ಈ ರಾಶಿಯವರು ಸಂಗಾತಿಯ ಆರೋಗ್ಯದ ಕಡೆ ಗಮನಕೊಡಿ

in ಜ್ಯೋತಿಷ್ಯ 103 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಏಕಾದಶಿ ತಿಥಿ, ಭರಣಿ ನಕ್ಷತ್ರ, ಅತಿಗಂಡ ಯೋಗ, ಬಾಲವಕರಣ, ಜೂನ್ 17, ಬುಧವಾರದ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯ ರಾತ್ರಿ ಬಂದಿರುವುದರಿಂದ ಅದರ ಬಗ್ಗೆ ಗುರೂಜಿ ಅವರು ಉಲ್ಲೇಖ ಮಾಡಿಲ್ಲ. ಆದರೆ ಹೆಸರುಕಾಳಿನ ಆರೋಗ್ಯ ಪ್ರಯೋಜನಗಳ ಕುರಿತು ಕೆಲವು ಮುಖ್ಯವಾದ ಮಾಹಿತಿಗಳನ್ನು ನೀಡಿದ್ದಾರೆ.
ಹೆಸರುಕಾಳಿನ ಆರೋಗ್ಯ ಪ್ರಯೋಜನಗಳು
ಶುದ್ಧ ಹೆಸರುಕಾಳು ತೆಗೆದುಕೊಂಡು ಸ್ವಲ್ಪ ಹುರಿದಿಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಕಾರ, ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿ ಹಾಕಿ ಮಕ್ಕಳಿಗೆ ಕೊಡಿ. ಹೆಸರುಕಾಳು ಶಕ್ತಿವರ್ಧಕ ಆಗಿರುವುದರಿಂದ ಮಕ್ಕಳ ಚುರುಕುತನ ಹೆಚ್ಚಿಸುತ್ತದೆ. ಮುಖ್ಯವಾಗಿ ಇದು ತಂಪುಕಾರಕ ಆಗಿರುವುದರಿಂದ ಉಷ್ಣ ಬಾಧೆಯಿಂದ ಬಳಲುವವರು ಹೆಸರುಕಾಳನ್ನು ಬೇಯಿಸಿ, ಬೇಯಿಸಿದ ನೀರನ್ನು ರಸಂ ತರಹ ಮಾಡಿಕೊಂಡು ಕುಡಿಯುವುದು ತುಂಬಾ ಒಳ್ಳೆಯದು. ಹೆಸರುಬೇಳೆ ಪಾಯಸ ಮಾಡಿ ತಿನ್ನುವುದು ಸಹ ಒಳ್ಳೆಯದು. ಹೆಸರುಕಾಳನ್ನು ನೆನೆಸಿ ದಾಳಿಂಬೆ ಹಾಕಿ ಸೇವಿಸಿ. ಇಲ್ಲವಾದಲ್ಲಿ ಸಬ್ಬಕ್ಕಿ ಹಾಕಿ ಪಾಯಸ ಮಾಡಿ ಇದಕ್ಕೆ ಹೆಸರುಕಾಳು ಸೇರಿಸಿ ಸೇವಿಸಿದರೆ ಅತ್ಯುತ್ತಮವಾದ ರಾಮಬಾಣ. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಕರುಳಿನ ಸೋಂಕಿದೆ, ಹೊಟ್ಟೆ ಹುಣ್ಣಿದೆ, ಮಲಬದ್ಧತೆ ಸಮಸ್ಯೆಯಿದೆ, ಯಾವಾಗಲೂ ಹೊಟ್ಟೆ ಊದಿದ ಹಾಗೆ ಅನಿಸುತ್ತದೆ, ಮಲ ಸರಿಯಾಗಿ ಬರುವುದಿಲ್ಲ ಎನ್ನುವವರು ಈ ಸಬ್ಬಕ್ಕಿಯನ್ನು ಸ್ವಲ್ಪ ಸೇರಿಸಿ ಹೆಸರುಬೇಳೆ ಪಾಯಸ ಮಾಡುವಂತಹ ರೂಢಿಯನ್ನು ಪ್ರತಿ ದಿನ ಮಾಡಿಕೊಳ್ಳಿ.

Advertisement

Advertisement

ರಾಶಿಗಳ ಫಲಾಫಲ ಹೀಗಿದೆ ನೋಡಿ
ಮೇಷ: ಸಂಪಾದನೆ, ಖುಷಿ, ಸಂಭ್ರಮ, ಆನಂದ ಇರುತ್ತದೆ. ಆದರೆ ಮನಸ್ಸು ಸ್ವಲ್ಪ ಪಕ್ಕಕ್ಕೆ ವಾಲಿಸುತ್ತದೆ.
ವೃಷಭ: ಪರಿಶ್ರಮದಿಂದ ಫಲ ವೃದ್ಧಿಯನ್ನು ಪಡೆಯುತ್ತೀರಿ. ಬಂದ ಫಲವನ್ನು ಸ್ವಲ್ಪ ಖರ್ಚು ಮಾಡಿಕೊಂಡು ಬಿಡುತ್ತೀರಿ. ಉಳಿಸಿಕೊಳ್ಳಿ, ಸಿಕ್ಕಾಪಟ್ಟೆ ಖರ್ಚು ಮಾಡಿಕೊಳ್ಳಬೇಡಿ. ಏನಿದೆಯೋ ಅದನ್ನು ನಿಭಾಯಿಸಲಿಕ್ಕೆ ಪ್ರಯತ್ನಿಸಿ.
ಮಿಥುನ: ಯೋಗವನ್ನು ಪಡೆಯುವಂತಹ ದಿನ. ಮನೆಯಲ್ಲಿ ವೃತ್ತಿ ಪರವಾಗಿಯೋ, ಕುಟುಂಬದ ಪರವಾಗಿಯೋ ಶುಭ ಸಮಾರಂಭ, ಶುಭ ಸುದ್ದಿಯನ್ನು ಕೇಳುತ್ತೀರಿ. ಕಲಾವಿದರಿಗೆ ಕಷ್ಟಪಟ್ಟು ಪ್ರತಿಫಲ ನೋಡುತ್ತೀರಿ.
ಕರ್ಕಾಟಕ: ವ್ಯವಹಾರ ನಿಮಿತ್ತ ಶುಭ ಸುದ್ದಿಯನ್ನು ಕೇಳುತ್ತೀರಿ. ದಿನ ಚೆನ್ನಾಗಿದೆ. ಸ್ವಲ್ಪ ಥ್ರೋಟ್ ಇನ್ ಫೆಕ್ಷನ್, ಗಂಟಲುನೋವು, ಸೊಂಟ ನೋವು, ಬೆನ್ನು ನೋವು ಈ ತರಹದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ವಲ್ಪ ಒದ್ದಾಟ ಇರುತ್ತದೆ. ಆದ್ದರಿಂದ ಎಚ್ಚರಿಕೆ. ಶಂಖ ಮುದ್ರಾ ಅಭ್ಯಾಸ ಮಾಡಿ.

Advertisement

 

Advertisement


ಸಿಂಹ: ತುಂಟರಾಗಿರುತ್ತೀರಿ. ಮನೆಯಲ್ಲಿ ಏನೋ ಒಂದು ಕಲಹ, ಯಾವುದೋ ಒಂದು ಭ್ರಷ್ಟಚಾರ, ಎರಡನೇ ಮದುವೆ, ಎರಡನೇ ಪ್ರೀತಿ ನಿಮ್ಮ ಬದುಕನ್ನು ಕೆಂಡವಾಗಿಸಿಬಿಡುತ್ತದೆ. ಜಾಗ್ರತೆಯಿಂದಿರಿ. ಬಾಣಲೆಯಿಂದ ಬೆಂಕಿಗೆ ಬೀಳುತ್ತೀರಿ.
ಕನ್ಯಾ: ದಿನ ಚೆನ್ನಾಗಿದೆ. ಸ್ವಲ್ಪ ತುಂಟರಾಗಿರುತ್ತೀರಿ. ಒಂದೊಳ್ಳೆ ವಸ್ತ್ರ, ಬಟ್ಟೆ, ವಾಹನ ಇವೆಲ್ಲವನ್ನೂ ಪಡೆಯುವಂತಹ ದಿನ. ಪುಷ್ಕಳ ಭೋಜನ ಸಿಗುತ್ತದೆ.
ತುಲಾ: ಖರ್ಚು ಜಾಸ್ತಿ. ಯೋಗ್ಯತೆಗೆ ತಕ್ಕ ಫಲ ಸಿಗುತ್ತದೆ. ಚಿಂತಿಸಬೇಡಿ.
ವೃಶ್ಚಿಕ: ಸಂಗಾತಿಯ ಆರೋಗ್ಯದ ಕಡೆ ಗಮನಕೊಡಿ. ಸ್ವಲ್ಪ ತುಂಟರು ನೀವಾಗಿರುತ್ತೀರಿ. 30ರ ವಯಸ್ಸಿನವರು 20, 40ರ ವಯಸ್ಸಿನವರು 16 ಆಗಿರುತ್ತೀರಿ. ಆ ತರಹದೊಂದು ಭಾವ. ಆಕಸ್ಮಿಕವಾಗಿ ಒಡಹುಟ್ಟಿದವರ ಜೊತೆ ಅನುಬಂಧ, ಸಹಾಯಕ್ಕೆ ನಿಲ್ಲುವ ದಿನ.

 


ಧನಸ್ಸು: ಜಾಗ್ರತೆಯಿಂದಿರಿ. ಸ್ತ್ರೀಯರಿಗೆ ಸಂಬಂಧಿಸಿದಂತೆ ಯಾವುದೋ ಒಂದು ರೀತಿಯ ಕಲಹದಲ್ಲಿ ತೊಡಗಿಸಿಕೊಂಡಿದ್ದರೆ, ಎಡವಟ್ಟಿದ್ದರೆ ಆದಷ್ಟು ಅದನ್ನು ಉಲ್ಬಣ ಮಾಡಿಕೊಳ್ಳಬೇಡಿ. ಮನೆಯಲ್ಲಿ ದಾಂಪತ್ಯ ವಿಚಾರದಲ್ಲಿ ಕಲಹ ಸಂಭವಿಸಬಹುದು.
ಮಕರ: ಸ್ವಲ್ಪ ಡಯಾಬಿಟಿಸ್ ಸಮಸ್ಯೆ ಇದ್ದರೆ ಜಾಗೃತವಾಗಿರಿ. ಸ್ವಲ್ಪ ಶಂಕರಾಮೃತ ಸೇವಿಸಿ. ಒಂದು ಸ್ವಲ್ಪ ನುಗ್ಗೆ ಸೊಪ್ಪು, ಬಿಲ್ವಾ ಪತ್ರೆ, ಬೇವಿನ ಎಲೆ, ಗರಿಕೆ, ಮೂರು ಲೀಟರ್ ನೀರು ತೆಗೆದುಕೊಂಡು ಅದರಲ್ಲಿ ಹಾಕಿ. ಸಣ್ಣ ಮಂದಾಗ್ನಿಯಲ್ಲಿ ಕಾಯಿಸಿ. ಕಾದು ಕಾದು ಒಂದು ಲೋಟ ಕಷಾಯ ಆದ ನಂತರ ಶೋಧಿಸಿಕೊಂಡು ಅದನ್ನು ಕುಡಿಯಿರಿ. ಅರ್ಧ ಗಂಟೆ ನಂತರ ತಿಂಡಿ ಸೇವಿಸಿ. ಇದರಿಂದ ಪುಷ್ಠಿ, ಧಾತು ವೃದ್ಧಿ, ಬಿಳಿ ರಕ್ತಕಣಗಳ ವೃದ್ಧಿಯಾಗುತ್ತದೆ.

ಕುಂಭ: ದಿನ ಚೆನ್ನಾಗಿದೆ. ಧಿಢೀರ್ ದುಡ್ಡು, ಧಿಢೀರ್ ಹೆಸರು, ಹುಡುಕಿಕೊಂಡು ಬರುತ್ತದೆ. ಶಿಕ್ಷಕರಾಗಿದ್ದರೆ ಒಂದೊಳ್ಳೆಯ ಹೆಸರು, ಕೀರ್ತಿ ಹುಡುಕಿಕೊಂಡು ಬರುತ್ತದೆ.
ಮೀನಾ: ವಿಶೇಷ ಫಲವನ್ನು ಕಾಣುವಂತಹ ಅದ್ಭುತವಾದ ಸಂಕೇತ. ದಿನ ಚೆನ್ನಾಗಿದೆ. ಒಡುಹುಟ್ಟಿದವರು ಸಹಾಯ ಮಾಡುವ ದಿನ, ಖುಷಿಯ ದಿನ. ವಿಶೇಷವಾಗಿ ಋತುಸ್ತ್ರಾವ ಸಮಸ್ಯೆ ಇರುವವರು ಜಾಗ್ರತೆ. ಸ್ವಲ ಹೊಟ್ಟೆ ನೋವು ಇರುತ್ತದೆ. ಹೊಕ್ಕಳಿಗೆ ಸ್ವಲ್ಪ ಹರಳೆಣ್ಣೆ ಹಾಕಿಕೊಳ್ಳಿ.

Advertisement
Share this on...