ಯಾರ ಕೈಯಲ್ಲೂ ಮಾಡಲಾಗದ ಕೆಲಸವನ್ನು  ಮಾಡುವ ಶಕ್ತಿ ಈ ರಾಶಿಯವರಿಗಿದೆ..

in ಜ್ಯೋತಿಷ್ಯ 53 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ಪ್ರಥಮಿ ತಿಥಿ,  ಉತ್ತರಾಷಾಢ  ನಕ್ಷತ್ರ,  ವೈದೃತಿ ಯೋಗ, ಕೌಲವ ಕರಣ ಜುಲೈ 6   ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಸಂಜೆ   6 ಗಂಟೆ,   18  ನಿಮಿಷದಿಂದ, 7   ಗಂಟೆ,  52 ನಿಮಿಷದವರೆಗೂ ಇದೆ.

Advertisement

ಕೆಟ್ಟ ಸಮಯ ಯಾವಾಗಲೂ ಇರುವುದಿಲ್ಲ :

Advertisement

ತುಂಬಾ ಕೋಪ, ದುಃಖ, ಬೇಸರ ಇರುವ  ಸಮಯದಲ್ಲಿ ಯಾವುದೇ ರೀತಿಯ ಕೆಲಸಗಳನ್ನು ಮಾಡಬಾರದು. ಮಾತು ಕೂಡ ಆಡಬಾರದು ಅಲ್ಲಿ ಮನಸ್ಸಿನ ಇಚ್ಛೆ ಇರುವುದಿಲ್ಲ. ಅಲ್ಲದೆ  ಆ ಸಮಯದಲ್ಲಿ ಊಟವನ್ನು ಮಾಡಬಾರದು, ನೀರನ್ನು ಕುಡಿಯಬಾರದು, ಕೋಪ, ದುಃಖ, ಬೇಸರದಲ್ಲಿದ್ದಾಗ ಊಟ ಮಾಡಿದರೆ ಅದು ಪಚನವಾಗುವುದಿಲ್ಲ. ಊಟ ಮಾಡುವಾಗ  ಮನಸ್ಸು ತೃಪ್ತಿಯಾಗಿ ಪ್ರಶಾಂತವಾಗಿ ಇರಬೇಕು. ಲಘುವಾದ ಆಹಾರವನ್ನು ಸೇವಿಸಿ ಜೊತೆಗೆ ವಾಕಿಂಗ್ ಮಾಡಿ. ಸಮಾಧಾನವಾಗಿ ಇದ್ದರೆ ಅದು ಆಯಸ್ಸನ್ನು ಹೆಚ್ಚಿಸುತ್ತದೆ.  ಒಂದು ಗಂಟೆಗಳ ಕಾಲ ನಿರಂತರವಾಗಿ ಕೂತಲ್ಲಿಯೇ ಕೂತರೆ ಅದು ಒಂದು ದಿನದ ಆಯಸ್ಸನ್ನು ಕಡಿಮೆ ಮಾಡುತ್ತದೆ. ಒಂದು ಗಂಟೆ ನಿರಂತರವಾಗಿ ನಿಂತು ಕೆಲಸ ಮಾಡಿದರೆ ಅದು ಒಂದು ದಿನದ ಆಯಸ್ಸನ್ನು ವೃದ್ಧಿಸುತ್ತದೆ. ಮನಸ್ಸು ಪ್ರಶಾಂತವಾಗಿ,  ಸಮಾಧಾನವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಕೆಟ್ಟ ಸಮಯ ಯಾವಾಗಲೂ ಇರುವುದಿಲ್ಲ ಅದು ಹೋಗಿ ಒಳ್ಳೆಯ ಸಮಯ ಬರುವವರೆಗೆ ಕಾಯಬೇಕು.

Advertisement

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚಂದ್ರ ಸೂರ್ಯನ ಸಾರದಲ್ಲಿದ್ದಾನೆ,  ಚೆನ್ನಾಗಿದೆ, ತೊಂದರೆ ಏನೂ ಇಲ್ಲ,  ಸೂರ್ಯ ಗುರುವಿನ ಸಾರದಲ್ಲಿದ್ದಾನೆ, ಮಾಡುವ ಕೆಲಸ ಕಾರ್ಯಗಳನ್ನು ಧರ್ಮಬದ್ಧವಾಗಿ ಮಾಡಿ.

ವೃಷಭ ರಾಶಿ : ಚೆನ್ನಾಗಿದೆ ತೊಂದರೆ ಏನೂ ಇಲ್ಲ,  ಸ್ವಲ್ಪ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಟೆನ್ಷನ್ ಮಾಡಿಕೊಳ್ಳುತ್ತೀರಾ,  ನಿಭಾಯಿಸಿಕೊಂಡು ಕೂಡ ಹೋಗುತ್ತೀರ, ಗಣಪತಿಯ ಸೇವೆಯನ್ನು ಮಾಡಿ,  ಗಣಪತಿಯನ್ನು ನೆನೆಸಿಕೊಂಡು ಮುಂದೆ ಹೆಜ್ಜೆ ಇಡಿ ,  ವಿಘ್ನಗಳು ದೂರವಾಗುತ್ತದೆ.

ಮಿಥುನ ರಾಶಿ : ಕುಟುಂಬದ ವಿಚಾರದಲ್ಲಿ ಸ್ವಲ್ಪ ಖರ್ಚು , ಅಧಿಕಾರದ ವಿಚಾರದಲ್ಲಿ ಸ್ವಲ್ಪ ಯೋಗಕರ.

ಕರ್ಕಾಟಕ ರಾಶಿ : ವಾದ ವಿವಾದಕ್ಕೆ ನಿಂತು ಬಿಡುತ್ತೀರಿ,  ನನ್ನದು ಎಂಬುದನ್ನು ಬಿಡಿ ಎಲ್ಲವೂ ಸರಿ ಹೋಗುತ್ತದೆ.

ಸಿಂಹ ರಾಶಿ : ಪರಿಶ್ರಮದ ದಿನ,  ಪರಿಶ್ರಮಕ್ಕೆ ತಕ್ಕಂತೆ ಫಲ ನೋಡುವಂತಹ ದಿನ.

ಕನ್ಯಾ ರಾಶಿ : ಮನೆ, ಕುಟುಂಬದ ಜವಾಬ್ದಾರಿಯ ಚಿಂತೆ,  ಉದ್ಯೋಗವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ದಿನ .

ತುಲಾ ರಾಶಿ : ಚಂದ್ರ ಕೇಂದ್ರದಲ್ಲಿರುವುದು ಉತ್ತಮವೇ ಆದರೆ  ತುಂಬಾ ಜವಾಬ್ದಾರಿ ಇದ್ದರೆ ಟೆನ್ಶನ್ ಆಗುತ್ತದೆ.

ವೃಶ್ಚಿಕ ರಾಶಿ : ಎಷ್ಟು ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರೋ ಅಷ್ಟು ವೃದ್ಧಿ ಚೆನ್ನಾಗಿರುತ್ತದೆ,  ಆತಂಕ ಬೇಡ .

ಧನಸ್ಸು ರಾಶಿ : ದರ್ಪ,  ಧೈರ್ಯ  ಎಲ್ಲವನ್ನೂ ಉಳಿಸಿಕೊಂಡು ಹೆಜ್ಜೆ ಹಾಕುವಂತಹ ಪ್ರಭಾವ, ಚೆನ್ನಾಗಿದೆ.

ಮಕರ ರಾಶಿ : ಸ್ವಲ್ಪ ಹುಳುಕು,  ಕಮಿಟ್ಮೆಂಟ್,  ಸ್ವಲ್ಪ ಟೆನ್ಶನ್  ಇದ್ದರೂ ಒಳ್ಳೆಯದಾಗುತ್ತದೆ,  ಹಿರಿಯರಿಂದ ಸಹಾಯ ದೊರೆಯುತ್ತದೆ.

 

ಕುಂಭ ರಾಶಿ : ಯಾರ ಕೈಯಲ್ಲೂ ಮಾಡಲಾಗದಂತಹ ಕೆಲಸವನ್ನು  ಮಾಡುವಂತಹ ಶಕ್ತಿ ಇಂದು ನಿಮಗಿರುತ್ತದೆ.

ಮೀನ ರಾಶಿ : ಶತ್ರುಗಳ ಉಪಟಳ ಎಂದೆನಿಸುತ್ತದೆ, ಶತ್ರುವಿಗೆ ಇನ್ನೊಬ್ಬ ಶತ್ರು ಇದ್ದೇ ಇರುತ್ತಾನೆ , ಆಲೋಚಿಸಬೇಡಿ,  ಒಳ್ಳೆಯದಾಗುತ್ತದೆ
All Rights reserved Namma Kannada Entertainment.

Advertisement
Share this on...