ತುಂಬಾ ಶೀತ ಥಂಡಿ ಕಫ ಆಗ್ತಾ ಇದ್ರೆ ಹೀಗೆ ಮಾಡಿ…

in ಜ್ಯೋತಿಷ್ಯ 140 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ, ಶುಕ್ಲ ಪಕ್ಷದ ನವಮಿ ತಿಥಿ, ಹಸ್ತಾ ನಕ್ಷತ್ರ, ಬರಿಗ ಯೋಗ, ಬಾಲವ ಕರಣ, ಜೂನ್ 29   ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಶುದ್ಧ ತುಪ್ಪವನ್ನು ಎರಡು ಹನಿಯಷ್ಟು ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ  ಹಾಕಿಕೊಂಡು ರಾತ್ರಿ ಮಲಗಿಕೊಳ್ಳಿ ಇದರಿಂದ ಮೈಗ್ರೇನ್ ಅರ್ಧ ತಲೆನೋವು  ಕಡಿಮೆಯಾಗುತ್ತದೆ.

Advertisement

ತುಂಬಾ ಶೀತ ಥಂಡಿ  ಕಫ ಆಗ್ತಾ ಇದ್ರೆ ಹೀಗೆ ಮಾಡಿ

Advertisement

ತುಂಬಾ ಶೀತ ಥಂಡಿ  ಕಫ ಆಗ್ತಾ ಇದ್ರೆ ಎರಡು ಚಮಚ ತೆಂಗಿನ ಎಣ್ಣೆ,  ಎರಡು ಚಮಚ ಸಾಸಿವೆ ಎಣ್ಣೆ,  ಎರಡು ಚಮಚ ಹರಳೆಣ್ಣೆ,  ಎರಡು ಬೆಳ್ಳುಳ್ಳಿ ಬೇಳೆಯನ್ನು ಸಿಪ್ಪೆ ತೆಗೆಯದೇ ಜಜ್ಜಿಟ್ಟು ಕೊಳ್ಳಿ,  ಒಂದು ಚಿಟಿಕೆಯಷ್ಟು ಪಚ್ಚ ಕರ್ಪೂರ, ಈ ಮೂರು ಎಣ್ಣೆಯನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಪಚ್ಚ  ಕರ್ಪೂರವನ್ನು ಹಾಕಿ ಬಿಸಿ ಮಾಡಿ ತಣ್ಣಗಾಗಲು ಬಿಡಿ. ಉಗುರು ಬೆಚ್ಚಗಿನ ಎಣ್ಣೆಯನ್ನು ಬೆನ್ನಿಗೆ, ಎದೆಗೆ, ಗಂಟಲಿಗೆ, ಅಂಗಾಲಿಗೆ, ಅಂಗೈಗೆ, ಹಣೆಗೆ, ನೆತ್ತಿಗೆ,  ಹಾಕಿಕೊಳ್ಳಿ ಅದರಲ್ಲೂ ಮಕ್ಕಳು ಮತ್ತು ವಯಸ್ಸಾದವರಿಗೆ ತುಂಬಾ ಶೀತವಾಗಿರುವುದರಿಂದ ಈ ಎಣ್ಣೆಯನ್ನು  ಉಪಯೋಗಿಸುವುದು ತುಂಬಾ ಒಳ್ಳೆಯದು, ಅದರ ಜೊತೆಗೆ ವೀಜಿಂಗ್,  ಅರ್ಥಡೈಸ್,  ಡಸ್ಟ್ ಅಲರ್ಜಿಗೆ,  ಶಂಕರಾಮೃತವನ್ನು ದಿನಕ್ಕೆ ಎರಡು ಬಾರಿ ಸೇವಿಸಿ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿ ಗಂಟೆಗೊಮ್ಮೆ ಆದಷ್ಟು ಬಿಸಿ ನೀರಿಗೆ ತುಳಸಿಯನ್ನು ಹಾಕಿ ಆ ನೀರನ್ನು ಸೇವಿಸುವುದು ಒಳ್ಳೆಯದು.

Advertisement

Advertisement

ನಿಮ್ಮ ರಾಶಿಗಳ ಫಲ ಹೀಗಿದೆ:

ಮೇಷ ರಾಶಿ : ಚೆನ್ನಾಗಿದೆ ಆದರೆ ಮನಸ್ಸು ಸ್ವಲ್ಪ ಗಾಬರಿಯಾಗುತ್ತದೆ ರಕ್ಷಣಾ ಇಲಾಖೆ ಪೊಲೀಸ್ ಇಲಾಖೆಯಲ್ಲಿ ಇದ್ದರೆ ಬ್ಯಾಂಕಿಂಗ್ ಇಲಾಖೆಯಲ್ಲಿ ಇದ್ದರೆ ಸ್ವಲ್ಪ ಆತಂಕ ಆದರೂ ಅದನ್ನು ನಿಭಾಯಿಸಿಕೊಂಡು ಹೋಗುವಂತಹ ಅದ್ಭುತವಾದ ದಿನ ಗಾಬರಿಯಾಗಬೇಡಿ ಚೆನ್ನಾಗಿದೆ.

ವೃಷಭ ರಾಶಿ : ಸ್ವಲ್ಪ ಅತಿಯಾದ ಬುದ್ಧಿವಂತಿಕೆ ಎಡವಟ್ಟನ್ನು ತಂದಿಡುತ್ತದೆ.

ಮಿಥುನ ರಾಶಿ : ಚೆನ್ನಾಗಿದೆ,  ತಾಯಿ ಅಥವಾ ತಾಯಿ ಸಮಾನರಾದವರ ಜತೆ ಸ್ವಲ್ಪ ಹೊಡೆದಾಟವಾಗುತ್ತದೆ ವಾದ ವಿವಾದಕ್ಕೂ ಹೋಗಿ ತಲುಪುತ್ತದೆ ದೊಡ್ಡವರಾದ ಕಾರಣ ಅವರ ಮಾತನ್ನು ಕೇಳಿ ಸುಮ್ಮನೆ ಇದ್ದು ಬಿಡಿ ಏನೂ ತೊಂದರೆ ಆಗುವುದಿಲ್ಲ.

 

ಕರ್ಕಾಟಕ ರಾಶಿ : ಧೈರ್ಯಂ ಸರ್ವತ್ರ ಸಾಧನಂ , ತುಂಬಾ ಖುಷಿ ಒಂದು ವ್ಯವಹಾರದ ನಿಮಿತ್ತ ಕುಟುಂಬದ ನಿಮಿತ್ತವಾದ ದೊಡ್ಡ ಶುಭ ಸುದ್ದಿಯನ್ನು ಕೇಳುವಂತ ಅದ್ಭುತವಾದ ದಿನ.

ಸಿಂಹ ರಾಶಿ : ನಿಮ್ಮ ಮಾತು ಹಾವ ಭಾವ ತುಂಬಾ ಸುಶ್ರಾವ್ಯವಾಗಿರುತ್ತದೆ ಎಲ್ಲ ಕೆಲಸವನ್ನು ತುಂಬಾ ತಾಳ್ಮೆಯಿಂದ ಅಚ್ಚುಕಟ್ಟಾಗಿ  ಮಾಡಿಕೊಂಡು ಹೋಗುವ ದಿನ.

ಕನ್ಯಾ ರಾಶಿ : ಗಲಿಬಿಲಿ ಎನ್ನುವ ಒಂದು ಪ್ರಭಾವವಿರುತ್ತದೆ , ತುಂಬಾ ಟೆನ್ಷನ್ ಮಾಡಿಕೊಳ್ಳುತ್ತೀರಾ ಮನಸ್ಸನ್ನು ತಿಳಿಯಾಗಿ ಇಟ್ಟುಕೊಳ್ಳಿ ,  ಆದಷ್ಟು ಇಂದು ಹುಳಿ ಪದಾರ್ಥಗಳಿಂದ ದೂರವಿರಿ ಹುಳಿ ಮಾತುಗಳಿಂದ ದೂರವಿದ್ದು ಅದನ್ನು ನಿರ್ಲಕ್ಷಿಸಿ.

 

ತುಲಾ ರಾಶಿ : ಗಡಿಬಿಡಿ ಎದ್ದಿರುವುದು ಲೇಟು ಆದರೂ ಮ್ಯಾನೇಜ್ ಮಾಡುವಂತಹ ದಿನ.

ವೃಶ್ಚಿಕ ರಾಶಿ : ವಾರದ ಪೂರ್ಣ ಗೆಲುವು ನಿಮ್ಮದು, ವಾರದ ಪೂರ್ಣ ಸಕ್ಸಸ್ ನಿಮ್ಮ ತಪ್ಪಿಗೆ , ವಾರದ ಪೂರ್ಣ ಲಾಭವನ್ನು ಅಚ್ಚುಕಟ್ಟಾಗಿ ರೂಪಿಸಿಕೊಳ್ಳುವಂತಹ ಅದ್ಭುತವಾದ ದಿನ ,

ಧನಸ್ಸು ರಾಶಿ : ಕೆಲಸದ ವಿಚಾರದಲ್ಲಿ ಸ್ವಲ್ಪ ತೊಳಲಾಟ ಇರುತ್ತದೆ,  ಬೇರೆಯವರು ನಿಮ್ಮನ್ನು ಕನ್ಫ್ಯೂಸ್ ಮಾಡುತ್ತಾರೆ, ಎಚ್ಚರಿಕೆ.

ಮಕರ ರಾಶಿ : ಪಾಲುದಾರಿಕೆ ಸ್ನೇಹಿತರು,  ಆತ್ಮೀಯರೊಡನೆ ಮಾಡುತ್ತಿರುವ ವ್ಯವಹಾರದಲ್ಲಿ ಶುಭ ಸುದ್ದಿಯನ್ನು ಪಡೆಯುವಿರಿ .

ಕುಂಭ ರಾಶಿ : ಪ್ರಯಾಣ, ಒತ್ತಡ,  ಉದ್ಯೋಗ,  ಸುತ್ತಾಟ ಇವುಗಳ ಪ್ರಭಾವಕ್ಕೆ ಒಳಗಾಗುವ ಪ್ರಭಾವವಿರುತ್ತದೆ,  ಆದರೂ ಒಂದು ಶುಭ ಸುದ್ದಿ ಇದೆ .

ಮೀನ ರಾಶಿ : ಸಂಗಾತಿ, ಸ್ನೇಹಿತರು, ಆತ್ಮೀಯರು ಗೊತ್ತಿರುವವರು , ಮಕ್ಕಳು ಆರೋಗ್ಯ ಹಣಕಾಸು ವಿಚಾರದಲ್ಲಿ ಲಾಭವನ್ನು ಪಡೆಯುವಂತಹ ಅದ್ಭುತವಾದ ದಿನ .

Advertisement
Share this on...