ಊಟದಲ್ಲಿ ಮದ್ದು ಹಾಕಿದ್ದರೆ ಹೀಗಾಗುತ್ತದೆ…!

in ಜ್ಯೋತಿಷ್ಯ 338 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ, ಶುಕ್ಲ ಪಕ್ಷದ  ಏಕಾದಶಿ,  ವಿಶಾಖ ನಕ್ಷತ್ರ,  ಸಿದ್ಧ ಯೋಗ,  ಭದ್ರಾಂಕರಣ, ಜುಲೈ 01 ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಸಂಜೆ ಬರುವುದರಿಂದ ಉಲ್ಲೇಖ ಮಾಡಿಲ್ಲ. ಏಕಾದಶಿ ಆಗಿರುವುದರಿಂದ  ಮನೆಯಲ್ಲಿಯೇ ಈ ದಿನ ವಿಷ್ಣು ಸಹಸ್ರನಾಮವನ್ನು ಪಠಿಸಿ ಎಲ್ಲರಿಗೂ ಒಳ್ಳೆಯದಾಗುತ್ತದೆ .

Advertisement

ಆರೋಗ್ಯವೇ ಸರ್ವಶಕ್ತಿ:

Advertisement

ಜಗತ್ತಿನಲ್ಲಿ ಅತ್ಯಂತ ಬಲಶಾಲಿ  ಯಾವುದೆಂದರೆ ಅದು ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಆರೋಗ್ಯವೇ ಸರ್ವಶಕ್ತಿ ಆರೋಗ್ಯ ಒಂದಿದ್ದರೆ  ಏನನ್ನಾದರೂ ಬೇಕಾದರೆ ಮಾಡಬಹುದು. ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ನಮ್ಮ ಮೊಟ್ಟ ಮೊದಲ ಕರ್ತವ್ಯ. ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ  ಬಾಳೆ ಎಲೆಯ ಮೇಲೆ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು,  ಇದು ಆರೋಗ್ಯವನ್ನು ಬ್ಯಾಲೆನ್ಸ್ ಮಾಡುತ್ತದೆ. ಊಟದಲ್ಲಿ ಯಾರಾದರೂ ವಿಷವನ್ನು ಬೆರೆಸಿದ್ದರೆ ಅದು ಬಾಳೆ ಎಲೆಯಲ್ಲಿ ಹಾಕಿದಾಗ ಬಾಳೆ ಎಲೆ ಆ ಜಾಗದಲ್ಲಿ ಕಪ್ಪಾಗುತ್ತದೆ,  ಅಲ್ಲದೆ ಯಾರಾದರೂ ಮದ್ದು ಹಾಕಿದ್ದರೂ ಕೂಡ ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಎಲೆ ಕಪ್ಪಾಗುವುದು . ಊಟವಾದ ಬಳಿಕ ವೀಳ್ಯದೆಲೆ,  ಅಡಿಕೆ,  ಸುಣ್ಣ, ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ಯಾವುದೇ ರೀತಿಯ ಮದ್ದು ಕೂಡ ತಗುಲುವುದಿಲ್ಲ.

Advertisement

 

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಸಿದ್ಧ ಯೋಗದ ಈ ದಿನ ಚೆನ್ನಾಗಿದೆ,  ಚಂದ್ರ ಗುರು ಸಾರದಲ್ಲಿದ್ದಾನೆ, ಗುರು ಸೂರ್ಯನ ಸಾರದಲ್ಲಿರುವುದರಿಂದ ತೊಂದರೆಗಳೇನೂ ಇಲ್ಲ. ಉದ್ಯೋಗ , ವ್ಯವಹಾರ, ಕುಟುಂಬ, ಸ್ವಲ್ಪ ಒಂಟಿತನದ ಅನುಭವವಾಗಬಹುದು,  ನಂಬಿಕೆ ದ್ರೋಹವಾಗಬಹುದು,  ಆದ್ದರಿಂದ ಬರವಣಿಗೆ ಇಲ್ಲದೆ ಲೀಗಲ್ ಒಪಿನಿಯನ್ ಇಲ್ಲದೇ ಯಾರೂ ವ್ಯವಹಾರವನ್ನು ಮಾಡಬೇಡಿ.

ವೃಷಭ ರಾಶಿ : ಗುರು ಕೆಟ್ಟಷ್ಟು ನಿಮಗೆ ಬಲ, ಶುಭ ಕಾರ್ಯಗಳು ಶುಭ ಚಿಂತನೆಗಳು ನಡೆಯುತ್ತವೆ, ಆರೋಗ್ಯದ ಕಡೆಗೆ ಸ್ವಲ್ಪ ಗಮನವಿರಲಿ .

ಮಿಥುನ ರಾಶಿ : ಚೆನ್ನಾಗಿದೆ, ತೊಂದರೆ ಏನೂ ಇಲ್ಲ,  ಅನುಕೂಲಕರ, ಗುರು ವಕ್ರವಾದಷ್ಟು ನಿಮಗೆ ಒಳ್ಳೆಯದು,  ರಾಜಯೋಗವನ್ನು ತಂದುಕೊಡುತ್ತದೆ, ಕುಟುಂಬದ ನಿಮಿತ್ತ ಒಳ್ಳೆಯದಾಗುತ್ತದೆ. ಆನ್ ಎಕ್ಸ್ಪೆಕ್ಟ್ ಆಗಿ ಮಕ್ಕಳ ಯೋಗ ಕೂಡ ಇದೆ .

ಕರ್ಕಾಟಕ ರಾಶಿ : ಕುಟುಂಬದ ಜವಾಬ್ದಾರಿ,  ವ್ಯವಹಾರ ನಿಮಿತ್ತ ಸ್ವಲ್ಪ ಟೆನ್ಷನ್ ಆಗಿರುತ್ತೀರಿ, ತೊಂದರೆ ಏನೂ ಇಲ್ಲ ನಿಭಾಯಿಸಿಕೊಂಡು ಹೋಗುತ್ತೀರಾ.

ಸಿಂಹ ರಾಶಿ : ಚಂದ್ರ ಧೈರ್ಯದ ಮನೆಯಲ್ಲಿ ಕುಳಿತಿದ್ದಾನೆ ಗೋಚಾರದಲ್ಲಿದ್ದು ಗುರು  ಸ್ವಲ್ಪ ವಕ್ರ , ಸೂರ್ಯ ಭಾವದಲ್ಲಿದ್ದು ಸೂರ್ಯ ಹನ್ನೊಂದನೇ ಮನೆಯಲ್ಲಿರುವುದರಿಂದ ಇಂದು ಕಷ್ಟಕ್ಕೆ ತಕ್ಕಂತೆ ಕಜ್ಜಾಯವೆಂಬಂತೆ ದುಡಿಮೆಗೆ ತಕ್ಕ ಆದಾಯದ ಪ್ರಭಾವವಿರುತ್ತದೆ.

ಕನ್ಯಾ ರಾಶಿ : ಚೆನ್ನಾಗಿದೆ ಗಾಬರಿಯಾಗಬೇಡಿ ಅದರಲ್ಲೂ ವಿದ್ಯಾರ್ಥಿಗಳು ಗುರು ವಕ್ರವಾಗಿ ರುವುದರಿಂದ ಕಾನ್ಸಂಟ್ರೇಷನ್ ಮೆಮೊರಿ, ಫೋಕಸ್ ಕಳೆದುಕೊಳ್ಳುತ್ತೀರಿ,  ಸ್ವಲ್ಪ ಟೆನ್ಶನ್ ಇರುತ್ತೆ, ಒತ್ತಡ ನಿವಾರಣೆಗಾಗಿ ಮಕ್ಕಳು ದಿನಕ್ಕೆ ಎರಡು ಬಾರಿಯಂತೆ ಊಟ ಆದ ಮೇಲೆ ಬ್ರಹ್ಮ ಶಕ್ತಿ ಶಂಕರವನ್ನು ಸೇವಿಸಿ.

 

ತುಲಾ ರಾಶಿ : ಸ್ವಲ್ಪ ಗಡಿಬಿಡಿಯ ದಿನ,  ಹಣಕಾಸು, ಕೋರ್ಟ್ , ಕುಟುಂಬ,  ದಾಂಪತ್ಯ,  ವಿಚ್ಛೇದನ  ಮುಂತಾದ ಸಮಸ್ಯೆಗಳಲ್ಲಿ ಇರುವವರಿಗೆ ಸ್ವಲ್ಪ ಉಲ್ಬಣವಾಗುವ ಪ್ರಭಾವವಿರುತ್ತದೆ, ಯಾವುದಾದರೂ ಆಚಾರ್ಯರಿಗೆ ಎರಡು ಕೆಜಿ ಬೆಲ್ಲ ಅಥವಾ ಸಕ್ಕರೆ,  ಎರಡು ಕೆಜಿ ಹಣ್ಣು,  ಎರಡು ಕೆಜಿ ಕಾಬುಲ್ ಕಡಲೆಕಾಳು ಅನ್ನು ಕೊಡಿ ಇದರಿಂದ ಬಹಳಷ್ಟು ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿ : ಇಂದು ಖರ್ಚು ಸ್ವಲ್ಪ ಹೆಚ್ಚು ಆದರೂ ನಿಭಾಯಿಸಿಕೊಂಡು ಹೋಗುತ್ತೀರಾ, ದರ್ಪದ ಜೀವನ .

ಧನಸ್ಸು ರಾಶಿ : ಅಂದುಕೊಂಡ ಕೆಲಸಕ್ಕೆ ಎರಡೆರಡು ಬಾರಿ ಶ್ರಮ ಪಡಬೇಕಾಗುತ್ತದೆ, ಸ್ವಲ್ಪ ಒತ್ತಡ ಎನಿಸಿದರೂ ಕೂಡ ಫಲಿತಾಂಶ ಮಾತ್ರ ಪಕ್ಕಾ.

 

ಮಕರ ರಾಶಿ : ಸ್ವಲ್ಪ ಉದ್ಯೋಗದಲ್ಲಿ ಒತ್ತಡ,  ಸ್ವಂತ ವ್ಯವಹಾರದಲ್ಲಿ ಒತ್ತಡ,  ಸಾಲ ಮಾಡಿಕೊಳ್ಳುವ ಪ್ರಸಂಗವಿರುತ್ತದೆ .

ಕುಂಭ ರಾಶಿ: ಚೆನ್ನಾಗಿದೆ ಗುರುವಾರ ಗುರು ಸಾರದಲ್ಲಿ ಚಂದ್ರನಿದ್ದಾನೆ ಅಂದುಕೊಂಡ ಕಾರ್ಯವನ್ನು ನಿಮ್ಮ ವೇಗಕ್ಕೆ ತಕ್ಕಂತೆ ನೆನೆಸಿಕೊಂಡು ಕಲಕುತ್ತಿರಿ ಶುಭ ಸುದ್ದಿ ಕೇಳಿ ಬರುತ್ತದೆ.

ಮೀನ ರಾಶಿ : ಕಷ್ಟ ಪಡಬೇಕು ಸ್ವಲ್ಪ ಒತ್ತಡದ ದಿನ ಎನ್ನಿಸುತ್ತದೆ, ಮನೆ,  ಕುಟುಂಬ,  ಸ್ವಂತ ವ್ಯವಹಾರದಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ, ಯೋಚಿಸಬೇಡಿ ಒಳ್ಳೆಯದಾಗುತ್ತದೆ.

Advertisement
Share this on...