ಈ ರಾಶಿಯವರಿಗೆ ನಡೆದದ್ದೇ ದಾರಿ ಇಂದು…

in ಜ್ಯೋತಿಷ್ಯ 111 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ, ಪೂರ್ವಫಾಲ್ಗುಣಿ ನಕ್ಷತ್ರ ನಕ್ಷತ್ರ, ಜೂನ್ 27 ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.

Advertisement

Advertisement

 ನಿಮ್ಮ ರಾಶಿಗಳ ಫಲ  ಹೀಗಿದೆ:

Advertisement

ಮೇಷ ರಾಶಿ : ಚೆನ್ನಾಗಿದೆ ಚಂದ್ರ ಶುಕ್ರನ ಸಾರದಲ್ಲಿದ್ದು, ಶುಕ್ರ ಚಂದ್ರನ ಸಾರದಲ್ಲಿದ್ದಾನೆ, ಹಾಲು, ಮೊಸರು, ತುಪ್ಪ, ಉದ್ಯೋಗ ನಿಮಿತ್ತ, ಕುಟುಂಬದ ನಿಮಿತ್ತ, ಒಳ್ಳೆಯ ಸುದ್ದಿಯನ್ನು ಪಡೆಯುವಂತಹ ಒಂದು ಅದ್ಭುತವಾದ ದಿನ.

Advertisement

ವೃಷಭ ರಾಶಿ: ಸ್ವಲ್ಪ ಇಂದು  ಬೇವು ಮತ್ತು ಬೆಲ್ಲ ಎರಡು ಇರುವಂತಹ ದಿನ , ಕತ್ತಲು ಕರಗಿ ಬೆಳಕು ಬರುವಂತೆ,  ಮೋಡವನ್ನು ಸರಿಸಿ ಸೂರ್ಯನ ಕಿರಣಗಳು ಬರುವಂತೆ , ಕಷ್ಟವು ಸರಿದು ಶುಭ ಸುದ್ದಿ ಬರುತ್ತದೆ.

ಮಿಥುನ ರಾಶಿ: ಸ್ವಲ್ಪ ತಲ್ಲಣವಿರುತ್ತದೆ,  ನಿಮಗೂ ಚಂದ್ರನಿಗೂ ಆಗಿ ಬರುವುದಿಲ್ಲ , ಚಂದ್ರ ಶುಕ್ರನ ಸಾರದಲ್ಲಿದ್ದಾನೆ, ಅನುಭವಿಸಲು ಇದ್ದರೂ ಅನಾರೋಗ್ಯವನ್ನು ತಂದುಕೊಳ್ಳುತ್ತೀರಾ , ಸ್ವಲ್ಪ ಅನಾರೋಗ್ಯದ ಚಿಂತನೆ.

 

ಕರ್ಕಾಟಕ ರಾಶಿ: ಅಲಂಕಾರ ವಯ್ಯಾರ, ಶಾಪಿಂಗ್ ಮಾಡುವಂತಹ  ದಿನ ,

ಸಿಂಹ ರಾಶಿ: ಚೆನ್ನಾಗಿದೆ,  ಅಂದುಕೊಂಡ ಕಾರ್ಯಗಳೆಲ್ಲವನ್ನು ಸಾಧಿಸಿ ಕೊಳ್ಳುವಂತಹ ದಿನ ,

ಕನ್ಯಾ ರಾಶಿ : ತುಂಟತನ,  ನೀವು ತುಂಬಾ ಮುಗ್ಧರು , ನಿಮ್ಮನ್ನು ಬಹುಬೇಗ ಮೂರ್ಖರನ್ನಾಗಿ ಮಾಡಬಹುದು , ಟೋಪಿ ಹಾಕಬಹುದು,  ಮಾತಿಗೆ ಮರುಳಾಗಬೇಡಿ .

ತುಲಾ ರಾಶಿ:  ಚೆನ್ನಾಗಿದೆ , ಕಲಾವಿದರಿಗಂತೂ ಶುಭವಾದ ದಿನ ಕಲಾ ವೇದಿಕೆ ,ಕಲಾ ಸಮಾರಂಭ, ಸಂಗೀತ,  ಮ್ಯೂಸಿಕ್’  ಡ್ಯಾನ್ಸಿಂಗ್ ಮುಂತಾದವುಗಳಲ್ಲಿ ತೊಡಗಿದ್ದರೆ ಪ್ರಗತಿಯಾಗುವಂತಹ ದಿನ .

 

ವೃಶ್ಚಿಕ ರಾಶಿ :  ಸ್ತ್ರೀಯರಾಗಿದ್ದರೆ ಹಂಸನಡಿಗೆ,  ಪುರುಷರಾಗಿದ್ದರೆ ಸಿಂಹ  ನಡಿಗೆ ಇರುತ್ತದೆ ನೀವು ನಡೆದಿದ್ದೇ ದಾರಿ ಇಂದು.

ಧನಸ್ಸು ರಾಶಿ : ತುಂಬಾ ತುಂಟತನದ ದಿನ , ಅತಿಯಾದರೆ ಅಮೃತವೂ ವಿಷ ಎಂಬಂತೆ  ಸ್ವಲ್ಪ ಎಚ್ಚರಿಕೆಯಾಗಿರಿ.

ಮಕರ ರಾಶಿ : ತುಪ್ಪದೊಳಿಗೆಯ  ದಿನ, ಮನರಂಜನೆಯ ದಿನ ಎಂಜಾಯ್ ಮಾಡಿ .

 

 

ಕುಂಭ ರಾಶಿ: ಉದ್ಯೋಗ ನಿಮಿತ್ತ ವ್ಯವಹಾರ ನಿಮಿತ್ತ ಕುಟುಂಬ ನಿಮಿತ್ತ ಒಂದು ಒಳ್ಳೆಯ ಸುದ್ದಿಯನ್ನು ಕೇಳುವಿರಿ , ಪ್ರೀತಿ, ಪ್ರೇಮ, ಉಲ್ಲಾಸಕ್ಕೆ ಕೊರತೆ ಇರುವುದಿಲ್ಲ,  ತಾಯಿಯ ಆರೋಗ್ಯದ ಕಡೆಗೆ ಸ್ವಲ್ಪ ಗಮನ ವಹಿಸಿ .

ಮೀನ ರಾಶಿ : ಬ್ಯಾಕ್ ಪೆಯಿನ್,  ಸ್ಲಿಪ್ ಡಿಸ್ಕ್ , ಶುಗರ್ ಮನೆಯಲ್ಲಿ ಸ್ತ್ರೀಯರಿಗೆ ಸಂಬಂಧಿಸಿದಂತೆ ಯಾವುದಾದರೂ ಕಿರಿಕಿರಿಗಳಿದ್ದರೆ ಅದು ಉಲ್ಬಣಿಸುತ್ತದೆ, ಮನಸ್ಸಿಗೆ ನೋವನ್ನುಂಟು ಮಾಡುತ್ತದೆ , ವೃದ್ಧಿಯ ಸಂಕೇತವೆಂದರೆ ಅದು ಸ್ತ್ರೀ. ಸ್ತ್ರೀ ಎಲ್ಲಿ ಖುಷಿ ಖುಷಿಯಾಗಿ ನಗುನಗುತ್ತಾ ಇರುತ್ತಾಳೊ ಆ ಮನೆಯಲ್ಲಿ ವೃದ್ಧಿಯಾಗುತ್ತದೆ,

Advertisement
Share this on...