ಇಂದು ಈ ಮೂರು ರಾಶಿಯವರು ಬಹಳ ಎಚ್ಚರದಿಂದ ಇರಬೇಕು !

in ಜ್ಯೋತಿಷ್ಯ 44 views

ಇಲ್ಲಿ ಶ್ರೀ. ಶ್ರೀ. ರವಿಶಂಕರ್ ಗುರೂಜಿ ಅವರು ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಮೂಲ ನಕ್ಷತ್ರ, ಶುಭ ಯೋಗ ಇವತ್ತಿನ ಅಂದರೆ ಜೂನ್ 7ರ ಪಂಚಾಂಗ ಫಲದ ಮಾಹಿತಿ ನೀಡಿದ್ದಾರೆ. ಅದಕ್ಕೂ ಮುನ್ನ ಗುರೂಜಿ ಅವರು ತಿಳಿಸಿರುವ ಗ್ರಹಣದ ಬಗೆಗಿನ ಒಂದಿಷ್ಟು ಮಾಹಿತಿಯನ್ನು ನೋಡಿ…
ಈ ಸಮಯದಲ್ಲಿ ಸುಮ್ಮನಿರುವುದು ಒಳಿತು
ಗ್ರಹಣ ಸಂಭವಿಸುವ ಸಮಯದಲ್ಲಿ 7 ದಿನ ಮುಂಚೆ ಅಥವಾ 7 ದಿನದ ನಂತರ ಆದಷ್ಟು ಶುಭ ಕಾರ್ಯಗಳನ್ನು ಮಾಡಬಾರದು. ಈ ಸಂದರ್ಭದಲ್ಲಿ ಶುಭ ಕಾರ್ಯ ಮಾಡುವುದು ಒಂದು ಸಾವಿನ ಮನೆ ತರಹ ಇರುತ್ತದೆ. ಮಾತುಕತೆ, ವ್ಯವಹಾರ, ಹೊಸ ಒಪ್ಪಂದ, ಹೊಸ ಸಹಿ, ಹೊಸ ಅನ್ವೇಷಣೆ ಏನನ್ನೂ ಮಾಡಬೇಡಿ. ಈ ಸಂದರ್ಭದಲ್ಲಿ ಬದಲಾಯಿಸುತ್ತಿದ್ದೇವೆ ಎಂದರೆ ಪೆಟ್ಟು ತಿನ್ನುತ್ತೇವೆ ಎಂದರ್ಥ. ಆದ್ದರಿಂದ ಜಾಗ್ರತೆಯಾಗಿರಬೇಕು. ಯಾವತ್ತಿಗೂ ಅವತ್ತೇ ಗಾಯ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಏನಾದರೂ ಮದುವೆ ಮಾತುಕತೆ, ಕಂಪೆನಿ ಆರಂಭ ಮಾಡುವುದು ಇದ್ದರೆ ಈ ಹದಿನೈದು ದಿನ ನಿಲ್ಲಿಸಿ.

Advertisement

 

Advertisement


ಮೇಷ: ಈ ರಾಶಿಯವರಿಗೆ ಇಂದು ಸ್ವಲ್ಪ ತಳಮಳವೇ. ಗಾಬರಿಯಾಗಿರುತ್ತೀರಿ. ಆದರೂ ಯಾವುದೋ ಒಂದು ಶುಭ ಸುದ್ದಿಯನ್ನು ಉದ್ಯೋಗ, ಕುಟುಂಬದ ಕಡೆಯಿಂದ ಪಡೆಯುತ್ತೀರಿ. ಚಂದ್ರ ಕೇತು ಸೇರಿದಾಗ ಇನ್ ಫೆಕ್ಷನ್ ಜಾಸ್ತಿ. ಆದ್ದರಿಂದ ಮೊದಲೇ ಸೈನಸ್ , ಆರ್ಥ್ರೈಟಿಸ್, ವೀಸಿಂಗ್, ಸ್ಟ್ರೋಕ್, ಕಿಡ್ನಿ, ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ ಇರುವವರು ಎಚ್ಚರದಿಂದಿರಿ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆಗಳ ಬಗ್ಗೆ ವಿಶೇಷ ಎಚ್ಚರವಹಿಸಿಬೇಕು. ಆದ್ದರಿಂದ ಮೇಷ ರಾಶಿಯವರು ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ವೃಷಭ: ನೀವು ಊಹೆಯೇ ಮಾಡಿರುವುದಿಲ್ಲ, ಆದರೆ ಇಂದು ಕುಟುಂಬದವರೆಲ್ಲಾ ಒಟ್ಟಾಗುತ್ತೀರಿ. ಆದರೂ ವೈರಾಗ್ಯ. ಅನುಭವಿಸಲಿಕ್ಕೆ ಆಗುವುದಿಲ್ಲ. ಏನಿದ್ದೂ ಏನು ಬಂತು ಪ್ರಯೋಜನ, ಮಕ್ಕಳು, ಮನೆಯವರೇ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಮನೋಭಾವ. ಯಾರೋ ಒಂದು ರೀತಿಯಲ್ಲಿ ಚುಚ್ಚಿದ ರೀತಿ ನಿಮ್ಮನ್ನು ಭಾಧಿಸುತ್ತದೆ. ಆದರೆ ಒಳ್ಳೆಯ ಸುದ್ದಿಯೂ ಉಂಟು.
ಮಿಥುನ: ಕುಟುಂಬದಲ್ಲಿ ಯಾವುದೋ ಒಂದು ಕಡೆಯಿಂದ ಶುಭ ಸುದ್ದಿ ಕೇಳಿಬರುತ್ತದೆ. ಅಧಿಕಾರ, ವ್ಯವಹಾರ, ಸ್ಥಾನ, ಉದ್ಯೋಗದ ಪರವಾಗಿ ಒಂದು ಬದಲಾವಣೆಯ ಚಿಂತೆಯಲ್ಲಿರುವುದರಿಂದ ನಿಮಗೆ ಖಂಡಿತ ಯಶಸ್ಸು ಸಾಧ್ಯ.

Advertisement

 

Advertisement


ಕರ್ಕಾಟಕ: ಇಂದು ಈ ರಾಶಿಯವರಿಗೆ ಪರಿಶ್ರಮ ಜಾಸ್ತಿ. ಇವತ್ತು ನಿಮಗೆ ಭಾನುವಾರ ಭಾನುವಾರದ ರೀತಿ ಇರುವುದಿಲ್ಲ. ಒಂದು ರೀತಿಯ ಒತ್ತಡ ಇರುತ್ತದೆ. ಅದು ಶುಚಿ ಮಾಡು, ಇದು ಶುಚಿ ಮಾಡು ಎಂಬ ಕಾರ್ಯಗಳಲ್ಲೇ ಮುಳುಗಿ ಹೋಗುತ್ತೀರಿ. ಒಂದು ಚೂರು ತೊಳಲಾಟ ಇದ್ದೇ ಇರುತ್ತದೆ. ಯಾವುದೋ, ಯಾರದೋ ಹಳೆಯ ಮಾತುಗಳನ್ನು ನೆನಪಿಸಿಕೊಂಡು ಬಳಲುತ್ತೀರಿ. ಸ್ವಲ್ಪ ಮಂಡಿ ನೋವು, ಮೈ ಕೈ ನೋವು ಇರುತ್ತದೆ. ಅಂತಹವರು ತಿಂಡಿಯಲ್ಲಿ ಒಂದು ಚೂರು ಶುದ್ಧ ತುಪ್ಪ ಸೇವಿಸಿ. ಸ್ವಲ್ಪ ಶಂಕಾರಮೃತ ಸೇವಿಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜಾಯಿಂಟ್ ಪೇನ್, ಬಾಡಿ ಪೇನ್ ಇದ್ದರೆ ವಾಸಿಯಾಗುತ್ತದೆ. ತುಂಬಾ ಬ್ಯಾಕ್ ಪೇನ್ ಇದ್ದರೆ ಶಂಕ ಮುದ್ರ ಹಾಕಿ ಸಹಾಯ ಮಾಡುತ್ತದೆ.
ಸಿಂಹ: ಮಕ್ಕಳ ವಿಚಾರದಲ್ಲಿ ಸ್ವಲ್ಪ ಖರ್ಚು ವೆಚ್ಚ ಇರುತ್ತದೆ. ಯಾರಾದರೂ ಮಕ್ಕಳ ವಿಚಾರದಲ್ಲಿ ಶಾಲಾ ಫೀಸ್ ಅದು-ಇದು ಎಂದು ತಲೆ ತಿಂದರೆ ತಲೆಗೆ ಹಾಕಿಕೊಳ್ಳಬೇಡಿ. ಅದೇನು ಆಗಬೇಕೋ ಆಗುತ್ತದೆ. ನಮ್ಮ ಮಕ್ಕಳ ಜೀವನವನ್ನು ಹಾಳು ಮಾಡುವುದಕ್ಕೆ ಆಗುವುದಿಲ್ಲ. ಒಂದು ವರ್ಷ ಏನು ಆಗುವುದಿಲ್ಲ. ಅಕ್ಟೋಬರ್ ಕಳೆಯಲಿ. ದಯವಿಟ್ಟು ರಿಸ್ಕ್ ತಗೊಬೇಡಿ. ಮಕ್ಕಳನ್ನು ಈಗಲೇ ಶಾಲೆಗೆ ಕಳುಹಿಸಬೇಡಿ.

 


ಕನ್ಯಾ: ಲಾಭಧಿಪತಿ ಸುಖ ಸ್ಥಾನದಲ್ಲಿದ್ದಾನೆ. ಸಪ್ತಮಾಧಿಪತಿ ಸ್ವಲ್ಪ ವಕ್ರದಲ್ಲಿದ್ದರೂ ಸಂಭ್ರಮದ ಛಾಯೆ. ಆದ್ದರಿಂದ ಈ ರಾಶಿಯವರು ಇಂದು ಆತ್ಮೀಯರು, ಕುಟುಂಬ, ಮಾತುಕತೆ ವಿಷಯದಲ್ಲಿ ಮುಳುಗಿರುತ್ತೀರಿ. ಒಂದು ರೀತಿಯಲ್ಲಿ ನಿಮಗಿಂದು ಭಾನುವಾರದ ಬಾಡೂಟದ ತರಹ ಭಾಸವಾಗುತ್ತದೆ.
ತುಲಾ: ಒಂದು ರೀತಿಯಲ್ಲಿ ಇಂದು ನಿಮಗೆ ಆತಂಕ. ಧೈರ್ಯವಾಗಿ ಕಾಣಿಸ್ತಾ ಇರ್ತೀರಾ. ಒಳಗಡೆ ಅದ್ಯಾಕೊ ಮನಸ್ಸು ಸರಿ ಇರುವುದಿಲ್ಲ. ಗಾಬರಿ ಅನಿಸುತ್ತಾ ಇರುತ್ತದೆ. ಆದ್ದರಿಂದ ನೀವು ಇಂದು ಗಣಪತಿಗೆ ಒಂದು ಪುಟ್ಟ ಜೇನುತುಪ್ಪದ ಅಭಿಷೇಕ ಮಾಡಿ ಸೇವಿಸಿ. ಸಮಾಧಾನ ಸಿಗುತ್ತದೆ.
ವೃಶ್ಚಿಕ: ನಿಮಗೆ ಇಂದು ಭಾಗ್ಯ ವೃದ್ಧಿಯಾಗಲಿದೆ. ಯಾರದ್ದೋ ಶುಭ ಕಾರ್ಯ ಕೇಳುತ್ತೀರಿ. ಅದು ಒಡಹುಟ್ಟಿದವರದ್ದು ಆಗಿರಬಹುದು. ಅಕ್ಕ, ತಂಗಿ, ಅಣ್ಣ ಹೀಗೆ ಯಾರದ್ದೋ ಕಡೆಯಿಂದ ಶುಭ ವಿಚಾರ ಕೇಳುವಿರಿ.
ಧನಸ್ಸು: ಮನಸ್ಸು ಸ್ತೀಮಿತದಲ್ಲಿ ಇರುವುದಿಲ್ಲ, ಯಾರೋ ನಿಮ್ಮನ್ನು ಪ್ರಚೋದನೆ ಮಾಡ್ತಾರೆ. ಯಾರೋ ಕರೆದುಕೊಂಡು ಹೋಗಿ ಹಳ್ಳದಲ್ಲಿ ತಳ್ಳಿಬಿಡ್ತಾರೆ. ಆದ್ದರಿಂದ ಇಂದು ಜಾಗೃತರಾಗಿರಬೇಕು.
ಮಕರ: ನಿಮಗಿಂದು ಖರ್ಚು ವೆಚ್ಚವಿರುತ್ತದೆ. ಆದರೆ ಒಳ್ಳೆಯದಕ್ಕೆ ಆಗುತ್ತದೆ. ಮನೆಗೋಸ್ಕರ, ಮನೆಯವರಿಗೋಸ್ಕರ, ಕುಟುಂಬಕ್ಕೋಸ್ಕರ, ತುಂಬಾ ಒಳ್ಳೆಯದಾಗುತ್ತದೆ.

 

ಕುಂಭ: ಗುಪ್ತ ಶತ್ರುಗಳು, ಗುಪ್ತ ಭಾಧೆಗಳು, ಗುಪ್ತ ರೋಗಗಳ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ನೀವಿಂದು ಜಾಗೃತರಾಗಿರಿ. ಆದರೆ ಅದಕ್ಕೂ ರಾಮಬಾಣವಿದೆ. ನೇರಳೆ ಮರದ ಪಂಚಾಂಗ ಚೂರ್ಣ ಅಂದರೆ ಹೂವು, ಎಲೆ, ಕಾಂಡ, ತೊಗಟೆ, ಬೇರು ತೆಗೆದುಕೊಂಡು ಬನ್ನಿ. ಅದನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ. (4 ಲೀಟರ್ ಇದ್ದರೆ 1 ಲೀಟರ್ ಆಗುವಷ್ಟು ಕುದಿಸಬೇಕು) ನಂತರ ಕುದಿಸಿದ ನೀರನ್ನು ವಸ್ತ್ರದಲ್ಲಿ ಅದ್ದಿ ಗುಪ್ತ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿ ಅಥವಾ ನಾಲ್ಕನೇ ಒಂದು ಭಾಗ ಸೇವಿಸಬೇಕು. ಈ ರೀತಿಯ ಸಮಸ್ಯೆಗಳು ದೇಹದಲ್ಲಿ ನಿರೋಧಕ ಶಕ್ತಿ ಕಡಿಮೆಯಾದಾಗ ಆಗುತ್ತದೆ. ಅದಕ್ಕೆ ಮಿತಿ ಮೀರಿ ಊಟ ಮಾಡಬಾರದು. ಅಧಿಕವಾಗಿ ಸಂಪಾದನೆ, ಯೋಚನೆ, ಕೆಲಸ, ನಿದ್ರೆ ಮಾಡಬಾರದು. ಮಿತಿ ಮೀರಿ ಹೋಗುತ್ತಿರುವುದಕ್ಕೆ ಇದೆಲ್ಲಾ ಸಂಭವಿಸುತ್ತಿರುವುದು. ನೀವು ಬೆಳಗ್ಗೆ ಎದ್ದ ತಕ್ಷಣ ಶಂಕರಾ ಅಮೃತ ಸಿರಪ್ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮೀನಾ: ವೃತ್ತಿ, ಕುಟುಂಬದ ಕಡೆಯಿಂದ ಒಂದು ಶುಭ ಸುದ್ದಿ ಕೇಳುತ್ತೀರಿ. ಮನೆಯಲ್ಲಿ ಸಂಭ್ರಮ, ಆನಂದ ಇರುತ್ತದೆ. ಅಮ್ಮನಿಗೇನಾದರೂ ಸ್ವಲ್ಪ ಮಂಡಿ ನೋವು ಆಗಬಹುದು. ಒಂಚು ಚೂರು ಜಾಸ್ತಿ ಆಗ್ತಿದೆ ಅನಿಸಿದಾಗ ಎಳ್ಳೆಣ್ಣೆ ತೆಗೆದುಕೊಂಡು, ಇದಕ್ಕೆ ಸ್ವಲ್ಪ ಪಚ್ಚೆ ಕರ್ಪೂರ, ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯದ ಹಾಗೆ ಹಾಕಿ, ಬಿಸಿ ಮಾಡಿ, ಮಂಡಿಗೆ ಹಚ್ಚಿ. ನೆನಪಿಡಿ, ಊಟಕ್ಕೆ ಎಳ್ಳೆಣ್ಣೆಗಿಂತ ಶ್ರೇಷ್ಟ ಮತ್ತೊಂದಿಲ್ಲ.

Advertisement
Share this on...