ಶ್ರೀ ರವಿಶಂಕರ್ ಗುರೂಜಿಯವರ ‘ಶಂಕರಾಮೃತ’ದ ಪ್ರಯೋಜನಗಳು ಒಂದಲ್ಲಾ ಎರಡಲ್ಲ..!

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 265 views

ಮನೆಯಲ್ಲಿ ನಮಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಮೊದಲ ನಾವು ಬಳಸುವುದು ಮನೆಮದ್ದು. ಮನೆಯಲ್ಲೇ ದೊರೆಯುವ ತುಳಸಿ, ಬಜೆ, ಅರಿಶಿಣ, ಮೆಂತ್ಯ, ಹಿಂಗು ಹೀಗೆ ನಮ್ಮ ಅಡುಗೆ ಮನೆ ಹಾಗೂ ಮನೆಯ ಹಿತ್ತಲಲ್ಲಿ ದೊರೆಯುವ ವಸ್ತುಗಳನ್ನೇ ಔಷಧಿಯಾಗಿ ಬಳಸುತ್ತೇವೆ. ಏಕೆಂದರೆ ಇದು ನಮಗೆ ಪ್ರಥಮ ಚಿಕಿತ್ಸೆ ಇದ್ದಂತೆ.ಸಾವಿರಾರು ವರ್ಷಗಳ ಹಿಂದೆ ಈಗ ದೊರೆಯುವ ಇಂಗ್ಲಿಷ್ ಮೆಡಿಸನ್ ಇರಲಿಲ್ಲ. ಮಾನವನಿಗೆ ಬುದ್ಧಿ ಬಂದ ನಂತರ ಈ ಇಂಗ್ಲಿಷ್ ಮೆಡಿಸನ್​​​​​​ಗಳನ್ನು ಕಂಡುಹಿಡಿದ. ಆದರೆ ಮಾನವನ ಸೃಷ್ಟಿಗೂ ಮುನ್ನವೇ ಪ್ರಕೃತಿಯಲ್ಲಿ ಔಷಧೀಯ ಗುಣಗಳಿರುವ ಗಿಡಮೂಲಿಕೆಗಳನ್ನು ಆ ದೇವರು ಸೃಷ್ಟಿ ಮಾಡಿದ್ದರು ಎನ್ನಲಾಗಿದೆ. ಋಷಿಮುನಿಗಳು ಕೂಡಾ ಈ ಗಿಡಮೂಲಿಕೆಗಳನ್ನು ಬಳಸಿಕೊಂಡೇ ಆಗಿನ ಕಾಲದಲ್ಲಿ ತಮ್ಮ ಬಳಿ ಬಂದವರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಆಯುರ್ವೇದ ಎಂಬುದು ಅಂದಿಗೂ, ಇಂದಿಗೂ, ಎಂದೆಂದಿಗೂ ಮೊದಲ ಸ್ಥಾನದಲ್ಲಿದೆ.

Advertisement

 

Advertisement

Advertisement

ಬಹಳಷ್ಟು ಜನರು ಇಂದಿಗೂ ಆಯುರ್ವೇದದಿಂದ ತಯಾರಿಸಿದ ಔಷಧಗಳನ್ನೇ ಬಳಸುತ್ತಿದ್ದಾರೆ. ತಲತಲಾಂತರದಿಂದ ಕೆಲವರು ಆಯುರ್ವೇದ ಔಷಧಗಳನ್ನು ತಯಾರಿಸುತ್ತಿದ್ದಾರೆ. ಈ ರೀತಿ ಆಯುರ್ವೇದ ಔಷಧಗಳನ್ನು ತಯಾರಿಸುತ್ತಿರುವವರಲ್ಲಿ ಶ್ರೀ ರವಿಶಂಕರ ಗುರೂಜಿ ಕೂಡಾ ಒಬ್ಬರು. ರವಿಶಂಕರ್ ಗುರೂಜಿ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಕರ್ನಾಟಕದ ಕೆಲವೇ ಕೆಲವರು ಖ್ಯಾತ ಜ್ಯೋತಿಷಿಗಳಲ್ಲಿ ಶ್ರೀ ರವಿಶಂಕರ ಗುರೂಜಿ ಕೂಡಾ ಒಬ್ಬರು. ‘ನಮಾಮಿ ಶಂಕರ’ ಹೆಸರಿನ ಸಂಸ್ಥೆ ಅಡಿಯಲ್ಲಿ ಗುರೂಜಿಯವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತಾವೇ ಔಷಧಗಳನ್ನು ತಯಾರಿಸಿದ್ದಾರೆ.

Advertisement

 

ನಿರಂತರ ಸಂಶೋಧನೆ ಹಾಗೂ ಕಠಿಣ ಪರಿಶ್ರಮದಿಂದ ಗುರೂಜಿಯವರು ತಯಾರಿಸಿರುವ ‘ಶಂಕರಾಮೃತ’ ಅನೇಕ ಸಮಸ್ಯೆಗಳಿಗೆ ಮದ್ದು. 16 ವರ್ಷ ಮೇಲ್ಪಟ್ಟ ವಯಸ್ಸಿನವರು ಈ ಶಂಕರಾಮೃತವನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡಯಾಬಿಟಿಸ್, ಶೀತ, ಕೆಮ್ಮು ಸೇರಿದಂತೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ‘ಶಂಕರಾಮೃತ’ ರಾಮಬಾಣ. ಏಕೆಂದರೆ ಅಶ್ವಗಂಧ, ನೆಲ್ಲಿಕಾಯಿ, ಅಮೃತಬಳ್ಳಿ, ಶತಾವರಿ, ಬಾಲ, ಮಂಜಿಷ್ಟ, ಕಾಪಿಕಚ್ಚು ಸೇರಿದಂತೆ ಬಹೋಪಯೋಗಿ ಗಿಡಮೂಲಿಕೆಗಳನ್ನು ಬಳಸಿ ಶಂಕರಾಮೃತವನ್ನು ತಯಾರಿಸಲಾಗಿದೆ. ಇದನ್ನು ಬೆಳಗ್ಗೆ ತಿಂಡಿಗೂ ಮುನ್ನ 15 ಮಿಲಿ ರಾತ್ರಿ ಊಟಕ್ಕೂ ಮುನ್ನ 15 ಮಿಲಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಬಹುದು.

 

 

ಇದರೊಂದಿಗೆ ಆಯುರ್ವೇದ ತಜ್ಞರೊಂದಿಗೆ ಚರ್ಚಿಸಿ ಇನ್ನೂ ಅನೇಕ ಉತ್ಪನ್ನಗಳನ್ನು ತಯಾರಿಸುವ ಹಂತದಲ್ಲಿದ್ದಾರೆ. ರವಿಶಂಕರ ಗುರೂಜಿಯವರು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದ ಪ್ರತಿ ತಾಲೂಕಿನಲ್ಲೂ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಸದೃಢ ಆರೋಗ್ಯಕ್ಕಾಗಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ನೀಡುವ ಆಶಯ ಹೊಂದಿದ್ದಾರೆ. ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಗುರೂಜಿಯವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Advertisement
Share this on...