ಇಂದು ಈ ರಾಶಿಯವರಿಗೆ ಶುಭಸುದ್ದಿ !

in ಜ್ಯೋತಿಷ್ಯ 41 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ,  ಶುಕ್ಲ ಪಕ್ಷದ ದ್ವಿತೀಯ ತಿಥಿ, ಪುನರ್ವಸು  ನಕ್ಷತ್ರ,  ಧ್ರುವ ಯೋಗ, ಕೌಲವ ಕರಣ, ಜೂನ್ 23  ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ 11 ಗಂಟೆ 8  ನಿಮಿಷದಿಂದ 12 ಗಂಟೆ 44 ನಿಮಿಷದವರೆಗೆ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಭಗವಂತ ದಾರಿಯನ್ನು ತೋರಿಸುತ್ತ ಇರುತ್ತಾನೆ. ಭಗವಂತ ಪ್ರತಿನಿತ್ಯ ಸನ್ನೆ ಗಳನ್ನು ಕಳಿಸುತ್ತಿರುತ್ತಾರೆ,   ನಮ್ಮಲ್ಲಿಯೇ ಕೀರ್ತಿ ಯಶಸ್ಸು ಎಲ್ಲ ರೀತಿಯ ಗುಣಗಳು  ಇರುತ್ತವೆ,  ಆದರೆ ನಾವು ಅದನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ನಮಗೆ ಯಶಸ್ಸು ಮತ್ತು ಲಾಭ ಸಿಗುತ್ತದೆ,

Advertisement

 

Advertisement


 ನಿಮ್ಮ ರಾಶಿಗಳ ಫಲ ಹೀಗಿದೆ:

Advertisement

ಮೇಷ ರಾಶಿ : ಚಂದ್ರ ಗುರು ಸಾರದಲ್ಲಿದ್ದು,  ಆ ಗುರು ಸಪ್ತಮದಲ್ಲಿ  ವಕ್ರವಾಗಿ ಸೂರ್ಯನ ಸಾರದಲ್ಲಿದ್ದಾನೆ,  ಸರಕಾರಿ ಮಟ್ಟದ,  ಸ್ವಂತ ಮಟ್ಟದ,  ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಸ್ವಲ್ಪ ವಿಚಲಿತವಾದರೂ ಧೈರ್ಯವಾಗಿ ಮುನ್ನಡೆಸುತ್ತೀರ, ಶುಭ ಸುದ್ದಿಯನ್ನು ಕೇಳುತ್ತೀರ.

Advertisement

ವೃಷಭ ರಾಶಿ: ಸ್ವಲ್ಪ ಹಣಕಾಸು ಬಿಕ್ಕಟ್ಟು,  ಕುಟುಂಬದ ಬಿಕ್ಕಟ್ಟು,  ಮಕ್ಕಳ ವಿಚಾರದಲ್ಲಿ ಒಂದು ಸಣ್ಣ ತೊಳಲಾಟ,  ವ್ಯವಹಾರ ನಿಮಿತ್ತ,  ಮದುವೆ ನಿಮಿತ್ತ,  ಶುಭ ಕಾರ್ಯ ನಿಮಿತ್ತ,  ಸ್ವಲ್ಪ ಕಂಪನಗಳಿವೆ,  ಆಷಾಢ ಮಾಸ ಕಳಿಯಲಿ ದುಡುಕಬೇಡಿ.

ಮಿಥುನ ರಾಶಿ: ಗುರು ಸಾರದಲ್ಲಿ ಚಂದ್ರ ಇರುವುದರಿಂದ ಸ್ವಲ್ಪ ಅಳುಕಿನ ಬುದ್ಧಿ ಆದರೆ ಗೆದ್ದುಕೊಂಡು ಬರುತ್ತೀರಾ , ಆಗುತ್ತೋ ಆಗಲ್ವೋ,  ಮಾಡಲು ಬೇಡವೋ  ಎಂಬ ತಳಮಳವಿರುತ್ತದೆ,  ಆದರೆ ನಿಮ್ಮ ಕೆಲಸವನ್ನು ಧೈರ್ಯವಾಗಿ ಮಾಡಿ  ಮುಂದೆ ಹೆಜ್ಜೆ ಇಡಿ ಗೆಲುವು ನಿಮ್ಮದೆ .

 

ಕರ್ಕಾಟಕ ರಾಶಿ: ಸ್ವಲ್ಪ ಖರ್ಚು ವೆಚ್ಚಗಳ ದಿನ, ಆತಂಕ ಏನೂ ಇಲ್ಲ,  ಎಲ್ಲವೂ ಒಳ್ಳೆಯದಕ್ಕೆ ಖರ್ಚಾಗುತ್ತದೆ, ಶುಭ ಕಾರ್ಯಕ್ಕೆ ಖರ್ಚಾಗುತ್ತದೆ,  ಆಕಸ್ಮಿಕವಾಗಿ ದೈವದರ್ಶನ,  ಗುರು ದರ್ಶನವಾಗುತ್ತದೆ, ಆತ್ಮೀಯರ ದರ್ಶನವಾಗುತ್ತದೆ,  ಆತ್ಮೀಯರಿಂದ ಒಳ್ಳೆಯ ಮಾತು ಕೂಡ ಕೇಳಿ ಬರುತ್ತದೆ,

ಸಿಂಹ ರಾಶಿ: ಧರ್ಮದ ಹಾದಿಯಲ್ಲಿ ಹೇಗಾದರೂ ಮಾಡಿ ಹಣವನ್ನು ಸಂಪಾದನೆ ಮಾಡಬೇಕು ಎಂದುಕೊಳ್ಳುತ್ತೀರಿ , ಅದೇ  ರೀತಿ ಖರ್ಚುಗಳು ಕೂಡ ಬರುತ್ತವೆ,  ಧರ್ಮದ ಹಾದಿ ತುಂಬಾ ಕಷ್ಟ, ಆದರೆ ಅದು ಕೊಡುವಷ್ಟು ಹೆಸರು ನೆಮ್ಮದಿಯನ್ನು ಯಾವುದೂ ಕೂಡ ಕೊಡಲು ಆಗುವುದಿಲ್ಲ , ಅಧರ್ಮದ ಹಾದಿ ತುಂಬಾ ಸುಲಭ ,  ಆದರೆ ಅದರಿಂದ ಒಂದು ಎರಡು ದಿನ ಮಾತ್ರ ಖುಷಿಯಾಗಿರಬಹುದು ಆದರೆ ಅದರಿಂದ ಕಷ್ಟ ಕಟ್ಟಿಟ್ಟ ಬುತ್ತಿ , ಧರ್ಮಮಾರ್ಗದಿಂದ ಸಿಂಹ ರಾಶಿಯವರಿಗೆ ಒಂದು ಸೌಭಾಗ್ಯವಿದೆ.

ಕನ್ಯಾ ರಾಶಿ : ಚೆನ್ನಾಗಿದೆ ಉದ್ಯೋಗ ನಿಮಿತ್ತ,  ಪರಿಶ್ರಮಕ್ಕೆ ತಕ್ಕಂತೆ ಶುಭ ಸುದ್ದಿಯೊಂದನ್ನು ಪಡೆಯುವಂತಹ ವಿಶೇಷತೆ ಇದೆ, ಗುರು ವಕ್ರವಾಗಿರುವುದರಿಂದ  ಮಕ್ಕಳ ವಿಚಾರದಲ್ಲೊಂದು ಸಣ್ಣ ಟೆನ್ಷನ್ ಮಾಡಿಕೊಳ್ಳುತ್ತೀರಿ. ಎಲ್ಲವೂ ಸರಿಹೋಗುತ್ತದೆ. ಅದಕ್ಕೆ  ಸ್ವಲ್ಪ ಸಮಯ ಕೊಡಬೇಕು ಆ ಸಮಯಕ್ಕಾಗಿ ಕಾಯಬೇಕು ಅಷ್ಟೇ.

 

ತುಲಾ ರಾಶಿ : ಸ್ವಲ್ಪ ತಂದೆ,  ತಾಯಿ ,  ಗುರು,  ಹಿರಿಯರ,  ಆರೋಗ್ಯದ ಮೇಲೆ ಏರುಪೇರು,  ತಗಾದೆ,  ಕೋರ್ಟಿನ  ಸಮಸ್ಯೆ ಗಳ ಉಲ್ಬಣ , ಎಲ್ಲವೂ ಸರಿಹೋಗುತ್ತದೆ,  ಗುರು ವಕ್ರ ವಾಗಿರುವುದರಿಂದ ಗಣಪತಿಯ ಪೂಜೆಯನ್ನು ಪ್ರತಿನಿತ್ಯ ಮಾಡಿ ಅಥವಾ ಅನಾಥ ಮಕ್ಕಳಿಗೆ ಸಿಹಿಯನ್ನು ಹಂಚಿ ಒಳ್ಳೆಯ ಸುದ್ದಿಯನ್ನು ಖಂಡಿತವಾಗಿ ಕೇಳುತ್ತೀರಿ.

ವೃಶ್ಚಿಕ ರಾಶಿ : ಗುರು ಸಾರದಲ್ಲಿ ಚಂದ್ರನಿದ್ದಾನೆ ಯಾವಾಗಲೂ ನಾವು ಮಾಡಿದಂತ  ಒಳ್ಳೆಯ ಕಾರ್ಯ ದಿಂದ ನಮಗೆ ಒಳ್ಳೆಯದಾಗುತ್ತದೆ, ಶುಭ ಸುದ್ದಿಯೊಂದು ಬರುತ್ತದೆ.

ಧನಸ್ಸು ರಾಶಿ : ಚೆನ್ನಾಗಿದೆ ಸ್ವಲ್ಪ ಕಷ್ಟಪಡಬೇಕು ಅನ್ನಿಸುತ್ತದೆ ತೊಳಲಾಟವಿರುತ್ತದೆ,  ಆತಂಕಕ್ಕೆ ಒಳಗಾಗಬೇಡಿ ಚೆನ್ನಾಗಿದೆ,  ಗಮ್ಯದ ಕಡೆಗೆ ಹೆಜ್ಜೆ ಹಾಕುತ್ತೀರಿ,  ಗಣಪತಿ ಪೂಜೆಯನ್ನು ಮಾಡಿ,  ನೈವೇದ್ಯವನ್ನು ಸೇವಿಸಿ , ತಂದೆ ತಾಯಿಗಳಿಂದ ಹತ್ತು ರೂಪಾಯಿಗಳನ್ನಾದರೂ ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡು ಹೋಗಿ ಶಿವಪ್ರಸಾದ ದಿಂದ  ಒಳ್ಳೆಯದಾಗುತ್ತದೆ.

ಮಕರ ರಾಶಿ : ಯಾವುದೋ ಒಂದು ಹಣಕಾಸಿನ ವಿಷಯದಲ್ಲಿ ಒದ್ದಾಟ ತೊಳಲಾಟವಿರುತ್ತದೆ ಅದರ ಜತೆಗೆ ಅದರಿಂದ ಹೊರಬರುವ ಪರಿಹಾರವೂ ಕೂಡ ಇದೆ.

ಕುಂಭ ರಾಶಿ:  ಸ್ವಲ್ಪ ಆರೋಗ್ಯದ ಕಡೆಗೆ ಗಮನವಹಿಸಿ ಹಣಕಾಸಿನ ಸ್ಥಿತಿಗಳ ಕಡೆ ಗಮನ ವಹಿಸಿ ಶುಕ್ರ ಬೇರೆ ವಕ್ರ ವಾಗಿರುವುದರಿಂದ ಬಿಪಿ,  ಶುಗರ್ ಗಳು ಹೆಚ್ಚಾಗುತ್ತವೆ,  ಒತ್ತಡ ಹೆಚ್ಚೆನಿಸುತ್ತದೆ , ಒತ್ತಡಕ್ಕೆ ಒಂದು ಮನೆ ಮದ್ದನ್ನು ಗುರೂಜಿ ರವರು ತಿಳಿಸಿದ್ದಾರೆ,  100  ಗ್ರಾಂ ನಷ್ಟು ಮೆಂತ್ಯೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ , 70 ಗ್ರಾಂ ಕಪ್ಪು ಜೀರಿಗೆಯನ್ನು ಹುರಿದಿಟ್ಟುಕೊಳ್ಳಿ , 30 ಗ್ರಾಪಂಗಳನ್ನು ಹುರಿದಿಟ್ಟುಕೊಳ್ಳಿ , ಈ ಮೂರು ಪದಾರ್ಥಗಳನ್ನು ಕುಟಾಣಿಯಲ್ಲಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ (ಮಿಕ್ಸಿಯಲ್ಲಿ ಬೇಡ )  ಪುಡಿಯನ್ನು ಬೆಳಗ್ಗೆ,  ಮಧ್ಯಾಹ್ನ,  ಸಂಜೆ , ಮತ್ತು ರಾತ್ರಿ , ದಿನಕ್ಕೆ ನಾಲ್ಕು ಬಾರಿಯಂತೆ ಒಂದು ಚಮಚ ಪುಡಿಯನ್ನು ಸೇವಿಸಿ. ಜೇನುತುಪ್ಪದೊಂದಿಗೆ ಸೇವಿಸಬಹುದು.  ಒಂದು ಲೋಟ ಬಿಸಿ ನೀರಿಗೆ ಹಾಕಿ ಅರ್ಧ ಗಂಟೆಯ ನಂತರ ಮಿಕ್ಸ್ ಮಾಡಿ ಸೇವಿಸಬಹುದು,  ಅಥವಾ ಊಟದ ಮೊದಲನೇ ತುತ್ತಿನ ಜೊತೆ ಒಂದು ಚಮಚ ಪುಡಿಯನ್ನು ಸೇರಿಸಿ  ಸೇವಿಸಿ,  ಇದರಿಂದ ಬಿಪಿ ಶುಗರ್ ಕಡಿಮೆಯಾಗುತ್ತದೆ , ಅದರಲ್ಲೂ ವಿಶೇಷವಾಗಿ ಕುಂಭ ರಾಶಿಯವರು ಅದರ ಜೊತೆಗೆ ಶಂಕರಾಮೃತವನ್ನು ದಿನಕ್ಕೆ ಎರಡು ಬಾರಿ  ಒಂದು ಚಮಚದಂತೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶಂಕರಾಮೃತ ಪಡೆಯಲು 08045549465 / 08045549466 ಗೆ ಕರೆಮಾಡಬಹುದು

ಮೀನ ರಾಶಿ : ಉದ್ಯೋಗ,  ಕುಟುಂಬ , ಮಕ್ಕಳು,  ವ್ಯವಹಾರ,  ಅಧಿಕಾರ ನಿಮಿತ್ತ , ಒಂದು ಶುಭ ಸುದ್ದಿಯನ್ನು ಕೇಳುವಿರಿ , ಅದ್ಭುತವಾದ ದಿನ ಒಳ್ಳೆಯದಾಗುತ್ತದೆ.

Advertisement
Share this on...