ಆಷಾಡ ಮಾಸದಲ್ಲಿ ಶನಿವಾರದ ಪೂಜೆ ತುಂಬಾ ವಿಶೇಷ…

in ಜ್ಯೋತಿಷ್ಯ 141 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ,  ಶುಕ್ಲ ಪಕ್ಷದ ಚತುದರ್ಶಿ, ಮೂಲಾ ನಕ್ಷತ್ರ, ಬ್ರಹ್ಮಯೋಗ, ವನಿಜ ಕರಣ,  ಜುಲೈ  4  ,  ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಸಂಜೆ  5  ಗಂಟೆ,   10  ನಿಮಿಷದಿಂದ, 6 ಗಂಟೆ,  43  ನಿಮಿಷದವರೆಗೂ ಇದೆ.

Advertisement

ಆಷಾಢ ಮಾಸದ ಪೂಜೆ : ಆಷಾಢ ಮಾಸದಲ್ಲಿ ಶನಿವಾರದ ಪೂಜೆ ತುಂಬಾ ವಿಶೇಷವಾದದ್ದು , ವಿಷ್ಣುವನ್ನು ಸ್ತುತಿಸುವುದು,  ಲಕ್ಷ್ಮಿಯನ್ನು ಸ್ತುತಿಸುವುದರಿಂದ  ಬಹಳ ಬೇಗ ಫಲ ದೊರೆಯುತ್ತದೆ. ಆಷಾಢ ಮಾಸದಲ್ಲಿ ಹುಳಿ ಪದಾರ್ಥಗಳನ್ನು ಸೇವಿಸದೆ ಇರುವುದು ತುಂಬಾ ಒಳ್ಳೆಯದು. ಈ ಸಮಯದಲ್ಲಿ ಪಿತ್ತ  ಜಾಸ್ತಿಯಾಗುತ್ತದೆ. ಆದ್ದರಿಂದ ಪ್ರತಿ ನಿತ್ಯ  ಪ್ರಾಣಾಯಾಮವನ್ನು ಮಾಡುವುದು  ಒಳ್ಳೆಯದು. ಇದರಿಂದ ನೆಗೆಟಿವ್ ಎನರ್ಜಿ ಕಡಿಮೆಯಾಗುತ್ತದೆ.

Advertisement

Advertisement

 

Advertisement

ನಿಮ್ಮ ರಾಶಿಗಳ ಫಲ ಹೀಗಿದೆ :

ಮೇಷ ರಾಶಿ : ತಂದೆ ತಾಯಿ,  ಹಿರಿಯರು,  ವಯಸ್ಸಾದವರ ಆರೋಗ್ಯದ ಕಡೆ ಸ್ವಲ್ಪ ಗಮನ ವಹಿಸಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಭಿನ್ನ ಅಭಿಪ್ರಾಯಗಳು ಕೂಡ ಬರುತ್ತವೆ. ತಂದೆ ತಾಯಿಗಳ ವಿಚಾರದಲ್ಲಿ ವಾದ ಬೇಡ,  ಬಿಟ್ಟು ಕೊಟ್ಟು ಬಿಡಿ.

ವೃಷಭ ರಾಶಿ : ದೂರದ ಕಡೆಯಿಂದ ಸ್ವಲ್ಪ ಆತಂಕ ಮತ್ತು ಶುಭ ಸುದ್ದಿಗಳು  ಎರಡೂ ಕೂಡ ಬರುತ್ತವೆ,  ಅದನ್ನು ನಿಭಾಯಿಸಿಕೊಂಡು ಕೂಡ ಹೋಗುತ್ತೀರಿ, ಗಣಪತಿ ಆರಾಧನೆ ಮಾಡಿಕೊಳ್ಳಿ ಮುಖ್ಯ ನಿರ್ಧಾರಗಳು ಬೇಡ.

ಮಿಥುನ ರಾಶಿ : ಆರೋಗ್ಯದ ಕಡೆ ಗಮನ ಕೊಡಿ,  ತಿಳಿದವರಿಂದ ಸ್ವಲ್ಪ ನೋವಾಗುತ್ತದೆ, ತಾಯಿ ಸಮಾನರಾದವರ ಆರೋಗ್ಯದ  ಕಡೆ ಗಮನ ಕೊಡಿ.

 

ಕರ್ಕಾಟಕ ರಾಶಿ : ವೈದಿಕ,  ಧಾರ್ಮಿಕ,  ದಾನಕ್ಕೆ ಒಂದು ಸಣ್ಣ ಸಂಕಲ್ಪ , ಒಳ್ಳೆಯ ಕೆಲಸಕ್ಕೆ ಪ್ರಚೋದನೆ ಕೊಡುತ್ತೆ,  ಮಾಡಿ ಒಳ್ಳೆಯದಾಗುತ್ತದೆ .

ಸಿಂಹ ರಾಶಿ : ಚೆನ್ನಾಗಿದೆ,  ಆತಂಕ ಪಡುವಂಥದ್ದೇನೂ ಇಲ್ಲ,  ಮಕ್ಕಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ , ಆತಂಕ ಪಡಬೇಡಿ.

ಕನ್ಯಾ ರಾಶಿ : ಚೆನ್ನಾಗಿದೆ,  ಆತಂಕ ಪಟ್ಟುಕೊಳ್ಳುವುದು  ಏನೂ ಇಲ್ಲ,  ಸುಖದ ಮನೆಯಲ್ಲಿ ಚಂದ್ರ ಇರುವುದರಿಂದ ಸುಖ ವೃದ್ಧಿ,  ಸುಖಕ್ಕಾಗಿ ನೋಡುವ ಚಿಂತೆ.

ತುಲಾ ರಾಶಿ : ಒಡಹುಟ್ಟಿದವರ ವಿಚಾರದಲ್ಲೊಂದು ಅಸಮಾಧಾನ,  ಅಸಮತೋಲನ, ಭೂಮಿ ಜಾಗ ಇವುಗಳ ವಿಚಾರದಲ್ಲಿ ಆತಂಕಕ್ಕೆ  ಒಳಗಾಗುತ್ತೀರಿ, ಸುಮ್ಮನಿದ್ದು ಬಿಡಿ.

ವೃಶ್ಚಿಕ ರಾಶಿ : ವೈರಾಗ್ಯ ಭಾವ ಇರುತ್ತದೆ,  ಸ್ವಲ್ಪ ಕೃಷ್ಣ ತತ್ವವನ್ನು ಬೆಳಸಿಕೊಳ್ಳಿ.

ಧನಸ್ಸು ರಾಶಿ : ಚೆನ್ನಾಗಿದೆ ಅಷ್ಟಮಾಧಿಪತಿ ನಿಮ್ಮ ಮನೆಯಲ್ಲಿ ಇರುವುದರಿಂದ ಸ್ವಲ್ಪ ಜಾಗ್ರತೆ, ಮೂಲಾ ನಕ್ಷತ್ರ, ಅಶ್ವಿನಿ ನಕ್ಷತ್ರ, ಮಖಾ ನಕ್ಷತ್ರ,  ಸ್ವಾತಿ ನಕ್ಷತ್ರ , ಆರಿದ್ರಾ ನಕ್ಷತ್ರ , ರಾಹು ಕೇತುಗಳ,   ನಕ್ಷತ್ರಗಳಿಗೆ  ಸೋಂಕುಗಳು ಬಹುಬೇಗ ಹರಡುತ್ತದೆ. ಆದ್ದರಿಂದ  ಮನೆಯಲ್ಲಿಯೇ ಸ್ವಲ್ಪ ಬೆಚ್ಚಗೆ ಇರಿ. ರಾಗಿ ಹಿಟ್ಟು,  ಅರಿಶಿಣ,  ತುಳಸಿ,  ಎಲೆಯನ್ನು ಸೇರಿಸಿ ಮನೆಯಲ್ಲಿ ಆಗಾಗ ಧೂಪ ಹಾಕುತ್ತಾ ಇರಿ, ಯಾವುದೇ ಕ್ರಿಮಿ ಕೀಟಗಳು ಕೂಡ ಬರುವುದಿಲ್ಲ,  ಆರೋಗ್ಯವಾಗಿ ಇರುತ್ತೀರ.

 

ಮಕರ ರಾಶಿ : ಚೆನ್ನಾಗಿದೆ,  ದೂರದ ಊರಿನಿಂದ ಒಂದು ಶುಭ ಸುದ್ದಿಯನ್ನು ಕೇಳುವಿರಿ, ಪರಿಶ್ರಮಕ್ಕೆ ತಕ್ಕ ಫಲ,  ಸ್ವಲ್ಪ ಸೋಮಾರಿತನ.

ಕುಂಭ ರಾಶಿ : ಚೆನ್ನಾಗಿದೆ,  ಆತಂಕ,  ಏನೋ ಒಂದು ರೀತಿಯ ವೈರಾಗ್ಯ ಭಾವ,  ನಿಮ್ಮ ಕೆಲಸವನ್ನು ನೀವು ಮಾಡಿ ಪ್ರತಿಫಲವನ್ನು ಅಪೇಕ್ಷಿಸಬೇಡಿ,  ಅಪೇಕ್ಷೆ ಇಟ್ಟುಕೊಂಡಾಗಲೆ  ತೊಂದರೆ ಸಮಸ್ಯೆಗಳು ಎದುರಾಗುವುದು.

ಮೀನ ರಾಶಿ : ಚೆನ್ನಾಗಿದೆ , ಪೂರ್ವ ಪುಣ್ಯಾಧಿಪತಿ ದಶಮ ಸ್ಥಾನದಲ್ಲಿರುವುದರಿಂದ ಉದ್ಯೋಗದಲ್ಲಿ ಪ್ರಗತಿಯ ದಿನ,  ಶನಿವಾರ ತುಂಬಾ ರಿಲ್ಯಾಕ್ಸ್ ಆಗಿ ಇರುತ್ತೀರಾ.

Advertisement
Share this on...