ಷನ್, ಬ್ಯಾಕ್ಟೀರಿಯಾ ಇನ್ ಫೆಕ್ಷನ್, ಕೋಲ್ಡ್ ಇನ್ ಫೆಕ್ಷನ್, ಹಾರ್ಟ್ ಅಟ್ಯಾಕ್ ಸಮಸ್ಯೆ, ಗಂಟು ಸಮಸ್ಯೆ, ಮೈಗ್ರೇನ್, ಸೈನಸ್ ಇನ್ ಫೆಕ್ಷನ್, ಸ್ವಲ್ಪ ಬೇಗ ಬರುತ್ತೆ. ಆದ್ದರಿಂದ ದೇಹಕ್ಕೆ ನಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಶಂಕರಾಮೃತ ಸೇವಿಸಿ. ನಿಮ್ಮ ದಿನ ನಿತ್ಯದ ದಿನಚರಿಯಲ್ಲಿ ಶಂಕರಾಮೃತ ಇರಲಿ.

Advertisement

 

Advertisement


ಕರ್ಕಾಟಕ: ಎಲ್ಲಾ ಇದ್ದು ಯಾಕೋ ಓಡಲಿಕ್ಕೆ ಆಗಲಿಲ್ಲ ಎನ್ನುವ ಧಾವಂತ. ಐದು ಪುಟವಾದರೂ ಸುಂದರಕಾಂಡ ಪಠಣ ಮಾಡಿ. ಒಳ್ಳೆಯದಾಗುತ್ತದೆ.
ಸಿಂಹ: ತಂದೆಯವರ ಆರೋಗ್ಯದ ಕಡೆ ಪುಟ್ಟ ಗಮನವಿರಲಿ. ಆತುರದ ನಿರ್ಧಾರ ಆದಷ್ಟು ಮಾಡಲಿಕ್ಕೆ ಹೋಗಬೇಡಿ. ದೊರೆ ಮಟ್ಟದ ಸ್ಥಾನದಲ್ಲಿದ್ದರೆ ಇವತ್ತು ಸ್ವಲ್ಪ ಎಳೆದಾಟವೂ ಇರುತ್ತದೆ.
ಕನ್ಯಾ: ಯಾರನ್ನೋ ಮೆಚ್ಚಿಸಲಿಕ್ಕೆ ಹೋಗಬೇಡಿ. ನಿಶ್ಚಿಂತತೆಯಿಂದಿರಿ. ಆದಷ್ಟು ಧ್ಯಾನ ಮಾಡಿ. ಪುಟ್ಟ ವಿಭೂತಿ ಇದ್ದರೆ ಹಣೆಗೊಂದು ಪಟ್ಟಿ ಹಾಕಿ. ಒಂದು ಬೊಟ್ಟಾದರೂ ಇಟ್ಟುಕೊಂಡು ಹೋಗಿ ತಂಪಾಗಿರುತ್ತೀರಿ. ಧರ್ಮಸ್ಥಳ, ಮಾದೇಶ್ವರ, ನಂಜಡೇಶ್ವರ, ಮುರುಡೇಶ್ವರ ದೇವಸ್ಥಾನದ ಒಂದು ಚಿಟಿಕೆ ಪ್ರಸಾದ ಇದ್ದರೆ ಸೇವಿಸಿ. ಸಮಾಧಾನ ಸಿಗುತ್ತದೆ.
ತುಲಾ: ನೀವು ಮಾಡಲಾರಿರಿ, ಮಾಡುವವರು ನಿಮ್ಮನ್ನು ಗಲಿಬಿಲಿ ಮಾಡ್ತಾರೆ. ಆ ಗಲಿಬಿಲಿಯಿಂದ ಇಂತಹದೊಂದು ವಿಚಿತ್ರ ಪರಿಸ್ಥಿತಿ. ಮನೆಯಲ್ಲಿ ಮನೆದೇವರಿಗೆ ಆದಷ್ಟು ತುಪ್ಪದ ದೀಪ ಹಚ್ಚಿ. ಆ ವಿಚಲಿತ ಮನಸ್ಸು ದೂರವಾಗುತ್ತದೆ.

ವೃಶ್ಚಿಕ: ಆರೋಗ್ಯದ ಕಡೆ ಗಮನ ಕೊಡಿ, ತಲೆನೋವು, ತಲೆಭಾರ, ಬಾಯಿಹುಣ್ಣು ಆಗುವಂತಹ ಸಮಸ್ಯೆ ಜಾಸ್ತಿ. ತುಂಬಾ ಉಷ್ಣದ ಪ್ರಭಾವವಿದ್ದು, ಪ್ರಕೃತಿಯ ವೈಪರೀತ್ಯ ಆಗುವುದರಿಂದ ಮೂಗು, ಕಿವಿ, ಕಣ್ಣು ಹೊಟ್ಟೆ, ಯೂರಿನರಿ ಭಾಗಗಳಲ್ಲಿ ಸ್ವಲ್ಪ ವೈಪರೀತ್ಯಗಳು ಆಗುತ್ತಲೇ ಇರುತ್ತವೆ. ಸ್ವಲ್ಪ ಜಾಗ್ರತೆ. ಆದ್ದರಿಂದ ಹೆಸರುಕಾಳು ಮೊಳಕೆ ಕಟ್ಟಿ ಪಲ್ಯ ಮಾಡಿ ಅಥವಾ ಕೋಸಂಬರಿ ಮಾಡಿ ಸೇವಿಸಿ ಅಥವಾ ಸವತೆಕಾಯಿ ಎರಡು ತುಂಡು ಜಾಸ್ತಿ ಸೇವಿಸಿ.
ಧನಸ್ಸು: ನನ್ನ ಗತ್ತಿಗೆ ಬೇಕಾದ್ದು ಸಿಗುತ್ತಿಲ್ಲ ಅನ್ನುವ ಭಾವ. ಏನೋ ಸ್ವಲ್ಪ ನೋವು, ಸಂಕಟ, ಎದೆಭಾರ, ಪದೆ ಪದೆ ಬೆವರು ಬರುತ್ತಿದ್ದರೆ, ಸುಸ್ತು ಆಗುತ್ತಿದ್ದರೆ ಆರೋಗ್ಯ ತಪಾಸಣೆ ಮಾಡಿಸಿ. ಕುಡಿತ ಚಟ, ಲಿವರ್ ಸಮಸ್ಯೆ ಇದ್ದರೆ ಎಚ್ಚರಿಕೆಯಿಂದ ಇರಿ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

 

ಮಕರ: ಸ್ನೇಹಿತರು, ಆತ್ಮೀಯರ ವ್ಯವಹಾರಗಳಲ್ಲಿ ಒಂದು ಸಣ್ಣ ಎಳೆದಾಟ. ತುಂಬಾ ನಂಬಿಸಿದವರೇ, ನಾವು ನಂಬಿದವರೇ ಒಂದು ಪೆಟ್ಟಿನ ಮಾತನ್ನು ಆಡುತ್ತಾರೆ. ಅದನ್ನು ಮನಸ್ಸಿಗೆ ತಗೊಬೇಡಿ.
ಕುಂಭ: ಒಡಹುಟ್ಟಿದವರ ಜೊತೆ ಸಣ್ಣ ಮನಸ್ತಾಪ. ಹತ್ತಿರದವರಿಂದ ಘಾಸಿ, ದಿನದ ಆರಂಭ ಸ್ವಲ್ಪ ನಿಧಾನ, ವಿಳಂಬ. ಗಣಪತಿಗೆ ಗರಿಕೆ ಇಟ್ಟು ಸೇವೆ ಮಾಡಿ, ಒಳ್ಳೆಯದಾಗುತ್ತದೆ.
ಮೀನಾ: ಮಾತಿನಲ್ಲಿ ಹುಳಿ, ಹತ್ತಿರದವರಿಂದ ಹುಳಿ, ಕೆಲಸದಲ್ಲಿ ಹುಳಿ, ಪ್ರತಿಫಲದಲ್ಲಿ ಹುಳಿ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಸ್ಕಂದ ಕವಚ ಕೇಳಿ. ಸಮಾಧಾನದಿಂದ ಇರಿ, ಏನೂ ಆಗುವುದಿಲ್ಲ. ಬೊಗಸೆ ಬೆಲ್ಲ, ಬೊಗಸೆ ಕಡಲೆ ಕಾಳು, ಬೊಗಸೆ ಹಣ್ಣು ಸೇರಿಸಿ, ಕಿವುಚಿ ಯಾವುದಾದರೂ ಹಸುವಿಗೆ ತಿನ್ನಿಸಿ . ಒಳ್ಳೆಯದಾಗುತ್ತದೆ. ಗಾಬರಿಯಾಗಬೇಡಿ

Advertisement
Share this on...