ಈ ರಾಶಿಯವರು ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕು !

in ಜ್ಯೋತಿಷ್ಯ 66 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ಚತುರ್ಥಿ ತಿಥಿ, ಉತ್ತರ ಆಶಾಢ ನಕ್ಷತ್ರ, ಬ್ರಹ್ಮ ಯೋಗ, ಭವಕರಣ, ಜೂನ್ 9 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಜೊತೆಗೆ ಕೆಲವು ಕಾಯಿಲೆಗಳಿಗೆ ಮನೆಮದ್ದುಗಳನ್ನು ತಿಳಿಸಿದ್ದಾರೆ. ಅದನ್ನು ಕೊನೆಯಲ್ಲಿ ಕೊಡಲಾಗಿದೆ ಗಮನಿಸಿ. (ಅಮೃತ ಕಾಲ 7: 32 ರಿಂದ 9: 09 ರವರೆಗೆ ಇರುತ್ತದೆ)

Advertisement

 

Advertisement

Advertisement

 

Advertisement

ಮೇಷ: ಉದ್ಯೋಗ, ಕುಟುಂಬದ ಹೊರೆ, ತಳಮಳ ಅನಿಸಿದರೂ ಶುಭ ದಿನ. ತೊಂದರೆ ಇಲ್ಲ.
ವೃಷಭ: ಸರ್ಕಾರಕ್ಕೆ ಏನಾದರೂ ತೆರಿಗೆ, ಶುಲ್ಕ ಕಟ್ಟಬೇಕು ಅನ್ನೋದು ಇದ್ದರೆ ಸ್ವಲ್ಪ ಒದ್ದಾಟ, ತೊಳಲಾಟ ಇರುತ್ತದೆ.
ಮಿಥುನ: ಅಂಡು ಸುಟ್ಟ ಬೆಕ್ಕಿನ ಹಾಗೆ ಇರುತ್ತೀರಿ. ಅಧಿಕಾರ ಇದ್ದರೂ ಅನುಭವಿಸಲಾಗುವುದಿಲ್ಲ.
ಕರ್ಕಾಟಕ: ಸಣ್ಣ ಏರುಪೇರು, ಕಿರಿಕಿರಿ, ಅನಾರೋಗ್ಯ ಬಾಧೆ, ತಳಮಳದ ಭಾವ, ಒತ್ತಡ ಇರುತ್ತದೆ. ಆದರೂ ವೃತ್ತಿಗೆ ಸಂಬಂಧಿಸಿದಂತೆ ಸಣ್ಣದೊಂದು ಬದಲಾವಣೆ.
ಸಿಂಹ: ಕುಟುಂಬಕ್ಕೋಸ್ಕರ ಖರ್ಚು ವೆಚ್ಚಗಳು ಬಂದರೂ ಒಳ್ಳೆಯದಕ್ಕೋಸ್ಕರವೇ ಖರ್ಚು ಮಾಡುತ್ತಿದ್ದೀರಿ. ಮನೆ, ಮಕ್ಕಳು ಜವಬ್ದಾರಿ ಟೆನ್ಷನ್ ತಗೊಬೇಡಿ. ಸ್ವಲ್ಪ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಯಾಕೋ ತಳಮಳ ಅನಿಸಿದರೆ ಕಡಲೆಕಾಳು, ಶಂಕರಾಮೃತ ಸೇವಿಸಿ.

 

ಕನ್ಯಾ: ಮಕ್ಕಳು ಓದು ಜೊತೆಗೆ ಸ್ವಲ್ಪ ಭಯ ಇರುತ್ತದೆ. ಗಾಬರಿಯಾಗಬೇಡಿ. ಅದರಲ್ಲೂ ತುಂಟ ಮಕ್ಕಳಿರುವ ಮನೆಯಲ್ಲಿ ಪಾಲಕರು ಹೆಚ್ಚು ಗಾಬರಿಯಾಗಿರುತ್ತೀರಿ. ಜಾಗ್ರತೆಯಿಂದ ಇರಿ. ಬ್ರಹ್ಮಶಂಕರ ಕೊಡಿ. ಮಕ್ಕಳ ರೋಗನಿರೋಧ ಶಕ್ತಿ ಹಚ್ಚುತ್ತದೆ, ಏಕಾಗ್ರತೆ ಬರುತ್ತದೆ.
ತುಲಾ:ಯಾವುದೇ ತೊಂದರೆ ಇಲ್ಲ.
ವೃಶ್ಚಿಕ: ನಿಮಗೆ ಈ ದಿನ ಅತ್ಯಂತ ಜವಬ್ದಾರಿಯ ದಿನ, ಒಳ್ಳೆಯದಾಗುತ್ತದೆ.
ಧನಸ್ಸು: ಒಳ್ಳೆಯ ದಿನ, ಯಾವುದೇ ಕಡೆಯಿಂದ ಆದರೂ ಒಳ್ಳೆಯ ಕೆಲಸ ಆಗುತ್ತದೆ.

 


ಮಕರ: ಎಲ್ಲೋ ಒಂದು ಚೂರು ಬರೆ, ತಲೆಕೆಡಿಸಿಕೊಳ್ಳುವಂತಹ ಕೆಲವೊಂದು ಪ್ರಭಾವ ಉಂಟು, ಜಾಗ್ರತೆಯಿರಲಿ.
ಕುಂಭ: ಪರವಾಗಿಲ್ಲ, ಸ್ವಲ್ಪ ಹೊಟ್ಟೆ ನೋವು, ಸ್ವಲ್ಪ ಸುಸ್ತು, ಬಿಪಿ, ಶುಗರ್, ಏರುಪೇರು ಇರುತ್ತದೆ. ಸ್ವಲ್ಪ ಜಾಗ್ರತೆಯಿರಲಿ.
ಮೀನಾ: ಚೆನ್ನಾಗಿದೆ, ಉದ್ಯೋಗದಲ್ಲಿ ಹಿತಶತ್ರುಗಳಿರುತ್ತಾರೆ.

ಎಲ್ಲಾ ರಾಶಿಯವರಿಗೂ ಉಪಯುಕ್ತವಾಗುವ ಮನೆಮದ್ದು
• ಶುದ್ಧ ತುಪ್ಪ, ಕೆಂಪು ಅನ್ನ ಸೇವಿಸಿ.
• ನೆನೆಸಿಟ್ಟ ಕಡಲೆಕಾಳು ನೀರನ್ನು ತೆಗೆದುಕೊಂಡು, ಅದಕ್ಕೆ ಜೇನುತುಪ್ಪ ಬೆರೆಸಿ ಬೆಳಗ್ಗೆ ಸೇವಿಸಿ. ಋತುಬಂಧ ಸಮಸ್ಯೆಗೆ, ಋತುಚಕ್ರ ಸಮಸ್ಯೆಗೆ ಇದು ರಾಮಬಾಣ. (ಯಾವುದೇ ಕಾರಣಕ್ಕೂ ಬಿಸಿ ಜೇನುತುಪ್ಪ ಸೇವಿಸಬೇಡಿ, ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ)
• 2 ಅಥವಾ 3 ಸ್ಪೂನ್ ಕಡಲೆಕಾಳಿಗೆ ನಿಂಬೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಉಪ್ಪು, ಕಾರ ಮಿಶ್ರಣ ಮಾಡಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Advertisement
Share this on...