ತಾಳ್ಮೆ- ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಈ ಮುದ್ರೆ

in News 455 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ  ಋತು,  ಭಾದ್ರಪದ ಮಾಸೆ,  ಕೃಷ್ಣ  ಪಕ್ಷದ ದ್ವಾದಶಿ ತಿಥಿ,  ಪುಷ್ಯ ನಕ್ಷತ್ರ,  ಪರಿಗ ಯೋಗ,  ಕೌಲವ ಕರಣ ಸೆಪ್ಟೆಂಬರ್ 14 ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಬೆಳಗ್ಗೆ 9 ಗಂಟೆ 39 ನಿಮಿಷದಿಂದ 11 ಗಂಟೆ 12 ನಿಮಿಷದವರೆಗೂ ಇದೆ.

Advertisement

ಈ ಕಲಿಯುಗದಲ್ಲಿ ನನಗೆ ಯಾರೂ ಇಲ್ಲ ಏನೂ ಇಲ್ಲ ಎಂಬ ಭಾವದಿಂದ  ತೊಳಲಾಟ ಪಡುವವರೇ ತುಂಬಾ ಜಾಸ್ತಿ. ಮನುಷ್ಯನಿಗೆ ಕೊನೆಯವರೆಗೂ ಇರಬೇಕಾದ ಮೊಟ್ಟ ಮೊದಲ  ಗುಣವೆಂದರೆ, ಗೆಲ್ಲಲಿ, ಸೋಲಲಿ, ಅವಮಾನ ಬರಲಿ, ದುಃಖ ಬರಲಿ, ಸುಖ ಬರಲಿ,  ಕ್ಷಯವಾಗಲಿ, ಅಕ್ಷಯವಾಗಲಿ, ಯಾವುದು ಬರಲ್ಲಿ ಬರದೇ ಇರಲಿ ನಮ್ಮ ಹತ್ತಿರ ಇರಬೇಕಾದ ಅತ್ಯುತ್ತಮವಾದ  ವಿಶೇಷತೆ ಏನೆಂದರೆ ಅದು ತಾಳ್ಮೆ. ನಮ್ಮ ಬಳಿ ತಾಳ್ಮೆ ಹೊಂದಿದ್ದರೆ ಗೆಲುವು ನಮ್ಮದೇ. ಆಗುವುದೆಲ್ಲವೂ ಒಳ್ಳೆಯದಕ್ಕೆ,  ಆಗುತ್ತಿರುವುದು ಒಳ್ಳೆಯದಕ್ಕೆ,  ಮುಂದೆ ಆಗುವುದು ಕೂಡ ಒಳ್ಳೆಯದಕ್ಕೆ, ಎಲ್ಲವೂ ನಿನ್ನ ಪಾದಕ್ಕೆ ಸಮರ್ಪಣೆ ಎಂಬ ಭಾವಾರ್ಥವನ್ನು ನಮ್ಮಲ್ಲಿ ತುಂಬಿಸಿಕೊಂಡು ಬಿಟ್ಟರೆ ಅಂಥವರನ್ನು ಯಾವ ದೈತ್ಯ ನಿಂದಲೂ ಕೂಡ ಸೋಲಿಸಲು ಸಾಧ್ಯವಿಲ್ಲ. ಆಗ ಮಾತ್ರ ನಮಗೆ ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಕೂಡ ನಾವು ಅದರಿಂದ ಗೆದ್ದು ಹೊರಬರುತ್ತೇವೆ. ತಾಳ್ಮೆ ಹೊಂದಿದ್ದರೆ ಎಂತಹ ಆತಂಕವಿದ್ದರೂ ಕೂಡ ದೂರುವಾಗುತ್ತೆ. ತಾಳ್ಮೆ ಇಲ್ಲದಿದ್ದರೆ ಜೀವನಪೂರ್ತಿ ಒತ್ತಡದಿಂದ ಜೀವನವನ್ನು ಸಾಗಿಸಬೇಕಾಗುತ್ತದೆ. ಆದ್ದರಿಂದ ಜೀವನದಲ್ಲಿ ತಾಳ್ಮೆಯನ್ನು ಅಳವಡಿಸಿಕೊಂಡು ಬದುಕಿದಾಗ ಮಾತ್ರ ನಾವು ಜೀವನದಲ್ಲಿ ಗೆಲ್ಲುತ್ತೇವೆ. ಆದ್ದರಿಂದ ಎಲ್ಲರೂ ಜೀವನದಲ್ಲಿ ತಾಳ್ಮೆಯನ್ನು ಬಳಸಿಕೊಳ್ಳಲು  ಅಥವಾ ಹೆಚ್ಚಿಸಿಕೊಳ್ಳಲು ಈ ಪ್ರಣವ ಮುದ್ರೆಯನ್ನು ಅಭ್ಯಾಸ ಮಾಡಿ. ಈ ಮುದ್ರೆಯು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.   ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

ಸೆಪ್ಟೆಂಬರ್  14 ರಂದು ಹುಟ್ಟಿದವರ ಚಿಂತನೆ, ಆಲೋಚನೆ, ಸೂರ್ಯ ಪ್ರಭಾವ,  ರಾಹು ಪ್ರಭಾವ,  ಬುಧ ಪ್ರಭಾವ,  ಅಂಗಾರಕ ಪ್ರಭಾವ, ವನ್ನು ಒಳಗೊಂಡಿರುತ್ತದೆ. ಸೂರ್ಯ ಎಂದರೆ ತೇಜಸ್ಸು,  ರಾಹು ಎಂದರೆ ಅಹಂ,  ಬುಧ ಎಂದರೆ ಲೆಕ್ಕಾಚಾರ,  ಕುಜ ಎಂದರೆ ಯುದ್ಧ ಮತ್ತು ಪರೀಕ್ಷಿಸುವುದು ಈ ಎಲ್ಲ ಭಾವಗಳನ್ನು ಒಳಗೊಂಡಿರುವುದೇ ಸೆಪ್ಟೆಂಬರ್ ಹದಿನಾಲ್ಕು. ಸಾಮಾನ್ಯರಿಂದ ಅಸಾಮಾನ್ಯರಾಗಿ,  ಅಸಾಮಾನ್ಯರಿಂದ ಮಹಾನುಭಾವ ರಾಗಿರುವ ಯೋಗ , ಯೋಗ್ಯತೆ ನಿಮ್ಮಲ್ಲಿದೆ. ಜೀವನ ನಿಮಗೆ ಮಧುರವಾಗಿ ಇರುವುದಿಲ್ಲ ಮಾಡಿದ ಯುದ್ಧ ಗಳಲ್ಲೆಲ್ಲ ಜಯ ನಿಮ್ಮದೇ. ಸೆಪ್ಟೆಂಬರ್ 14 ರಂದು ಹುಟ್ಟಿದವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಮೇಲಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಅದ್ಭುತವಾಗಿದೆ ಕೆಲಸ ಕಾರ್ಯ ವ್ಯವಹಾರ , ಬದುಕು ಕಟ್ಟಿಕೊಳ್ಳಬೇಕು ಎನ್ನುವವರಿಗೆ,  ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವವರಿಗೆ ಅದ್ಭುತವಾದ ಒಳ್ಳೆಯ ಪ್ರಗತಿಯ  ದಿನ.

ವೃಷಭ ರಾಶಿ : ಸ್ವಲ್ಪ ನಿಧಾನ ಎನಿಸುತ್ತದೆ.  ತುಂಬಾ ಫಾಸ್ಟ್ ಆಗಿ ಗಾಡಿಯನ್ನು ಓಡಿಸುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ.  ಮಷಿನರಿ, ಫ್ಯಾಕ್ಟರಿ ತುಂಬಾ ಜವಾಬ್ದಾರಿ ಕೆಲಸಗಳನ್ನು ಹೊತ್ತಿರುವವರಿಗೆ ಸ್ವಲ್ಪ ಒತ್ತಡದ ದಿನ.

ಮಿಥುನ ರಾಶಿ : ಅನುಕೂಲಕರವಾದ ದಿನವೂ ಅಲ್ಲ, ಅನಾನುಕೂಲಕರವಾದ ದಿನವೂ ಅಲ್ಲ,  ಸರ್ವಸಾಧಾರಣವಾದ ದಿನ.

ಕರ್ಕಾಟಕ ರಾಶಿ : ಸ್ವಲ್ಪ ಭಯದ ತಳಮಳ ಪ್ರಣವ ಮುದ್ರೆಯನ್ನು ಮಾಡಿ.

ಸಿಂಹ ರಾಶಿ : ದಿನದ ಆರಂಭ ವಿಳಂಬವಾದರೂ ಕೂಡ ಸಂಜೆಯ ವೇಳೆಗೆ ನಿಮ್ಮ ಗುರಿಯನ್ನು ತಲುಪಲು ಭಗವಂತ ಅನುಕೂಲವನ್ನು ಮಾಡಿಕೊಡುತ್ತಾರೆ.

ಕನ್ಯಾ ರಾಶಿ : ಕಾಸಿಗೆ ತಕ್ಕಂತೆ ಕಜ್ಜಾಯ,  ಗಡಿಬಿಡಿ ಗಲಿಬಿಲಿ ಸುತ್ತಾಟ  ಇದ್ದರೂ ದೈವಾನುಗ್ರಹ ಇರುವಂತಹ ದಿನ.

ತುಲಾ ರಾಶಿ : ಉದ್ಯೋಗ ವ್ಯವಹಾರದಲ್ಲಿ ಸ್ವಲ್ಪ ಪರಿಶ್ರಮದ ದಿನ ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ. ತುಂಬ ದೊಡ್ಡ ಸಮಸ್ಯೆಗಳು ಬಂದರೂ ಕೂಡ ತಿಳಿಯಾಗುತ್ತದೆ.

ವೃಶ್ಚಿಕ ರಾಶಿ : ದಿನದ ಆರಂಭ ನಿಧಾನವಾದರೂ ಕೂಡ ಮಧ್ಯಾಹ್ನದ ವೇಳೆಗೆ ನಿಮ್ಮ ಜವಾಬ್ದಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಂತಹ ದಿನ.

ಧನಸ್ಸು ರಾಶಿ : ಸೂರ್ಯ ಪ್ರಭಾವದ ಈ ದಿನ.  ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ, ಚಂದ್ರ ಶುಕ್ರ ಸೇರಿರುವುದರಿಂದ ವಿಪರೀತ ವಾಚನ,  ಭೋಗ , ಪಾರ್ಟಿಗಳಿಗೆ ಹೋಗುವ ಅಭ್ಯಾಸವಿರುವವರಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ.  ತಲೆನೋವು  ಹ್ಯಾಂಗ್ಓವರ್ ರೀತಿಯ ತೊಂದರೆಗಳಾಗುತ್ತವೆ. ಬಯ್ಯಿಸಿ ಕೊಳ್ಳುವ ಸಂಭವ ಕೂಡ ಬರುತ್ತದೆ.  ಗಣಪತಿ ಅನುಷ್ಠಾನವನ್ನು ಮಾಡಿಕೊಳ್ಳಿ.

ಮಕರ ರಾಶಿ : ಕೊಡುವುದು,  ತೆಗೆದುಕೊಳ್ಳುವುದು,  ಸಂಗಾತಿ,  ಹತ್ತಿರದವರು,  ಸ್ನೇಹಿತರಿಂದ , ಸಹಕಾರ ದೊರೆಯುವಂತಹ ಅದ್ಭುತವಾದ ದಿನ.

ಕುಂಭ ರಾಶಿ : ಚೆನ್ನಾಗಿದೆ,  ಸ್ವಲ್ಪ ಗಲಿಬಿಲಿ,  ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಒತ್ತಡವಿರುವ ದಿನ. ನಿಮ್ಮ ಸ್ಪೀಡಿಗೆ ಬೇರೆಯವರು ಬರುತ್ತಿಲ್ಲ ಎಂಬ ಧಾವಂತಕ್ಕೆ ಒಳಗಾಗುತ್ತೀರಿ. ಹತ್ತಿರದಲ್ಲಿ  ಅಯ್ಯಪ್ಪ ದೇವಸ್ಥಾನವಿದ್ದರೆ ದರ್ಶನ ಮಾಡಿ ಒಳ್ಳೆಯದಾಗುತ್ತದೆ.

ಮೀನ ರಾಶಿ : ಮಕ್ಕಳ ವಿಚಾರದ ಕಡೆ ಸ್ವಲ್ಪ ಗಮನ ಕೊಡಿ.  ಅದರಲ್ಲೂ ತುಂಟ ಮಕ್ಕಳು,  ಚಿಕ್ಕಮಕ್ಕಳ ಕಡೆ ಸ್ವಲ್ಪ ಎಚ್ಚರಿಕೆ ವಹಿಸಿ ಮಿಕ್ಕಂತೆ ತೊಂದರೆ ಏನೂ ಇಲ್ಲ.

Advertisement
Share this on...